ಮಂಕಿಪಾಕ್ಸ್‌ ಬಗ್ಗೆ ಹೆಚ್ಚಿನ ಆತಂಕ ಬೇಡ: ತಜ್ಞರು

ಮಂಕಿಪಾಕ್ಸ್‌ ತೀವ್ರವಾಗಿ ಹರಡಲ್ಲ, ಅಪರೂಪವಾಗಿ ಮಾರಣಾಂತಿಕ

ಸೋಂಕಿತನ ನಿಕಟ ಸಂಪರ್ಕದಿಂದ ಮಾತ್ರ ಹರಡುತ್ತದೆ

-ಸ್ಮಾಲ್‌ಪಾಕ್ಸ್‌ ಲಸಿಕೆ ಮಂಕಿಪಾಕ್ಸ್‌ಗೆ ಬಳಕೆ

no need to panic as it is less contagious and rarely fatal Experts on Monkeypox san

ನವದೆಹಲಿ (ಜುಲೈ 25): ಭಾರತದಲ್ಲಿ 4 ಸೇರಿ ಜಗತ್ತಿನಾದ್ಯಂತ 16,000ಕ್ಕೂ ಹೆಚ್ಚು ಮಂಕಿಪಾಕ್ಸ್‌ ಕೇಸುಗಳು ವರದಿಯಾಗುತ್ತಿರುವ ಬೆನ್ನಲ್ಲೇ ‘ಮಂಕಿಪಾಕ್ಸ್‌ ತೀವ್ರವಾಗಿ ಹರಡುವುದಿಲ್ಲ ಹಾಗೂ ಸೋಂಕು ಅಪರೂಪವಾಗಿ ಮಾರಣಾಂತಿಕವಾಗಿರುವ ಕಾರಣ ಭಯಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ. ‘ಮಂಕಿಪಾಕ್ಸ್‌ ವೈರಸ್‌ನಲ್ಲಿ ಪಶ್ಚಿಮ ಆಫ್ರಿಕನ್‌ ತಳಿ ಹಾಗೂ ಕಾಂಗೋ ತಳಿ ಎಂಬ 2 ತಳಿಗಳು ಪತ್ತೆಯಾಗಿವೆ.ಆದರೆ ಭಾರತದಲ್ಲಿ ಸೌಮ್ಯವಾಗಿರುವ ಪಶ್ಚಿಮ ಆಫ್ರಿಕನ್‌ ತಳಿಯ ಮಂಕಿಪಾಕ್ಸ್‌ ಪತ್ತೆಯಾಗಿದೆ’ ಎಂದು ಪುಣೆಯ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿಯ ಪ್ರಜ್ಞಾ ಯಾದವ್‌ ಹೇಳಿದ್ದಾರೆ. ‘ಇದು ಹೊಸದಾಗಿ ಸೃಷ್ಟಿಯಾದ ವೈರಸ್‌ ಏನಲ್ಲ. ಕಳೆದ 5 ದಶಕಗಳಿಂದಲೂ ಮಂಕಿಪಾಕ್ಸ್‌ ಜಗತ್ತಿನ ವಿವಿಧೆಡೆ ಕಂಡುಬಂದಿದೆ. ವೈರಸ್‌ ರಚನೆ, ಹರಡುವಿಕೆ ವಿಧಾನ, ರೋಗಕಾರಕತೆ ಮೊದಲಾದವುಗಳ ಬಗ್ಗೆ ತಿಳಿದಿದೆ. ಈ ವೈರಸ್‌ ಬಹಳಷ್ಟುಪ್ರಕರಣಗಳು ಸೌಮ್ಯವಾಗಿದ್ದು, ಕೋವಿಡ್‌ನಂತೆ ತೀವ್ರವಾಗಿ ಹರಡುವುದಿಲ್ಲ. ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ ಹೊಂದಿದವರಿಗೆ ಮಾತ್ರ ತಗುಲುವ ಸಾಧ್ಯತೆ ಇರುತ್ತದೆ’ ಎಂದು ಡಾ. ಚಂದ್ರಶೇಖರ್‌ ಲಹರಿಯಾ ಹೇಳಿದ್ದಾರೆ.

ಪರಿಸ್ಥಿತಿ ನಿಭಾಯಿಸಲು ಸಾಧ್ಯ: ‘ಸೋಂಕಿತ ವ್ಯಕ್ತಿಯನ್ನು ಐಸೋಲೇಶನ್‌ನಲ್ಲಿಡುವುದು. ಆತನ ಸಂಪರ್ಕದಲ್ಲಿದ್ದವರನ್ನು ಕ್ವಾರೆಂಟೈನ್‌ ಮಾಡುವುದು ಮೊದಲಾದವುಗಳ ಮೂಲಕ ಮಂಕಿಪಾಕ್ಸ್‌ ಸ್ಫೋಟವಾಗದಂತೆ ಪರಿಸ್ಥಿತಿ ನಿಭಾಯಿಸಬಹುದಾಗಿದೆ. ಸ್ಮಾಲ್‌ ಪಾಕ್ಸ್‌ ಲಸಿಕೆಗಳನ್ನೇ ಮಂಕಿಪಾಕ್ಸ್‌ಗೆ ಬಳಸಬಹುದಾಗಿದೆ. ಇದು ತೀವ್ರವಾಗಿ ಹರಡದ ಕಾರಣ ಎಲ್ಲ ಜನಸಾಮಾನ್ಯರಿಗೂ ಲಸಿಕೆ ಒದಗಿಸುವ ಅಗತ್ಯವಿಲ್ಲ’ ಎಂದು ಡಾ. ಲಹರಿಯಾ ಅಭಿಪ್ರಾಯ ಪಟ್ಟಿದ್ದಾರೆ.
    
ತೆಲಂಗಾಣದಲ್ಲೂ ಶಂಕಿತ ಪ್ರಕರಣ ಪತ್ತೆ: ಜು.6ರಂದು ಕುವೈತ್‌ನಿಂದ ಆಗಮಿಸಿದ್ದ ತೆಲಂಗಾಣದ ಕಮರೆಡ್ಡಿ ಜಿಲ್ಲೆಯ ವ್ಯಕ್ತಿಯೊಬ್ಬರಲ್ಲೂ ಮಂಕಿಪಾಕ್ಸ್‌ (Monkeypox) ಲಕ್ಷಣಗಳು ಕಾಣಿಸಿಕೊಂಡಿವೆ. ಈ ವ್ಯಕ್ತಿಗೆ ಜು.20ರಂದು ಜ್ವರ ಕಾಣಿಸಿಕೊಂಡಿದ್ದು, ಜು.23ರಂದು ಮೈಮೇಲೆ ಮಂಕಿಪಾಕ್ಸ್‌ನ ಪ್ರಮುಖ ಲಕ್ಷಣವಾದ ಗುಳ್ಳೆಗಳು ಕಾಣಿಸಿಕೊಂಡಿದ್ದವು. ಹೀಗಾಗಿ ತಕ್ಷಣವೇ ಅವರನ್ನು ಕಮರೆಡ್ಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಐಸೋಲೇಷನ್‌ನಲ್ಲಿ ಇಡಲಾಗಿದೆ. ಶಂಕಿತ ಸೋಂಕಿತನ ಮಾದರಿ ಸಂಗ್ರಹಿಸಿ ಪುಣೆಯ ರಾಷ್ಟ್ರೀಯ ವೈರಾಣು (National Institute of Virology )ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯು (Who) ಶನಿವಾರವಷ್ಟೇ ಮಂಕಿಪಾಕ್ಸ್‌ ಸೋಂಕನ್ನು ಜಾಗತಿಕ ತುರ್ತುಸ್ಥಿತಿ ಎಂದು ಘೋಷಿಸಿತ್ತು. ಈಗಾಗಲೇ 75 ದೇಶಗಳಿಗೆ ಮಂಕಿಪಾಕ್ಸ್‌ ಹರಡಿದ್ದು, 16000 ಮಂದಿಗೆ ಸೋಂಕು ತಗಲಿದೆ. ದೇಶದ ಮೊದಲ 3 ಪ್ರಕರಣಗಳು ಕೇರಳದಲ್ಲಿ ವಿದೇಶದಿಂದ ಆಗಮಿಸಿದವರಲ್ಲಿ ಪತ್ತೆಯಾಗಿತ್ತು.

ಮಂಕಿಪಾಕ್ಸ್‌ ಪತ್ತೆಗೆ ಏರ್ಪೋರ್ಟ್‌, ಬಂದರಲ್ಲೇ ಪರೀಕ್ಷೆ ನಡೆಸಿ: ತಜ್ಞರು

ಮಂಕಿಪಾಕ್ಸ್‌ ಮುಂಜಾಗ್ರತಾ ಕ್ರಮ: ಕಡ್ಡಾಯವಾಗಿ ಮಾಸ್ಕ್‌ ( Mask ) ಧರಿಸುವುದು, ಸಾಮಾಜಿಕ ಅಂತರ (social distancing) ಕಾಯ್ದುಕೊಳ್ಳುವುದು, ರೋಗಲಕ್ಷಣಗಳಿದ್ದರೆ ಕೂಡಲೇ ವೈದ್ಯರಿಗೆ ತಿಳಿಸುವುದು ಹಾಗೂ ಆರೋಗ್ಯ ಕಾರ್ಯಕರ್ತರು ಚಿಕಿತ್ಸೆ ವೇಳೆ ಪಿಪಿಇ ಕಿಟ್‌ ಧರಿಸುವುದಾಗಿದೆ.

ಭಾರತಕ್ಕೆ ಮಂಕಿಪಾಕ್ಸ್​ ಎಂಟ್ರಿ, ಕೇರಳದಲ್ಲಿ ಹೈ ಅಲರ್ಟ್: ಈ ವೈರಾಣು​​ ಜನ್ಮರಹಸ್ಯವೇನು ಗೊತ್ತಾ?

ಸಲಿಂಗಕಾಮದಿಂದ ಹಬ್ಬುತ್ತೆ: ಮಂಕಿಪಾಕ್ಸ್‌ ಸೋಂಕು ಸಲಿಂಗಿ ಪುರುಷರಲ್ಲಿ ಲೈಂಗಿಕ ಸಂಪರ್ಕದಿಂದ ಹರಡುವ ಸಾಧ್ಯತೆ ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿ ಡಾ.ಪೂನಂ ಖೇತ್ರಪಾಲ್‌ ಸಿಂಗ್‌ ಹೇಳಿದ್ದಾರೆ. ದೆಹಲಿಯಲ್ಲಿ ಮಂಕಿಪಾಕ್ಸ್‌ ಸೋಂಕಿಗೆ ತುತ್ತಾದ ವ್ಯಕ್ತಿ ಇತ್ತೀಚೆಗಷ್ಟೇ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಪುರುಷರಷ್ಟೇ ಪಾಲ್ಗೊಂಡಿದ್ದ ಬ್ಯಾಚುಲರ್‌ ಪಾರ್ಟಿಯಲ್ಲಿ ಭಾಗವಹಿಸಿದ್ದ ಎಂದು ತಿಳಿದುಬಂದಿದೆ. ವಿಶ್ವ ಆರೋಗ್ಯ ಸಂಸ್ಥೆಯು ಪರಸ್ಪರ ಲೈಂಗಿಕ ಸಂಪರ್ಕ ಹೊಂದುವ ಪುರುಷರಲ್ಲಿ (ಸಲಿಂಗಿ- ಗೇ) ಮಂಕಿಪಾಕ್ಸ್‌ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಹೇಳಿಕೆ ಬೆನ್ನಲ್ಲೇ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ ದೆಹಲಿಯ ವ್ಯಕ್ತಿಗೆ ಈ ಮಾರ್ಗದಿಂದ ಸೋಂಕು ತಗಲಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.

Latest Videos
Follow Us:
Download App:
  • android
  • ios