ತೂಕ ಇಳಿಸಬೇಕು ಎಂದಾದರೆ ದಿನದಲ್ಲಿ ಎಷ್ಟು ಸಲ ಅನ್ನ ಸೇವಿಸಬೇಕು?
ತೂಕ ಇಳಿಸಲು ಹೆಚ್ಚಿನ ಜನ ಡಯಟಿಂಗ್ ಮಾಡುತ್ತಾರೆ. ಜೊತೆಗೆ ಆಹಾರ ಸೇವನೆ ಮಾಡುವುದನ್ನು ಕಡಿಮೆ ಮಾಡುತ್ತಾರೆ. ಅದರಲ್ಲೂ ಹೆಚ್ಚಾಗಿ ಕಾರ್ಬೋಹೈಡ್ರೇಟ್ ಇರುವಂತಹ ಅನ್ನತಿನ್ನುವುದನ್ನು ಬಿಟ್ಟು ಬಿಡುತ್ತಾರೆ. ಆದ್ರೆ ನಿಮಗೆ ಗೊತ್ತಾ ಕಾರ್ಬೋ ಹೈಡ್ರೇಟ್ ಸಹ ನಮ್ಮ ಶರೀರಕ್ಕೆ ತುಂಬಾ ಮುಖ್ಯ ಎಂದು. ಆದುದರಿಂದ ಡಯಟಿಂಗ್ ಮಾಡುವ ಸಮಯದಲ್ಲಿ ಅನ್ನ ತಿನ್ನುವುದನ್ನು ಬಿಡಬೇಡಿ.
ಹಾಗಿದ್ರೆ ಏನು ಮಾಡಬಹುದು ಎನ್ನುವ ಯೋಚನೆ ನಿಮ್ಮ ಮನಸ್ಸಿನಲ್ಲಿ ಮೂಡಿದರೆ ಇಲ್ಲಿದೆ ಪರಿಹಾರ. ಒಂದು ದಿನದಲ್ಲಿ ನಾವು ಎಷ್ಟು ಅನ್ನ ಸೇವಿಸುತ್ಟೇನೆ ಎನ್ನುವುದರ ಮೇಲೆ ದೇಹ ತೂಕದ ಹೆಚ್ಚುವುದು ತಿಳಿಯುತ್ತದೆ. ಹಾಗಿದ್ರೆ ದಿನದಲ್ಲಿ ಎಷ್ಟು ಅನ್ನ ಸೇವಿಸಬೇಕು. ಇಂದು ನಾವು ನಿಮಗೆ ಫಿಟ್ ಆಗಿರಲು ಎಷ್ಟು ಅನ್ನ ಸೇವಿಸಬೇಕು ಅನ್ನೋದನ್ನು ತಿಳಿಸುತ್ತೇವೆ...
ಅನ್ನ ಮತ್ತು ಚಪಾತಿ ಭಾರತೀಯ ಆಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚಾಗಿ ಎಲ್ಲಾ ಭಾರತೀಯರು ಪ್ರತಿದಿನ ಅನ್ನ ಮತ್ತು ಚಪಾತಿ, ರೊಟ್ಟಿ ಸೇವಿಸುತ್ತಾರೆ. ಆದರೆ ಯಾರು ಹೆಚ್ಚು ತೂಕ ಹೊಂದಿರುತ್ತಾರೆ ಅವರು ಇವೆರಡನ್ನು ಸೇವಿಸುವುದನ್ನು ಕಡಿಮೆ ಮಾಡುತ್ತಾರೆ.
ಒಂದೇ ಸಲಕ್ಕೆ ಕಾರ್ಬ್ಸ್ ಸೇವನೆ ಮಾಡುವುದನ್ನು ಬಿಟ್ಟು ಬಿಡುವುದು ತಪ್ಪು. ಯಾಕೆಂದರೆ ಇದು ನಿಮ್ಮ ದೇಹಕ್ಕೆ ತುಂಬಾನೆ ಮುಖ್ಯವಾಗಿದೆ. ಡಯಟೀಶನ್ ಹೇಳುವಂತೆ ಒಂದು ದಿನದಲ್ಲಿ ನೀವು ೨೫೦ ಗ್ರಾಂ ಕಾರ್ಬ್ಸ್ ಸೇವನೆ ಮಾಡಬೇಕು. ಅದಕ್ಕಾಗಿ ಚಪಾತಿ ಮತ್ತು ಅನ್ನ ಸೇವಿಸಲೇಬೇಕು.
ಒಂದು ಸಣ್ಣ ತಟ್ಟೆ ಅನ್ನದಲ್ಲಿ ಸುಮಾರು ೮೦ ಕ್ಯಾಲರಿ ಇರುತ್ತದೆ. ಇದರಲ್ಲಿ ೧ ಗ್ರಾಂ ಪ್ರೊಟೀನ್, ೦.೧ ಗ್ರಾಂ ಫ್ಯಾಟ್ ಮತ್ತು ೧೮ ಗ್ರಾಂ ಕಾರ್ಬೋಹೈಡ್ರೇಟ್ ಇರುತ್ತದೆ. ಇದನ್ನು ಸೇವಿಸುವುದರಿಂದ ದೇಹಕ್ಕೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ.
ಅನ್ಹ್ನ ಮತ್ತು ಚಪಾತಿಯಲ್ಲಿ ಫೋಲೆಟ್ ಇರುತ್ತದೆ. ಇದು ನೀರಿನಲ್ಲಿ ಕರಗುವಂತಹ ವಿಟಾಮಿನ್ ಬಿ ಆಗಿರುತ್ತದೆ. ಅದು ಡಿಎನ್ ಎ ಮತ್ತು ಹೊಸ ಕೋಶಗಳನ್ನು ತಯಾರಿಸಲು ಮುಖ್ಯವಾಗಿದೆ.
ಚಪಾತಿ ಮತ್ತು ಅನ್ನದಲ್ಲಿ ಹೆಚ್ಚಿನ ಪ್ರಮಾಣದ ಐರನ್ ಇರುತ್ತದೆ. ಜೊತೆಗೆ ಮೆಗ್ನೆಶಿಯಮ್ ಮತ್ತು ಫಾಸ್ಪೋರಸ್ ಕೂಡ ಇರುತ್ತದೆ. ಇದು ಶರೀರದಲ್ಲಿ ರಕ್ತ ಹೆಚ್ಚಲು ಸಹಾಯ ಮಾಡುತ್ತದೆ.
ಭಾರತದಲ್ಲಿ ಬಿಳಿ ಅಕ್ಕಿಯ ಉಪಯೋಗ ಹೆಚ್ಚಾಗಿ ಆಗುತ್ತದೆ. ಇದರಲ್ಲಿ ಬಹಳ ಕಡಿಮೆ ಪೋಷಕ ತತ್ವ ಮತ್ತು ಕಾರ್ಬೋಹೈಡ್ರೇಟ್ ಪ್ರಮಾಣ ಹೆಚ್ಚಿರುತ್ತದೆ. ಅನ್ನ ಹೆಚ್ಚಾಗಿ ಸೇವಿಸಿದರೆ ಶರೀರದಲ್ಲಿ ಬ್ಲಡ್ ಶುಗರ್ ಹೆಚ್ಚಿಸುತ್ತದೆ.
ನಿಮಗೆ ಅಕ್ಕಿ ತಿನ್ನುವುದು ತುಂಬಾ ಇಷ್ಟ ಎಂದಾದರೆ ಯಾವಾಗಲೂ ಬ್ರೌನ್ ಅಕ್ಕಿ ಸೇವಿಸಿ. ಇದು ಅನ್ ಪಾಲಿಶ್ ಆಗಿರುತ್ತದೆ. ಇದರಲ್ಲಿ ಪೋಶಕ ತತ್ವ ಕಡಿಮೆ ಇರುತ್ತದೆ. ಇದು ದೇಹದಲ್ಲಿ ಸಕ್ಕರೆಯಂತೆ ಕಾರ್ಯ ನಿರ್ವಹಿಸುತ್ತದೆ.
ರಾತ್ರಿ ಊಟದಲ್ಲಿ ಅನ್ನ ಸೇವನೆ ಮಾಡುವುದನ್ನು ಕಡಿಮೆ ಮಾಡಿ, ಇಲ್ಲವಾದರೆ ತೂಕ ಹೆಚ್ಚುತ್ತದೆ. ಡಿನ್ನರ್ ಗೆ ನೀವು ಯಾವಾಗಲೂ ಲೈಟ್ ಆಗಿರುವ ಆಹಾರವನ್ನೆ ಸೇವಿಸಿ.
ಡಯಟೀಶನ್ ಹೇಳುವಂತೆ ಅನ್ನ ಮತ್ತು ಚಪಾತಿ ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಬೇಕು ಎನ್ನುವುದಾದರೆ ಚಪಾತಿ ತಿನ್ನುವುದು ಬೆಸ್ಟ್. ಯಾಕೆಂದರೆ ಅನ್ನಕ್ಕಿಂತ ಹೆಚ್ಚಾಗಿ ಚಪಾತಿಯಲ್ಲಿ ಫೈಬರ್ ಹೆಚ್ಚಿರುತ್ತದೆ.