ಮಳೆಗಾಲದಲ್ಲಿ ಕಾಡೋ ಕಾಲ್ಬೆರಳಿನ ಫಂಗಸ್ ಸಮಸ್ಯೆ: ಮನೆಯಲ್ಲಿದೆ ಮದ್ದು!

ಮಳೆಗಾಲದಲ್ಲಿ(Rainy Season) ಎಷ್ಟೇ ಜಾಗೃತಿಯಾಗಿದ್ದರೂ ಒಂದಿಲ್ಲೊಂದು ಕಾಯಿಲೆಗಳು(Diseases) ಕಾಣಿಸಿಕೊಳ್ಳುತ್ತದೆ. ಶೀತ (Cold), ಕೆಮ್ಮು (Cough), ಜ್ವರ (Fever) ಇಷ್ಟೇ ಅಲ್ಲದೆ ಇತ್ತೀಚೆಗೆ ಹಲವು  ರೋಗಗಳು ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ ಹೆಚ್ಚಾಗಿ ಈ ಫಂಗಲ್ ಇನ್ಫೆಕ್ಷನ್ (Fungal Infection) ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಮನೆಯಲ್ಲೇ ಔಷಧಗಳಿವೆ. ಈ ಬಗ್ಗೆ ಡೀಟೇಲ್ಸ್ ಇಲ್ಲಿದೆ.

Tonal Fungus of monsoon health issue Best Home Remedies to control it

ಫಂಗಲ್ ಇನ್ಫೆಕ್ಷನ್(Fungal Infection) ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ತೇವ(Wet) ಹೆಚ್ಚಾದಲ್ಲಿ ಫಂಗಸ್ ಬೆಳೆಯುತ್ತವೆ. ಬಟ್ಟೆ ಸರಿಯಾಗಿ ಒಣಗದೇ(Dry) ಇದ್ದಾಗ ಬಟ್ಟೆಗಳಿಗೂ(Cloth) ಸಣ್ಣ ಸಣ್ಣ ಕಪ್ಪು ಡಾಟ್‌ಗಳು(Black Dot) ಕಾಣಿಸಿಕೊಳ್ಳುತ್ತವೆ. ಹಾಗೆಯೇ ತೇವ ಇರುವ ಬಟ್ಟೆಯನ್ನು ಹಾಕಿಕೊಂಡಲ್ಲಿ ಫಂಗಸ್ ಕಾಣಿಸಿಕೊಳ್ಳುತ್ತವೆ. ಮಳೆಗಾಲದಲ್ಲಿ ಹೆಚ್ಚಾಗಿ ನೆನೆಯುವ ಅಂಗ ಎಂದರೆ ಕಾಲು(Leg). ಮಳೆಯಲ್ಲಿ ಓಡಾಡುವಾಗ ಕಾಲು ನೆನೆಯುತ್ತದೆ. ಪಾದಗಳು ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಬೆರಳು(Toes) ಸಂಧಿಗಳಲ್ಲಿ ಫಂಗಸ್ ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಕಾಲಿನ ಬೆರಳಲ್ಲಿ ಕಾಣಿಸಿಕೊಳ್ಳುವ ಟೋನಲ್ ಫಂಗಲ್(Tonel Fungus) ಇನ್ಫೆಕ್ಷನ್ ಬೆರಳೇ ಎದ್ದು ಬಂದ ಹಾಗೆ, ಕೀವು ತುಂಬಿಕೊAಡು ಹಳದಿ(Yellow) ಬೆರಳಾಗಿ ಕಾಣಿಸಿಕೊಳ್ಳುತ್ತವೆ. ಇದಕ್ಕೆ ವೈಜ್ಞಾನಿಕವಾಗಿ(Scientific) ಒನಿಕೊಮಿಕೊಸಿಸ್(Onychomycosis) ಎನ್ನುತ್ತಾರೆ.

ಒನಿಕೊಮಿಕೊಸಿಸ್(Onychomycosis) ಎಂದರೇನು
ಕಾಲಿನ ಹೆಬ್ಬರಳಲ್ಲಿ ಹಳದಿ(Yellow) ಅಥವಾ ಬ್ರೌನ್(Brown) ಬಣ್ಣಕ್ಕೆ ತಿರುಗಿ ಉಗುರು ದಪ್ಪವಾಗುತ್ತದೆ(Thick). ಕೆಲವೊಮ್ಮೆ ಉಗುರು ಮುರಿದು ಹೋಗಲೂಬಹುದು. ಇದಕ್ಕೆ ಕಾರಣ ಕಾಲು ನೀರಿನಲ್ಲಿ ಅತಿಯಾಗಿ ಇರುವುದರಿಂದಲೂ, ಮಣ್ಣ ಅಥವಾ ಕೊಳೆಯ ಪ್ರಮಾಣ ಉಗುರಿನಲ್ಲಿ(Nails), ಸಂದುಗಳಲ್ಲಿ ಕೂರುವುದರಿಂದಲೂ ಹೀಗೆ ಆಗುತ್ತವೆ. ಕೆಲವೊಮ್ಮೆ ಇದು ಕಿರಿಕಿರಿ ಎನಿಸಿ ನಡೆಯುವುದಕ್ಕೂ ತೊಂದರೆಯಾಗುತ್ತದೆ. ಇದಕ್ಕೆ ಮೆಡಿಸಿನ್‌ಗಳಿವೆ. ಆದರೆ ಅದರಿಂದ ಹಲವು ರೀತಿಯಲ್ಲಿ ಸೈಡ್ ಎಫೆಕ್ಟ್(Side Effect) ಪ್ರಮಾಣ ಹೆಚ್ಚು. ಹೊಟ್ಟೆ ನೋವು(Stomach Pain), ಜಾಂಡೀಸ್(Jaundice), ಚರ್ಮ ರೋಗದ ಸಮಸ್ಯೆ(Skin disease), ಬೆರಳಿನಲ್ಲಿ ಊತ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಮನೆಮದ್ದು
ಕಾಲು ಬೆರಳಿನಲ್ಲಿ ಕಾಣಿಸಿಕೊಳ್ಳುವ ಈ ಟೋನಲ್ ಫಂಗಲ್ ಇನ್ಫೆಕ್ಷನ್‌ಗೆ ಮೆಡಿಸಿನ್ ಇದ್ದರೂ ಅದೊಂದು ಡ್ರಗ್ಸ್(Drugs) ಆಗಿರುವುದರಿಂದ ಸೈಡ್ ಎಫೆಕ್ಟ್ಗಳು ಇವೆ. ಅದೇ ರೀತಿ ಮನೆಯಲ್ಲಿರುವ ವಸ್ತುಗಳನ್ನೇ ಬಳಸಿದರೆ ಇನ್ಫೆಕ್ಷನ್ ಕಡಿಮೆ ಮಾಡಬಹುದಾಗಿದೆ. ಮನೆಮದ್ದಿಗಿರುವ ಟಿಪ್ಸ್ಗಳು ಇಲ್ಲಿವೆ.
1. ವಿಕ್ಸ್ ವೇಪೋರಬ್(Vicks) ಶಿಲೀಂಧ್ರಗಳ ಸೋಂಕಿಗೆ ಚಿಕಿತ್ಸೆ(Fungal) ನೀಡುತ್ತದೆ. ಅಷ್ಟೇ ಅಲ್ಲದೆ ರಬ್ ಯುಕಲಿಪ್ಟಸ್(Rub Eucalyptus) ಮತ್ತು ಕರ್ಪೂರವನ್ನು ಒಳಗೊಂಡಿರುತ್ತದೆ. ಇದು ಶೀತ ಕಡಿಮೆ ಮಾಡಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಜೊತೆಗೆ ಕಾಲಿನ ಹೆಬ್ಬರಳಿನಲ್ಲಾದ ಫಂಗಸ್ ಇನ್ಫೆಕ್ಷನ್ ಅನ್ನು ಗುಣಪಡಿಸುವ ಶಕ್ತಿ ಹೊಂದಿದೆ. ಇದನ್ನು ದಿನಕ್ಕೆ ಎರಡು ಭಾರಿ ಫಂಗಸ್ ಆದ ಜಾಗದಲ್ಲಿ ಹಚ್ಚಿದರೆ ಬಹು ಬೇಗ ಕಡಿಮೆ ಆಗುತ್ತದೆ.
2. ಮೆಲಲೂಕಾ(Melaleuca) ಎಂಬುದು ಫಂಗಸ್ ಇನ್ಫೆಕ್ಷನ್‌ಗೆ ಇರುವ ಉತ್ತಮ ಔಷಧ ಹಾಗೂ ಇದರಲ್ಲಿ ನಂಜು ನಿರೋಧಕ(Antiseptic) ಮತ್ತು ಆಂಟಿಫAಗಲ್(Antifungal) ಗುಣಲಕ್ಷಣವಿದೆ. ಇದನ್ನು ಟೀ ಟ್ರೀ ಎಣ್ಣೆ(Tea Tree Oil) ಎಂದೂ ಕರೆಯುತ್ತಾರೆ. ನ್ಯಾಷನಲ್ ಸೆಂಟರ್ ಫಾರ್ ಕಾಂಪ್ಲಿಮೆAಟರಿ ಆಯಂಡ್ ಇಂಟಿಗ್ರಿಟಿವ್ ಹೆಲ್ತ್(National Center for Complementary and Integrative Health) ಅವರ ಅಧ್ಯಯನದ ಪ್ರಕಾರ ಟೋನಲ್ ಇನ್ಫೆಕ್ಷನ್‌ಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಈ ಎಣ್ಣೆಯನ್ನು ದಿನದಲ್ಲಿ ಎರಡು ಭಾರಿ ಹಚ್ಚಿದರೆ ಬಹುಬೇಗ ಫಲಿತಾಂಶ ಪಡೆಯಬಹುದು.

ಮಳೆಗಾಲದಲ್ಲಿ ಇನ್ಫೆಕ್ಷನ್ ಆಗದಿರಲು ಈ ಟಿಪ್ಸ್ ನೆನಪಿನಲ್ಲಿರಲಿ

3. ಸನ್‌ಫ್ಲವರ್ ಕುಟುಂಬಕ್ಕೆ ಸೇರಿದ ಅಜರ್ಟೈನ್(Ageratin) ಎಕ್ಸಟ್ರಾಕ್ಟ್ ಫಂಗಲ್ ಇನ್ಫೆಕ್ಷನ್‌ಗೆ ಎಫೆಕ್ಟಿವ್ ಆಗಿ ಕೆಲಸ ಮಾಡುತ್ತದೆ. ಫಂಗಲ್ ಇನ್ಫೆಕ್ಷನ್ ಆದ ಜಾಗದಲ್ಲಿ ಇದನ್ನು ಹಾಕಿದರೆ ಸಿಕ್ಲೋಪಿರಾಕ್ಸ್(Cyclopirox ) ರೀತಿ ಕೆಲಸ ಮಾಡುತ್ತದೆ. ಪ್ರತಿ ಮೂರು ದಿನಗಳಿಗೊಮ್ಮೆ ಆದ ಗಾಯಕ್ಕೆ ಅಜರ್ಟೈನ್ ಹಚ್ಚಬೇಕು. ಈ ರೀತಿ ಕೆಲ ತಿಂಗಳ ಕಾಲ ಟ್ರೀಟ್ಮೆಂಟ್ ಮಾಡಿದರೆ ಸಂಪೂರ್ಣವಾಗಿ ಗುಣಪಡಿಸಬಹುದು. 
4. ಆಲಿವ್ ಎಲೆಗಳಲ್ಲಿ(Olive) ಕಂಡುಬರುವ ಅತ್ಯಮೂಲ್ಯ ಘಟಕಗಳಲ್ಲಿ ಒಂದಾದ ಒಲ್ಯುರೋಪಪೈನ್(Oleuropein), ಆಂಟಿಮೈಕ್ರೊಬಿಯಲ್ ಮತ್ತು ರೋಗನಿರೋಧಕ ಉತ್ತೇಜಿಸುವ ಗುಣಲಕ್ಷಣಗಳನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ. ಬಹು ಮುಖ್ಯವಾಗಿ, ಕಾಲಿನ ಉಗುರು ಶಿಲೀಂಧ್ರಕ್ಕೆ ಸಹಾಯ ಮಾಡುವ ಆಂಟಿಫAಗಲ್ ಗುಣಲಕ್ಷಣಗಳನ್ನೂ ನೀಡುತ್ತದೆ. ಇದನ್ನು ಆಹಾರ ರೂಪದಲ್ಲಿ(Meals) ದಿನದಲ್ಲಿ ಎರಡು ಭಾರಿ ಅಥವಾ ಡೈರೆಕ್ಟ್ ಆಗಿ ಫಂಗಸ್ ಆದ ಬೆರಳಿಗೆ ಹಚ್ಚಬೇಕು. ಇದನ್ನು ಉಪಪಯೋಗಿಸುವಾಗ ಹೆಚ್ಚಿನ ಪ್ರಮಾಣದಲ್ಲಿ ನೀರು(Water) ಕುಡಿಯಬೇಕು. 

Fact Check: ಫಾರಂ ಕೋಳಿಯಿಂದ ಮನುಷ್ಯನಿಗೆ ಬ್ಲಾಕ್ ಫಂಗಸ್ ವರದಿ ಸುಳ್ಳು!

5. ಸನ್‌ಫ್ಲವರ್ ಎಣ್ಣೆ(Sunflower oil) ಓಝೋನ್ ಯೀಸ್ಟ್(East), ಫಂಗಸ್(Fungus) ಮತ್ತು ಬ್ಯಾಕ್ಟೀರಿಯಾದಂತಹ(Bacteria) ಸಣ್ಣ ಜೀವಿಗಳ ಮೇಲೆ ಅದರ ಬಲವಾದ ಪರಿಣಾಮಗಳಿಗೆ ಹೆಸರುವಾಸಿಯಾಗಿದೆ. ಕೆಟೊಕೊನಜೋಲ್(Ketoconazole) ನಂತಹ ಔಷಧಿಗಳಿಗಿಂತ ಓಝೋನೇಟೆಡ್ ಎಣ್ಣೆಯು ಕಾಲ್ಬೆರಳ ಉಗುರು ಶಿಲೀಂಧ್ರಕ್ಕೆ ಚಿಕಿತ್ಸೆ ನೀಡಲು ಹೆಚ್ಚು ಪರಿಣಾಮಕಾರಿ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಇದನ್ನು ದಿನದಲ್ಲಿ ಎರಡು ಬಾರಿ ಹಚ್ಚಿದರೆ ಟೋನಲ್ ಇನ್ಫೆಕ್ಷನ್ ಕಡಿಮೆಯಾಗುತ್ತದೆ.
6. ಅಡುಗೆ ಮನೆಯಲ್ಲಿರುವ ವಿನೆಗರ್(Vinegar) ಸಹ ಹಲವು ವಿಷಯಕ್ಕೆ ಮನೆಮದ್ದಾಗಿದೆ. ವಿನೆಗರ್ ಅನ್ನು ಬಳಸುವುದರಿಂದ ಚರ್ಮದ(Skin) ಬಹುತೇಕ ಕಾಯಿಲೆಗಳು ಗುಣವಾಗುತ್ತವೆ. ಅದರಲ್ಲೂ ಕಾಲಿನಲ್ಲಾದ ಫಂಗಲ್ ಇನ್ಫೆಕ್ಷನ್ ಭಾಗವನ್ನು ದಿನಕ್ಕೆ 30 ನಿಮಿಷಗಳ ಕಾಲ ವಿನೆಗರ್‌ನಲ್ಲಿ ನೆನೆಸಬೇಕು. ಹೀಗೆ ಮಾಡುವ ಮೊದಲ ಬೆಚ್ಚಗಿನ ನೀರಿನಲ್ಲಿ(Warm Water) ಎರಡು ಭಾಗಗಳೊಂದಿಗೆ ವಿನೆಗರ್ ಅನ್ನು ಮಿಶ್ರಣ ಮಾಡಿಕೊಳ್ಳಬೇಕು. 
7. ಮೌತ್ ಫ್ಲಶ್‌ಗೆ ಬಳಸುವ ಲಿಸ್ಟರಿನ್(Listerine) ಅನ್ನು ಹಲವು ಗಾಯಗಳಿಗೆ ಉಪಯೋಗಿಸಲಾಗುತ್ತದೆ. ಇದು ತಣ್ಣಗೆ ಂಆಡುವ ಶಕ್ತಿ ಹೊಂದಿದೆ. ಏಕೆಂದರೆ ಇದರಲ್ಲಿ ಮಿಂಥಾಲ್(Mental), ಥೈಮಾಲ್(Thymol), ಯುಕಲಿಪ್ಟಸ್(Eucalyptus) ಅಂಶಗಳನ್ನು ಬಳಸಲಾಗಿದೆ. ಇವು ಆಂಟಿಫAಗಲ್ ಜೊತೆ ಹೋರಾಡುವ ಗುಣಗಳನ್ನು ಹೊಂದಿದೆ. ಫಂಗಸ್ ಆದ ಜಾಗವನ್ನು ದಿನಕ್ಕೆ 30 ನಿಮಿಷಗಳ ಕಾಲ ಲಿಸ್ಟರಿನ್ ನಲ್ಲಿ ನೆನೆಸಿಡಬೇಕು. 

Latest Videos
Follow Us:
Download App:
  • android
  • ios