ವಿಶ್ವಕಪ್ 2019 ಒಂದೂ ಜಯ ಕಾಣದೆ ಆಫ್ಘನ್ ಗುಡ್ ಬೈ..!
ವಿಶ್ವಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನವನ್ನು ಮಣಿಸಿದ ವೆಸ್ಟ್ ಇಂಡೀಸ್ ಗೆಲುವಿನೊಂದಿಗೆ ತಮ್ಮ ಅಭಿಯಾನ ಮುಕ್ತಾಯಗೊಳಿಸಿದೆ. ಇದರ ಜತೆಗೆ ಆಫ್ಘಾನಿಸ್ತಾನ ವಿಶ್ವಕಪ್ ಟೂರ್ನಿಯಲ್ಲಿ ಒಂದೇ ಒಂದು ಗೆಲುವು ಕಾಣದೇ ಕೂಟದಿಂದ ಹೊರಬಿದ್ದಿದೆ.
ವಿಶ್ವಕಪ್ ಟೂರ್ನಿಯ ಕ್ಷಣಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಲೀಡ್ಸ್[ಜು.05]: 2019ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಒಂದೂ ಗೆಲುವು ಕಾಣದೆ ಆಫ್ಘಾನಿಸ್ತಾನ ತನ್ನ ಅಭಿಯಾನ ಮುಕ್ತಾಯಗೊಳಿಸಿದೆ. ಇನ್ನು ಕೆರಿಬಿಯನ್ನರು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕ್ರಿಸ್ ಗೇಲ್ ಗೆ ಗೆಲುವಿನ ಉಡುಗೊರೆ ನೀಡಿದರು.
ವಿಶ್ವಕಪ್ 2019: ಆಫ್ಘನ್ನರಿಗೆ ಸವಾಲಿನ ಗುರಿ ನೀಡಿದ ಕೆರಿಬಿಯನ್ನರು
ಗುರುವಾರ ಇಲ್ಲಿ ನಡೆದ ತನ್ನ ಅಂತಿಮ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಆಫ್ಘನ್ 23 ರನ್‌ಗಳ ಸೋಲು ಅನುಭವಿಸಿತು. ಟೂರ್ನಿಯಲ್ಲಿ ಆಡಿದ ಎಲ್ಲಾ 9 ಪಂದ್ಯಗಳಲ್ಲಿ ಸೋತು ನಿರಾಸೆಗೊಳಗಾಯಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವಿಂಡೀಸ್, 6 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿತು. ಬೃಹತ್ ಗುರಿ ಬೆನ್ನತ್ತಿದ ಆಫ್ಘನ್, 50 ಓವರಲ್ಲಿ 288 ರನ್‌ಗೆ ಆಲೌಟ್ ಆಯಿತು. ಇಕ್ರಮ್ ಅಲಿ (86), ರಹಮತ್ ಶಾ (62) ಅರ್ಧಶತಕದ ಹೋರಾಟ ವ್ಯರ್ಥವಾಯಿತು.
ಇದಕ್ಕೂ ಮುನ್ನ ವಿಂಡೀಸ್‌ಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಕ್ರಿಸ್ ಗೇಲ್ ತಮ್ಮ ಅಂತಿಮ ವಿಶ್ವಕಪ್ ಪಂದ್ಯದಲ್ಲಿ ಕೇವಲ 7 ರನ್‌ಗೆ ಔಟಾಗಿ ನಿರಾಸೆ ಮೂಡಿಸಿದರು. ಎವಿನ್ ಲೆವಿನ್ (58), ಶಾಯ್ ಹೋಪ್ (77), ನಿಕೋಲಸ್ ಪೂರನ್ (58) ಅರ್ಧಶತಕ ಸಿಡಿಸಿ ತಂಡ ಬೃಹತ್ ಮೊತ್ತ ಗಳಿಸಲು ನೆರವಾದರು.
ಸ್ಕೋರ್:
ವಿಂಡೀಸ್ 311/6
ಆಫ್ಘಾನಿಸ್ತಾನ 288/10