ಮನುಷ್ಯನ ವಿಚಿತ್ರ ವರ್ತನೆಗಳು ಹೊಸದೇನಲ್ಲ. ಕಚ್ಚಲು ಬಂದ ಹಾವು, ಚೇಳು , ನಾಯಿಯನ್ನು ಮನುಷ್ಯ ಸಹ ಕಚ್ಚಲು ಯತ್ನಿಸಿದ್ದಿದೆ. 20,000 ಜೇನುನೊಣಗಳು ಕುಟುಕಿದ ನಂತರ ವ್ಯಕ್ತಿಯೊಬ್ಬ ಅಸ್ವಸ್ಥನಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆಪರೇಷನ್ ಮಾಡಿದ ವೈದ್ಯರು ಆತನ ಹೊಟ್ಟೆಯಿಂದ ಹೊರತೆಗೆದ ಜೇನುಹುಳವೆಷ್ಟು ಗೊತ್ತಾ ?

ಜೇನುನೊಣಗಳು ನೋಡಲು ಪುಟ್ಟದಾಗಿದ್ದರೂ ಕಚ್ಚಿದರೆ ಮಾತ್ರ ವಿಪರೀತ ನೋವು ಸಹಿಸಬೇಕಾಗುತ್ತದೆ. ಜೇನು ನೊಣಗಳು ಸಾಮಾನ್ಯವಾಗಿ ನಿರುಪದ್ರಮಿಗಳು. ಯಾರಿಗೂ ತೊಂದರೆ ನೀಡದೆ, ತಮ್ಮಷ್ಟಕ್ಕೇ ಗೂಡು ಕಟ್ಟಿಕೊಂಡಿರುತ್ತವೆ. ಆದರೆ ಮನುಷ್ಯನೇ ಅವುಗಳಿಗೆ ತೊಂದರೆಯನ್ನುಂಟು ಮಾಡುತ್ತಾನೆ. ಸಣ್ಣ ಘಾಸಿಯಾದರೂ ಸಾಕು ಜೇನು ನೊಣಗಳ ಹಿಂಡೇ ಅಟ್ಯಾಕ್ ಮಾಡಲು ಶುರು ಮಾಡುತ್ತದೆ. ಇಲ್ಲಾಗಿದ್ದು ಅದೇ. ಅಮೇರಿಕಾದಲ್ಲಿ ವ್ಯಕ್ತಿಯೊಬ್ಬ 20,000 ಜೇನುನೊಣಗಳು ಕುಟುಕಿದ ನಂತರ ಆಸ್ಪತ್ರೆಗೆ ದಾಖಲಾಗಿದ್ದಾನೆ. ಯುಎಸ್ ರಾಜ್ಯದ ಓಹಿಯೋದಲ್ಲಿ ಯುವಕನೊಬ್ಬ ಜೇನುನೊಣಗಳಿಂದ ಸಾವಿರಾರು ಬಾರಿ ಕಚ್ಚಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನಿಗೆ ಚಿಕಿತ್ಸೆ ನೀಡಲುಬಂದ ವೈದ್ಯರು ಅಚ್ಚರಿಗೊಂಡಿದ್ದು ಈ ವಿಚಾರಕ್ಕಲ್ಲ. 

ಜೇನು ನೊಣದಿಂದ ಕಚ್ಚಿಸಿಕೊಂಡ ಯುವಕ ಆಸ್ಪತ್ರೆ ಪಾಲು
ಜೇನು ನೊಣ (Bee)ದಿಂದ ಕಚ್ಚಿಸಿಕೊಂಡ ಯುವಕ (Youth) ಉದ್ದೇಶವಿಟ್ಟುಕೊಂಡೋ, ಅಲ್ಲ ತಿಳಿಯದೆಯೋ ಗೊತ್ತಿಲ್ಲ ಒಟ್ನಲ್ಲಿ ಇಂಥಾ ಬರೋಬ್ಬರಿ ಇಪ್ಪತ್ತು ಜೇನುನೊಣಗಳನ್ನು ನುಂಗಿದ್ದಾನೆ. ವೈದ್ಯರು ಪರಿಶೀಲನೆ ನಡೆಸಿದಾಗ ಈ ವಿಚಾರ ತಿಳಿದುಬಂದಿದೆ. ಆಸ್ಟಿನ್ ಬೆಲ್ಲಾಮಿ, ಮರದ ಕೆಲಸ ಮಾಡುವಾಗ ಆಕಸ್ಮಿಕವಾಗಿ ಜೇನುಗೂಡು ಕತ್ತರಿಸಿದ್ದು, ಅಲ್ಲಿಂದ ಜೇನು ನೊಣ ಕಾಟ ಕೊಡಲು ಆರಂಭಿಸಿದೆ. ಬೆಲ್ಲಾಮಿ ಸದ್ಯ ಆಸ್ಪತ್ರೆ (Hospital) ಯಲ್ಲಿ ವೆಂಟಿಲೇಟರ್‌ನಲ್ಲಿದ್ದಾರೆ ಎಂದು ಅವರ ತಾಯಿ ಶಾವ್ನಾ ಕಾರ್ಟರ್ ಹೇಳಿದ್ದಾರೆ.

ಸ್ಟ್ರೆಸ್‌ ಅಂತ ಅಲ್ಕೋಹಾಲ್ ಕುಡಿದ್ರೆ ಮಾನಸಿಕ ಆರೋಗ್ಯ ಕೈ ಕೊಡುತ್ತೆ

ಬೆಲ್ಲಾಮಿ ನಿಂಬೆ ಮರದ ಕೊಂಬೆಗಳನ್ನು ಟ್ರಿಮ್ ಮಾಡುತ್ತಿದ್ದಾಗ ಅಜಾಗರೂಕತೆಯಿಂದ ಆಫ್ರಿಕನ್ ಕಿಲ್ಲರ್ ಜೇನುನೊಣಗಳ ಜೇನುಗೂಡಿಗೆ ಕತ್ತರಿಸಿದನು. ಈ ಸಂದರ್ಭದಲ್ಲಿ ಜೇನು ನೊಣ 20,000 ಕ್ಕೂ ಹೆಚ್ಚು ಜೇನು ನೊಣ ಕುಟುಕಿದೆ. ಕೊಂಬೆಗಳನ್ನುಕತ್ತರಿಸಲು ಪ್ರಾರಂಭಿಸಿದಾಗ, ಜೇನುನೊಣಗಳು ಹೊರಬಂದು ಕಚ್ಚಲು ಶುರು ಮಾಡಿದವು. ಆತ ನೆರವಿನಿಂದ ಗೋಳಾಡುತ್ತಿದ್ದರೂ ನಮಗೆ ಸಹಾಯ ಮಾಡಲು ಸಾಧ್ಯವಾಗಲ್ಲಿಲ್ಲ. ಯಾಕೆಂದರೆ ನಮಗೆ ಸಹ ತುಂಬಾ ಜೇನು ನೊಣ ಕಚ್ಚಿತ್ತು ಎಂದು ಬೆಲ್ಲಾಮಿಯ ಅಜ್ಜಿ ಫಿಲ್ಲಿಸ್ ಎಡ್ವರ್ಡ್ಸ್ ಫಾಕ್ಸ್ ಹೇಳಿದ್ದಾರೆ.

ನಾನು ಆಸ್ಟಿನ್‌ ಬಳಿಕಗೆ ಹೋಗಲು ಏಣಿಯನ್ನು ಹತ್ತಲು ಪ್ರಯತ್ನಿಸುತ್ತಿದ್ದೆ. ಆದರೆ ನಾನು ಜೇನುನೊಣಗಳಿಂದ ಸುತ್ತುವರೆದಿದ್ದರಿಂದ ಅವನ ಬಳಿಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ಎಡ್ವರ್ಡ್ಸ್ ಉಲ್ಲೇಖಿಸಿದ್ದಾರೆ. ಬೆಲ್ಲಾಮಿ ಸುಮಾರು 30 ಜೇನುನೊಣಗಳನ್ನು ಸಹ ಸೇವಿಸಿದ್ದಾರೆ ಎಂದು ತಿಳಿದುಬಂದಿದೆ. ಅದನ್ನು ತೆಗೆದುಹಾಕಲು ವೈದ್ಯರು ಒಂದು ದಿನಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡರು.

ಮಹಿಳೆಯ ಮೂಗಿನಲ್ಲಿತ್ತು ಭರ್ತಿ 150 ನೊಣ, ವೈದ್ಯರಿಗೇ ಶಾಕ್ !
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಗೃಹಿಣಿಯ ಮೂಗಿನಲ್ಲಿ 150 ಲಾರ್ವಾಗಳು ಸೇರಿಕೊಂಡಿದ್ದವು. ಮೂಗಿನೊಳಗೆ ಸೇರಿಕೊಂಡಿರುವ ನೊಣಗಳಿಂದ ಮಹಿಳೆ ಬಹುತೇಕ ಕೋಮಾ ಸ್ಥಿತಿಗೆ ಜಾರಿದ್ದರು ಎನ್ನಲಾಗುತ್ತಿದ್ದು, ವೈದ್ಯರು ಸಾಕಷ್ಟು ಕಠಿಣ ಪರಿಶ್ರಮದಿಂದ ಆಕೆಯನ್ನ ರಕ್ಷಿಸಿದ್ದಾರೆ. ಹೈದರಾಬಾದ್​ನ ಸೆಂಚುರಿ ಆಸ್ಪತ್ರೆಯ ವೈದ್ಯರು ಗೃಹಿಣಿಯಾಗಿರುವ 50 ವರ್ಷದ ರೋಗಿಯನ್ನು ಶಸ್ತ್ರಚಿಕಿತ್ಸೆ ಮೂಲಕ ರಕ್ಷಿಸಿದ್ದಾರೆ. ಸ್ಕಲ್ ಬೇಸ್ ಸರ್ಜನ್ ಡಾ.ಜಾನಕಿರಾಮ್ ನೇತೃತ್ವದ ತಜ್ಞರ ತಂಡವು ಮಹಿಳೆಯನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದ್ದು ಈ ಪ್ರಕರಣವನ್ನು ಅಪರೂಪದದಲ್ಲಿ ಅಪರೂಪ ಎಂದೇ ಹೇಳಲಾಗಿದೆ.

Corona Crisis: ಎರಡು ವಾರದ ಬಳಿಕ ಕರ್ನಾಟಕದಲ್ಲಿ ಕೊರೋನಾ ಸಾವು ಶೂನ್ಯ

ಆರು ತಿಂಗಳ ಹಿಂದೆ ಕಪ್ಪು ಶಿಲೀಂಧ್ರ ಸೋಂಕು ತಗುಲಿತ್ತು
50 ವರ್ಷದ ಮಹಿಳೆಗೆ (Woman) ಆರು ತಿಂಗಳ ಹಿಂದೆ ಮ್ಯೂಕೋರ್ಮೈಕೋಸಿಸ್ ಸೋಂಕು ತಗುಲಿತ್ತು. ಇದನ್ನ ಕಪ್ಪು ಶಿಲೀಂಧ್ರ ಎಂದು ಸಹ ಕರೆಯಲಾಗುತ್ತದೆ. ಸೋಂಕು ಮೆದುಳಿನ ಭಾಗಕ್ಕೆ ಹರಡಿದ್ದರಿಂದ ಬಲಗಣ್ಣನ್ನು ತೆಗೆದುಹಾಕಬೇಕಾಯಿತು. ಕೊರೊನಾ ಸೋಂಕಿನಿಂದಾಗಿ ಮೂತ್ರಪಿಂಡದ ಕಾರ್ಯವೂ ನಿಧಾನಗೊಂಡಿತ್ತು. ನಂತರದ ದಿನಗಳಲ್ಲಿ ಆಕೆಗೆ ಆರೋಗ್ಯ ಸಮಸ್ಯೆ (Health problem) ಕಾಣಿಸಿಕೊಂಡಿದೆ. ಮಧುಮೇಹ (Diabetes)ದಿಂದ ಆರೋಗ್ಯ ಹದಗೆಟ್ಟಿದೆ. ದೇಹದ ಭಾಗಗಳಲ್ಲಿ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಕುಟುಂಬ ಸದಸ್ಯರು ಭಯಭೀತರಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಅಂತಿಮವಾಗಿ ಅವರನ್ನು ಹೈದರಾಬಾದ್‌ನ ಸೆಂಚುರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಆಸ್ಪತ್ರೆಗೆ ದಾಖಲಾದಾಗ ಅವರು ಅರೆ ಕೋಮಾ ಹಂತದಲ್ಲಿದ್ದರು. ಬಳಿಕ ತಜ್ಞ ವೈದ್ಯರ ತಂಡ ಶಸ್ತ್ರಚಿಕಿತ್ಸೆ (Operation) ನಡೆಸಿ ನೊಣಗಳ ಲಾರ್ವಾಗಳನ್ನ ತೆಗೆದುಹಾಕಿದರು. ಸಾಮಾನ್ಯ ವೈದ್ಯರು ಮತ್ತು ಮೂತ್ರಪಿಂಡಶಾಸ್ತ್ರಜ್ಞರ ತಂಡವು ಆಕೆಯ ಆರೋಗ್ಯ ಸ್ಥಿತಿಯನ್ನು ಸ್ಥಿರಗೊಳಿಸಲು ಪ್ರಯತ್ನಿಸುತ್ತಿತ್ತು. ಇತ್ತ ನಾವು ಏಕಕಾಲದಲ್ಲಿ ಹುಳುಗಳನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೆವು ಎಂದು ಡಾ.ಜಾನಕಿರಾಮ್ ಹೇಳಿದರು.