Isabgol Benefits: ಡಯಟ್ ಮಾಡಿ ಬೇಜಾರು ಬಂತಾ, ಇಸಾಬ್‌ಗೋಲ್ ಟ್ರೈ ಮಾಡಿ ನೋಡಿ

ದೇಹ ಕರಗಿಸಿಕೊಳ್ಳೋಕೆ ಜನ ಏನೆಲ್ಲ ಮಾಡ್ತಾರೆ. ಕಷ್ಟಪಟ್ಟು ಆಹಾರ ಕಂಟ್ರೋಲ್ ಮಾಡ್ತಾರೆ. ಆದರೂ ಕೆಲವೊಮ್ಮೆ ಲೈನ್ ಕ್ರಾಸ್ ಮಾಡಿ ಏನಾದ್ರೂ ತಿಂದು ಪರಿತಪಿಸ್ತಾರೆ. ಆದ್ರೆ, ಯಾವಾಗ ಬೇಕೋ ಆಗ ಸೇವಿಸಬಹುದಾದ ಹಾಗೂ ವೇಟ್ ಲಾಸ್ ಗೆ ಕೊಡುಗೆ ನೀಡುವ ಇಸಬ್ ಗೋಲ್ ಸೇವಿಸುವ ಮೂಲಕ ಆಹಾರ ನಿಯಂತ್ರಣಕ್ಕೆ ಪ್ರಯತ್ನಿಸಬಹುದು. 

Isabgol good option for Weight loss and to become fit

ಉದ್ಯೋಗಸ್ಥ ಮಹಿಳೆಯರಿಗೆ 'ಕೂತಿದ್ದು ಕೂತಿದ್ದು ಸೊಂಟ ದಪ್ಪಗಾಯ್ತು’ ಎನ್ನುವ ಪರಿತಾಪ. 'ಮನೆ, ಗಂಡ, ಮಕ್ಕಳು ಎಂದು ಮಾಡಿ ಮಾಡಿ ದಪ್ಪಗಾದೆ’ ಎನ್ನುವ ದೂರು ಗೃಹಿಣಿಯರದ್ದು. ಒಟ್ಟಿನಲ್ಲಿ ಎಲ್ಲರ ಸಮಸ್ಯೆಯೂ ಒಂದೇ. ಅದೆಂದರೆ, ಸೊಂಟ ಹಾಗೂ ಹೊಟ್ಟೆಯ ಸುತ್ತಳತೆ ಹೆಚ್ಚುತ್ತಿದೆ ಎನ್ನುವುದು. ಬರೀ ಮಹಿಳೆಯರಷ್ಟೇ ಅಲ್ಲ, ಬಹಳಷ್ಟು ಯುವತಿಯರೂ ಬೆಳೆಯುತ್ತಿರುವ ದೇಹ ಹಾಗೂ ಬೊಜ್ಜು ನಿಯಂತ್ರಿಸಲು ಕಷ್ಟಪಡುತ್ತಾರೆ. ಸೊಂಟ ಹಾಗೂ ಹೊಟ್ಟೆಯ ಬೊಜ್ಜು ಕರಗಿಸಿಕೊಳ್ಳಲು ವಾಕಿಂಗೋ, ವ್ಯಾಯಾಮವೋ, ಆಹಾರದ ನಿಯಂತ್ರಣವೋ ಏನಾದರೊಂದು ಪ್ರಯತ್ನದಲ್ಲಿರುವವರು ನೀವಾಗಿದ್ದರೆ ನಿಮ್ಮ ಪಟ್ಟಿಗೆ ಇಸಬ್ ಗೋಲ್ (Isabgol) ಅನ್ನೂ ಸೇರಿಸಿಕೊಳ್ಳಬಹುದು. ಸಾಮಾನ್ಯವಾಗಿ ಮಲಬದ್ಧತೆಗೆ ನೀಡುವ ಔಷಧವನ್ನು ಡಯಟ್ ಆಹಾರದ ಪಟ್ಟಿಗೆ ಸೇರಿಸಿಕೊಳ್ಳಬಹುದೇ ಎನ್ನುವ ಗೊಂದಲ ಬೇಡ. ಅಸಲಿಗೆ, ಇಸಬ್ ಗೋಲ್ ಅತ್ಯುತ್ತಮ ನಾರುಭರಿತ ಆಹಾರ. ಅದು ಒಂದು ಜಾತಿಯ ಹೊಟ್ಟು. ಇದನ್ನು ಪ್ಲಾಂಟಾಗೊ ಒವಾಟಾ ಎಂದೂ, ಮರುಭೂಮಿಯ ಗೋಧಿ ಎಂದೂ ಕರೆಯಲಾಗುತ್ತದೆ. ಮೆಡಿಟರೇನಿಯನ್ ಪ್ರದೇಶ, ಏಷ್ಯಾದ ಕೇಂದ್ರ, ಪೂರ್ವ, ದಕ್ಷಿಣ ಭಾಗ ಹಾಗೂ ಉತ್ತರ ಅಮೆರಿಕಾಗಳ ಸ್ಥಳೀಯ ಬೆಳೆಯಾಗಿದೆ. ಇದೊಂದು ಔಷಧೀಯ (Medicinal) ಸಸ್ಯವೂ ಹೌದು.

ಇಸಬ್ ಗೋಲ್ ರಚನೆಯೇ ಬಹಳ ಶ್ರೇಷ್ಠವಾಗಿದೆ. ಇದರಲ್ಲಿ ಕರಗಬಹುದಾದ ಹಾಗೂ ಕರಗದೆ ಇರುವ ಎರಡೂ ರೀತಿಯ ನಾರಿನಂಶವಿದೆ. ಪ್ಲಾಂಟಾಗೊ ಒವಾಟಾ ಅಥವಾ ಮರುಭೂಮಿಯ ಗೋಧಿಯ ಬೀಜಗಳ ಈ ಹೊಟ್ಟು (husks) ಮಲಬದ್ಧತೆಗೆ ಅತ್ಯುತ್ತಮ ಪರಿಹಾರವಾಗಿದೆ. ಇದರೊಂದಿಗೆ ನಮ್ಮ ದೇಹದ ಪ್ರಮುಖ ಅಂಗಗಳಾದ ಪ್ಯಾಂಕ್ರಿಯಾಸ್, ಹೃದಯ (Heart) ಹಾಗೂ ಕರುಳಿನ ಆರೋಗ್ಯಕ್ಕೆ (Health of Gu) ಅತ್ಯಂತ ಪೂರಕವಾಗಿದೆ. ಸಾಮಾನ್ಯವಾಗಿ ಹೊಟ್ಟಿನ ರೂಪದಲ್ಲಿಯೇ ಇದನ್ನು ಸೇವನೆ ಮಾಡಬಹುದು. ಇನ್ನು, ಪುಡಿ ಹಾಗೂ ಅದರ ಕ್ಯಾಪ್ಸೂಲ್ (Capsule) ರೀತಿಯಲ್ಲೂ ಲಭಿಸುತ್ತದೆ. ವಿಶ್ವಾದ್ಯಂತ ಪ್ರಮುಖ ಡಯಟ್ ಆಹಾರವನ್ನಾಗಿ ಇಸಬ್ ಗೋಲ್ ಅನ್ನು ಪರಿಗಣಿಸಲಾಗಿದೆ. 

ಕೊಬ್ಬು (Cholesterol) ನಿಯಂತ್ರಣ
ಇಸಬ್ ಗೋಲ್ ಹೊಟ್ಟನ್ನು ನೀರಿನಲ್ಲಿ ನೆನೆಸಿದಾಗ ದಪ್ಪನೆಯ ಲೋಳೆಯಂತಾಗುತ್ತದೆ. ನೀರನ್ನು ಅಗಾಧ ಪ್ರಮಾಣದಲ್ಲಿ ಹೀರಿಕೊಳ್ಳುವುದರಿಂದ ಹೊಟ್ಟೆಯಲ್ಲಿ ಸರಾಗವಾಗಿ ಚಲಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಅಧಿಕ ಕೊಬ್ಬು ಹಾಗೂ ನಮ್ಮ ದೇಹದಲ್ಲಿ ಅತಿ ಸಾಮಾನ್ಯವಾಗಿರುವ ಟ್ರೈಗ್ಲಿಸೆರೈಡ್ ಎನ್ನಲಾಗುವ ಕೊಬ್ಬನ್ನು ಸಹ ನಿಯಂತ್ರಿಸುತ್ತದೆ.  

ಎರಡು ರೀತಿಯ ನಾರಿನಂಶ (Fibre)
ಕರಗುವ ಹಾಗೂ ಕರಗದಿರುವ ಎರಡೂ ರೀತಿಯ ನಾರಿನ ಅಂಶವನ್ನು ಹೊಂದಿರುವುದು ಇಸಬ್ ಗೋಲ್ ಹೆಗ್ಗಳಿಕೆ. ಇದರಿಂದ ಹೊಟ್ಟೆಯಲ್ಲಿ ಮೃದುವಾದ ಚಲನೆ ಸಾಧ್ಯವಾಗುತ್ತದೆ. ಹಾಗೂ ಇದನ್ನು ಸೇವಿಸಿದಾಗ ದೀರ್ಘ ಸಮಯ ಹಸಿವಾಗುವುದಿಲ್ಲ. ಹೊಟ್ಟೆ ತುಂಬಿಕೊಂಡಂತೆ ಭಾಸವಾಗುತ್ತಿರುತ್ತದೆ. ಹಸಿವಾದಾಗ ಸೇವನೆ ಮಾಡುವುದರಿಂದ ಹೆಚ್ಚು ಆಹಾರ ಸೇವಿಸುವುದನ್ನು ತಡೆಯಬಹುದು. ಹೊಟ್ಟೆಯಲ್ಲಿ ತಂಪನ್ನು ಉಂಟುಮಾಡುತ್ತದೆ. ಎದೆಯುರಿ ಕಡಿಮೆಯಾಗುತ್ತದೆ. ಮಲಬದ್ಧತೆಗೆ (Constipation) ಅತ್ಯುತ್ತಮ ಪರಿಹಾರವಾಗಿದೆ.

ರೋಗ ನಿರೋಧಕ (Immunity) ಶಕ್ತಿ ಹೆಚ್ಚಳ 
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವೂ ಇಸಬ್ ಗೋಲ್ ನಲ್ಲಿದೆ. ಕರುಳನ್ನು ಸ್ವಚ್ಛಗೊಳಿಸುವ ಮೂಲಕ ಗ್ಯಾಸ್ಟ್ರೊಇಂಟೆಸ್ಟೈನಲ್ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡುತ್ತದೆ. ಕರುಳಿಗೆ ಬಲ ನೀಡುವ ಮೂಲಕ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ. ಇಸಬ್ ಗೋಲ್  ಬಲವರ್ಧಕವೂ ಹೌದು. 

ಹೊಟ್ಟೆ (Stomach) ಭರ್ತಿ 
ಕ್ಯಾಲರಿಯನ್ನು ಅತಿ ಕಡಿಮೆ ಪ್ರಮಾಣದಲ್ಲಿ ಹೊಂದಿರುವುದರಿಂದ ಬೊಜ್ಜು ಕಡಿಮೆ ಮಾಡಿಕೊಳ್ಳಲು ಬಯಸುವವರಿಗೆ ಅತ್ಯುತ್ತಮ ಆಯ್ಕೆಯಾಗಿ ಪರಿಣಮಿಸಿದೆ. ಬೊಜ್ಜು ನಿಯಂತ್ರಣಕ್ಕೆಂದು ಕೆಲವರು ಹಣ್ಣುಗಳ ಸೇವನೆ ಮಾಡುತ್ತಾರೆ. ಹಣ್ಣುಗಳು ಆರೋಗ್ಯಕ್ಕೆ ಪೂರಕವಾಗಿದ್ದರೂ ಅವುಗಳಲ್ಲಿ ಕ್ಯಾಲರಿ ಹೆಚ್ಚಾಗಿರುತ್ತದೆ. ನಿಜಕ್ಕೂ ಸ್ಥೂಲಕಾಯದವರಿಗೆ ಅದು ಹೆಚ್ಚು ಸಹಾಯವಾಗುವುದಿಲ್ಲ. ಆದರೆ, ಇಸಬ್ ಗೋಲ್ ಹಾಗಲ್ಲ. ಅತಿ ಕಡಿಮೆ ಕ್ಯಾಲರಿ ಹೊಂದಿರುವುದರಿಂದ ಡಯಟ್ ಆಹಾರಕ್ಕೆ ಹೆಚ್ಚು ಅನುಕೂಲ.  ಹಸಿವೆ ಕಡಿಮೆ ಮಾಡುವುದರಿಂದ ಹೆಚ್ಚು ಆಹಾರ ಸೇವನೆ ಮಾಡಲು ಸಾಧ್ಯವಾಗುವುದಿಲ್ಲ. ಇಸಬ್ ಗೋಲ್ ದೇಹಕ್ಕೆ ಉಷ್ಣವೂ ಅಲ್ಲ, ಶೀತವನ್ನೂ ತರುವುದಿಲ್ಲ. ದೇಹದ ಉಷ್ಣತೆಯನ್ನು ಶಮನ ಮಾಡುವ ಗುಣವನ್ನೂ ಹೊಂದಿದೆ. ಹೀಗಾಗಿ, ದಿನಕ್ಕೆ ಒಂದೆರಡು ಬಾರಿ ಆರಾಮಾಗಿ ಸೇವನೆ ಮಾಡಬಹುದು. ನಿಮ್ಮ  ಆರೋಗ್ಯದ ಸ್ಥಿತಿಗತಿ ನೋಡಿಕೊಂಡು ಸೇವನೆ ಮಾಡುವುದು ಉತ್ತಮ. ಯಾವುದಾದರೂ ಹಣ್ಣಿನ ಜ್ಯೂಸ್ ನೊಂದಿಗೆ ಇಸಬ್ ಗೋಲ್ ಸೇರಿಸಿಕೊಂಡು ಕುಡಿಯುವುದರಿಂದ ಹೊಟ್ಟೆ ತುಂಬಿದಂತೆ ಅನಿಸುವ ಜತೆಗೆ, ಆ ಸಮಯಕ್ಕೆ ಅಷ್ಟೇ ಆಹಾರ ಸಾಕಾಗುತ್ತದೆ. 

Latest Videos
Follow Us:
Download App:
  • android
  • ios