Weight Loss Tips 2022: ಹೊಸ ವರ್ಷ ತೂಕ ಇಳಿಸಿಕೊಳ್ಳುವ ಭರದಲ್ಲಿ ಈ ತಪ್ಪನ್ನು ಮಾಡದಿರಿ

ತೂಕ ಇಳಿಸಿಕೊಂಡು ಸಣ್ಣಗಾಗಿ ಸ್ಲಿಮ್ (Slim) ಆಗಿ ಕಾಣ್ಬೇಕು ಅಂತ ಎಲ್ರೂ ಬಯಸ್ತಾರೆ. ಅದಕ್ಕಾಗಿ ಜಿಮ್ (Gym), ವ್ಯಾಯಾಮ, ಯೋಗ, ಡ್ಯಾನ್ಸ್, ಡಯೆಟ್ (Diet) ಅಂತ ಇನ್ನಿಲ್ಲದ ಕಸರತ್ತು ಮಾಡ್ತಾರೆ. ಆದ್ರೆ ನೀವು ದಿ ಬೆಸ್ಟ್ ಅಂದ್ಕೊಂಡಿರೋ ಇಂಥಹಾ ಕೆಲವು ಅಭ್ಯಾಸಗಳು ಆರೋಗ್ಯಕ್ಕೆ ವೆರಿ ಬ್ಯಾಡ್ ಅನ್ನೋದು ನಿಮಗೆ ಗೊತ್ತಾ..?

Weight Loss Mistakes To Avoid In 2022

ಹೊಸ ವರ್ಷ ಇನ್ನೇನು ಬಂದೇ ಬಿಡ್ತು. ಎಲ್ರೂ ವರ್ಷಪೂರ್ತಿ ಫಾಲೋ ಮಾಡ್ಲೇಬೇಕು ಅಂತ ನ್ಯೂ ಇಯರ್ ರೆಸಲ್ಯೂಶನ್ ಅನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಹೇಗಿದ್ರೂ ವೈಟ್ ಲಾಸ್ ಮಾಡಿಕೊಳ್ಬೇಕು, ವರ್ಕೌಟ್ ಮಾಡ್ಬೇಕು, ಡಯೆಟ್ ಮಾಡ್ಬೇಕು ಅನ್ನೋದಂತೂ ಇದ್ದೇ ಇರುತ್ತೆ. ಆದ್ರೆ ತೂಕ ಇಳಿಸಿಕೊಳ್ಳೋಕೆ ನೀವು ಸರಿಯಾದ ರೀತಿಯ ಆಯ್ಕೆಯನ್ನು ಮಾಡಿಕೊಳ್ಳದಿದ್ದರೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ 2022ಕ್ಕೆ ವೈಟ್ ಲಾಸ್ ಟಿಪ್ಸ್ ಇಲ್ಲಿದೆ..

ಹೆಚ್ಚು ವ್ಯಾಯಾಮ ಮಾಡುವುದು ಅಥವಾ ವ್ಯಾಯಾಮ ಮಾಡದಿರುವುದು 

ಅತಿ ಹೆಚ್ಚು ವ್ಯಾಯಾಮ ಮಾಡುವುದು ಅಥವಾ ವ್ಯಾಯಾಮ ಮಾಡದೇ ಇರುವುದು. ಈ ಎರಡೂ ಅಭ್ಯಾಸವೂ ಒಳ್ಳೆಯದಲ್ಲ. ಅತಿಯಾದ ವ್ಯಾಯಾಮವು ದೇಹದ ಮೇಲೆ ಅತಿಯಾದ ಒತ್ತಡಕ್ಕೆ ಕಾರಣವಾಗುತ್ತದೆ. ಇದು ಇಡೀ ದೇಹದ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುವ ಹಾರ್ಮೋನುಗಳಿಗೆ ಅಡ್ಡಿಯುಂಟು ಮಾಡುತ್ತದೆ. ವ್ಯಾಯಾಮ ದೇಹದಲ್ಲಿರುವ ಹೆಚ್ಚಿನ ಕ್ಯಾಲೋರಿಗಳನ್ನು ಬರ್ನ್ ಮಾಡುವುದು ನಿಜ. ಆದರೆ ಇದು ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಆರೋಗ್ಯಕರ ಸಮತೋಲನದ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ. 

Isabgol Benefits: ಡಯಟ್ ಮಾಡಿ ಬೇಜಾರು ಬಂತಾ, ಇಸಾಬ್‌ಗೋಲ್ ಟ್ರೈ ಮಾಡಿ ನೋಡಿ

ಲೋ ಫ್ಯಾಟ್ ಮತ್ತು ಡಯೆಟ್ ಫುಡ್ ಸೇವಿಸುವುದು

ಲೋ ಫ್ಯಾಟ್ ಹಾಗೂ ಡಯೆಟ್ ಫುಡ್ ಕಡಿಮೆ ಕೊಬ್ಬಿನ ಅಂಶವನ್ನು ಹೊಂದಿದ್ದು, ಅತ್ಯಂತ ಆರೋಗ್ಯಕರ ಮತ್ತು ತೂಕ ಕಳೆದುಕೊಳ್ಳಲು ಸುಲಭ ಆಯ್ಕೆಯಾಗಿ ತೋರುತ್ತದೆಯಾದರೂ, ಇದು ಆರೋಗ್ಯ (Health)ಕ್ಕೆ ಒಳ್ಳೆಯದಲ್ಲ. ಯಾಕೆಂದರೆ ಈ ಆಹಾರಗಳು ಇತರ ಆಹಾರ ಪದಾರ್ಥಗಳಿಗಿಂತ ಹೆಚ್ಚು ಸಕ್ಕರೆ (Sugar)ಯೊಂದಿಗೆ ತುಂಬಿರುತ್ತದೆ. ಇದು ಒಂದು ಬಾರಿಗೆ ಹಸಿವು ನೀಗಿಸುತ್ತದೆ. ಆದರೆ ಮತ್ತೆ ಪದೇ ಪದೇ ಹಸಿವಾಗುವಂತೆ ಮಾಡುತ್ತದೆ. ಹೀಗಾಗಿ ಇಂಥಹಾ ಆಹಾರಗಳನ್ನು ಆಯ್ಕೆ ಮಾಡುವ ಬದಲು, ಸಂಸ್ಕರಿಸಿದ, ಹೆಚ್ಚು ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳನ್ನು ಆರಿಸಬೇಕು ಇದು ನಮಗೆ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ.

ಹೆಚ್ಚು ಅಥವಾ ಕಡಿಮೆ ಕ್ಯಾಲೊರಿ ಸೇವನೆ

ನೀವು ವ್ಯಾಯಾಮ ಮಾಡದಿದ್ದರೆ ಮತ್ತು ಕ್ಯಾಲೊರಿ (calorie) ಗಳನ್ನು ಕಡಿತಗೊಳಿಸುವುದರ ಮೇಲೆ ಮಾತ್ರ ಗಮನಹರಿಸಿದರೆ ಇದು ಆರೋಗ್ಯದ ಮೇಲೆ ನಕಾರಾತ್ಮವಾಗಿ ಪರಿಣಾಮ ಬೀರುತ್ತದೆ. ಕಡಿಮೆ ಕೊಬ್ಬಿನ ಅಥವಾ ಡಯೆಟ್ (Diet) ಆಹಾರ ಪದಾರ್ಥಗಳನ್ನು ಆರಿಸುವುದು. ಅದೇ ರೀತಿ, ತುಂಬಾ ಕಡಿಮೆ ಕ್ಯಾಲೊರಿಗಳನ್ನು ಸೇವಿಸುವುದು ಸ್ನಾಯುವಿನ ಶಕ್ತಿ ನಷ್ಟಕ್ಕೆ ಕಾರಣವಾಗುತ್ತದೆ. ತೂಕ ನಷ್ಟದ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ತೂಕವನ್ನು ಕಳೆದುಕೊಳ್ಳಲು ನೀವು ಕ್ಯಾಲೋರಿ ಕೊರತೆಯನ್ನು ಸಾಧಿಸಬೇಕು, ಅಂದರೆ ನೀವು ಸೇವಿಸುವುದಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಬೇಕು. ಇದನ್ನು ಸಾಧಿಸಲು, ನಿಮ್ಮ ಆಹಾರದಲ್ಲಿನ ಕ್ಯಾಲೊರಿಗಳ ಸಂಖ್ಯೆಯನ್ನು ಸರಿಯಾಗಿ ಅಂದಾಜು ಮಾಡುವುದು ಮುಖ್ಯ. 

ತೂಕ ಇಳಿಸಬೇಕು ಎಂದಾದರೆ ದಿನದಲ್ಲಿ ಎಷ್ಟು ಸಲ ಅನ್ನ ಸೇವಿಸಬೇಕು?

ಸಾಕಷ್ಟು ಪ್ರೋಟೀನ್ / ಫೈಬರ್‌ಯುಕ್ತ ಆಹಾರ ತಿನ್ನದಿರುವುದು

ಪ್ರೊಟೀನ್ (Protein) ತೂಕ ಇಳಿಸಿಕೊಳ್ಳಲು ಹೆಚ್ಚು ನೆರವಾಗುತ್ತದೆ. ಪ್ರೋಟೀನ್‌ಯುಕ್ತ ಆಹಾರಗಳ ಸೇವನೆ ದೀರ್ಘಕಾಲದವರೆಗೆ ಹಸಿವಾಗದಿರಲು ಸಹಾಯ ಮಾಡುತ್ತದೆ, ಚಯಾಪಚಯ ಪ್ರಕ್ರಿಯೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಪ್ರೋಟೀನ್ ಅನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸದಿದ್ದರೆ, ಅದು ಚಯಾಪಚಯ ಪ್ರಕ್ರಿಯೆಗಳನ್ನು ಅಡ್ಡಿಪಡಿಸುತ್ತದೆ ಮತ್ತು ತೂಕ ಹೆಚ್ಚಾಗಲು ಕಾರಣವಾಗಬಹುದು. ಪ್ರೋಟೀನ್‌ನಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಇದರ ಜೊತೆಗೆ, ಯಾವುದೇ ರೀತಿಯ ಫೈಬರ್‌ಯುಕ್ತ ಆಹಾರ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೀಗಾಗಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. 

ಭಾರ ಎತ್ತುವ ವ್ಯಾಯಾಮ ಉತ್ತಮ

ಭಾರ ಎತ್ತುವ ವ್ಯಾಯಾಮ ಸ್ನಾಯುಗಳ ಆರೋಗ್ಯ ಉತ್ತಮವಾಗಲು ಸಹಾಯ ಮಾಡುತ್ತದೆ ಮತ್ತು ತೂಕ ನಷ್ಟಕ್ಕೆ ಬಹಳ ಮುಖ್ಯವಾಗಿದೆ ಎಂದು ಅಧ್ಯಯನಗಳು ಹೇಳುತ್ತವೆ. ತೂಕವನ್ನು ಎತ್ತುವ ವ್ಯಾಯಾಮವನ್ನು ಮಾಡುವ ಜನರು ಸುಲಭವಾಗಿ ತೂಕವನ್ನು ಕಳೆದುಕೊಳ್ಳುತ್ತಾರೆ. ಬಾರ ಎತ್ತುವ ಮತ್ತು ಏರೋಬಿಕ್ ವ್ಯಾಯಾಮಗಳ ಸಂಯೋಜನೆಯು ತೂಕವನ್ನು ಕಳೆದುಕೊಳ್ಳುವ ಅತ್ಯುತ್ತಮ ಮಾರ್ಗವೆಂದು ಸಾಬೀತಾಗಿದೆ.

Latest Videos
Follow Us:
Download App:
  • android
  • ios