Health Tips : ಗುಟ್ಕಾ ಚಟ ಬಿಡಲು ಆಗ್ತಾನೇ ಇಲ್ವಾ? ಇಲ್ಲಿವೆ ಈಸಿ ವೇ, ಆಲ್ ದಿ ಬೆಸ್ಟ್
ಮನುಷ್ಯ ದುಷ್ಚಟಗಳಿಗೆ ದಾಸನಾದ್ರೆ ಆರೋಗ್ಯದ ಜೊತೆ ಸಂಬಂಧವೂ ಹಾಳಾಗುತ್ತದೆ. ತುಂಬಾಕು ಸೇವನೆ ಆರಂಭದಲ್ಲಿ ಮಜ ನೀಡಿದ್ರೂ ಕೆಟ್ಟ ಅಂತ್ಯಕ್ಕೆ ಕಾರಣವಾಗುತ್ತದೆ. ನಿಧಾನವಾಗಿ ನಿಮ್ಮನ್ನು ಕೊಲ್ಲುವ ಗುಟ್ಕಾಕ್ಕೆ ಇಂದೇ ವಿದಾಯ ಹೇಳಿ.
ಯಾವುದೇ ಒಂದು ಚಟ ಅಂಟಿಕೊಂಡ್ರೆ ಅದನ್ನು ಬಿಡೋದು ಸುಲಭವಲ್ಲ. ಅದ್ರಲ್ಲೂ ಮದ್ಯಪಾನ, ಧೂಮಪಾನ ಚಟದಿಂದ ಹೊರಗೆ ಬರಲು ಜನರು ಸಾಹಸ ಮಾಡ್ಬೇಕಾಗುತ್ತದೆ. ಈ ದುಷ್ಚಟಗಳಲ್ಲಿ ಗುಟ್ಕಾ ಕೂಡ ಸೇರಿದೆ. ಇಡೀ ದಿನ ಬಾಯಲ್ಲಿ ಗುಟ್ಕಾ ಇಟ್ಟುಕೊಳ್ಳುವ ಜನರಿಗೆ ಅದ್ರಿಂದ ಆರೋಗ್ಯ ಹಾಳಾಗುತ್ತೆ, ಕ್ಯಾನ್ಸರ್ ನಂತಹ ರೋಗ ಕಾಡುತ್ತೆ ಎಂಬುದು ತಿಳಿದಿದ್ರೂ ಬಿಡೋದು ಕಷ್ಟ. ಗುಟ್ಕಾ ಸೇರಿದಂತೆ ಯಾವುದೇ ತಂಬಾಕು ಸೇವನೆ ಮಾಡೋದಿಲ್ಲ ಎಂದು ದೃಢ ನಿರ್ಧಾರ ಮಾಡಿದ್ದರೆ ಬಿಡೋದು ಅತೀ ಕಷ್ಟವೇನಲ್ಲ. ನಾವಿಂದು ಗುಟ್ಕಾ ಬಿಡುವ ಸಂಕಲ್ಪ ಮಾಡಿದ್ದರೆ ಹೇಗೆ ಈ ದುಷ್ಚಟದಿಂದ ಹೊರಗೆ ಬರಬೇಕು ಅಂತಾ ಹೇಳ್ತೇವೆ.
ಗುಟ್ಕಾ (Gutka) ಬಿಡಲು ಈ ರೂಲ್ಸ್ ಫಾಲೋ ಮಾಡಿ :
ಸಂಕಲ್ಪ (Determination): ನಾನು ಗುಟ್ಕಾ ತ್ಯಜಿಸುತ್ತೇನೆ ಎಂಬ ಸಂಕಲ್ಪ ಬಹಳ ಮುಖ್ಯ. ಮನಸ್ಸು (Mind) ಮಾಡಿದ್ರೆ ಏನು ಬೇಕಾದ್ರೂ ಸಾಧಿಸಬಹುದು. ಮನಸ್ಸನ್ನು ಮೊದಲು ನೀವು ಗಟ್ಟಿಗೊಳಿಸಬೇಕು. ಮನಸ್ಸಿಗೆ ಬುದ್ಧಿವಾದ ಹೇಳ್ಬೇಕು. ಗುಟ್ಕಾ ತಿನ್ನುವುದ್ರಿಂದ ಏನೆಲ್ಲ ನಷ್ಟವಿದೆ ಎಂಬುದನ್ನು ನಿಮಗೆ ನೀವೇ ಮನವರಿಕೆ ಮಾಡಿಕೊಳ್ಳಬೇಕು. ಗುಟ್ಕಾ ಸೇವನೆ ಮಾಡೋದಿಲ್ಲ ಎನ್ನುವ ದೃಢ ಸಂಕಲ್ಪ ತೆಗೆದುಕೊಳ್ಳುವುದು ಮೊದಲ ಹೆಜ್ಜೆ.
Health Tips: ಬರೀ ಸ್ವೀಟ್ ತಿನ್ಬೇಕು ಅನ್ನಿಸುತ್ತಾ? ಈ ಹಣ್ಣು ತಿನ್ನಿ
ದಿನಾಂಕ ನಿಗದಿ (Deadline) : ಸಂಕಲ್ಪ ಮಾಡಿದ ಮೇಲೆ ದಿನಾಂಕವನ್ನು ನಿಗದಿ ಮಾಡಿ. ಎಂದಿನಿಂದ ನೀವು ಗುಟ್ಕಾ ಬಿಡಬೇಕು ಎಂಬುದಕ್ಕೆ ಒಂದು ದಿನ ಫಿಕ್ಸ್ ಮಾಡಿ. ನಾಳೆ ನಾಳೆ ಅಂತ ದಿನಾಂಕವನ್ನು ಯಾವುದೇ ಕಾರಣಕ್ಕೂ ಮುಂದೂಡಬೇಡಿ. ಆ ದಿನದಿಂದ ಗುಟ್ಕಾ ಸೇವನೆ ಮಾಡೋದಿಲ್ಲ ಎಂಬುದು ನಿಮ್ಮ ಮೈಂಡ್ ನಲ್ಲಿ ಫಿಕ್ಸ್ ಆದ್ರೆ ಮಾನಸಿಕ ತಯಾರಿ ಮಾಡಿಕೊಳ್ಳಬಹುದು.
ಪ್ರಚೋದನೆಗೆ ಕಾರಣ ಗುರುತಿಸಿ (Find out the reason for temptation): ಗುಟ್ಕಾವನ್ನು ನೀವು ಯಾವ ಸಂದರ್ಭದಲ್ಲಿ ಬಯಸುತ್ತೀರಿ ಎಂಬುದನ್ನು ಪತ್ತೆ ಮಾಡಿ. ಒತ್ತಡವಾದಾಗ, ಬೇಸರವಾದಾಗ, ಕೋಪ ಬಂದಾಗ, ಊಟವಾದಾಗ ಹೀಗೆ ಯಾವಾಗ ಎಂಬ ಪ್ರಶ್ನೆಗೆ ಉತ್ತರವನ್ನು ಪಟ್ಟಿ ಮಾಡಿ.
Frozen Shoulder ಸಮಸ್ಯೆಯನ್ನು ಇಗ್ನೋರ್ ಮಾಡಲೇಬೇಡಿ!
ಗುಟ್ಕಾ ಪರ್ಯಾಯವನ್ನು ಹುಡುಕಿ (Find Alternative) : ಗುಟ್ಕಾ ತಿನ್ನಬೇಕು ಎಂದಾಗ ಅದನ್ನು ಬಿಟ್ಟು ಆರೋಗ್ಯಕರವಾದದ್ದನ್ನು ಸೇವನೆ ಮಾಡಲು ಅಭ್ಯಾಸ ಮಾಡಿಕೊಳ್ಳಿ. ಯಾವುದು ನಿಮ್ಮ ಗುಟ್ಕಾ ಸ್ಥಾನವನ್ನು ತುಂಬಬಹುದು ಅಂತಾ ಪತ್ತೆ ಮಾಡಿ. ಮಾರುಕಟ್ಟೆಯಲ್ಲಿ ಕೆಲವೊಂದು ಔಷಧಿ ಲಭ್ಯವಿದೆ. ನೀವು ಶುಗರ್ ಫ್ರೀ ಚೂಯಿಂಗ್ ಗಮ್ ಬಳಸಬಹುದು.
ಸದಾ ಬ್ಯುಸಿಯಾಗಿರಿ (Keep Yourself Busy) : ಖಾಲಿ ಕುಳಿತಾಗ ಗುಟ್ಕಾ ಬಗ್ಗೆ ಆಲೋಚನೆ ಬರಬಹುದು. ಹಾಗಾಗಿ ಮನಸ್ಸು ಹಾಗೂ ದೇಹವನ್ನು ಖಾಲಿ ಬಿಡಬೇಡಿ. ಇಡೀ ದಿನ ಒಂದಿಲ್ಲೊಂದು ಕೆಲಸದಲ್ಲಿ ಮಗ್ನವಾಗಿರಿ. ಗುಟ್ಕಾ ಸೇವನೆಯತ್ತ ಮನಸ್ಸು ಸೆಳೆದಾಗೆಲ್ಲ ಆ ಜಾಗವನ್ನು ಬಿಟ್ಟು, ಮನಸ್ಸನ್ನು ಬೇರೆಡೆಗೆ ಎಳೆಯಿರಿ. ನಿಮ್ಮಿಷ್ಟದ ಹವ್ಯಾಸ, ವ್ಯಾಯಾಮ ಇದೆಲ್ಲವೂ ನಿಮಗೆ ಸಹಕಾರಿ.
ಒತ್ತಡ ನಿಯಂತ್ರಣ ಮುಖ್ಯ (Manage your Stress): ಗುಟ್ಕಾ ಬಿಡಬೇಕೆಂದು ನಿರ್ಧರಿಸದ ಮೇಲೆ ಕಾಡುವ ಒತ್ತಡದಿಂದ ನೀವು ಹೊರಗೆ ಬರಬೇಕು. ಏಕಾಏಕಿ ಗುಟ್ಕಾವನ್ನು ಸಂಪೂರ್ಣ ಬಿಡಲು ಸಾಧ್ಯವಾಗದೆ ಹೋಗಬಹುದು. ಆ ಸಂದರ್ಭದಲ್ಲಿ ಮನಸ್ಸನ್ನು ನಿಯಂತ್ರಿಸಿ, ಒತ್ತಡ ಕಡಿಮೆಮಾಡಿಕೊಳ್ಳಲು ನೀವು ಧ್ಯಾನದ ಮೊರೆ ಹೋಗ್ಬಹುದು.
ಆರೋಗ್ಯದ ಬಗ್ಗೆ ಗಮನವಿರಲಿ (Focus on Health) : ಗುಟ್ಕಾ ಅಥವಾ ತಂಬಾಕು ಬಿಟ್ಟ ಕೆಲ ದಿನ, ತಲೆಸುತ್ತು, ಕಿರಿಕಿರಿ, ಕಡುಬಯಕೆ ನಿಮ್ಮನ್ನು ಕಾಡಬಹುದು. ಆಗ ನೀವು ಧೈರ್ಯಗೆಡಬಾರದು. ಮತ್ತೆ ಗುಟ್ಕಾ ಸಹವಾಸಕ್ಕೆ ಬೀಳಬಾರದು. ಆರೋಗ್ಯ ರಕ್ಷಣೆಗೆ ಬೇರೆ ಏನು ಮಾಡ್ಬೇಕು ಎನ್ನುವುದನ್ನು ಆಲೋಚಿಸಬೇಕು.
ಸನ್ಮಾನ – ಸಹಾಯ (Encourage and Help): ಗುಟ್ಕಾ ಬಿಡುವ ನಿರ್ಧಾರ ಪೂರ್ಣವಾಗಲು ನೀವು ನಿಮ್ಮವರ ಸಹಾಯ ಪಡೆಯಬಹುದು. ಹಾಗೆಯೇ ಗುಟ್ಕಾವನ್ನು ತ್ಯಜಿಸಿದ ಸಮಯದಲ್ಲಿ ನಿಮ್ಮನ್ನು ನೀವು ಪ್ರೋತ್ಸಾಹಿಸಿಕೊಳ್ಳಲು ಉಡುಗೊರೆ ಕೊಟ್ಟುಕೊಳ್ಳಬಹುದು.