Kannada

Capsicum Benefits: ಕ್ಯಾಪ್ಸಿಕಂನ ಈ ಆರೋಗ್ಯ ಪ್ರಯೋಜನಗಳನ್ನು ಮಿಸ್ ಮಾಡ್ಕೋಬೇಡಿ!

ತರಕಾರಿ ಮಾರುಕಟ್ಟೆಯಲ್ಲಿ ಕ್ಯಾಪ್ಸಿಕಂ ಅಥವಾ ದಪ್ಪ ಮೆಣಸಿನಕಾಯಿಗೆ ಸ್ವಲ್ಪ ಬೆಲೆ ಹೆಚ್ಚೇ. ಇದು ಹಳದಿ, ಕೆಂಪು ಮತ್ತು ಹಸಿರು ಬಣ್ಣಗಳಲ್ಲಿ ಸುಲಭವಾಗಿ ಸಿಗುತ್ತದೆ.
Kannada

ಹಳದಿ, ಕೆಂಪು, ಹಸಿರು ಬಣ್ಣಗಳಲ್ಲಿ ಲಭ್ಯ

ಸಾಂಬಾರ್, ಮಸಾಲಾ ಕರಿ, ಫ್ರೈ... ಹೀಗೆ ಬಗೆಬಗೆಯ ಅಡುಗೆಗಳನ್ನು ತಯಾರಿಸಲು ಕ್ಯಾಪ್ಸಿಕಂ ಬಳಸುತ್ತಾರೆ. ಇದು ಅಡುಗೆಗೆ ವಿಶೇಷ ರುಚಿ ನೀಡುತ್ತದೆ.
Image credits: Getty
Kannada

ರುಚಿ ಮಾತ್ರವಲ್ಲ, ಪೋಷಕಾಂಶಗಳ ಆಗರ

ಕ್ಯಾಪ್ಸಿಕಂ ಕೇವಲ ರುಚಿಕರವಷ್ಟೇ ಅಲ್ಲ, ಪೋಷಕಾಂಶಗಳಿಂದಲೂ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯ ಕಾಪಾಡುವ ಪೊಟ್ಯಾಶಿಯಂ ಕೂಡ ಇದರಲ್ಲಿ ಹೇರಳವಾಗಿದೆ.
Image credits: Getty
Kannada

ತೂಕ ಇಳಿಸೋಕೆ ಬೆಸ್ಟ್ ಫುಡ್

ದೇಹದ ತೂಕ ಇಳಿಸಲು ಪ್ರಯತ್ನಿಸುತ್ತಿರುವವರಿಗೆ ಕ್ಯಾಪ್ಸಿಕಂ ಒಂದು ಉತ್ತಮ ಆಹಾರ. ಇದರಲ್ಲಿ ನಾರಿನಾಂಶ ಮತ್ತು ನೀರಿನಂಶ ಹೆಚ್ಚಿರುವುದರಿಂದ, ತಿಂದ ತಕ್ಷಣ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.
Image credits: Getty
Kannada

ದೇಹದ ಉರಿಯೂತ ಕಡಿಮೆ ಮಾಡುತ್ತದೆ

ಕ್ಯಾಪ್ಸಿಕಂನಲ್ಲಿ ಆ್ಯಂಟಿ-ಇನ್‌ಫ್ಲಮೇಟರಿ ಫೈಟೋಕೆಮಿಕಲ್‌ಗಳಿವೆ. ಇದನ್ನು ಪ್ರತಿದಿನ ಸೇವಿಸುವುದರಿಂದ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.
Image credits: Getty
Kannada

ಅಸ್ತಮಾ, ಸೈನುಟಿಸ್‌ ತಡೆಯುತ್ತೆ

ಕ್ಯಾಪ್ಸಿಕಂ ಸೇವನೆಯು ಅಸ್ತಮಾ, ಸೈನುಟಿಸ್ ಮತ್ತು ದೀರ್ಘಕಾಲದ ಪೆಪ್ಟಿಕ್ ಅಲ್ಸರ್‌ನಂತಹ ಉರಿಯೂತ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
Image credits: Getty
Kannada

ಕ್ಯಾನ್ಸರ್ ಕೋಶಗಳ ಬೆಳವಣಿಗೆ ತಡೆ

ಕ್ಯಾಪ್ಸಿಕಂನಲ್ಲಿ 'ಕ್ಯಾಪ್ಸೈಸಿನ್' ಎಂಬ ಸಕ್ರಿಯ ಅಂಶವಿದೆ. ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
Image credits: Getty
Kannada

ಮೂಳೆಗಳ ಆರೋಗ್ಯವನ್ನು ಸುಧಾರಿಸುತ್ತೆ

ಕ್ಯಾಪ್ಸಿಕಂನಲ್ಲಿ ಮ್ಯಾಂಗನೀಸ್ ಅಂಶವು ಹೇರಳವಾಗಿದೆ. ಇದು ಮೂಳೆಗಳ ಆರೋಗ್ಯವನ್ನು ಸುಧಾರಿಸಲು ಮತ್ತು ಅವುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
Image credits: Getty
Kannada

ಆತಂಕವನ್ನು ಕಡಿಮೆ ಮಾಡುತ್ತದೆ

ಕ್ಯಾಪ್ಸಿಕಂನಲ್ಲಿರುವ ಮೆಗ್ನೀಶಿಯಂ ಮತ್ತು ವಿಟಮಿನ್ ಬಿ6 ಅಂಶಗಳು ಆತಂಕವನ್ನು ಕಡಿಮೆ ಮಾಡಲು ಮತ್ತು ಮನಸ್ಸನ್ನು ಶಾಂತವಾಗಿಡಲು ಸಹಾಯ ಮಾಡುತ್ತವೆ.
Image credits: Getty

ಟೀ ರುಚಿಯಾಗಿ, Creamy ಆಗಲು ಹೋಟೆಲ್‌ನಲ್ಲಿ ಸೇರಿಸುವ ರಹಸ್ಯ ಪದಾರ್ಥ ಏನು?

Kitchen Hack: ಹೀಗೆ ಮಾಡಿದ್ರೆ ಬಾಳೆಕಾಯಿ ಕಟ್‌ ಮಾಡೋವಾಗ, ಮೇಣ ಕೈಗೆ ಅಂಟೋದಿಲ್ಲ

Health Drinks: ಬೇಸಿಗೆಯಲ್ಲಾಗುವ ದೇಹದ ಉರಿಯೂತ ಕಡಿಮೆ ಮಾಡಲು ಈ 5 ಪಾನೀಯ ಸೇವಿಸಿ

ಮನೆಯಲ್ಲೇ ಮಾಡಿ ಕಾಜು ಬರ್ಫಿ, ಕಡಿಮೆ ಸಕ್ಕರೆಯಲ್ಲೇ ಸವಿಯಿರಿ ರುಚಿಕರ ಸಿಹಿ