ಇತ್ತೀಚಿನ ದಿನಗಳಲ್ಲಿ ವೆರಿಕೋಸ್ ವೇಯ್ನ್ಸ್ ಸಮಸ್ಯೆ ತುಂಬಾ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಕಾಲುಗಳಲ್ಲಿ ರಕ್ತನಾಳಗಳು ಊದಿಕೊಂಡು, ತಿರುಚಿಕೊಂಡು ನೀಲಿ ಅಥವಾ ನೇರಳೆ ಬಣ್ಣದಲ್ಲಿ ಕಾಣಿಸುತ್ತವೆ.

ಕಾಲುಗಳಲ್ಲಿ ಊದಿಕೊಂಡ, ತಿರುಚಿದ ನೀಲಿ ಅಥವಾ ನೇರಳೆ ಬಣ್ಣದ ರಕ್ತನಾಳಗಳೇ ವೆರಿಕೋಸ್ ವೇಯ್ನ್ಸ್. ಇದು ಕಾಲು ಭಾರ, ಊತ ಮತ್ತು ನೋವಿಗೆ ಕಾರಣವಾಗಬಹುದು. ಇದನ್ನು ಕೇವಲ ಸೌಂದರ್ಯದ ಸಮಸ್ಯೆ ಎಂದು ನಿರ್ಲಕ್ಷಿಸಬೇಡಿ, ಇದು ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು. ಇತ್ತೀಚಿನ ದಿನಗಳಲ್ಲಿ ವೆರಿಕೋಸ್ ವೇಯ್ನ್ಸ್ ಸಮಸ್ಯೆ ತುಂಬಾ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಕಾಲುಗಳಲ್ಲಿ ರಕ್ತನಾಳಗಳು ಊದಿಕೊಂಡು, ತಿರುಚಿಕೊಂಡು ನೀಲಿ ಅಥವಾ ನೇರಳೆ ಬಣ್ಣದಲ್ಲಿ ಕಾಣಿಸುತ್ತವೆ. ಇದರಿಂದ ಕಾಲು ಭಾರವಾದಂತೆ ಭಾಸವಾಗುವುದು, ಊತ ಮತ್ತು ನೋವು ಕಾಣಿಸಿಕೊಳ್ಳಬಹುದು.

Add Asianetnews Kannada as a Preferred SourcegooglePreferred

ಹಲವರು ಇದನ್ನು ಕೇವಲ ಸೌಂದರ್ಯಕ್ಕೆ ಸಂಬಂಧಿಸಿದ ಸಮಸ್ಯೆ ಎಂದು ಸುಮ್ಮನಾಗಿಬಿಡುತ್ತಾರೆ. ಆದರೆ, ಇದು ದೇಹದೊಳಗಿನ ರಕ್ತ ಸಂಚಾರದ ಸಮಸ್ಯೆಯನ್ನು ಸೂಚಿಸುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ. ಲೈಫ್‌ಸ್ಟೈಲ್ ಕೋಚ್ ಲೂಕ್ ಕುಟಿನ್ಹೋ ಅವರ ಪ್ರಕಾರ, ಕಾಲಾನಂತರದಲ್ಲಿ ರಕ್ತನಾಳಗಳೊಳಗಿನ ಸಣ್ಣ, ಏಕಮುಖ ವಾಲ್ವ್‌ಗಳು (ಕವಾಟಗಳು) ದುರ್ಬಲಗೊಂಡಾಗ ಸಾಮಾನ್ಯವಾಗಿ ವೆರಿಕೋಸ್ ವೇಯ್ನ್ಸ್ ಸಮಸ್ಯೆ ಶುರುವಾಗುತ್ತದೆ.

ನಿಮ್ಮ ಕಾಲುಗಳಲ್ಲಿನ ನರಗಳು ಊದಿಕೊಂಡು ನೀಲಿ ಬಣ್ಣಕ್ಕೆ ತಿರುಗುತ್ತಿದ್ದರೆ, ಅದು ವೆರಿಕೋಸ್ ವೇಯ್ನ್ಸ್ ಇರಬಹುದು. ಯಾಕೆಂದರೆ, ನರಗಳಲ್ಲಿನ ರಕ್ತವು ಹೃದಯಕ್ಕೆ ವಾಪಸ್ ಹೋಗಲು ಕಷ್ಟಪಡುತ್ತಿರಬಹುದು ಎಂದು ಲೂಕ್ ಕುಟಿನ್ಹೋ ಹೇಳುತ್ತಾರೆ. ಈ ವಾಲ್ವ್‌ಗಳು ಸರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದಾಗ, ರಕ್ತವು ಹಿಂದಕ್ಕೆ ಹರಿಯಲು ಶುರುವಾಗಿ ಕಾಲುಗಳಲ್ಲೇ ಶೇಖರಣೆಯಾಗುತ್ತದೆ.

ವಯಸ್ಸು ಹೆಚ್ಚಾದಂತೆ, ವ್ಯಕ್ತಿಯ ರಕ್ತನಾಳಗಳು ದುರ್ಬಲವಾಗಬಹುದು. ಇದು ಈ ಸ್ಥಿತಿಗೆ ಕಾರಣವಾಗುತ್ತದೆ. ಹೆಚ್ಚು ಹೊತ್ತು ನಿಂತು ಕೆಲಸ ಮಾಡುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಜೊತೆಗೆ, ದೇಹದ ಅಧಿಕ ತೂಕವು ರಕ್ತನಾಳಗಳ ಮೇಲೆ ಹೆಚ್ಚು ಒತ್ತಡವನ್ನು ಹಾಕಿ, ಅವುಗಳನ್ನು ಹಾನಿಗೊಳಿಸುತ್ತದೆ. ಇದೂ ಕೂಡ ವೆರಿಕೋಸ್ ವೇಯ್ನ್ಸ್ ಸಮಸ್ಯೆಗೆ ದಾರಿ ಮಾಡಿಕೊಡಬಹುದು.

ಹಲವಾರು ಜೀವನಶೈಲಿ ಮತ್ತು ಆರೋಗ್ಯದ ಅಂಶಗಳು ವೆರಿಕೋಸ್ ವೇಯ್ನ್ಸ್ ಅಪಾಯವನ್ನು ಹೆಚ್ಚಿಸುತ್ತವೆ. ದೀರ್ಘಕಾಲ ಒಂದೇ ಕಡೆ ಕುಳಿತುಕೊಳ್ಳುವುದು ಅಥವಾ ನಿಂತಿರುವುದು, ಹಾರ್ಮೋನ್ ಬದಲಾವಣೆಗಳು, ಉರಿಯೂತ ಮತ್ತು ಗರ್ಭಾವಸ್ಥೆ, ಇವೆಲ್ಲವೂ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರಿ, ರಕ್ತನಾಳಗಳೊಳಗಿನ ಒತ್ತಡವನ್ನು ಹೆಚ್ಚಿಸುತ್ತವೆ. ಈ ಒತ್ತಡ ಹೆಚ್ಚಾದಾಗ, ರಕ್ತನಾಳಗಳ ಗೋಡೆಗಳು ಹಿಗ್ಗುತ್ತವೆ ಮತ್ತು ಉರಿಯೂತ ಜಾಸ್ತಿಯಾಗುತ್ತದೆ. ಕಾಲಕ್ರಮೇಣ, ಈ ರಕ್ತನಾಳಗಳು ದೊಡ್ಡದಾಗಿ, ತಿರುಚಿಕೊಂಡು ನೋವು ಕೊಡಲು ಶುರುಮಾಡುತ್ತವೆ.

ವೆರಿಕೋಸ್ ವೇಯ್ನ್ಸ್‌ನ ಲಕ್ಷಣಗಳು

-ಕಾಲುಗಳು ಭಾರವಾದಂತೆ ಅಥವಾ ಸುಸ್ತಾದಂತೆ ಅನಿಸುವುದು
-ಪಾದದ ಸುತ್ತ ಊತ ಕಾಣಿಸಿಕೊಳ್ಳುವುದು
-ಚರ್ಮದ ಮೇಲೆ ನೀಲಿ ಅಥವಾ ನೇರಳೆ ಬಣ್ಣದ ರಕ್ತನಾಳಗಳು ಸ್ಪಷ್ಟವಾಗಿ ಕಾಣಿಸುವುದು
-ಹೆಚ್ಚು ಹೊತ್ತು ನಿಂತ ನಂತರ ನೋವು ಬರುವುದು