ಏಪ್ರಿಕಾಟ್ ಬಿಸಿ ಮತ್ತು ತಣ್ಣನೆಯ ವಾತಾವರಣ ಎರಡರಲ್ಲೂ ಬೆಳೆಯುವ ಹಣ್ಣು. ಇದನ್ನು ಮರದಿಂದ ಕಿತ್ತು ಹಾಗೆಯೇ ತಿನ್ನಬಹುದು ಅಥವಾ ಜಾಮ್, ಚಟ್ನಿ ಮಾಡಲು ಕೂಡ ಬಳಸಬಹುದು.
Image credits: Getty
Kannada
ಪೋಷಕಾಂಶಗಳ ಆಗರ ಈ ಏಪ್ರಿಕಾಟ್
ಪೋಷಕಾಂಶಗಳಿಂದ ಸಮೃದ್ಧವಾಗಿರುವ ಏಪ್ರಿಕಾಟ್‌ನಲ್ಲಿ ಹಲವಾರು ಆರೋಗ್ಯ ಲಾಭಗಳಿವೆ. ಇದರಲ್ಲಿ ಕಬ್ಬಿಣ, ಫೋಲಿಕ್ ಆಸಿಡ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಫೈಬರ್, ಪ್ರೋಟೀನ್ ಮತ್ತು ವಿಟಮಿನ್ ಎ ಸಮೃದ್ಧವಾಗಿದೆ.
Image credits: Getty
Kannada
ಚರ್ಮದ ಆರೋಗ್ಯವನ್ನು ಕಾಪಾಡುತ್ತೆ
ಏಪ್ರಿಕಾಟ್‌ನಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಹೇರಳವಾಗಿದೆ. ಇವೆರಡೂ ಚರ್ಮದ ಆರೋಗ್ಯಕ್ಕೆ ಅತ್ಯಗತ್ಯ. ಹಾಗಾಗಿ ಇದು ಚರ್ಮದ ರಕ್ಷಣೆಗೆ ಬಹಳ ಒಳ್ಳೆಯದು.
Image credits: instagram
Kannada
ಕಣ್ಣಿನ ದೃಷ್ಟಿ ಸುಧಾರಿಸುತ್ತೆ
ಏಪ್ರಿಕಾಟ್ ಕಣ್ಣುಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೃಷ್ಟಿ ಶಕ್ತಿ ಹೆಚ್ಚಿಸಲು ಸಹಾಯವಾಗುತ್ತದೆ.
Image credits: Freepik-master1305
Kannada
ರಕ್ತಹೀನತೆ ತಡೆಯುತ್ತೆ
ಏಪ್ರಿಕಾಟ್‌ನಲ್ಲಿ ಕಬ್ಬಿಣದ ಅಂಶ ಅಧಿಕವಾಗಿದೆ. ಇದು ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ರಕ್ತಹೀನತೆ ಸಮಸ್ಯೆ ದೂರವಾಗುತ್ತದೆ.
Image credits: Getty
Kannada
ಮೂಳೆಗಳನ್ನು ಬಲಪಡಿಸುತ್ತೆ
ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅಂಶಗಳು ಏಪ್ರಿಕಾಟ್‌ನಲ್ಲಿ ಹೇರಳವಾಗಿವೆ. ಹೀಗಾಗಿ ಇದು ಮೂಳೆಗಳ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ.