ಮಳೆಗಾಲದಲ್ಲಿ ಇನ್ಫೆಕ್ಷನ್ ಆಗದಿರಲು ಈ ಟಿಪ್ಸ್ ನೆನಪಿನಲ್ಲಿರಲಿ
ತೀವ್ರ ಶಾಖದಿಂದ ಬಳಲುತ್ತಿರುವ ನಂತರ ಮಳೆಯ ಆಗಮನವು ಅನೇಕ ರೀತಿಯಲ್ಲಿ ಪರಿಹಾರವನ್ನು ನೀಡುತ್ತದೆ. ಆದರೆ ಈ ಋತುವಿನಲ್ಲಿ ಹೆಚ್ಚಿದ ತೇವಾಂಶ ಮತ್ತು ಶಾಖದಿಂದಾಗಿ, ವಿವಿಧ ರೋಗಗಳು ಸಹ ಹೆಚ್ಚುತ್ತದೆ. ಈ ಋತುವಿನಲ್ಲಿ, ವಿವಿಧ ಮೈಕ್ರೋಬ್ಸ್ (ಸೂಕ್ಷ್ಮ ಜೀವಿಗಳು) ಮತ್ತು ಶಿಲೀಂಧ್ರ ನಮ್ಮ ಚರ್ಮದ ಮೇಲೆ ಮೊಡವೆ ಮತ್ತು ಬಿರುಕುಗಳನ್ನು ಉಂಟುಮಾಡುವ ಅನುಕೂಲಕರ ವಾತಾವರಣವನ್ನು ಕಂಡುಕೊಳ್ಳುವ ಮೂಲಕ ವೇಗವಾಗಿ ಬೆಳೆಯುತ್ತವೆ. ಇದಲ್ಲದೆ ಮಳೆಗಾಲದಲ್ಲಿ ಚರ್ಮ ಮೊದಲಿಗಿಂತ ಹೆಚ್ಚು ಎಣ್ಣೆಯುಕ್ತವಾಗುತ್ತದೆ. ಇದರಿಂದ ಚರ್ಮದ ಸಮಸ್ಯೆಯೂ ಕಾಡುತ್ತದೆ. ಆದ್ದರಿಂದ ಈ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಮಳೆಗಾಲದಲ್ಲಿ ಏನು ಮಾಡಬೇಕು?

ಯಾವಾಗಲೂ ಹಗುರ ಮತ್ತು ಸಡಿಲ ಬಟ್ಟೆಗಳನ್ನು ಧರಿಸಿ. ಇದರಿಂದ ಚರ್ಮ ಸಮರ್ಪಕವಾಗಿ ಉಸಿರಾಡಲು ಸಾಧ್ಯವಾಗುತ್ತದೆ ಮತ್ತು ಚರ್ಮಕ್ಕೆ ಸೋಂಕು ತಗಲುವುದಿಲ್ಲ.

ಯಾವಾಗಲೂ ಚೆನ್ನಾಗಿ ಒಣಗಿದ ಮತ್ತು ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ. ಹೆಚ್ಚು ಬೆವರಿದರೆ ಕೆಲವೇ ಗಂಟೆಗಳಲ್ಲಿ ಬಟ್ಟೆ ಬದಲಾಯಿಸಿ.

ಸರಿಯಾದ ನೈರ್ಮಲ್ಯ ಅತ್ಯಗತ್ಯ. ಎರಡು ಬಾರಿ ಸ್ನಾನ ಮಾಡಿ, ಕೆಲವು ನಿಮಿಷಗಳ ಕಾಲ ಕೈಗಳನ್ನು ಸ್ವಚ್ಛಗೊಳಿಸಿ, ಉಗುರುಗಳನ್ನು ಕತ್ತರಿಸಿ.

ಟವೆಲ್, ನೇಲ್ ಕಟ್ಟರ್, ಲುಫಾ ಇತ್ಯಾದಿಗಳನ್ನು ಜನರೊಂದಿಗೆ ಹಂಚಿಕೊಳ್ಳಬೇಡಿ.

ಸಾರ್ವಜನಿಕ ಸ್ಥಳದಲ್ಲಿ ಯಾವಾಗಲೂ ಪಾದರಕ್ಷೆಗಳನ್ನು ಧರಿಸಿ. ಮನೆಯಲ್ಲಿಯೂ ಖಾಲಿ ಪಾದಗಳ ನಡಿಗೆಯನ್ನು ತಪ್ಪಿಸಿ.

ತೋಳಿನ ಕೆಳಗೆ ವಿಪರೀತ ಬೆವರುತ್ತಿದ್ದರೆ ಮತ್ತು ಅದರಿಂದ ಅಸಮಾಧಾನಗೊಂಡಿದ್ದರೆ, ಬೆವರು ಹೀರಿಕೊಳ್ಳುವ ಪ್ಯಾಚ್ ಅನ್ನು ಬಳಸಬಹುದು.

ಚರ್ಮದ ದದ್ದುಗಳಿದ್ದರೆ, ಬಾಧಿತ ಪ್ರದೇಶವನ್ನು ಸಾಧ್ಯವಾದಷ್ಟು ಒಣಗಿಸಿ ಸ್ವಚ್ಛವಾಗಿಡಿ.

ಬಾಧಿತ ಪ್ರದೇಶದಲ್ಲಿ ಆಂಟಿ ಫಂಗಲ್ ಅಥವಾ ಆಂಟಿ ಬ್ಯಾಕ್ಟೀರಿಯಾ ಕ್ರೀಮ್ ಬಳಸಿ. ಆ್ಯಂಟಿ ಸೆಪ್ಟಿಕ್ ಪೌಡರ್ ಬಳಸಬಹುದು.

ಐಸ್ ಪ್ಯಾಕ್ ಇಡಿ. ಇದು ಚರ್ಮದ ಮೇಲೆ ಕಿರಿಕಿರಿ, ತುರಿಕೆ, ದದ್ದು ಕಡಿಮೆ ಮಾಡುವುದು. ಇದರಿಂದ ನೋವು, ಕಿರಿಕಿರಿ ಕಡಿಮೆಯಾಗುತ್ತದೆ.

ದದ್ದುಗಳಿಗೆ ಅಂಟಿಕೊಳ್ಳದ ಹಗುರ ಬಟ್ಟೆ ಅಥವಾ ಹತ್ತಿ ಬಟ್ಟೆಗಳನ್ನು ಧರಿಸಿ.