ಹದಿಹರೆಯ ಹುಡುಗಿಯರನ್ನು ಕಾಡೋ ಹಿಸ್ಟೀರಿಯಾಗೆ ಮನೆ ಮದ್ದು
ಮಾನಸಿಕ ಖಾಯಿಲೆಗಳು ಅನೇಕ ಬಾರಿ ದೈಹಿಕವಾಗಿ ನಮ್ಮನ್ನು ಕಾಡುತ್ತವೆ. ಅದ್ರಲ್ಲಿ ಹಿಸ್ಟೀರಿಯಾ ಕೂಡ ಒಂದು. ಬೇರೆ ಬೇರೆ ಕಾರಣಕ್ಕೆ ಶುರುವಾಗುವ ಈ ರೋಗದಿಂದ ರೋಗಿ ಅನೇಕ ದೈಹಿಕ ಸಮಸ್ಯೆ ಎದುರಿಸುತ್ತಾನೆ. ಆಗಾಗ ಬಂದು ಹೋಗುವ ಈ ಖಾಯಿಲೆ ಗುರುತಿಸೋದು ಕಷ್ಟ.
ದೈಹಿಕ ರೋಗ ಲಕ್ಷಣಗಳು ಬೇಗ ನಮ್ಮ ಅರಿವಿಗೆ ಬರುತ್ತದೆ. ಆದ್ರೆ ಮಾನಸಿಕ ರೋಗ ಲಕ್ಷಣಗಳು ನಮ್ಮ ಗಮನಕ್ಕೆ ಬರುವುದು ಕಷ್ಟ. ಅನೇಕ ಬಾರಿ ನಾವು ಮಾನಸಿಕ ರೋಗ ಲಕ್ಷಣವನ್ನು ನಿರ್ಲಕ್ಷ್ಯ ಮಾಡ್ತೇವೆ. ಹಿಸ್ಟೀರಿಯಾ ಕೂಡ ಇದ್ರಲ್ಲಿ ಒಂದು. ಮಹಿಳೆ ಮತ್ತು ಹುಡುಗಿಯರನ್ನು ಹೆಚ್ಚಾಗಿ ಕಾಡುವ ರೋಗ ಹಿಸ್ಟೀರಿಯಾ. ಹದಿಹರೆಯದಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ. ಬಿಡುವಿಲ್ಲದ ಜೀವನಶೈಲಿ ಮಾನಸಿಕ ಒತ್ತಡದ ಮೇಲೆ ಪರಿಣಾಮ ಬೀರುತ್ತದೆ. ಈ ಒತ್ತಡವು ವಿವಿಧ ದೈಹಿಕ ಅಸ್ವಸ್ಥತೆಗಳ ರೂಪದಲ್ಲಿ ಪ್ರಕಟವಾಗುತ್ತದೆ. ಮಾನಸಿಕ ಕಾರಣಗಳಿಂದ ಉಂಟಾಗುವ ದೈಹಿಕ ಅಸ್ವಸ್ಥತೆಯ ಲಕ್ಷಣಗಳಲ್ಲಿ ಹಿಸ್ಟೀರಿಯಾ ಕಾಯಿಲೆ ಕೂಡ ಒಂದು. ಪುರುಷರಿಗೆ ಈ ರೋಗಬರುವುದಿಲ್ಲ ಎಂದಲ್ಲ. ಆದರೆ ಮಹಿಳೆಯರು ಸ್ವಭಾವತಃ ಹೆಚ್ಚು ಸಂವೇದನಾಶೀಲರಾಗಿರುತ್ತಾರೆ. ಹಾಗಾಗಿ ಅವರಿಗೆ ಮಾನಸಿಕ ಒತ್ತಡ ಕಾಡುವುದು ಹೆಚ್ಚು. ಇಂದು ನಾವು ಹಿಸ್ಟೀರಿಯಾ ರೋಗ ಲಕ್ಷಣ ಹಾಗೂ ಅದಕ್ಕೆ ಮನೆ ಮದ್ದು ಏನು ಎಂಬುದನ್ನು ಹೇಳ್ತೇವೆ.
ಹಿಸ್ಟೀರಿಯಾ (Hysteria) ಏಕೆ ಸಂಭವಿಸುತ್ತದೆ? : ಹೆಣ್ಣು ಮಕ್ಕಳ ಮದುವೆ (Marriage) ವಿಳಂಬ, ಪತಿ-ಪತ್ನಿಯರ ನಡುವಿನ ಜಗಳ, ಪತಿ ನಿರ್ಲಕ್ಷ್ಯ ಅಥವಾ ನಿಂದನೆ, ವಿಚ್ಛೇದನ, ಆಪ್ತರ ಸಾವು, ತೀವ್ರ ಆಘಾತ, ಹಣದ ಸಮಸ್ಯೆ, ಮುಟ್ಟಿನ ಅಸ್ವಸ್ಥತೆ, ಮಕ್ಕಳ ಕೊರತೆ, ಗರ್ಭಾಶಯದ ಕಾಯಿಲೆಗಳು ಇದಕ್ಕೆ ಕಾರಣವಾಗುತ್ತವೆ. ಮನೆಯಲ್ಲಿ ಜಗಳಗಳು, ಪ್ರೇಮ ವೈಫಲ್ಯ, ಅಜೀರ್ಣ ಮತ್ತು ಮಲಬದ್ಧತೆ ಹಾಗೂ ಯಾವುದೇ ಒತ್ತಡ (Stress ) ತುಂಬಾ ಹೆಚ್ಚಾದಾಗ, ಅದರಿಂದ ಹೊರ ಬರಲು ಮಾರ್ಗವಿಲ್ಲದೆ ಹೋದಾಗ, ಇದನ್ನು ಹೊರ ಹಾಕಲು ವಿಧಾನವನ್ನು ಹಿಸ್ಟೀರಿಯಾ ಎಂದು ಕರೆಯಲಾಗುತ್ತದೆ.
ಹಿಸ್ಟೀರಿಯಾ ರೋಗದ ಲಕ್ಷಣ : ತಲೆತಿರುಗುವಿಕೆ, ನಡುಕ, ಉಸಿರಾಟದ ತೊಂದರೆ ಅಥವಾ ಬಾಯಿಯಲ್ಲಿ ಬಿಗಿತದಂತಹ ಲಕ್ಷಣಗಳು ಹಿಸ್ಟೀರಿಯಾದ ಲಕ್ಷಣಗಳಾಗಿವೆ. ಇದಲ್ಲದೆ, ಹೆಚ್ಚಾಗುವ ಹೃದಯ ಬಡಿತ,ತಲೆನೋವು, ಸುಸ್ತು, ಮೂರ್ಛೆ ಹೋಗುವುದು ಕೂಡ ಇದ್ರ ಲಕ್ಷಣವಾಗಿದೆ. ಸದಾ ಮೌನವಾಗಿರುವುದು ಅಥವಾ ವಿಪರೀತವಾಗಿ ಕಿರುಚುವುದು, ಕಿವುಡುತನ, ಜೋರಾಗಿ ನಗುವುದು ಮುಂತಾದವು ಕಂಡು ಬಂದಾಗ್ಲೂ ನೀವು ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಈ ರೋಗ ಲಕ್ಷಣ ಕೆಲವರಿಗೆ ಇದ್ದಕ್ಕಿದ್ದಂತೆ ಕಾಣಿಸಿಕೊಂಡು ನಂತ್ರ ಮಾಯವಾಗುತ್ತದೆ. ಮತ್ತೆ ಕೆಲವರಿಗೆ ವಾರಗಟ್ಟಲೆ, ತಿಂಗಳುಗಟ್ಟಲೆ ಈ ಸಮಸ್ಯೆ ಇರುತ್ತದೆ. ವ್ಯಕ್ತಿಯು 24 ರಿಂದ 48 ಗಂಟೆಗಳ ಕಾಲ ಪ್ರಜ್ಞಾಹೀನನಾಗಿರುತ್ತಾನೆ. ನಿದ್ರೆಯ ತೊಂದರೆಗಳನ್ನು ಹೊಂದಿರುತ್ತಾನೆ. ಹಿಸ್ಟೀರಿಯಾವು ನರವೈಜ್ಞಾನಿಕ ಸ್ಥಿತಿಯಾಗಿದ್ದು, ಅದು ಮಾನಸಿಕ ಮತ್ತು ನರಗಳ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.
ಮಂಕಿಪಾಕ್ಸ್ ಬಗ್ಗೆ ಹೆಚ್ಚಿನ ಆತಂಕ ಬೇಡ: ತಜ್ಞರು
ರೋಗಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪುತ್ತಾನೆ. ಆದ್ರೆ ಇದು ಪೀಡ್ಸ್ ಅಲ್ಲ ಎಂಬುದು ಜನರಿಗೆ ತಿಳಿದಿರಬೇಕು. ಬಹುತೇಕರು ಈ ಎರಡರ ಮಧ್ಯೆ ವ್ಯತ್ಯಾಸ ತಿಳಿಯುವುದಿಲ್ಲ. ಸಾಮಾನ್ಯವಾಗಿ ಹಿಸ್ಟೀರಿಯಾದಲ್ಲಿ ವ್ಯಕ್ತಿ ಮೊದಲೇ ಉನ್ಮಾದ ಅನುಭವಿಸುತ್ತಾನೆ. ನಂತ್ರ ಕೆಳಗೆ ಬೀಳ್ತಾನೆ. ಹಲ್ಲುಗಳನ್ನು ಬಿಗಿಗೊಳಿಸಿದಾಗ ನಾಲಿಗೆ ಹಲ್ಲಿನ ಮಧ್ಯೆ ಬರುವುದಿಲ್ಲ.
ಹಿಸ್ಟೀರಿಯಾಕ್ಕೆ ಮನೆ ಮದ್ದು: ಈ ರೋಗಕ್ಕೆ ಹಳೆ ತುಪ್ಪ ಮದ್ದು. ಹಳೆಯ ತುಪ್ಪವನ್ನು ಬಳಸಿ ಮತ್ತು ದೇಹಕ್ಕೆ ಮಸಾಜ್ ಮಾಡುವುದು ಪ್ರಯೋಜನಕಾರಿ. ಪ್ರತಿನಿತ್ಯ ಎರಡು ಹನಿ ಹಳೆ ತುಪ್ಪವನ್ನು ಮೂಗಿಗೆ ಹಾಕುವುದು ಕೂಡ ಪ್ರಯೋಜನಕಾರಿ. ರೋಗಿಗಳಿಗೆ ಸಂಪೂರ್ಣ ಪೌಷ್ಟಿಕಾಂಶದ ಆಹಾರವನ್ನು ನೀಡಬೇಕು. ಸೇಬು, ದ್ರಾಕ್ಷಿ, ಕಿತ್ತಳೆ, ಪಪ್ಪಾಯಿ ಮತ್ತು ಅನಾನಸ್‌ನಂತಹ ಹಣ್ಣುಗಳನ್ನು ಹೆಚ್ಚು ಸೇವಿಸಬೇಕು. ಆಗಾಗ್ಗೆ ಹಿಸ್ಟೀರಿಯಾದ ಸಮಸ್ಯೆ ಎದುರಿಸುವವರು ಸುಮಾರು ಒಂದು ತಿಂಗಳ ಕಾಲ ಹಾಲಿನ ಆಹಾರವನ್ನು ಸೇವಿಸಬೇಕು. ಹಿಸ್ಟೀರಿಯಾ ರೋಗಿಗಳಿಗೆ ಪ್ರತಿದಿನ ಒಂದು ಚಮಚ ಜೇನುತುಪ್ಪದ ಸೇವನೆಯು ಪ್ರಯೋಜನಕಾರಿಯಾಗಿದೆ.
ತಿನ್ನೋ ಒಣದ್ರಾಕ್ಷಿ ಬಣ್ಣ ಯಾವ್ದು ನೋಡಿ, ಅದರಲ್ಲಿದೆ ಆರೋಗ್ಯದ ಗುಟ್ಟು
ಹಿಸ್ಟೀರಿಯಾ ರೋಗಿಗಳ ಚಿಕಿತ್ಸೆಯಲ್ಲಿ ಸರಿಯಾದ ನಿದ್ರೆ ಮತ್ತು ನಿಯಮಿತ ವ್ಯಾಯಾಮವು ಪ್ರಯೋಜನಕಾರಿಯಾಗಿದೆ. ಉನ್ಮಾದದ ದಾಳಿ ಬರುವ ಸಮಯದಲ್ಲಿ ಸೋರೆಕಾಯಿಯನ್ನು ತುರಿದು ರೋಗಿಯ ಹಣೆಗೆ ಹಚ್ಚಬೇಕು. ಸೌಮ್ಯವಾಗಿ ಅವರ ಮಾತು ಕೇಳಿ. ಯಾವು ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ. ಸಕಾರಾತ್ಮಕ ಮನೋಭಾವ ಬೆಳೆಸಿ. ಒಳ್ಳೆಯ ಕೆಲಸ ಮಾಡಲು ಪ್ರೋತ್ಸಾಹಿಸಿ. ಮಾನಸಿಕ ಕಾಯಿಲೆಗಳಿಗೆ ಉತ್ತಮ ಔಷಧವೆಂದರೆ ಬುದ್ಧಿವಂತಿಕೆ, ತಾಳ್ಮೆ ಮತ್ತು ಆತ್ಮಜ್ಞಾನ.