MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಬೇಸಿಗೆ ಶುರುವಾಗ್ತಿದ್ದಂತೆ ಸೊಳ್ಳೆ ಕಾಟ ಜೋರು, ಕೆಮಿಕಲ್ ಸ್ಪ್ರೇ ಇಲ್ದೆ ಹೀಗೆ ಓಡಿಸಿ

ಬೇಸಿಗೆ ಶುರುವಾಗ್ತಿದ್ದಂತೆ ಸೊಳ್ಳೆ ಕಾಟ ಜೋರು, ಕೆಮಿಕಲ್ ಸ್ಪ್ರೇ ಇಲ್ದೆ ಹೀಗೆ ಓಡಿಸಿ

ಬೇಸಿಗೆ ಹೆಚ್ಚಾಗ್ತಿದ್ದಂತೆ ಸೊಳ್ಳೆಗಳ ಕಾಟ ಜಾಸ್ತಿಯಾಗುತ್ತೆ. ಹಗಲು, ರಾತ್ರಿ ಎನ್ನದೆ ಸೊಳ್ಳೆ ನಮ್ಮ ಮೇಲೆ ದಾಳಿ ಮಾಡುತ್ತೆ. ಗುಯ್ ಅಂತ ಕಿವಿ ಮುಂದೆ ಕೂಗಿ ನಿದ್ರೆ ಹಾಳು ಮಾಡುವ ಈ ಸೊಳ್ಳೆಗಳನ್ನು ಓಡಿಸಲು ಮನೆಯಲ್ಲೇ ಮದ್ದಿದೆ. 

2 Min read
Author : Roopa Hegde
Published : Mar 17 2026, 02:26 PM IST
Share this Photo Gallery
  • FB
  • TW
  • Linkdin
  • Whatsapp
16
ಅಪಾಯಕಾರಿ ಸೊಳ್ಳೆ
Image Credit : Asianet News

ಅಪಾಯಕಾರಿ ಸೊಳ್ಳೆ

ಪಾರ್ಕ್, ಸಾರ್ವಜನಿಕ ಪ್ರದೇಶದಲ್ಲಿ ಈ ಸೊಳ್ಳೆ ಕಾಟ ಕಾಮನ್. ಆದ್ರೆ ಮನೆಗೂ ಸೊಳ್ಳೆಗಳು ನುಗ್ಗುತ್ವೆ. ಎಷ್ಟೇ ಎಚ್ಚರಿಕೆವಹಿಸಿದ್ರೂ ಒಂದಲ್ಲ ಒಂದು ಮೂಲೆಯಿಂದ ಮನೆ ಪ್ರವೇಶ ಮಾಡುವ ಈ ಸೊಳ್ಳೆ ಬರೀ ಡಿಸ್ಟರ್ಬ್ ಮಾಡೋದು ಮಾತ್ರವಲ್ಲ ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್ಗುನ್ಯಾದಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

26
ಕೆಮಿಕಲ್ ಸ್ಪ್ರೇ
Image Credit : Asianet News

ಕೆಮಿಕಲ್ ಸ್ಪ್ರೇ

ಈ ಸೊಳ್ಳೆ ಓಡಿಸಲು ಮಾರ್ಕೆಟ್ ನಲ್ಲಿ ಸಾಕಷ್ಟು ಸ್ಪ್ರೇ ಲಭ್ಯವಿದೆ. ಆದ್ರೆ ಸ್ಪ್ರೇ ಪ್ರತಿ ದಿನ ಬಳಸೋದು ಸೂಕ್ತವಲ್ಲ. ಸ್ಪ್ರೇಗೆ ಕೆಮಿಕಲ್ ಬಳಕೆ ಮಾಡೋದ್ರಿಂದ ಮಕ್ಕಳು ಮಾತ್ರವಲ್ಲ ಹಿರಿಯರ ಆರೋಗ್ಯದಲ್ಲೂ ಏರುಪೇರಾಗುತ್ತೆ. ನೀವು ಸೊಳ್ಳೆ ಓಡಿಸಲು ಕೆಮಿಕಲ್ ಮಿಕ್ಸ್ ಆಗಿರುವ ಸ್ಪ್ರೇ ಬದಲು ಮನೆಯಲ್ಲಿಯೇ ತಯಾರಿಸಿದ ಮದ್ದನ್ನು ಬಳಸಬಹುದು. ಗೃಹಪಯೋಗಿ ವಸ್ತುಗಳನ್ನು ಬಳಸಿಯೇ ನೀವು ಸೊಳ್ಳೆ ಓಡಿಸಬಹುದು.

Related Articles

Related image1
Summer: ಹಳೆ ಕೂಲರ್‌ನಿಂದ ತಣ್ಣನೆ ಗಾಳಿ ಬರ್ತಿಲ್ವಾ? ಈ 5 ಟಿಪ್ಸ್ ಫಾಲೋ ಮಾಡಿದ್ರೆ ಸಾಕು!
Related image2
ಹೊಗೆನೂ ಇಲ್ಲ, ಖರ್ಚೂ ಇಲ್ಲ! ಸಿಲಿಂಡರ್ ಕೊರತೆಗೆ ಬ್ರೇಕ್ ಹಾಕಿದ ಬೆಂಗಳೂರಿನ 'ರಾಕೆಟ್ ಸ್ಟವ್'
36
ಕರ್ಪೂರ ಮತ್ತು ಸಾಸಿವೆ ಎಣ್ಣೆ
Image Credit : Asianet News

ಕರ್ಪೂರ ಮತ್ತು ಸಾಸಿವೆ ಎಣ್ಣೆ

ನೀವು ಸೊಳ್ಳೆ ಓಡಿಸಲು ಕರ್ಪೂರವನ್ನು ಬಳಸಬಹುದು. ಕರ್ಪೂರ, ಸೊಳ್ಳೆ ಓಡಿಸಲು ಪರಿಣಾಮಕಾರಿ. ನೀವು ಮಣ್ಣಿನ ದೀಪವನ್ನು ತೆಗೆದುಕೊಂಡು ಅದಕ್ಕೆ ಕರ್ಪೂರ ಹಾಕಿ, ಸ್ವಲ್ಪ ಸಾಸಿವೆ ಎಣ್ಣೆಯನ್ನು ಹಾಕಿ ದೀಪ ಹಚ್ಚಿ. ಕರ್ಪೂರದ ಹೊಗೆ ಇಡೀ ಮನೆ, ಮೂಲೆ ಮೂಲೆಗೆ ಹೋಗುವಂತೆ ನೋಡಿಕೊಳ್ಳಿ. ಕರ್ಪೂರ ಹಾಗೂ ಸಾಸಿವೆ ಎಣ್ಣೆ ವಾಸನೆಯನ್ನು ಸೊಳ್ಳೆ ತಡೆಯೋದಿಲ್ಲ.

46
ತುಳಸಿ ಗಿಡ
Image Credit : Asianet News

ತುಳಸಿ ಗಿಡ

ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನ ಪಡೆದಿರುವ ಈ ತುಳಸಿ ಗಿಡ ಔಷಧಿ ಗುಣವನ್ನು ಹೊಂದಿದೆ. ಇದನ್ನು ನೀವು ಸೊಳ್ಳೆ ಓಡಿಸಲು ಬಳಸಬಹುದು. ಮನೆಯ ಮುಂದೆ ಅಥವಾ ಸೊಳ್ಳೆ ಬರುವಂತಹ ಕಿಟಕಿ ಅಕ್ಕಪಕ್ಕ ತುಳಸಿ ಗಿಡವನ್ನು ಇಡಿ. ತುಳಸಿ ವಾಸನೆಗೆ ಸೊಳ್ಳೆ ಹತ್ತಿರ ಬರೋದಿಲ್ಲ. ಮನೆಯನ್ನು ಪ್ರವೇಶ ಮಾಡೋದಿಲ್ಲ.

56
ಬೆಳ್ಳುಳ್ಳಿ
Image Credit : Asianet News

ಬೆಳ್ಳುಳ್ಳಿ

ಅಡುಗೆ ಮನೆಯಲ್ಲಿರುವ ಬೆಳ್ಳುಳ್ಳಿಯಲ್ಲೂ ಮ್ಯಾಜಿಕ್ ಇದೆ. ನೀವು ಬೆಳ್ಳುಳ್ಳಿಯನ್ನು ಆಹಾರಕ್ಕೆ ಮಾತ್ರವಲ್ಲದೆ ಸೊಳ್ಳೆ ಓಡಿಸಲು ಬಳಸಬಹುದು. ಬೆಳ್ಳುಳ್ಳಿ ಕಟು ವಾಸನೆ ಹೊಂದಿರುತ್ತದೆ. ಬೆಳ್ಳುಳ್ಳಿ ನೀರನ್ನು ನೀವು ಮನೆ ತುಂಬ ಸ್ಪ್ರೇ ಮಾಡಿದ್ರೆ ಸೊಳ್ಳೆಯನ್ನು ಓಡಿಸಬಹುದು. ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ಪುಡಿಮಾಡಿ ನೀರಿನಲ್ಲಿ ಕುದಿಸಿ. ನಂತರ ಈ ನೀರನ್ನು ಸ್ಪ್ರೇ ಬಾಟಲಿಯಲ್ಲಿ ಸಿಂಪಡಿಸಿ ಮೂಲೆಗಳು, ಬಾಗಿಲುಗಳು ಮತ್ತು ಕಿಟಕಿಗಳ ಸುತ್ತಲೂ ಸಿಂಪಡಿಸಬಹುದು. ಇದು ಮನೆಯೊಳಗೆ ಸೊಳ್ಳೆ ಓಡಿಸುತ್ತದೆ.

66
ಬೇವಿನ ಎಲೆ ಹೊಗೆ
Image Credit : Asianet News

ಬೇವಿನ ಎಲೆ ಹೊಗೆ

ತಜ್ಞರ ಪ್ರಕಾರ, ಬೇವಿನ ಎಲೆ ಹೊಗೆ ಸೊಳ್ಳೆಗಳನ್ನು ಓಡಿಸಲು ಒಳ್ಳೆ ಉಪಾಯವಾಗಿದೆ. ಬೇವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ. ಅದು ಪರಿಸರವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಬೇವಿನ ಎಲೆಗಳನ್ನು ಲೋಹದ ಪಾತ್ರೆ ಅಥವಾ ತಟ್ಟೆಯಲ್ಲಿ ಸುಟ್ಟು, ಅದರ ಹೊಗೆಯನ್ನು ಮನೆ ತುಂಬ ಹಾಕಬೇಕು. ಬೇವಿನ ಕಹಿ ವಾಸನೆಗೆ ಸೊಳ್ಳೆಗಳು ಸದ್ದಿಲ್ಲದೆ ಓಡಿ ಹೋಗುತ್ವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಜೀವನಶೈಲಿ
Latest Videos
Recommended Stories
Recommended image1
ಮಾತು ಮುಗಿಸುವ ಮುನ್ನವೇ ಕೊನೆಯುಸಿರೆಳೆದ ಮಹಿಳೆ: ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ದುರಂತ: ವೀಡಿಯೋ
Recommended image2
ನನ್ನ ತಾಯಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾಳೆ, ನಂಗೆ ಅದು ಬರೋ ಚಾನ್ಸ್‌ ಎಷ್ಟು?
Recommended image3
'ಹಿತ್ತಲ ಗಿಡ ಮದ್ದಲ್ಲ' ಅನ್ನೋ ಗಾದೆಯನ್ನೇ ಸುಳ್ಳು ಮಾಡಿರೋ ಬಜೆ; ಎಷ್ಟೋ ದೈಹಿಕ ಸಮಸ್ಯೆಗೆ ಇದು ರಾಮಬಾಣ!
Related Stories
Recommended image1
Summer: ಹಳೆ ಕೂಲರ್‌ನಿಂದ ತಣ್ಣನೆ ಗಾಳಿ ಬರ್ತಿಲ್ವಾ? ಈ 5 ಟಿಪ್ಸ್ ಫಾಲೋ ಮಾಡಿದ್ರೆ ಸಾಕು!
Recommended image2
ಹೊಗೆನೂ ಇಲ್ಲ, ಖರ್ಚೂ ಇಲ್ಲ! ಸಿಲಿಂಡರ್ ಕೊರತೆಗೆ ಬ್ರೇಕ್ ಹಾಕಿದ ಬೆಂಗಳೂರಿನ 'ರಾಕೆಟ್ ಸ್ಟವ್'
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved