ಇಲ್ಲೊಂದು ಕಡೆ ಗರ್ಭಾಶಯದ ಕೆಳಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ಹೋಗಿದ್ದ 82 ವರ್ಷದ ಮಹಿಳೆಗೆ ತೀವ್ರ ಆಘಾತ ಕಾದಿತ್ತು.ಆಕೆಗೆ ಸ್ಕ್ಯಾನಿಂಗ್ ಮಾಡಿದ ವೈದ್ಯರು ಕೂಡ ಆಘಾತಗೊಂಡಿದ್ದರು. ಕಾರಣ ಆಕೆಯ ಫೆಲ್ವಿಕ್‌ನಲ್ಲಿ ಸ್ಟೋನ್ ಬೇಬಿ ಎಂದು ಕರೆಯುವ ಮಗುವಿತ್ತು.

ಕೆಲವೊಂದು ಘಟನೆಗಳನ್ನು ನಂಬುವುದಕ್ಕೆ ಅಸಾಧ್ಯವಾಗುತ್ತದೆ. ಅದರಲ್ಲೂ ವೈದ್ಯಕೀಯ ಪ್ರಕರಣಗಳಲ್ಲಿ ಹೀಗೂ ಆಗಬಹುದು ಎಂಬ ಅರಿವು ಸ್ವತಃ ವೈದ್ಯರಿಗೂ ಇರುವುದಿಲ್ಲ. ಏಕೆಂದರೆ ಈ ರೀತಿಯ ವೈದ್ಯಕೀಯ ಪ್ರಕರಣಗಳನ್ನೂ ವೈದ್ಯರಾದವರು ಕೂಡ ಮೊದಲ ಬಾರಿ ನೋಡಿರುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಗರ್ಭಾಶಯದ ಕೆಳಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ಹೋಗಿದ್ದ 82 ವರ್ಷದ ಮಹಿಳೆಗೆ ತೀವ್ರ ಆಘಾತ ಕಾದಿತ್ತು.

ಆಕೆಗೆ ಸ್ಕ್ಯಾನಿಂಗ್ ಮಾಡಿದ ವೈದ್ಯರು ಕೂಡ ಆಘಾತಗೊಂಡಿದ್ದರು. ಕಾರಣ ಆಕೆಯ ಫೆಲ್ವಿಕ್‌ನಲ್ಲಿ ಸ್ಟೋನ್ ಬೇಬಿ ಎಂದು ಕರೆಯುವ ಮಗುವಿತ್ತು. ಅಂದರೆ ಈ ಮಗು ಇದ್ದಿದ್ದು, ಗರ್ಭದಲ್ಲಿ ಅಲ್ಲ, ಬದಲಾಗಿ ಪೆಲ್ವಿಕ್‌ನಲ್ಲಿ ಅಂದರೆ ಸೊಂಟ, ಬೆನ್ನುಮೂಳೆಯ ಬುಡದಲ್ಲಿರುವ ಮೂಳೆಗಳ ಜಾಯಿಂಟ್‌ನ ಮಧ್ಯೆ ಈ ಸ್ಟೋನ್ ಬೇಬಿ ಇತ್ತು. ಹಾಗಂತ ಇದ್ದು ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದ್ದಲ್ಲ, ಸುಮಾರು 40 ವರ್ಷಗಳಿಂದ ಈ ಸ್ಟೋನ್ ಬೇಬಿಯನ್ನು ಮಹಿಳೆ ದೇಹದೊಳಗೆ ಇಟ್ಟುಕೊಂಡಿದ್ದಳು ಎಂದು ವೈದ್ಯರು ಹೇಳಿದ್ದಾರೆ.

ಟೆಲಿಗ್ರಾಫ್ ವರದಿಯ ಪ್ರಕಾರ, 82 ವರ್ಷದ ಕೊಲಂಬಿಯಾದ ವೃದ್ಧರು ಹಲವು ದಶಕಗಳಿಂದ ಲಿಥೋಪೀಡಿಯನ್ ಎಂದು ಕರೆಯಲ್ಪಡುವ ಕ್ಯಾಲ್ಸಿಯಂ ಭರಿತ ನಾಲ್ಕು ಪೌಂಡ್ ಭ್ರೂಣವನ್ನು ಅದು ಇದೇ ಎಂಬುದರ ಅರಿವಿಲ್ಲದೆ ತಮ್ಮ ದೇಹದಲ್ಲಿ ಹೊತ್ತುಕೊಂಡಿದ್ದರು. ಮಹಿಳೆಗೆ ಎಕ್ಸ್‌ರೇ ಮಾಡಿದ ನಂತರವೇ ವೈದ್ಯರಿಗೆ ಈ ಕಲ್ಲಿನ ಮಗು ಎಂದೂ ಕರೆಯಲ್ಪಡುವ ಈ ಲಿಥೋಪೀಡಿಯನ್ ಬಗ್ಗೆ ತಿಳಿದಿದೆ. ನಂತರ ಶಸ್ತ್ರಚಿಕಿತ್ಸೆ ನಡೆಸಿ ಅದನ್ನು ಹೊರತೆಗೆಯಲಾಯ್ತು. ವೈದ್ಯ ಗಾರ್ಸಿ ಎಂಬುವವರು ಈ ಬಗ್ಗೆ ಮಾತನಾಡಿ, ಗರ್ಭಾಶಯದಲ್ಲಿ ಗರ್ಭಧಾರಣೆಯಾಗುವ ಬದಲು ಹೊಟ್ಟೆಯಲ್ಲಿ ಗರ್ಭಧಾರಣೆಯಾಗಿದ್ದರಿಂದ ಈ ಸ್ಟೋನ್ ಬೇಬಿ ಅಥವಾ ಲಿಥೋಪೀಡಿಯನ್ ರಚನೆಯಾಗುತ್ತದೆ ಎಂದು ಹೇಳುತ್ತಾರೆ. ಗರ್ಭಾವಸ್ಥೆಯು ಅಂತಿಮವಾಗಿ ವಿಫಲವಾದಾಗ, ಸಾಮಾನ್ಯವಾಗಿ ಭ್ರೂಣಕ್ಕೆ ಸಾಕಷ್ಟು ರಕ್ತ ಪೂರೈಕೆ ಇಲ್ಲದ ಕಾರಣ, ದೇಹವು ಭ್ರೂಣವನ್ನು ಹೊರಹಾಕಲು ಯಾವುದೇ ಮಾರ್ಗವಿಲ್ಲದೇ ಹೋದಾಗ ಈ ಸ್ಥಿತಿ ರೂಪುಗೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

ಪರಿಣಾಮವಾಗಿ ದೇಹವು ಈ ಭ್ರೂಣವನ್ನು ಕಲ್ಲು ಆಗಿ ಪರಿವರ್ತಿಸುತ್ತದೆ. ದೇಹದ ಒಳಗೆ ಪತ್ತೆಯಾದ ಯಾವುದೇ ವಿದೇಶಿ ವಸ್ತುವಿನಿಂದ ದೇಹವನ್ನು ರಕ್ಷಿಸುವ ಅದೇ ರೋಗನಿರೋಧಕ ಪ್ರಕ್ರಿಯೆಯನ್ನು ದೇಹವೂ ಈ ಸ್ಟೋನ್ ಬೇಬಿ ಪ್ರಕ್ರಿಯೆಗೆ ಬಳಸುತ್ತದೆ. ಇದು ವಿಚಿತ್ರವಾಗಿ ಕಾಣಿಸಬಹುದು. ಆದರೆ ಈ ಪ್ರಕ್ರಿಯೆಯಿಂದ ದೇಹ ನಿರಂತರವಾಗಿ ಆರೋಗ್ಯವಾಗಿರುತ್ತದೆ ಎಂದು ಗಾರ್ಸಿ ಹೇಳಿದ್ದಾರೆ. ಮೊಣಕಾಲಿನಲ್ಲಿ ಹಳೆಯ ಕಾರ್ಟಿಲೆಜ್ ಸಿಕ್ಕಾಗ, ಅದು ಕ್ಯಾಲ್ಸಿಫೈ ಆಗುತ್ತದೆ. ಅದೇ ರೀತಿ ಅಂಗಾಂಶದ ಕ್ಯಾಲ್ಸಿಫಿಕೇಶನ್ ತಾಯಿಯನ್ನು ಸೋಂಕಿನಿಂದ ರಕ್ಷಿಸುತ್ತದೆ. ಹೀಗಾಗಿಯೇ ಈ ಸ್ಟೋನ್ ಬೇಬಿ ದಶಕಗಳವರೆಗೆ ಹೊಟ್ಟೆಯಲ್ಲಿ ಪತ್ತೆಯಾಗದೆ ಉಳಿಯುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಹೆಂಡ್ತಿಗೆ ಹೆರಿಗೆ ನೋವು: ಆಸ್ಪತ್ರೆಗೆ ಕರೆದೊಯ್ಯುವ ಗೊಂದಲದಲ್ಲಿ ಆಕೆಯನ್ನೇ ಬಿಟ್ಟು ಹೋದ ಗಡಿಬಿಡಿ ಗಂಡ

ಹೆಚ್ಚಿನ ಸಂದರ್ಭದಲ್ಲಿ ಇದರ ಬಗ್ಗೆ ಗೊತ್ತಾಗುತ್ತದೆ. ಆದರೆ ಅದು ಇದೆ ಎಂಬುದು ಗೊತ್ತಾದ ನಂತರವೂ ಸಹ ಅವು ಸಂಪೂರ್ಣವಾಗಿ ಯಾವುದೇಸೂಚನೆಗಳಿಲ್ಲದೇ ಇರುತ್ತದೆ. ಈ ರೀತಿ ಕಿಬ್ಬೊಟ್ಟೆಯ ಗರ್ಭಧಾರಣೆಯ ಪ್ರಮಾಣವೂ 10,000 ಗರ್ಭಧಾರಣೆಯಲ್ಲಿ ಒಬ್ಬರಿಗೆ ಸಂಭವಿಸುತ್ತದೆ ಎಂದು ಗಾರ್ಸಿ ಹೇಳಿದ್ದರು. ಅಂದಹಾಗೆ ಈ ಘಟನೆ ನಡೆದಿರುವುದು ಬರೋಬ್ಬರಿ 13 ವರ್ಷಗಳ ಹಿಂದೆ ಆದರೆ ಈ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದ್ದು ಈ ರೀತಿಯೂ ಒಂದು ಘಟನೆ ನಡೆಯುತ್ತದೆ ಎಂದು ಕೇಳಿದ ಅನೇಕರು ಅಚ್ಚರಿ ಆಘಾತ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಸಿಎಂ ಯೋಗಿ ಆದಿತ್ಯನಾಥ್ ರೀತಿ ಮಾತನಾಡಿ ಸರ್ಕಾರಿ ಶಾಲಾ ಶಿಕ್ಷಕಿ ಅಳುವಂತೆ ಮಾಡಿದ ಯುವಕ