Asianet Suvarna News Asianet Suvarna News

ಸಿಕಲ್ ಸೆಲ್ ಅನಿಮಿಯಾ ಅಂದ್ರೇನು?ಅ‍ಷ್ಟು ಗಂಭೀರ ಸಮಸ್ಯೆಯೇ?

ಇತ್ತೀಚೆಗೆ ಬೆಂಗಳೂರಿನ ಗುಣಶೀಲ ಆಸ್ಪತ್ರೆಯಲ್ಲಿ ಒಂದು ಯಶಸ್ವಿ ಪ್ರಯೋಗ ನಡೆಯಿತು. ಅದರಲ್ಲಿ ಸಿಕಲ್ ಸೆಲ್ ಸಮಸ್ಯೆಯಿದ್ದ ದಂಪತಿಯನ್ನು ಪ್ರಿ ಇಂಪ್ಲಾಂಟೇಶನ್ ಜೆನೆಟಿಕ್ ಡಯಾಗ್ನೋಸಿಸ್‌ಗೆ ಒಳಪಡಿಸಿ ರೋಗ ಮುಕ್ತ ಮಗುವಿಗೆ ಜನ್ಮ ನೀಡುವಂತೆ ಮಾಡಿದ್ದರು.

 

symptoms and causes of sickle cell anemia
Author
Bangalore, First Published Oct 21, 2019, 2:07 PM IST

ಪ್ರಿಯಾ ಕೆರ್ವಾಶೆ

ಹೀಗೆ ನಡೆದಿತ್ತು ಚಿಕಿತ್ಸೆ ಈ ಪ್ರಯೋಗದಲ್ಲಿ ಐವಿಎಫ್ ತಂತ್ರಜ್ಞಾನದ ಮೂಲಕ ದಂಪತಿಯ 11 ಭ್ರೂಣಗಳನ್ನು ಪ್ರಿ-ಇಂಪ್ಲಾಂಟೇಶನ್ ಜೆನೆಟಿಕ್ ಸ್ಕ್ರೀನಿಂಗ್ ಅಂದರೆ ಭ್ರೂಣವನ್ನು ಗರ್ಭಕೋಶಕ್ಕೆ ವರ್ಗಾಯಿಸುವ ಮುನ್ನ ವಂಶವಾಹಿನಿಯ ತಪಾಸಣೆಗೆ ಒಳಪಡಿಸಲಾಯಿತು. ಅವುಗಳ ಪೈಕಿ ಎಂಟು ಭ್ರೂಣಗಳ ಕ್ರೋಮೋಸೋಮ್‌ಗಳು ಮೇಲ್ನೋಟಕ್ಕೆ ಆರೋಗ್ಯವಂತವಾಗಿರುವಂತೆ ಕಾಣಿಸಿದವು.

ನಂತರ ಅವುಗಳನ್ನು ಪ್ರಿ-ಇಂಪ್ಲಾಂಟೇಶನ್ ಜೆನೆಟಿಕ್ ಡಯಾಗ್ನೋಸಿಸ್‌ಗೆ ಒಳಪಡಿಸಲಾಯಿತು. ಆಗ ಒಂದು ಭ್ರೂಣವಷ್ಟೇ ಆರೋಗ್ಯವಾಗಿರುವುದು ಪತ್ತೆಯಾಯಿತು. ನಾಲ್ಕು ಭ್ರೂಣಗಳು ತಂದೆ-ತಾಯಿಯ ವಂಶವಾಹಿನಿಯಿಂದ ಸಮಸ್ಯೆಯಿರುವ ವರ್ಣತಂತುಗಳನ್ನು ಹೊಂದಿದ್ದವು. ಮೂರು ಭ್ರೂಣಗಳು ಸಿಕಲ್ ಸೆಲ್ ರೋಗವನ್ನು ಹೊಂದಿದ್ದವು. ನಂತರ ಆ ಹೆಣ್ಮಗಳ ಗರ್ಭಕೋಶಕ್ಕೆ ಒಂದೇ ಆರೋಗ್ಯವಂತ ಭ್ರೂಣವನ್ನು ವರ್ಗಾವಣೆ ಮಾಡಲಾಯಿತು. ಕೊನೆಗೆ ಆಕೆ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದರು.

ಅಡ್ಡ ಪರಿಣಾಮ ಬೀರೋ ನಿದ್ರೆ ಮಾತ್ರೆಗಳು; ಮರೆವಿನಿಂದ ಚಿರನಿದ್ರೆವರೆಗೆ

ಈ ಮಗುವಿನಲ್ಲಿ ಅದರ ತಂದೆ-ತಾಯಿಯ ವಂಶವಾಹಿನಿಯಲ್ಲಿರುವ ಸಮಸ್ಯೆ ಇರಲಿಲ್ಲ. ಹೀಗಾಗಿ ಅದು ಸಿಕಲ್ ಸೆಲ್ ರೋಗವಿಲ್ಲದೆ ಆರೋಗ್ಯವಂತವಾಗಿ ಜನಿಸಿತ್ತು.

ಸಿಕಲ್ ಸೆಲ್ ಅಷ್ಟು ಗಂಭೀರ ಸಮಸ್ಯೆಯೇ?

ಹೌದು. ಜಗತ್ತಿನಾದ್ಯಂತ ಬಹಳ ಮಂದಿ ಈ ಸಮಸ್ಯೆಯಿಂದ ಒದ್ದಾಡುತ್ತಾರೆ. ಹುಟ್ಟಿನಿಂದ ಕೊನೆಯವರೆಗೂ ಕಾಡುವ ರೋಗವಿದು. ದುಂಡಗಿರಬೇಕಾದ ರಕ್ತ ಕಣಗಳ ಗಾತ್ರ ಈ ರೋಗಿಗಳಲ್ಲಿ ಕಡಗೋಲಿನಾಕಾರದಲ್ಲಿರುತ್ತದೆ.

ಇದರಿಂದ ರಕ್ತಕಣಗಳ ಬ್ಲಾಕೇಜ್‌ನಿಂದ ಹಿಡಿದು ಗಂಟುಗಳಲ್ಲಿ ಯಮಯಾತನೆಯವರೆಗೆ ಏನೆಲ್ಲ ಸಮಸ್ಯೆಗಳಾಗುತ್ತವೆ. ಜೊತೆಗೆ ಈ ರೋಗಿಗಳಲ್ಲಿ ಪ್ರತಿರೋಧ ಶಕ್ತಿ ಕಡಿಮೆ ಇರೋದರಿಂದ ಸಣ್ಣ ಪುಟ್ಟ ಇನ್‌ಫೆಕ್ಷನ್‌ಗಳೂ ಬಹಳ ತೀವ್ರವಾಗಿ ಕಾಡುತ್ತವೆ.

ನಿಮ್ಮ ಮನೆಯಲ್ಲೊಂದು ಬೋಳುಗುಂಡ ಇದ್ಯಾ? ಕೂದಲು ಉದುರುವುದಕ್ಕೆ ಕಾರಣಗಳಿವು

ಇತ್ತೀಚೆಗೆ ಸಿಕಲ್ ಸೆಲ್ ಅನೀಮಿಯಾದಿಂದ ಬಳಲುತ್ತಿದ್ದ ಸಿಲಿಯಾನಾ ಎಂಬ ಹೆಣ್ಣುಮಗಳು ಒಂದು ವೀಡಿಯೋ ಟ್ವೀಟ್ ಮಾಡಿದ್ದಳು.
ಲಿಂಕ್: https://twitter.com/ANGOLANCYNDY/status/1180951097051090944)

ಅದು ಆಕೆ ಸಿಕಲ್ ಸೆಲ್ ಸಮಸ್ಯೆಯಿಂದ ಒದ್ದಾಡುವ ವೀಡಿಯೋ. ‘ಈ ವೇದನೆಯ ತೀವ್ರತೆಯನ್ನು ಕಾಣದವರು ಅದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಹಾಗಾಗಿ ಈ ವೀಡಿಯೋ ಪೋಸ್ಟ್ ಮಾಡ್ತಿದ್ದೀನಿ. ಈ ನೋವು ಹೇಗಿರುತ್ತೆ ಅಂದರೆ ಸುತ್ತಿಗೆ ತಗೊಂಡು ಮೂಳೆಯನ್ನೆಲ್ಲ ಗುದ್ದಿ ಪುಡಿ ಮಾಡಿದ ಹಾಗೆ. ಎದೆಯ ಭಾಗಕ್ಕೆ ಇಟ್ಟಿಗೆಯನ್ನು ಹೊತ್ಹಾಕಿದ ಹಾಗೆ..’ ಅಂತಾಳೆ ಈಕೆ. ಬಳಿಕ ಈ ವೀಡಿಯೋ ಜಗತ್ತಿನಾದ್ಯಂತ ವೈರಲ್ ಆಯ್ತು. ಈ ಮೂಲಕ ಒಂದಿಷ್ಟು ಜನಕ್ಕೆ ಈ ಸಮಸ್ಯೆ ಬಗ್ಗೆ ಹೀಗಿರಬಹುದು ಎಂಬ ಕಲ್ಪನೆ ಬಂತು.

ಈ ಕಪ್ಪಿಂಗ್ ಥೆರಪಿಗೆ ಸೆಲೆಬ್ರಿಟಿಗಳು ಫುಲ್ ಫಿದಾ!

ಸಿಕಲ್ ಸೆಲ್ ಸಮಸ್ಯೆಯಲ್ಲೇನಾಗುತ್ತೆ?

ರಕ್ತದಲ್ಲಿರುವ ಪ್ರಮುಖ ಪ್ರೊಟೀನ್ ಹಿಮೋಗ್ಲೋಬಿನ್ ನಮ್ಮ ಶ್ವಾಸಕೋಶದಿಂದ ದೇಹದ ಜೀವಕೋಶಗಳಿಗೆ ಆಮ್ಲಜನಕವನ್ನೂ ಮತ್ತು ಜೀವಕೋಶಗಳಿಂದ ಶ್ವಾಸಕೋಶಕ್ಕೆ ಇಂಗಾಲದ ಡೈ ಆಕ್ಸೈಡನ್ನೂ ಪೂರೈಕೆ ಮಾಡುತ್ತದೆ. ಸಿಕಲ್ ಸೆಲ್ ಸಮಸ್ಯೆಯಿರುವವರಲ್ಲಿ ರಕ್ತಕ್ಕೆ ಆಮ್ಲಜನಕದ ಪೂರೈಕೆ ಕಡಿಮೆಯಾದಾಗ ಸಾಮಾನ್ಯ ಸ್ಥಿತಿಯಲ್ಲಿ ಗೋಲಾಕಾರದಲ್ಲಿರುವ ಕೆಂಪು ರಕ್ತ ಕಣಗಳು ಕುಡಗೋಲಿನ ಆಕಾರ ಪಡೆಯುತ್ತವೆ.

ಇದರಿಂದ ಜೀವಕೋಶಗಳಿಗೆ ಆಮ್ಲಜನಕ ಸರಿಯಾಗಿ ಪೂರೈಕೆಯಾಗದೇ ಅವು ಆಮ್ಲಜನಕಕ್ಕಾಗಿ ಹಾತೊರೆಯುತ್ತವೆ. ಕೆಲ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟತೊಡಗುತ್ತದೆ. ಇದರಿಂದ ಅಂಗಗಳು ಹಾನಿಗೀಡಾಗುತ್ತವೆ. ಆಗ ತೀವ್ರ ನೋವು ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗ ಹೊಟ್ಟೆಯ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ನೋವು ಅತ್ಯಂತ ತೀವ್ರವಾಗಿರಬಹುದು. ಶ್ವಾಸಕೋಶ, ಮೂತ್ರಪಿಂಡ ಹೀಗೆ ಬೇರೆ ಬೇರೆ ಕಡೆ ಹರಡಬಹುದು.

ಕ್ವೀನ್ ಬೀ ಸಿಂಡ್ರೋಮ್ ಬಗ್ಗೆ ಕೇಳಿದ್ದೀರಾ?

20 ವರ್ಷದೊಳಗೇ ಪಾರ್ಶ್ವವಾಯು ಅಟ್ಯಾಕ್ ಆಗಬಹುದು. ನ್ಯುಮೋನಿಯಾ, ಮಲೇರಿಯಾ ಇತ್ಯಾದಿ ಸಮಸ್ಯೆಗಳು ಸಾಮಾನ್ಯ. ಮಕ್ಕಳಲ್ಲಿ ಈ ನೋವು ಸಾಮಾನ್ಯವಾಗಿ ಕೈ ಮತ್ತು ಕಾಲುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇದರಿಂದ ಮೂಳೆಗಳು ಸರಿಯಾಗಿ ಬೆಳವಣಿಗೆಯಾಗದಿರಬಹುದು. ಸಿಕಲ್ ಸೆಲ್ ರೋಗದಿಂದ ಉಂಟಾಗುವ ನೋವು ಎಷ್ಟು ಗಂಭೀರವಾಗಿ ಇರಬಹುದು ಅಂದರೆ ಒಮ್ಮೊಮ್ಮೆ ವ್ಯಕ್ತಿ ಇದ್ದಕ್ಕಿದ್ದಂತೆ ಮರಣ ಹೊಂದಬಹುದು, ದೇಹದಲ್ಲಿ ಬಹು ಅಂಗಾಂಗಗಳ ವೈಫಲ್ಯ ಉಂಟಾಗಬಹುದು. ರಕ್ತದಲ್ಲಿ ಪ್ಲೇಟ್ ಲೆಟ್‌ಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಬಹುದು.

ತೀವ್ರತರ ದೈಹಿಕ ನೋವು ಬದುಕನ್ನೇ ಹೈರಾಣ ಮಾಡಿಬಿಡುತ್ತದೆ. ಸಿಕಲ್ ಸೆಲ್ ರೋಗ ತೀರಾ ಮುಂದಿನ ಹಂತಕ್ಕೆ ಹೋಗಿದ್ದರೆ ರೋಗಿಯ ದೇಹದ ರಕ್ತವನ್ನು ಪದೇಪದೇ ಬದಲಾಯಿಸಬೇಕಾಗುತ್ತದೆ. ಆದರೆ ರಕ್ತ ಬದಲಾವಣೆಯಿಂದ ಬೇರೆ ಬೇರೆ ಅಡ್ಡಪರಿಣಾಮಗಳೂ ಉಂಟಾಗಬಹುದು. ಸಿಕಲ್ ಸೆಲ್ ರೋಗಿಗಳ ಜೀವಿತಾವಧಿ ಇನ್ನಿತರ ಜನಸಾಮಾನ್ಯರಿಗಿಂತ ಕಡಿಮೆ. ಸರಾಸರಿ 42 ಹಾಗೂ 48 ವರ್ಷ ಬದುಕುತ್ತಾರೆ ಎಂದು ಅಧ್ಯಯನಗಳು ಹೇಳುತ್ತವೆ.
 

Follow Us:
Download App:
  • android
  • ios