ಪಿಜಿಯಲ್ಲಿ ವಾಸಿಸುವ ಹುಡುಗಿಯರು ತಮ್ಮ ಅಡುಗೆ ಕೆಲಸದ ಮಹಿಳೆಗೆ ಬರ್ತ್‌ಡೇ ಸರ್‌ಪ್ರೈಸ್ ನೀಡಿದ್ದಾರೆ. ತನ್ನ ಹುಟ್ಟುಹಬ್ಬದ ದಿನಾಂಕವೇ ತಿಳಿಯದ ಆ ಮಹಿಳೆಗೆ ಕೇಕ್ ಕತ್ತರಿಸಿ, ಉಡುಗೊರೆಗಳನ್ನು ನೀಡಿ ಸಂಭ್ರಮಿಸಿದ್ದಾರೆ. ಈ ಹೃದಯಸ್ಪರ್ಶಿ ಕ್ಷಣದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಡುಗೆ ಕೆಲಸದಾಕೆಗೆ ಬರ್ತ್‌ಡೇ ಸರ್‌ಪ್ರೈಸ್

ಪಿಜಿ(ಪೇಯಿಂಗ್ ಗೆಸ್ಟ್‌)ನಲ್ಲಿ ವಾಸ ಮಾಡುವ ಹುಡುಗಿಯರು ಅಲ್ಲಿ ತಮಗೆ ದಿನವೂ ಅಡುಗೆ ಮಾಡಿ ಬಳಸುವ ಅಡುಗೆ ಕೆಲಸದಾಕೆಗೆ ಬರ್ತ್‌ಡೇ ಸರ್‌ಫ್ರೈಸ್ ನೀಡಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಅನೇಕರು ಪಿಜಿಯ ಹುಡುಗಿಯರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. (ಪಿಜಿ ಅಂದರೆ ಹೆಚ್ಚು ವಿವರಿಸಬೇಕಾಗಿಲ್ಲ, ಆದರೂ ತಿಳಿಯದವರಿಗಾಗಿ ಪಿಜಿ ಎಂದರೆ ದೂರದೂರದಿಂದ ಉದ್ಯೋಗ ಅಥವಾ ಶಿಕ್ಷಣಕ್ಕಾಗಿ ಮನೆ ಬಿಟ್ಟು ಬಂದವರು ವಾಸವಿರುವ ಸ್ಥಳವಾಗಿದ್ದು, ಒಂದು ರೀತಿ ಇದು ಹಾಸ್ಟೆಲ್‌ನಂತೆಯೇ ಇಲ್ಲಿ ನೀವು ತಿಂಗಳಿಗಿಷ್ಟು ಹಣ ಪಾವತಿಸಿದರೆ ಊಟ ವಸತಿ ಎಲ್ಲವೂ ಲಭ್ಯವಾಗಿರುತ್ತದೆ.) ಈ ವೀಡಿಯೋವನ್ನು Priyakhi Konwar ಎಂಬುವವವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಇವರು ನಮ್ಮ ಪಿಜಿ ಕುಕ್‌(ಅಡುಗೆ ಕೆಲಸದವರು) ಇವರು ನಮ್ಮ ದೈನಂದಿನ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರಿಗೆ ನಿಜವಾಗಿ ಅವರ ಬರ್ತ್‌ಡೇ ಯಾವಾಗ ಇದೆ ಎಂಬುದೇ ತಿಳಿದಿಲ್ಲ, ಆದರೂ ನಾವು ಆಕೆಯನ್ನು ಖುಷಿ ಪಡಿಸಬೇಕು ಅವರಿಗೆ ಸರ್‌ಫ್ರೈಸ್ ನೀಡಬೇಕು ಎಂಬ ಉದ್ದೇಶದಿಂದ ನಾವು ಕ್ಯಾಲೆಂಡರ್‌ ದಿನಾಂಕವನ್ನು ಗಣನೆಗೆ ತೆಗೆದುಕೊಳ್ಳದೇ ಅವರಿಗೆ ವಿಶೇಷ ಸರ್‌ಫ್ರೈಸ್ ನೀಡಲು ಮುಂದಾದೆವು ಎಂದು ಪ್ರಿಯಾಂಕಿ ಕನ್ವರ್ ಅವರು ಬರೆದುಕೊಂಡಿದ್ದಾರೆ.

ಇವರು ನಮ್ಮ ಪಿಜಿಯ ಅಡುಗೆಯವರು, ಪ್ರತಿದಿನವೂ ಅವರು ನಮ್ಮ ತಟ್ಟೆಯನ್ನು ಪ್ರೀತಿಯಿದಲೇ ತುಂಬುತ್ತಾರೆ ಅವರಿಗೆ ಅವರ ಬರ್ತ್‌ಡೇ ಯಾವಾಗ ಎಂಬುದೇ ಗೊತ್ತಿಲ್ಲ. ಆದರೂ ನಾವು ಒಂದು ದಿನ ನಿಗದಿ ಮಾಡಿ ಅವರ ಬರ್ತ್‌ಡೇ ಆಚರಿಸಿದೆವು. ಮಾಮೂಲಿ ದಿನವಾಗಿ ಆರಂಭವಾಗಿದ್ದ ಆ ದಿನವೂ ಒಂದು ಬಹಳ ಸಿಹಿಯಾದ ಸಂಭ್ರಮದ ಪ್ರೀತಿ ಹಾಗೂ ಕೃತಜ್ಞತೆ ತುಂಬಿದ ದಿನವಾಗಿ ಬದಲಾಯ್ತು. ಅವರಿಗೆ ಸರ್‌ಪ್ರೈಸ್ ನೀಡುವುದಕ್ಕಾಗಿ ನಮ್ಮ ಸ್ನೇಹಿತರ ಗುಂಪಿನಿಂದ ಪಿಜಿಯನ್ನು ಅಲಂಕಾರ ಮಾಡಿದೆವು ಹಾಗೂ ಅವರಿಗೆ ಸರ್‌ಫ್ರೈಸ್ ನೀಡುವುದಕ್ಕೆ ಮುಂದಾದೆವು, ನಮ್ಮ ಉದ್ದೇಶ ಒಂದೇ ಒಂದು ಆಗಿತ್ತು. ಅದು ಆಕೆಯ ಮೊಗದಲ್ಲಿ ನಗು ತರಿಸುವುದಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ತಮಾಷೆಗೆ ಮಾಡಿದ್ವಿ ವೈರಲ್ ಆಗೋಯ್ತು ಎಂದ ಸ್ನೇಹಿತರು: ವೈರಲ್ ಆದ ಪಿಜ್ಜಾ ಡೆಲಿವರಿ ಬಾಯ್‌ಗೆ ಈಗ ಮತ್ತೊಂದು ಸಂಕಷ್ಟ

ವೈರಲ್ ಆದ ವೀಡಿಯೋದಲ್ಲಿ ಅಡುಗೆ ಮಾಡುವ ಮಹಿಳೆ ಈ ಬಣ್ಣ ಬಣ್ಣದ ಬಲೂನ್‌ಗಳಿಂದ ಅಲಂಕೃತಗೊಂಡ ರೂಮ್‌ಗೆ ಬರುತ್ತಿದ್ದಂತೆ ಅಲ್ಲಿದ್ದವರೆಲ್ಲರೂ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ನಿಮಗೆ ಎಂದು ಕೂಗುವ ಮೂಲಕ ಅವರಿಗೆ ಸರ್‌ಫ್ರೈಸ್ ನೀಡುತ್ತಾರೆ.. ನೈಟಿ ಧರಿಸಿದ್ದ ಅವರು ಬಹಳ ಅಳುಕುತ್ತಲೇ ಬಂದು ನಂತರ ಅಚ್ಚರಿಯೊಂದಿಗೆ ಅವರು ನಗುತ್ತಾರೆ. ಒಬ್ಬರು ಯುವತಿ ಅವರನ್ನು ಕೈ ಹಿಡಿದು ಕೇಕ್ ಉಡುಗೊರೆ ಹಾಗೂ ಇತರ ತಿಂಡಿಗಳಿರುವ ಸ್ಥಳಕ್ಕೆ ಕರೆದೊಯ್ಯುತ್ತಾರೆ. ನಂತರ ಕುಕ್ ಕೇಕ್ ಕಟ್ಟ ಮಾಡಿ ಅಲ್ಲಿದ್ದ ಎಲ್ಲರಿಗೂ ಪ್ರೀತಿಯಿಂದ ತಿನಿಸುತ್ತಾರೆ. ಇವರಿಗೆ ಹೀಗೆ ಸರ್‌ಫ್ರೈಸ್ ಗಿಫ್ಟ್ ನೀಡಿದ ಆ ಹೆಣ್ಣು ಮಕ್ಕಳ ಮೊಗದಲ್ಲಿ ನಗು ಕಾಣಿಸುತ್ತದೆ. ಕೇಕ್ ಜೊತೆಗೆ ಆ ಹೆಣ್ಣು ಮಕ್ಕಳು ಅವರಿಗೆ ಬಟ್ಟೆ ಸ್ವೆಟರ್ ಸಾಕ್ಸ್ ಹ್ಯಾಂಡ್‌ಬ್ಯಾಗ್ ಗಿಫ್ಟ್ ನೀಡಿದ್ದಾರೆ. ಇದೆಲ್ಲವನ್ನು ನೋಡಿ ಅವರು ಖುಷಿಯ ಜೊತೆಗೆ ನಂಬಲಾಗದಂತೆ ನೋಡುತ್ತಿರುವುದನ್ನು ಕಾಣಬಹುದು. ವೀಡಿಯೋ ನೋಡಿದ ಅನೇಕರು ಭಾವುಕರಾಗಿದ್ದು, ಯಾವುದೇ ನಿರೀಕ್ಷೆ ಇಲ್ಲದ ಅವರ ಹುಟ್ಟುಹಬ್ಬ ಆಚರಿಸಿದ್ದಕ್ಕೆ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: ತನಗೆ ಅನ್ನ ಹಾಕಿದವನ 5 ವರ್ಷಗಳ ನಂತರವೂ ಗುರುತಿಸಿದ ಬೀದಿ ನಾಯಿ: ಶ್ವಾನ ಹಾಗೂ ಯುವಕನ ಭಾವುಕ ಪುನರ್ಮಿಲನ

View post on Instagram