ನಮ್ಮಲ್ಲಿ ಬಹುತೇಕರು ದೈನಂದಿನ ಆರೋಗ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ, ವಿಶೇಷವಾಗಿ ಕೃಷಿ ಕಾರ್ಯಗಳಲ್ಲಿ ತೊಡಗಿರುವವರು ಆರೋಗ್ಯವನ್ನು ನಿರ್ಲಕ್ಷಿಸುವುದೇ ಹೆಚ್ಚು ಆದರೆ ಹೀಗೆ ಮಾಡುವುದರಿಂದ ಎಷ್ಟು ದೊಡ್ಡ ಹಾನಿ ಸಂಭವಿಸಬಹುದು ಎಂಬ ಬಗ್ಗೆ ವೈದ್ಯರೊಬ್ಬರು ವೀಡಿಯೋ ಮಾಡಿ ಹೇಳಿಕೊಂಡಿದ್ದಾರೆ.
ನಮ್ಮಲ್ಲಿ ಬಹುತೇಕರು ದೈನಂದಿನ ಆರೋಗ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ, ವಿಶೇಷವಾಗಿ ಕೃಷಿ ಕಾರ್ಯಗಳಲ್ಲಿ ತೊಡಗಿರುವವರು ತಮ್ಮ ವೈಯಕ್ತಿಕ ಆರೋಗ್ಯವನ್ನು ನಿರ್ಲಕ್ಷಿಸುವುದೇ ಹೆಚ್ಚು, ತಮ್ಮದೇ ಹೊಲದಲ್ಲಿ ಬೆಳೆದಿದ್ದು ಎಂದು ಹಣ್ಣು ತರಕಾರಿಗಳನ್ನು ಅನೇಕ ಬಾರಿ ತೊಳೆಯದೇ ತಿನ್ನುತ್ತಾರೆ. ಆದರೆ ಹೀಗೆಲ್ಲಾ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುವುದರಿಂದ ಎಷ್ಟು ದೊಡ್ಡ ಹಾನಿ ಸಂಭವಿಸಬಹುದು ಎಂಬ ಬಗ್ಗೆ ವೈದ್ಯರೊಬ್ಬರು ವೀಡಿಯೋ ಮಾಡಿ ಹೇಳಿಕೊಂಡಿದ್ದಾರೆ. ಡಾ ರವಿರಾಜ್ ಜೈನ್ ಎಂಬ ವೈದ್ಯರೊಬ್ಬರು ವೀಡಿಯೋ ಮೂಲಕ ರೋಗಿಯೊಬ್ಬರಲ್ಲಿ ಹಠಾತ್ ಆಗಿ ಕಾಣಿಸಿಕೊಂಡ ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದು, ಪ್ರತಿ ವರ್ಷವು ಹೊಟ್ಟೆ ಹುಳುವಿಗೆ ಔಷಧಿ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ವೀಡಿಯೋದಲ್ಲಿ ವೈದ್ಯರು ಹೇಳಿದ್ದೇನು?
ತಲೆಯಲ್ಲಿ ಹುಳ ಆಗುತ್ತಾ ಎಂಬುದು ಅನೇಕ ರೋಗಿಗಳ ಪ್ರಶ್ನೆ, ಖಂಡಿತವಾಗಿಯೂ ಹುಳ ಆಗುವ ಸಾಧ್ಯತೆಗಳು ಇವೆ. ಕೆಲ ದಿನಗಳ ಹಿಂದೆ 36 ವಯಸ್ಸಿನ ಯುವ ರೈತರೊಬ್ಬರು ನಮ್ಮ ಬಳಿ ಬಂದರು. ಅವರಿಗೆ ಹಠಾತ್ ಆಗಿ ಎಡಗೈ ಹಾಗೂ ಎಡಗಾಲಿಗೆ ಪಿಟ್ಸ್ ಬಂದಿತ್ತು. ಅವರು ನಮ್ಮ ಬಳಿಗೆ ಬರುವ ಮೊದಲೇ 7 ರಿಂದ 8 ವೈದ್ಯರ ಬಳಿ ಹೋಗಿ ಬಂದಿದ್ದರು. ಮಾತ್ರೆ ಔಷಧಿ ತೆಗೆದುಕೊಂಡಿದ್ದರು. ಎಲ್ಲಾ ವೈದ್ಯರು ಅವರಿಗೆ ತಲೆಗೆ ಸಿಟಿ ಸ್ಕ್ಯಾನ್ ಮಾಡುವಂತೆ ಸೂಚಿಸಿದ್ದರು. ಆದರೆ ಅವರು ನಿರ್ಲಕ್ಷ್ಯ ಮಾಡಿದ್ದರು. ಆದರೆ ಈ ಸಮಸ್ಯೆ ಕಡಿಮೆ ಆಗದೇ ಹೋದಾಗ ಕೊನೆಗೂ ಅವರು ತಲೆಯ ಸಿಟಿ ಸ್ಕ್ಯಾನ್ ಮಾಡಿದರು. ಈ ವೇಳೆ ಅವರ ಬ್ರೈನ್ ಅಲ್ಲಿ ಹುಳಗಳಿದ್ದವು ಇದಕ್ಕೆ ಸಿಸ್ಟಿ ಸಿರ್ಕೊಸಿಸ್ ಎಂದು ಹೇಳುತ್ತಾರೆ ಎಂದು ಅವರು ಹೇಳಿದ್ದಾರೆ.
ಏನಿದು ಸಮಸ್ಯೆ ಇದು ಆರಂಭವಾಗುವುದು ಹೇಗೆ?
ಆ ರೈತನರ ಮನೆ ಸುತ್ತಮುತ್ತಲೂ ಹಂದಿಗಳಿದ್ದವು. ಅವರು ಕಾಲಿಗೆ ಸರಿ ಚಪ್ಪಲಿ ಹಾಕುತ್ತಿರಲಿಲ್ಲ, ತರಕಾರಿಗಳನ್ನು ಬೆಳೆಯುತ್ತಿದ್ದರು. ಹಾಗೂ ತಮ್ಮ ಹೊಲದಲ್ಲೇ ತರಕಾರಿ ಬೆಳೆಯುತ್ತಿದ್ದಿದ್ದರಿಂದ ಈ ತರಕಾರಿಗಳನ್ನು ಅವರು ಕೆಲವೊಮ್ಮೆ ತೊಳೆಯದೇ ತಿನ್ನುತ್ತಿದ್ದರು. ಕೆಲವರು ಹಂದಿ ಮಾಂಸವನ್ನು ಕೂಡ ತಿನ್ನುತ್ತಾರೆ. ಹೀಗೆ ತರಕಾರಿಗಳನ್ನು ತೊಳೆಯದೇ ತಿನ್ನುವುದರಿಂದ ಹಣ್ಣುಗಳನ್ನು ತೊಳೆಯದೇ ತಿನ್ನುತ್ತಾರೆ ಮಾಂಸವನ್ನು ಸರಿಯಾಗಿ ಬೇಯಿಸದೇ ತಿನ್ನುವುದರಿಂದ ಅದರಲ್ಲಿರುವ ಮೊಟ್ಟೆಗಳು ಸೀದಾ ಬಾಯಿಯಿಂದ ಹೊಟ್ಟೆಗೆ ಹೋಗಿ ಕರುಳಿಗೆ ಸೇರಿಕೊಳ್ಳುತ್ತವೆ ಹಾಗೂ ಕರುಳಿನಲ್ಲಿ ಹುಳಗಳಾಗುತ್ತವೆ. ಅವು ಸಣ್ಣ ಮರಿಗಳು, ಈ ಲಾರ್ವಾಗಳು ದೇಹದಲ್ಲಿ ಸುತ್ತು ಹೊಡೆಯುವುದಕ್ಕೆ ಆರಂಭವಾಗುತ್ತವೆ. ಹೀಗೆ ಟ್ರಿಪ್ ಹೊಡೆಯುವ ಸಣ್ಣ ಸಣ್ಣ ಹುಳುಗಳು ಮೆದುಳಿಗೆ ಹೋಗಿ ಸೇರಿಕೊಂಡು ಅಲ್ಲೇ ಸಿಲುಕಿಕೊಂಡು ಬಿಡುತ್ತವೆ. ಇವು ಸಿಸ್ಟಿಕ್ ಲೀಜನ್ ಆಗಿ ಬದಲಾಗುತ್ತವೆ. ಅವು ಅಲ್ಲೇ ಸಿಲುಕಿ ಮೆದುಳಿನ ಕೆಲಸಕ್ಕೆ ಹಾನಿ ಮಾಡುತ್ತವೆ. ಹೀಗಾಗಿ ಪಿಟ್ಸ್ ತೀವ್ರ ತಲೆನೋವು ಮುಂತಾದ ಸಮಸ್ಯೆಗಳು ಕಾಣುತ್ತವೆ.
ಇದನ್ನೂ ಓದಿ: ತಮಾಷೆಗೆ ಮಾಡಿದ್ವಿ ವೈರಲ್ ಆಗೋಯ್ತು ಎಂದ ಸ್ನೇಹಿತರು: ವೈರಲ್ ಆದ ಪಿಜ್ಜಾ ಡೆಲಿವರಿ ಬಾಯ್‌ಗೆ ಈಗ ಮತ್ತೊಂದು ಸಂಕಷ್ಟ
ಹೀಗಾಗಿ ಪ್ರತಿವರ್ಷ ಪ್ರತಿಯೊಬ್ಬರು ಹೊಟ್ಟೆ ಹುಳುವಿಗೆ ಅಥವಾ ಜಂತು ಹುಳುವಿಗೆ ಹುಳದ ಮಾತ್ರೆಯನ್ನು ತೆಗೆದುಕೊಳ್ಳಬೇಕು. ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡವರು ವರ್ಷಕ್ಕೆ ಎರಡು ಬಾರಿಯಾದರೂ ಹುಳದ ಮಾತ್ರೆ ತೆಗೆದುಕೊಂಡರೆ ತೊಂದರೆ ಇಲ್ಲ. ಇಂಗ್ಲೀಷ್ ಮೆಡಿಸಿನ್‌ನಲ್ಲಿ ಅಲ್ಬೆಂಡೊಜಲ್ (Albendazole) ಎಂಬ ಮಾತ್ರೆ ತೆಗೆದುಕೊಳ್ಳಬಹುದು. ಇದನ್ನು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತದೆ. ಯಾರೆಲ್ಲಾ ತೆಗೆದುಕೊಳ್ಳುವುದಿಲ್ಲವೋ ಅವರು ತೆಗೆದುಕೊಳ್ಳಿ ಎಂದು ವೈದ್ಯರಾದ ಡಾ ರವಿರಾಜ್ ಜೈನ್ ಎಂಬುವವರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಹಾಗೆಯೇ ಆಯುರ್ವೇದದಲ್ಲಿ ವಿಡಂಗಚೂರ್ಣ ಅಥವಾ ವಿಡಂಗಾಸವ ಎಂಬ ಔಷಧಿಯೂ ಲಭ್ಯವಿದೆ ಇದನ್ನು ತೆಗೆದುಕೊಳ್ಳುವಂತೆ ವೈದ್ಯರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ತಮಗೆ ದಿನವೂ ಅಡುಗೆ ಮಾಡಿ ಬಡಿಸುವ ಅಡುಗೆ ಕೆಲಸದಾಕೆಗೆ ಸರ್‌ಫ್ರೈಸ್ ನೀಡಿದ ಹಾಸ್ಟೆಲ್ ಹುಡುಗಿರು


