ಸ್ಟ್ರೆಸ್‌ ಅಂತ ಅಲ್ಕೋಹಾಲ್ ಕುಡಿದ್ರೆ ಮಾನಸಿಕ ಆರೋಗ್ಯ ಕೈ ಕೊಡುತ್ತೆ

ಈಗಿನ ಜನರೇಷನ್‌ನಲ್ಲಿಮದ್ಯ ಸೇವನೆ ಒಂದು Addiction ಆಗಿದೆ. ಒತ್ತಡ ನಿವಾರಣೆ, ರಿಲಾಕ್ಸ್ ಫೀಲ್‌, ನೋವು ನೀಗಿಸಿಕೊಳ್ಳುವುದಕ್ಕೆ ಹೀಗೆ ಹಲವು ಕಾರಣಗಳನ್ನೊಡ್ಡಿ ಬಹುತೇಕ ಜನ ಮದ್ಯ ಸೇವನೆ ಮಾಡುತ್ತಾರೆ. ಆದ್ರೆ ಟೆನ್ಶನ್‌ ಆಗೋವಾಗ ಡ್ರಿಂಕ್ಸ್ ಮಾಡೋದ್ರಿಂದ ಆರೋಗ್ಯಕ್ಕೆಷ್ಟು ತೊಂದ್ರೆಯಾಗುತ್ತೆ ಗೊತ್ತಾ?

Why You Should Not Rely On Alcohol When Stressed Vin

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಅನ್ನೋ ಮಾತೇ ಇದೆ. ಮದ್ಯ ಸೇವನೆಯಿಂದ ಎಷ್ಟೋ ಸಂಸಾರಗಳು ನಾಶವಾಗಿವೆ, ಜೀವ ಹೋಗಿವೆ. ಹೀಗೆ ಮದ್ಯದಿಂದ ಆಗಿರುವ ಸಾವು ನೋವುಗಳು ದಿನನಿತ್ಯ ಒಂದೊಂದು ಸುದ್ದಿ ಓದುತ್ತಿರುತ್ತೇವೆ. ವರ್ಕ್ ಲೋಡ್, ಸ್ಟೆçಸ್ ಜಾಸ್ತಿಯಾಗಿದೆ ಎಂದು ವೀಕೆಂಡ್‌ನಲ್ಲಿ ಕುಡಿಯುವವರು ಇದ್ದಾರೆ. ಲವ್ ಫೇಲ್ ಆಯ್ತು,  ಸಾವಿನ ನೋವು ಮರೆಯಲಿಕ್ಕೆ ದಿನವಿಡೀ ಕುಡಿಯುವವರಿದ್ದಾರೆ. ಅಷ್ಟೇ ಅಲ್ಲ ಖಷಿಗೂ ಕುಡಿಯುವವರಿದ್ದಾರೆ. ಆದ್ರೆ ಟೆನ್ಶನ್ ಆದಾಗ ಮದ್ಯ ಸೇವನೆ ಮಾಡೋದ್ರಿಂದ ನಿಜವಾಗಲೂ ಸ್ಟ್ರೆಸ್ ಕಡಿಮೆಯಾಗುತ್ತಾ ? ಅಥವಾ ಹೆಚ್ಚಾಗುತ್ತಾ ?

ಒತ್ತಡದಲ್ಲಿರುವಾಗ ಅಲ್ಕೋಹಾಲ್ ಕುಡಿಯಬಾರದು ಯಾಕೆ ? 
ಒತ್ತಡದ (Pressure) ದಿನದ ನಂತರ ವಿಶ್ರಾಂತಿ ಪಡೆಯಲು ಅಲ್ಕೋಹಾಲ್‌ ನಿಮಗೆ ಸಹಾಯ ಮಾಡುತ್ತದೆ ಎಂದು ನೀವು ಭಾವಿಸಿದರೂ ಸಹ, ಕಾಲಾನಂತರದಲ್ಲಿ ಈ ನಿಯಮಿತ ಅಭ್ಯಾಸವು ನಿಮ್ಮ ಮಾನಸಿಕ ಆರೋಗ್ಯ (Mental health)ವನ್ನು ನಾಶಪಡಿಸುತ್ತದೆ. ಅಲ್ಕೋಹಾಲ್ ಆತಂಕ, ಪ್ಯಾನಿಕ್ ಅಟ್ಯಾಕ್ ಮತ್ತು ನಿದ್ರಾಹೀನತೆ, ದೀರ್ಘಾವಧಿಯಲ್ಲಿ ಒತ್ತಡ ಮೊದಲಾದ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಒತ್ತಡದಲ್ಲಿರುವಾಗ ಕುಡಿಯುವುದರಿಂದ ನಶೆ ನಿಮ್ಮ ನರಗಳನ್ನು ಶಾಂತಗೊಳಿಸುತ್ತದೆ. ಆದರೆ ಒತ್ತಡದಲ್ಲಿದ್ದಾಗ ನಿಯಮಿತ ಮದ್ಯ ಸೇವನೆಯು ನಿಮ್ಮ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಒತ್ತಡವನ್ನು ನಿವಾರಿಸಲು ಹೆಚ್ಚು ಅಲ್ಕೊಹಾಲ್ ಅನ್ನು ಅವಲಂಬಿಸಿದ್ದರೆ ಕೆಟ್ಟ ತಲೆನೋವು (Headache) ಮತ್ತು ಹ್ಯಾಂಗೋವರ್ ಕಾಣಿಸಿಕೊಳ್ಳಬಹುದು.

ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆ
ಊಟದ ಸಮಯದಲ್ಲಿ ಸಾಂದರ್ಭಿಕ ಬಿಯರ್ ಅಥವಾ ವೈನ್ ಯಾವುದೇ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ ಎಂದು ಅನೇಕ ಜನರು ಸಾಮಾನ್ಯವಾಗಿ ನಂಬುತ್ತಾರೆ ಆದರೆ ಯಾವುದೇ ಪ್ರಮಾಣದಲ್ಲಿ ಅಲ್ಕೋಹಾಲ್ ಕುಡಿಯುವುದು ಅನಗತ್ಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ನೀವು ಒತ್ತಡ ಮತ್ತು ಆತಂಕ (Anxiety)ದಿಂದ ಬಳಲುತ್ತಿದ್ದು, ಅಲ್ಕೋಹಾಲ್ ಸೇವನೆ ಮಾಡುತ್ತಿದ್ದರೆ ಇದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಅನ್ನೋ ಮಾಹಿತಿ ಇಲ್ಲಿದೆ.

ಒತ್ತಡದಲ್ಲಿದ್ದಾಗ ಮದ್ಯ ಸೇವಿಸುವುದರಿಂದ ಮನಸ್ಥಿತಿಯ ಏರುಪೇರು ಉಂಟಾಗುತ್ತದೆ. ವರ್ತನೆಯಲ್ಲಿ ಹಠಾತ್‌ ಬದಲಾವಣೆ ಕಂಡುಬರುತ್ತದೆ. ಗಮನ ಕೇಂದ್ರೀಕರಿಸುವಲ್ಲಿ ತೊಂದರೆ ಉಂಟಾಗುತ್ತದೆ. ಪ್ಯಾನಿಕ್ ಅಟ್ಯಾಕ್ ಪರಿಸ್ಥಿತಿ, ನಿದ್ರಾಹೀನತೆ, ಲೈಂಗಿಕ ಚಟುವಟಿಕೆ (Sex)ಯಲ್ಲಿ ಆಸಕ್ತಿಯ ನಷ್ಟ, ಹಸಿವಿನ ಕೊರತೆ ಕಂಡು ಬರುತ್ತೆ. 

ಆಲ್ಕೊಹಾಲ್-ಪ್ರೇರಿತ ಮಾನಸಿಕ ಆರೋಗ್ಯ ಪರಿಸ್ಥಿತಿಗಳು
ಮದ್ಯಪಾನವು ಅನೇಕ ಇತರ ಮಾನಸಿಕ ಸ್ಥಿತಿಗಳಿಗೆ ಕಾರಣವಾಗಬಹುದು, ಅದು ಪರಸ್ಪರ ಬೆರೆಯುತ್ತದೆ, ವಿವಿಧ ಅಸ್ವಸ್ಥತೆಗಳನ್ನು ಉಂಟುಮಾಡುತ್ತದೆ, ಅವುಗಳಲ್ಲಿ ಹಲವು ಚಿಕಿತ್ಸೆಗಳಿಲ್ಲ. ಕಬ್ಬಿಣದ ಹಿಮೋಕ್ರೊಮಾಟೋಸಿಸ್ನ ಡಾರ್ಕ್ ಸೈಡ್ ಅಥವಾ ಕಬ್ಬಿಣದ ಮಿತಿಮೀರಿದ ಅಂಶವು ನಿಮ್ಮ ಹೃದಯ ಮತ್ತು ಪಿತ್ತಜನಕಾಂಗವನ್ನು ನಾಶಪಡಿಸುತ್ತದೆ ಮತ್ತು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಕಾರಣವಾಗಬಹುದು.

ಕಬ್ಬಿಣದ ಡಾರ್ಕ್ ಸೈಡ್: ಹಿಮೋಕ್ರೊಮಾಟೋಸಿಸ್ ಅಥವಾ ಕಬ್ಬಿಣದ ಓವರ್‌ಲೋಡ್ ನಿಮ್ಮ ಹೃದಯ ಮತ್ತು ಯಕೃತ್ತನ್ನು ನಾಶಪಡಿಸುತ್ತದೆ, ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಕಾರಣವಾಗಬಹುದು. ಅಲ್ಕೋಹಾಲ್-ಪ್ರೇರಿತ ಮನೋವಿಕೃತ ಅಸ್ವಸ್ಥತೆ, ಅಲ್ಕೊಹಾಲ್-ಪ್ರೇರಿತ ನಿದ್ರಾಹೀನತೆ, ಅಲ್ಕೊಹಾಲ್-ಪ್ರೇರಿತ ಖಿನ್ನತೆಯ ಅಸ್ವಸ್ಥತೆ, ಅಲ್ಕೋಹಾಲ್-ಪ್ರೇರಿತ ಆತಂಕದ ಅಸ್ವಸ್ಥತೆ ಕಂಡು ಬರಬಹುದು.

ಕುಡಿಯದೆ ಒತ್ತಡವನ್ನು ಎದುರಿಸುವುದು ಹೇಗೆ ?
ದೀರ್ಘಾವಧಿಯಲ್ಲಿ, ಅಲ್ಕೊಹಾಲ್ ಅನ್ನು ಅವಲಂಬಿಸಿರುವುದನ್ನು ಹೊರತುಪಡಿಸಿ ಒತ್ತಡದ ಭಾವನೆಗಳನ್ನು ಎದುರಿಸಲು ನೀವು ಕೆಲವು ಹೆಚ್ಚು ಪರಿಣಾಮಕಾರಿ ಮಾರ್ಗಗಳನ್ನು ಕಂಡುಹಿಡಿಯಬೇಕು. ಒತ್ತಡವನ್ನು ಕಡಿಮೆ ಮಾಡಲು ಕೆಲವು ಸಲಹೆಗಳು:

ವ್ಯಾಯಾಮ ಮಾಡುವುದು: ವ್ಯಾಯಾಮ (Exercise) ಮಾಡುವುದರಿಂದ ನೀವು ಮನಸ್ಸಿನಲ್ಲಿರುವ ಒತ್ತಡವನ್ನು ಸುಲಭವಾಗಿ ತೆಗೆದು ಹಾಕಬಹುದಾಗಿದೆ. ಪಾರ್ಕ್‌ಗೆ ತೆರಳಿ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಇದು ಮನಸ್ಸನ್ನು ಸಹ ಉಲ್ಲಸಿತಗೊಳಿಸುತ್ತದೆ.

ವಿಶ್ರಾಂತಿ: ಧ್ಯಾನ, ಯೋಗ ಮತ್ತು ಉಸಿರಾಟದ ವ್ಯಾಯಾಮಗಳಂತಹ ಅನೇಕ ವಿಶ್ರಾಂತಿ (Rest) ತಂತ್ರಗಳನ್ನು ನೀವು ಅನುಸರಿಸಬಹುದು, ಅದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನಿಮ್ಮ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

ನಿಮಗಾಗಿ ಸಮಯವನ್ನು ವಿನಿಯೋಗಿಸಿ: ಪ್ರತಿಯೊಬ್ಬರಿಗೂ ಜೀವನವು ತುಂಬಾ ಒತ್ತಡದಿಂದ ಕೂಡಿರುತ್ತದೆ. ಇದರ ಮಧ್ಯೆಯೂ ನೀವು ಮಾಡಲು ಇಷ್ಟಪಡುವ ವಿಷಯಗಳಲ್ಲಿ ಪಾಲ್ಗೊಳ್ಳಲು ಸಮಯವನ್ನು ಕಂಡುಹಿಡಿಯುವುದು ಮುಖ್ಯವಾಗಿದೆ. ನಿಮ್ಮ ಮನಸ್ಸನ್ನು (Mind) ಬೇರೆಡೆಗೆ ತಿರುಗಿಸಲು ನಿಮ್ಮ ಮೆಚ್ಚಿನ ಚಲನಚಿತ್ರವನ್ನು ವೀಕ್ಷಿಸಿ ಅಥವಾ ಪುಸ್ತಕವನ್ನು ಓದಿ. ಒತ್ತಡ ನಿವಾರಿಸಲು ಬರೀ ಅಲ್ಕೋಹಾಲ್ ಕುಡಿಯಬೇಕಾಗಿಲ್ಲ. ಹೀಗೆಲ್ಲಾ ಮಾಡಬಹುದು.

Latest Videos
Follow Us:
Download App:
  • android
  • ios