ನಿಮಗೆ ಲೇಡಿ ಬಾಸ್ ಇದ್ರೆ ಗೊತ್ತಿರೋದು, ಕ್ವೀನ್ ಬೀ ಸಿಂಡ್ರೋಮ್ ಏನೂಂತ. ರಾಣಿ ಜೇನು ಉಳಿದೆಲ್ಲ ಜೇನುಗಳನ್ನು ಹೇಗೆ ಸೇವಕರಂತೆ ನಡೆಸಿಕೊಳ್ಳುತ್ತದೆಯೋ ಈ ಲೇಡಿ ಬಾಸ್ ಕೂಡಾ ಹಾಗೆ, ಅದರಲ್ಲೂ ಲೇಡಿ ಎಂಪ್ಲಾಯಿಗಳನ್ನಂತೂ ಹುರಿದು ತಿನ್ನೋದೊಂದು ಬಾಕಿ. ಇದನ್ನೇ ಕ್ವೀನ್ ಬೀ ಸಿಂಡ್ರೋಮ್ ಎನ್ನೋದು. ಹಾಗಂಥ ಎಲ್ಲ ಲೇಡಿ ಬಾಸ್‌ಗಳೂ ಹೀಗೇ ಅಂಥಲ್ಲ. ಆದರೆ ಒಂದಿಷ್ಟು ಫೀಮೇಲ್ ಮೇಲಧಿಕಾರಿಗೆ ನಾನೇ ಮೇಲು ಎಂಬುದಿರೋದಂತೂ ಹೌದು. 

ಡೆಂಗ್ಯೂನಿಂದ ಬದುಕುಳಿದವರೊಂದಿಗೊಂದು ಮಾತು ಕಥೆ

ಈ ಬಗ್ಗೆ 1973ರಲ್ಲಿ ಸಂಶೋಧನೆ ನಡೆಸಿದ ಜಿ.ಎಲ್.ಸ್ಟೇನ್ಸ್, ಟಿ.ಇ.ಜಯರತ್ನೆ ಹಾಗೂ ಸಿ ಟ್ರಾವಿಸ್, ಕ್ವೀ ಬೀ ಸಿಂಡ್ರೋಮ್ ಎಂಬುದು ಅಧಿಕಾರದಲ್ಲಿರುವ ಮಹಿಳೆ ತನಗಿಂತ ಕೆಳಗಿನ ಪೊಸಿಶನ್‌ನಲ್ಲಿರುವವರನ್ನು ಕಡೆಗಣಿಸುವುದು, ಅತಿಯಾದ ಸ್ಟ್ರಿಕ್ಟ್ ಆಗಿ ನಡೆದುಕೊಳ್ಳುವುದು. ಅದರಲ್ಲೂ ಮಹಿಳಾ ಉದ್ಯೋಗಿಗಳ ಬಗ್ಗೆ ಈ ಅಸಹನೆ ಹೆಚ್ಚು ಎಂದು ತಿಳಿಸಿದ್ದಾರೆ. 
ಮುಂದುವರಿದು, ಕಂಪನಿಗಳಲ್ಲಿ ಸೀನಿಯರ್ ಪೊಸಿಶನ್‌ನಲ್ಲಿರುವ ಮಹಿಳೆಯರು ಬೇರೆ ಮಹಿಳೆಯರನ್ನು ಬೆಂಬಲಿಸುವಲ್ಲಿ ಸೋಲುವುದಷ್ಟೇ ಅಲ್ಲ, ಅವರ ಮೇಲೆ ಹಾಗೂ ಅವರ ಉದ್ಯೋಗದ ಮೇಲೆ ನೆಗೆಟಿವ್ ಇಂಪ್ಯಾಕ್ಟ್ ಬೀರುತ್ತಾರೆ ಎಂದು ಈ ವಿಜ್ಞಾನಿಗಳು ತಿಳಿದ್ದಾರೆ.

ಏಷ್ಯನ್ ಮಕ್ಕಳಿಗೆ ಅಪಾಯಕಾರಿಯಾಗುತ್ತಿರುವ ಇನ್ಸ್‌ಟ್ಯಾಂಟ್ ನೂಡಲ್ಸ್!

ಇವರ ಥಿಯರಿ ಪ್ರಕಟವಾದ ಬಳಿಕ ಕ್ವೀನ್ ಬೀ ಸಿಂಡ್ರೋಮ್ ಮೇಲೆ ಬಹಳಷ್ಟು ಅಧ್ಯಯನಗಳು ನಡೆದಿವೆ. ಅರ್ಧದಷ್ಟು ಅಧ್ಯಯನ ಹೌದು, ಈ ಸಿಂಡ್ರೋಮ್ ಇದೆ ಎಂದರೆ, ಮತ್ತೆ ಅರ್ಧದಷ್ಟು ಅಧ್ಯಯನ ಅದರ ಇರುವಿಕೆಯನ್ನು ಅಲ್ಲಗಳೆದಿವೆ. 

ಶಾಲೆಗಳಲ್ಲಿ ನಾನೇ ಮೇಲು ಎಂದು ಮೆರೆವ ಆ ಕೆಲ ಹುಡುಗಿಯರೇ ದೊಡ್ಡವರಾಗಿ ಕಚೇರಿಯಲ್ಲಿ ಬಾಸಿಸಂ ಮಾಡಲು ನಿಂತಂತೆನಿಸುತ್ತದೆ ಈ ಕ್ವೀನ್ ಬೀಗಳನ್ನು ನೋಡಿದರೆ. ಬೇರೆ ಮಹಿಳಾ ಉದ್ಯೋಗಿಗಳ ಬಗ್ಗೆ ಗಾಸಿಪ್ ಮಾಡುವುದು, ಅವರನ್ನು ಒಂಟಿಯಾಗಿಸುವುದು, ಅವರಿಗೆ ಕೆಲಸವೇ ಬರುವುದಿಲ್ಲ ಎಂಬಂತೆ ಬಿಂಬಿಸುವುದು, ಅವರ ಮೇಲೆ ರೇಗಾಡುವುದು ಇವರ ಅಭ್ಯಾಸ. ಇವರು ಸಾಮಾನ್ಯವಾಗಿ ತಮಗಿಂತ ಸಣ್ಣ ವಯಸ್ಸಿನ ಮಹಿಲೆಯರನ್ನು ಸ್ಪರ್ಧಿಗಳಂತೆ ಭಾವಿಸಿ ಅವರಿಗೆ ಸಹಾಯ ಮಾಡಲು ನಿರಾಕರಿಸುತ್ತಿರುತ್ತಾರೆ.

ಹಲ್ಲುಗಳಿಗೆ ಬ್ಯಾಟರಿ ಆ್ಯಸಿಡ್‌ನಷ್ಟೇ ಕ್ರೂರ ಹುಳಿ ಕ್ಯಾಂಡಿಗಳು !

ಬದಲಿಗೆ ಪುರುಷ ಉದ್ಯೋಗಿಗಳಿಗೆ ತರಬೇತಿ ನೀಡಲು ಅವರು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಹಾಗಂಥ ಪುರುಷ ಉದ್ಯೋಗಿಗಳು ಕೂಡಾ ಈ ಅರಿಝೋನಾ ಯೂನಿವರ್ಸಿಟಿ ಈ ಕುರಿತ ಅಧ್ಯಯನ ನಡೆಸಿದ್ದು, ಅದರ ವರದಿ ಕೂಡಾ ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಿಂದಲೇ ಹೆಚ್ಚು ಕಿರುಕುಳವಾಗಿದೆ ಎಂದು ತಿಳಿದುಬಂದಿದೆ. 

 

ಅಧ್ಯಯನ ನಡೆಸಿದ್ದು ಹೇಗೆ?
ಕಳೆದ ವರ್ಷ ಅರಿಝೋನಾ ವಿಶ್ವವಿದ್ಯಾಲಯದ ಸಂಶೋಧಕರು ಈ ಕುರಿತು ಮೂರು ರೀತಿಯ ಅಧ್ಯಯನ ನಡೆಸಿದ್ದಾರೆ. ಅಧ್ಯಯನದಲ್ಲಿ ಫುಲ್ ಟೈಂ ಉದ್ಯೋಗದಲ್ಲಿರುವ ಮಹಿಳೆಯರು ಹಾಗೂ ಪುರುಷರೆಲ್ಲರೂ ಭಾಗವಹಿಸಿ ಸಹೋದ್ಯೋಗಿಗಳ ಕುರಿತ ಪ್ರಶ್ನಾವಳಿಗೆ ಉತ್ತರ ನೀಡಿದ್ದರು. ಅದರಂತೆ ಕಚೇರಿಯಲ್ಲಿ ತಮ್ಮ ಮೇಲೆ ಅತಿಯಾಗಿ ಅವಹೇಳನಕಾರಿ ಮಾತುಗಳನ್ನಾಡಿದವರು, ಇತರರೆದು ನೆಗ್ಲೆಕ್ಟ್ ಮಾಡಿದವರು, ತಮ್ಮಲ್ಲಿ ಕೀಳರಿಮೆ ಹುಟ್ಟಿಸಬೇಕೆಂದೇ ಕೆಟ್ಟದಾಗಿ ನಡೆಸಿಕೊಂಡವರು ಮುಂತಾದವರ ಕುರಿತು ಪ್ರಶ್ನೆಗಳಿದ್ದವು.

ಫಲವತ್ತತೆ ಹೆಚ್ಚಿಸುವ ಆಹಾರಗಳಿವು!

ಡೆವಲಪ್ಮೆಂಟ್ ಆ್ಯಂಡ್ ಲರ್ನಿಂಗ್ ಇನ್ ಆರ್ಗನೈಸೇಶನ್ ಎಂಬ ಜರ್ನಲ್‌ನಲ್ಲಿ ಪ್ರಕಟವಾಗಿರುವ ಮತ್ತೊಂದು ಅಧ್ಯಯನದಂತೆ ಶೇ.70ರಷ್ಟು ಮಹಿಳಾ ಉದ್ಯೋಗಿಗಳು ತಾವು ಸಂಸ್ಥೆಯಲ್ಲಿ ಮಹಿಳಾ ಬಾಸ್‌ನಿಂದ ತುಳಿತಕ್ಕೊಳಗಾಗಿರುವುದಾಗಿ ಹೇಳಿದ್ದಾರೆ. ಇದು ತಮ್ಮ ಪ್ರೊಫೆಶನಲ್ ಜೀವನದ ಬೆಳವಣಿಗೆಯ ಕುಂಠಿತಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ. 

ಮಹಿಳಾ ಉದ್ಯೋಗಿಗಳು ಕೆಲಸ ಬಿಡುವುದು ಹೆಚ್ಚು

ಮಹಿಳಾ ಬಾಸ್‌ಗಳಿದ್ದಾಗ, ಅದರಲ್ಲೂ ಅವರಿಗೆ ಕ್ವೀನ್ ಬೀ ಸಿಂಡ್ರೋಮ್ ಇದ್ದಾಗ ಕಂಪನಿಯ ಮಹಿಳೆಯರಲ್ಲಿ ಜಾಬ್ ಸ್ಯಾಟಿಸ್‌ಫ್ಯಾಕ್ಷನ್ ಇರುವುದಿಲ್ಲ, ಅಷ್ಟೇ ಅಲ್ಲ, ಈ ಕಾರಣಕ್ಕಾಗಿ ಅವರು ಕೆಲಸ ಬಿಡುವ ಸಾಧ್ಯತೆಗಳು ಹೆಚ್ಚು ಎಂದು ಸಂಶೋಧಕರು ತಿಳಿಸಿದ್ದಾರೆ. 

ನಾಲಿಗೆ ಕುಲ ಹೇಳಿದ್ರೆ, ಅದರ ಬಣ್ಣ ಆರೋಗ್ಯ ಹೇಳುತ್ತೆ!

ಸೀನಿಯರ್ ಮಹಿಳೆಯರಿದನ್ನು ಒಪ್ಪಲ್ಲ

ಈ ಸಿಂಡ್ರೋಮ್ ಬಗ್ಗೆ ಹಲವು ಅಧ್ಯಯನಗಳು ನಡೆದು ಯಾರು ಏನೆಂದರೂ ಕಚೇರಿಯ ಮಹಿಳಾ ಬಾಸ್‌ಗಳು ಮಾತ್ರ ಇದನ್ನು ಪೂರ್ತಿ ಅಲ್ಲಗೆಳೆಯುತ್ತಾರೆ. ಆಬ್ವಿಯಸ್ಲಿ ಅಲ್ಲವೇ ?