ಕರ್ನಾಟಕದಲ್ಲೂ ಕೂಡಾ ಬಿಜೆಪಿ ಕಾಲದಲ್ಲಿ ವಕ್ಫ್‌ ವಿಚಾರವಾಗಿ ನೋಟಿಸ್‌ ನೀಡಲಾಗಿದೆ. ಅದನ್ನು ಮರೆಮಾಚಿ ಇದೀಗ ವಕ್ಫ್‌ ವಿರುದ್ಧ ಹೋರಾಟ ನಡೆಸಲು ಬಿಜೆಪಿ ಮುಂದಾಗಿದೆ ಎಂದು ಸಚಿವ ಸಂತೋಷ್ ಲಾಡ್‌ ಕಿಡಿಕಾರಿದರು. 

ಧಾರವಾಡ (ನ.17): ಕರ್ನಾಟಕದಲ್ಲೂ ಕೂಡಾ ಬಿಜೆಪಿ ಕಾಲದಲ್ಲಿ ವಕ್ಫ್‌ ವಿಚಾರವಾಗಿ ನೋಟಿಸ್‌ ನೀಡಲಾಗಿದೆ. ಅದನ್ನು ಮರೆಮಾಚಿ ಇದೀಗ ವಕ್ಫ್‌ ವಿರುದ್ಧ ಹೋರಾಟ ನಡೆಸಲು ಬಿಜೆಪಿ ಮುಂದಾಗಿದೆ ಎಂದು ಸಚಿವ ಸಂತೋಷ್ ಲಾಡ್‌ ಕಿಡಿಕಾರಿದರು. ವಕ್ಫ್‌ ವಿರುದ್ಧ ಹೋರಾಟ ನಡೆಸಲು ಬಿಜೆಪಿ ತಂಡಗಳನ್ನು ರಚಿಸಿರುವ ಕುರಿತು ಪ್ರಶ್ನೆಗೆ ಸಚಿವರು ಉತ್ತರಿಸಿದರು. ರೈತರ ಪಹಣಿಯಲ್ಲಿ ವಕ್ಫ್‌ ಹೆಸರು ಇರುವ ಕುರಿತು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಹೀಗಿದ್ದರೂ ಬಿಜೆಪಿಯವರು ಏತಕ್ಕೆ ಹೋರಾಟ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ದೇಶದಲ್ಲಿ ನಿತ್ಯ ಒಂದಿಲ್ಲೊಂದು ಘಟನೆಗಳು ನಡೆಯುತ್ತಿವೆ. ಆ ಕುರಿತು ಬಿಜೆಪಿಗರು ಮಾತನಾಡುವುದಿಲ್ಲ. ಕೇವಲ ವಕ್ಫ್‌ ಹಾಗೂ ಮುಸ್ಲಿಮರ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದ ಲಾಡ್‌, ದಿನ ಬೆಳಗಾದರೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು. ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಅಗ್ನಿದುರಂತದಿಂದ 10 ಮಕ್ಕಳು ಸಜೀವ ದಹನವಾಗಿದ್ದಾರೆ. ಇದರ ಬಗ್ಗೆ ಏಕೆ ಬಿಜೆಪಿ ನಾಯಕರು ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.

ಮುಸ್ಲಿಮರ ಓಟು ಬೇಡವೆಂದ ಮೇಲೆ ಯಾಕೆ ಕೇಳ್ತೀರಿ: ಎಚ್‌ಡಿಕೆಗೆ ಜಮೀರ್‌ ತಿರುಗೇಟು

ಮಹಾರಾಷ್ಟ್ರ ಚುನಾವಣೆಯಲ್ಲಿ ವಕ್ಫ್‌ ವಿವಾದ ಪರಿಣಾಮ ಬೀರುವುದಿಲ್ಲವೇ ಎಂಬ ಪ್ರಶ್ನೆಗೆ, ಯಾವುದೇ ಪರಿಣಾಮ ಬೀರುವುದಿಲ್ಲ. ಅಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರೂ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಈ ಕುರಿತು ಯಾವುದೇ ಚರ್ಚೆಗಳು ಆಗುತ್ತಿಲ್ಲ ಎಂದು ಹೇಳಿದರು. ಬಿ. ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಲಾಗುವುದೇ ಎಂಬ ಪ್ರಶ್ನೆಗೆ, ಈ ಕುರಿತು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನಿರ್ಧರಿಸುತ್ತಾರೆ ಎಂದು ಹೇಳಿದರು.

ಬಸ್‌ ಬಿಡದಿದ್ದರೆ ಡಿಪೋ ಮುಚ್ಚಿ: ತಾಲೂಕಿನ ವಿವಿಧ ಗ್ರಾಮಗಳಿಗೆ ಸರಿಯಾಗಿ ಬಸ್‌ ಬಿಡದೆ ಹೋದರೆ ಬಸ್ ಡಿಪೋ ಮುಚ್ಚಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹುಬ್ಬಳ್ಳಿ-ಧಾರವಾಡ ಡಿಪೋ ಮ್ಯಾನೇಜರ್ ಅವರನ್ನು ತರಾಟೆಗೆ ತೆಗೆದುಕೊಂಡರು. ತಾಲೂಕು ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ಕಲಘಟಗಿಯಲ್ಲಿ ಬಸ್ ಡಿಪೋ ಮಾಡಿದರು ಸಮಸ್ಯೆ ಹೋಗಿಲ್ಲ. ಸಮರ್ಪಕ ಬಸ್‌ ಬಿಡದೆ ಇರುವು ಕುರಿತು ವಿವಿಧ ಗ್ರಾಮಗಳಿಂದ ದೂರು ಕೇಳಿ ಬರುತ್ತಿವೆ. ಡಿಪೋ ಕತ್ತೆ ಕಾಯಲು ಇಟ್ಟುಕೊಂಡಿದ್ದೇವಾ , ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಆಗ, ಅಧಿಕಾರಿಗಳು 55 ಸಿಬ್ಬಂದಿ ಗೈರು ಹಾಜರಿಯಿಂದ ಸಮಸ್ಯೆಯಾಗಿದೆ ಎಂದು ವಿವರಿಸಿದರು.

ಜಸ್ಟೀಸ್‌ ಡಿಕುನ್ಹಾ ವರದಿಯಲ್ಲಿ ಕೋವಿಡ್‌ ಅಕ್ರಮ ಸ್ಪಷ್ಟ ಉಲ್ಲೇಖ: ಸಚಿವ ದಿನೇಶ್‌ ಗುಂಡೂರಾವ್‌

ಹುಬ್ಬಳ್ಳಿಯಿಂದ ಸಂಜೆ 7 ಗಂಟೆ ಬಳಿಕ ಕಲಘಟಗಿಗೆ ಯಾವುದೇ ಬಸ್‌ ಸೌಕರ್ಯವಿಲ್ಲ ಎಂದು ದೂರು ಕೇಳಿ ಬಂದಾಗ ಅಧಿಕಾರಿಗಳು ತಾಲೂಕಿಗೆ ಹೊಸದಾಗಿ 10 ಬಸ್‌ ನೀಡಲಾಗಿದೆ ಎಂದರು. ಧಾರವಾಡ, ಅಳ್ನಾವರ ಮತ್ತು ಕಲಘಟಗಿ ತಾಲೂಕಿನಲ್ಲಿ ಕೋ-ಆಪರೇಟಿವ್ ಸೊಸೈಟಿ ಮತ್ತು ಫಾರ್ಮಿಂಗ್ ಸೊಸೈಟಿ ಜಮೀನುಗಳ ರೈತರಿಗೆ ಪಟ್ಟಾ ನೀಡಲಾಗುವುದು ಮತ್ತು ಬಗರ್‌ಹುಕಂನ 1521 ಅರ್ಜಿಗಳನ್ನು ಸರ್ವೇ ಮಾಡಿ ಪರಿಶೀಲಿಸಬೇಕು. ನನ್ನ ಜತೆ ಚರ್ಚಿಸದೆ ಯಾವ ಅರ್ಜಿಗಳನ್ನು ತಿರಸ್ಕರಿಸಬಾರದು ಎಂದು ತಹಸೀಲ್ದಾರ್‌ ವೀರೇಶ ಮುಳಗುಂದಮಠ ಅವರಿಗೆ ಸಚಿವರು ಖಡಕ್‌ ಸೂಚನೆ ನೀಡಿದರು.