Corona Crisis: ಎರಡು ವಾರದ ಬಳಿಕ ಕರ್ನಾಟಕದಲ್ಲಿ ಕೊರೋನಾ ಸಾವು ಶೂನ್ಯ

ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಕೊರೋನಾ ಸೋಂಕಿನ ಹೊಸ ಪ್ರಕರಣಗಳು 600 ಆಸುಪಾಸಿನಲ್ಲಿಯೆ ವರದಿಯಾಗಿವೆ. ಎರಡು ವಾರದ ಬಳಿಕ ಸೋಂಕಿತರ ಸಾವು ಶೂನ್ಯ ತಲುಪಿದೆ.

546 new coronavirus cases on september 1 in karnataka gvd

ಬೆಂಗಳೂರು (ಸೆ.02): ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಕೊರೋನಾ ಸೋಂಕಿನ ಹೊಸ ಪ್ರಕರಣಗಳು 600 ಆಸುಪಾಸಿನಲ್ಲಿಯೆ ವರದಿಯಾಗಿವೆ. ಎರಡು ವಾರದ ಬಳಿಕ ಸೋಂಕಿತರ ಸಾವು ಶೂನ್ಯ ತಲುಪಿದೆ. ಗುರುವಾರ 546 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, 1612 ಮಂದಿ ಗುಣಮುಖರಾಗಿದ್ದಾರೆ. ಸಾವು ಶೂನ್ಯ ದಾಖಲಾಗಿದೆ. 15 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.3.6 ರಷ್ಟುದಾಖಲಾಗಿದೆ. ಬುಧವಾರಕ್ಕೆ ಹೋಲಿದರೆ ಸೋಂಕು ಪರೀಕ್ಷೆ 10 ಸಾವಿರ ಕಡಿಮೆ ನಡೆಸಲಾಗಿದೆ. 

ಹೀಗಾಗಿ, ಹೊಸ ಪ್ರಕರಣಗಳು 93 ಇಳಿಕೆಯಾಗಿವೆ. ಈ ಹಿಂದೆ ಆ.15 ರಂದು ಸೋಂಕಿತರ ಸಾವು ಶೂನ್ಯ ತಲುಪಿತ್ತು. ಆ ಬಳಿಕ ನಿತ್ಯ ಬೆರಳೆಣಿಕೆಯಷ್ಟು ಸಾವು ಇದ್ದವು. ಸದ್ಯ 15 ದಿನದ ಬಳಿಕ ಸಾವು ಶೂನ್ಯ ತಲುಪಿದೆ. ಸದ್ಯ ಸಕ್ರಿಯ ಸೋಂಕಿತರ ಸಂಖ್ಯೆ 6,445 ಇದ್ದು, ಈ ಪೈಕಿ 75 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 5 ಮಂದಿ ಐಸಿಯು, 5 ಮಂದಿ ಆಕ್ಸಿಜನ್‌, 65 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 6370 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.

Corona Crisis: ಕೋವಿಡ್‌ ದಾಖಲಿಗೆ ತಾಂತ್ರಿಕ ಸಮಸ್ಯೆ: ಕಡಿಮೆ ಕೇಸ್‌ ಪತ್ತೆ

19 ಕೊರೋನಾ ಕೇಸ್‌: ದ.ಕ.ಜಿಲ್ಲೆಯಲ್ಲಿ ಗುರುವಾರ 19 ಕೊರೋನಾ ಕೇಸ್‌ ಪತ್ತೆಯಾಗಿದ್ದು, ಇಬ್ಬರು ಗುಣಮುಖರಾಗಿದ್ದಾರೆ. 105 ಸಕ್ರಿಯ ಪ್ರಕರಣ ಇದ್ದು, ಜಿಲ್ಲೆಯ ಪಾಸಿಟಿವಿಟಿ ರೇಟ್‌ ಶೇ.2.38 ಆಗಿದೆ. ಇಲ್ಲಿವರೆಗೆ ಒಟ್ಟು ಪಾಸಿಟಿವ್‌ ಕೇಸ್‌ಗಳ ಸಂಖ್ಯೆ 1,36,707ಕ್ಕೆ ಏರಿಕೆಯಾಗಿದೆ. ಒಟ್ಟು 1,34,743 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ 1,859 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ಎಲ್ಲಿ, ಎಷ್ಟು ಪ್ರಕರಣಗಳು?: ಗುರುವಾರದ ಬೆಂಗಳೂರಿನಲ್ಲಿ 417 ಪ್ರಕರಣ ಪತ್ತೆಯಾಗಿವೆ. ಉಳಿದಂತೆ ಕೊಡಗು 24, ದಕ್ಷಿಣ ಕನ್ನಡ 19, ಶಿವಮೊಗ್ಗ, ಮಂಡ್ಯ ಹಾಗೂ ದಾವಣಗೆರೆ ತಲಾ 11 ಮಂದಿಗೆ ಸೋಂಕು ತಗುಲಿದೆ. 12 ಜಿಲ್ಲೆಗಳಲ್ಲಿ ಬೆರಳೆಣಿಕೆ, ಬಾಗಲಕೋಟೆ, ಬೆಳಗಾವಿ, ಬೀದರ್‌, ಚಿತ್ರದುರ್ಗ, ಗದಗ, ಹಾಸನ, ಹಾವೇರಿ, ಕೋಲಾರ, ಕೊಪ್ಪಳ, ಉತ್ತರಕನ್ನಡ ಹಾಗೂ ವಿಜಯಪುರದಲ್ಲಿ ಶೂನ್ಯ ಪ್ರಕರಣ ವರದಿಯಾಗಿವೆ.

ಸೆಪ್ಟೆಂಬರ್‌ ಅಂತ್ಯದವರೆಗೂ ಕರ್ನಾಟಕದಲ್ಲಿ ಮಾಸ್ಕ್‌ ಕಡ್ಡಾಯ: ಕೊರೋನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಮುಂಬರುವ ಸೆಪ್ಟೆಂಬರ್‌ ಅಂತ್ಯದವರೆಗೆ ವಿವಿಧ ಹಬ್ಬಗಳಲ್ಲಿ ಕೊರೋನಾ ಮುಂಜಾಗ್ರತಾ ಕ್ರಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಆರೋಗ್ಯ ಇಲಾಖೆ ಜಿಲ್ಲಾಡಳಿತಗಳಿಗೆ ಸುತ್ತೋಲೆ ಹೊರಡಿಸಿದೆ. ಸದ್ಯ ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಕಡ್ಡಾಯ ನಿಯಮ ಜಾರಿಯಲ್ಲಿದೆ. 

Corona Crisis: ಕೋವಿಡ್‌ ಸೋಂಕಿತರ ಸಾವು ಹೆಚ್ಚಳ: ಆತಂಕ

ಆದರೂ, ಜೂನ್‌ ಆರಂಭದಿಂದ ಸೋಂಕು ಹೆಚ್ಚಳವಾಗುತ್ತಿದ್ದು, ಮುಂಬರುವ ಗೌರಿ-ಗಣೇಶ ಹಬ್ಬ, ಓಣಂ, ಅನಂತ ಪದ್ಮನಾಭ ವ್ರತ, ವಿಶ್ವಕರ್ಮ ಜಯಂತಿ, ಮಹಾಲಯ ಅಮಾವಾಸ್ಯೆ ವೇಳೆ ಮತ್ತಷ್ಟುಹೆಚ್ಚುವ ಸಾಧ್ಯತೆಗಳಿವೆ. ಮುಂಜಾಗ್ರತಾ ಕ್ರಮವಾಗಿ ಸೆಪ್ಟೆಂಬರ್‌ ಅಂತ್ಯದವರೆಗೂ ಸಾರ್ವಜನಿಕ ಸ್ಥಳಗಳು, ಹೋಟೆಲ್‌, ಬಾರ್‌ ರೆಸ್ಟೋರೆಂಟ್‌ಗಳು, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ, ಪ್ರಯಾಣ ಸಂದರ್ಭದಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ. ಜತೆಗೆ ಗುಂಪು ಸೇರುವುದನ್ನು ನಿರ್ಬಂಧಿಸುವಂತೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. 

Latest Videos
Follow Us:
Download App:
  • android
  • ios