ನವದೆಹಲಿ(ಮೇ.4): ಕೊರೋನಾ ವೈರಸ್ ನಡುವೆ ಭಾರತಕ್ಕೆ ಬ್ಲಾಕ್ ಫಂಗಸ್  ಆತಂಕ ಹೆಚ್ಚಿಸಿದೆ. ಈ ಆತಂಕದ ನಡುವೆ ಕೆಲ ಸುಳ್ಳು ಸುದ್ದಿ ಹಾಗೂ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಫಾರಂ ಕೋಳಿಯಿಂದ ಬ್ಲಾಕ್ ಫಂಗಸ್ ಹರಡುತ್ತಿದೆ ಅನ್ನೋ ವರದಿಯಿಂದ ಜನ ಬೆಚ್ಚಿ ಬಿದ್ದಿದ್ದರು. ಆದರೆ ಈ ವರದಿ ಸತ್ಯಕ್ಕೆ ದೂರವಾಗಿದೆ ಅನ್ನೋ ಮಾಹಿತಿ ಬಯಲಾಗಿದೆ.

ಮಿತಿಮೀರಿದ ಸ್ಟೀಮ್‌ನಿಂದಲೂ ಬ್ಲ್ಯಾಕ್‌ ಫಂಗಸ್‌..!

ಸಾಮಾಜಿಕ ಜಾಲತಾಣದಲ್ಲಿ ಫಾರಂ ಕೋಳಿಯಿಂದ ಬ್ಲಾಕ್ ಫಂಗಸ್ ಹರಡುತ್ತಿದೆ. ಕೋಳಿಯಿಂದ ಮನುಷ್ಯನ ದೇಹ ಸೇರಿಕೊಳ್ಳುತ್ತಿದೆ ಎಂಬ ವರದಿಗಳು ಹರಿದಾಡುತ್ತಿದೆ. ಈ ಕುರಿತ ಮಾಹಿತಿಯನ್ನು ಪಿಐಬಿ ಫ್ಯಾಕ್ಟ್ ಚೆಕ್ ಪರಿಶೀಲನೆ ನಡೆಸಿ ಸತ್ಯಾಸತ್ಯತೆಯನ್ನ ಬಯಲಿಗೆಳೆದಿದೆ.

ಫಾರಂ ಕೋಳಿಯಿಂದ ಮನುಷ್ಯನಲ್ಲಿ ಬ್ಲಾಕ್ ಫಂಗಸ್ ಹರಡುತ್ತಿದೆ ಅನ್ನೋ ವರದಿ ಸುಳ್ಳು. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಇದರಿಂದ ಜನ ಆತಂಕ ಪಡುವ ಅಗತ್ಯವಿಲ್ಲ. ಇದು ಆಧಾರ ರಹಿತ ಸುಳ್ಳು ಸುದ್ದಿಯಾಗಿದೆ ಎಂದು ಪಿಐಬಿ ಸ್ಪಷ್ಟಪಡಿಸಿದೆ.

 

ಬ್ಲ್ಯಾಕ್‌ ಫಂಗಸ್‌ ಸೋಂಕಿತರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ: ಸಚಿವ ಸುಧಾಕರ್‌

ಈ ರೀತಿ ಸುಳ್ಳು ಸುದ್ದಿಗಳ ಸತ್ಯಾಸತ್ಯತೆ ಅರಿಯದೆ ಯಾರೂ ಕೂಡ ಇತರರೊಂದಿಗೆ ಅಥವಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬಾರದು ಎಂದು ಪಿಐಬಿ ಮನವಿ ಮಾಡಿದೆ.