ವಿಶ್ವಕಪ್ ಟೂರ್ನಿಯ ಕ್ಷಣ-ಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಬೆಂಗಳೂರು[ಜು.04]: ನ್ಯೂಜಿಲೆಂಡ್ ವಿರುದ್ದ 119 ರನ್’ಗಳ ಜಯಸಾಧಿಸುವುದರೊಂದಿಗೆ ಇಂಗ್ಲೆಂಡ್ ಮೂರನೇ ತಂಡವಾಗಿ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಸ್ಥಾನ ಖಚಿತ ಪಡಿಸಿದಕೊಂಡಿದೆ. ಇದರೊಂದಿಗೆ ಅಂತಿಮ ನಾಲ್ಕರಘಟ್ಟ ಪ್ರವೇಶಿಸುವ ಪಾಕಿಸ್ತಾನದ ಕನಸು ನುಚ್ಚುನೂರಾಗಿದೆ. 

ಪಾಕಿಸ್ತಾನ ಸೆಮೀಸ್ ಪ್ರವೇಶಕ್ಕೆ ಇನ್ನೂ ಇದೆ ಚಾನ್ಸ್...! ಆದರೆ...?

ಆಸ್ಟ್ರೇಲಿಯಾ, ಭಾರತ ಹಾಗೂ ಆತಿಥೇಯ ಇಂಗ್ಲೆಂಡ್ ತಂಡಗಳು ಸೆಮೀಸ್ ಸ್ಥಾನದಲ್ಲಿ ಭದ್ರವಾಗಿದ್ದು, ಆರೋಗ್ಯಕರ ರನ್ ರೇಟ್ ಹೊಂದಿರುವ ನ್ಯೂಜಿಲೆಂಡ್ ತಂಡವು ಅಂತಿಮ ನಾಲ್ಕರಘಟ್ಟದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ಒಂದು ಹಂತದಲ್ಲಿ 1992ರ ವಿಶ್ವಕಪ್ ರೀತಿಯಲ್ಲೇ ಸಾಗಿಬಂದ ಪಾಕಿಸ್ತಾನ ಈ ಬಾರಿಯೂ ವಿಶ್ವಕಪ್ ಗೆದ್ದು ಇತಿಹಾಸ ಬರೆಯಲಿದೆ ಎಂದು ಪಾಕ್ ಅಭಿಮಾನಿಗಳು ಭಾವಿಸಿದ್ದರು. ಆದರೆ ಇಂಗ್ಲೆಂಡ್ ಭಾರತ ಸೋಲುವುದರೊಂದಿಗೆ ಪಾಕ್ ಪಡೆಗೆ ಮೊದಲ ಆಘಾತ ಎದುರಾಗಿತ್ತು. ಇದಾದ ಬಳಿಕ ನ್ಯೂಜಿಲೆಂಡ್ ತಂಡವನ್ನು ಅನಯಾಸವಾಗಿ ಬಗ್ಗುಬಡಿದ ಇಂಗ್ಲೆಂಡ್ ಸೆಮೀಸ್ ಗೇರವುದರೊಂದಿಗೆ ಪಾಕ್ ಸೆಮೀಸ್ ಕನಸನ್ನು ಭಗ್ನಗೊಳಿಸಿತು.

ನ್ಯೂಜಿಲೆಂಡ್ ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಇಂಗ್ಲೆಂಡ್

ಇಯಾನ್ ಮಾರ್ಗನ್ ನೇತೃತ್ವದ ಇಂಗ್ಲೆಂಡ್ ಪಡೆ ಕಿವೀಸ್ ತಂಡವನ್ನು ಮಣಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣವಾದ ಟ್ವಿಟರ್’ನಲ್ಲಿ ಪಾಕಿಸ್ತಾನ ತಂಡವನ್ನು ಟ್ರೋಲ್ ಮಾಡಲಾಗಿದೆ. ಈ ಎಲ್ಲಾ ಟ್ವೀಟ್’ನಲ್ಲೇ ಕೊನೆಯ ಟ್ವೀಟ್ ನೋಡಿದರೆ ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಗ್ಯಾರಂಟಿ....

ಹೇಗೆಲ್ಲಾ ಪಾಕಿಸ್ತಾನ ಟ್ರೋಲ್ ಆಗಿದೆ ಎನ್ನುವುದನ್ನು ನೀವು ನೋಡಿ, ಜಸ್ಟ್ ಎಂಜಾಯ್ ಮಾಡಿ...