ಸಿಎಂ ಯೋಗಿ ಆದಿತ್ಯನಾಥ್ ರೀತಿ ಮಾತನಾಡಿ ಸರ್ಕಾರಿ ಶಾಲಾ ಶಿಕ್ಷಕಿ ಅಳುವಂತೆ ಮಾಡಿದ ಯುವಕ: ವೀಡಿಯೋ
ಮಿಮಿಕ್ರಿ ಕಲಾವಿದರೊಬ್ಬರು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಧ್ವನಿ ನಕಲು ಮಾಡಿ ಕರ್ತವ್ಯಲೋಪ ಎಸಗಿದ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರಿಗೆ ಕ್ಲಾಸ್ ತೆಗೆದುಕೊಂಡಿದ್ದು, ಈ ಘಟನೆಯ ಆಡಿಯೋ ವೈರಲ್ ಆಗಿದೆ.

ಯೋಗಿ ಆದಿತ್ಯನಾಥ್ ಧ್ವನಿ ಮಿಮಿಕ್ರಿ ಮಾಡಿದ ಯುವಕ
ಮಿಮಿಕ್ರಿ ಕಲಾವಿದನೋರ್ವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಧ್ವನಿಯನ್ನೇ ನಕಲಿ ಮಾಡಿ ಮಾತನಾಡಿ, ತಪ್ಪು ಮಾಡಿದ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದ್ದು, ಈ ಘಟನೆಯ ವೀಡಿಯೋ ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಅನೇಕರು ಯುವಕ ತನ್ನ ಈ ಕಲಾ ಪ್ರತಿಭೆಯನ್ನು ಒಳ್ಳೆಯ ಕೆಲಸಕ್ಕೆ ಬಳಸಿಕೊಂಡಿದ್ದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ ಸಿಎಂ ಯೋಗಿ ಆದಿತ್ಯನಾಥ್ ಅವರ ಧ್ವನಿಯನ್ನೇ ನಕಲು ಮಾಡಿದ ಯುವಕ ಸರ್ಕಾರಿ ಶಿಕ್ಷಕಿಗೆ ಹೇಳಿದ್ದೇನು ಇಲ್ಲಿದೆ ಡಿಟೇಲ್ ಸ್ಟೋರಿ...
ಶಾಲೆಗೆ ತಡವಾಗಿ ಬರುತ್ತಿದ್ದ ಶಿಕ್ಷಕಿಗೆ ಕ್ಲಾಸ್
ವೀಡಿಯೋದ ಆರಂಭದಲ್ಲಿ ಕರೆ ಸ್ವೀಕರಿಸಿದ ಮಹಿಳೆ ಯಾರು ಮಾತನಾಡುವುದು ಎಂದು ಕೇಳುತ್ತಾರೆ. ಈ ವೇಳೆ ಯುವಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡುತ್ತಿದ್ದೇನೆ ಎಂದು ಹೇಳುತ್ತಾರೆ. ಆ ಯುವಕ ತಾನು ಮುಖ್ಯಮಂತ್ರಿ ಎನ್ನುತ್ತಿದ್ದಂತೆ ಆ ಬದಿಯಿಂದ ಮಾತನಾಡುತ್ತಿದ್ದ ಶಿಕ್ಷಕಿ, ನಡುಗುವ ಸ್ವರದಿಂದಲೇ ನನ್ನಿಂದ ತಪ್ಪಾಯ್ತು ಸರ್ ಕ್ಷಮಿಸಿ ಬಿಡಿ ಎಂದು ಗೋಗರೆಯಲು ಶುರು ಮಾಡುತ್ತಾರೆ.
ಕ್ಷಮೆ ಕೇಳಿದ ಶಿಕ್ಷಕಿ
ಆಕೆಯ ಮಾತಿಗೆ ಪ್ರತಿಕ್ರಿಯಿಸಿದ ಯುವಕ ಹೌದು ತಪ್ಪು ನಿಮ್ಮಿಂದ ತುಂಬಾನೇ ಆಗಿದೆ ಎಂದು ಆ ಶಿಕ್ಷಕಿಯನ್ನು ಮತ್ತಷ್ಟು ಹೆದರಿಸಿದ್ದಾನೆ. ಅದಕ್ಕೆ ಆ ಶಿಕ್ಷಕಿ ಇಲ್ಲ, ಸರ್ ನನ್ನಿಂದ ದೊಡ್ಡ ತಪ್ಪಾಯ್ತು ದಯವಿಟ್ಟು ಕ್ಷಮಿಸಿ ಬಿಡಿ ನನ್ನನ್ನು ಎಂದು ಅಳುವುದಕ್ಕೆ ಶುರು ಮಾಡುತ್ತಾರೆ. ಇದಕ್ಕೆ ಪ್ರತಿಯಾಗಿ ಮಾತನಾಡುವ ಯುವಕ ನಾನು ನಿವೊಬ್ಬರು ಮಹಿಳೆ ಎಂಬ ಕಾರಣಕ್ಕೆ ನಿಮ್ಮ ಮಾತನ್ನು ಕೇಳುತ್ತಿದ್ದೇನೆ. ಆದರೆ ನೀವು ಗಡಿ ಮೀರಿದ್ದೀರಿ ಎಂದು ಮತ್ತಷ್ಟು ಭಯಪಡಿಸಿದ್ದಾರೆ.
ಯುವಕನ ಈ ವೀಡಿಯೋ ಭಾರಿ ವೈರಲ್
ಅದಕ್ಕೆ ಆ ಕಡೆಯಿಂದ ಮಾತನಾಡಿದ ಶಿಕ್ಷಕಿ, ನನಗೆ ತಿಳಿದಿರಲಿಲ್ಲ, ಸರ್ ಸರ್ ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ ಸರ್ ಎಂದು ಗೋಗರೆಯಲು ಶುರು ಮಾಡುತ್ತಾರೆ. ಈಗ ಆ ಯುವಕ ನಿಮಗೇನಾಯ್ತು ಎಂದು ಕೇಳಿದಾಗ ಸ್ವಲ್ಪ ತಪ್ಪಾಯ್ತು ನನ್ನಿಂದ ಎಂದು ಆ ಮಹಿಳೆ ಹೇಳುತ್ತಾರೆ. ನಿಮ್ಮಂತಹ ಜನರ ಕಾರಣದಿಂದಾಗಿ ನಮ್ಮ ಮಕ್ಕಳಿಗೆ ಸರಿಯಾಗಿ ಓದುವುದಕ್ಕೆ ಸಾಧ್ಯವಾಗುತ್ತಿಲ್ಲ. ನಿಮಗೆ ಮಕ್ಕಳ ಭವಿಷ್ಯದ ಬಗ್ಗೆ ಅರಿವಿಲ್ಲ. ಆದರೆ ನೀವು ಸ್ಯಾಲರಿ ಹೇಗೆ ತೆಗೆದುಕೊಳ್ಳುತ್ತಿರಿ ಎಂದರೆ ನೀವು ಬಹಳ ದೊಡ್ಡ ಅಧಿಕಾರಿ ಆಗಿದ್ದೀರಿ ಎಂಬಷ್ಟು ಸ್ಯಾಲರಿ ಪಡೆಯುತ್ತೀರಿ. ಯಾಕೆ ಹೀಗೆ ನಿಮ್ಮನ್ನು ನೀವು ಏನೆಂದು ತಿಳಿದಿದ್ದೀರಿ ಎಂದು ಪ್ರಶ್ನೆ ಮಾಡುತ್ತಾರೆ. ಅದಕ್ಕೆ ಆ ಮಹಿಳೆ ಸರ್ ಸಾರಿ ಸಾರಿ ಎಂದು ಮತ್ತೆ ಕ್ಷಮೆ ಕೇಳುತ್ತಾರೆ.
ಯೋಗಿ ಆದಿತ್ಯನಾಥ್ ರೀತಿಯೇ ಧ್ವನಿ
ನೀವು ಈ ರೀತಿ ಎಲ್ಲಾ ಮಾಡುತ್ತೀರಿ, ಆದರೆ ನಾವು ಜನರಿಂದ ಮಾತು ಕೇಳಬೇಕು, ಜನ ನಮ್ಮನ್ನು ಪ್ರಶ್ನೆ ಮಾಡುತ್ತಾರೆ. ನಿಮ್ಮ ಸರ್ಕಾರದ ಅವಧಿಯಲ್ಲಿ ಹೀಗೆಲ್ಲಾ ಆಗುತ್ತಿದೆ ಎಂದು ಜನರು ನಮಗೆ ಕೇಳುತ್ತಿದ್ದಾರೆ ಎಂದು ಆ ಯುವಕ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಕಿ, ಮತ್ತೆ ಸರ್ ನನ್ನಿಂದ ತುಂಬಾ ದೊಡ್ಡ ತಪ್ಪಾಗಿದೆ ಕ್ಷಮಿಸಿಬಿಡಿ ಎಂದು ಕೇಳುತ್ತಾರೆ. ಈ ವೇಳೆ ಯುವಕ ಸರಿ ನೀವಿನ್ನು ಅಳಬೇಡಿ ನಿಮ್ಮನ್ನು ಓರ್ವ ಮಹಿಳೆ ಎಂದು ಸುಮ್ಮನೆ ಬಿಟ್ಟಿದ್ದೇನೆ.
ಯೋಗಿ ಆದಿತ್ಯನಾಥ್ ರೀತಿ ಅವಾಜ್
ನೀವು ನಿಮ್ಮ ವರ್ತನೆಯನ್ನು ಬದಲಿಸಿಕೊಳ್ಳಿ. ಆದರೆ ನಮಗೆ ಪುರುಷರು ಮಹಿಳೆಯರು ಎಲ್ಲರೂ ಒಂದೇ. ಇನ್ನೊಂದು ಬಾರಿ ಹೀಗೆ ಆದರೆ ನಾನು ನಿಮ್ಮನ್ನು ಪುರುಷನೋ ಮಹಿಳೆಯೋ ಎಂದು ನೋಡುವುದಿಲ್ಲ. ಇಂದಿನಿಂದ ನೀವು ಮುಂಜಾನೆ 8 ಗಂಟೆಗೂ ಮೊದಲು ಶಾಲೆಗೆ ಬರಬೇಕು, 8 ಗಂಟೆಗಿಂತ ಒಂದು ನಿಮಿಷ ತಡವಾದರೂ ನೀವು ನಾನು ಏಕೆ ಹೀಗೆ ಮಾಡಿದೆ ಎಂದು ಜೀವನಪೂರ್ತಿ ನೆನಪು ಮಾಡಿಕೊಳ್ಳುವಂತೆ ಮಾಡಿಸುತ್ತೇನೆ. ಈ ಮಾತನ್ನು ಶಾಶ್ವತವಾಗಿ ನೆನಪಿಟ್ಟುಕೊಳ್ಳಿ ಎಂದು ಹೇಳುತ್ತಾರೆ.
ಜೈಶ್ರೀರಾಮ್ ಎಂದು ಕರೆ ಕಡಿತಗೊಳಿಸಿದ ಯುವಕ
ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಕಿ ನಾನು ಸಮಯಕ್ಕೆ ಸರಿಯಾಗಿ ಬರುವೆ, ಸಮಯಕ್ಕೆ ಸರಿಯಾಗಿ ಹೋಗುವೆ, ಇನ್ನು ಮುಂದೆ ಅಂತಹ ತಪ್ಪನ್ನು ಮಾಡವುದಿಲ್ಲ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಮತ್ತೆ ಕ್ಷಮೆ ಕೇಳಿದ್ದಾರೆ. ಸರಿ ಫೋನ್ ಇಡಿ ಜೈಶ್ರೀರಾಮ್ ಎಂದು ಆ ಯುವಕ ಹೇಳಿದ್ದು, ಮಹಿಳೆಯೂ ಜೈಶ್ರೀರಾಮ್ ಎಂದು ಹೇಳಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಅನೇಕರು ಯುವಕನ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ರಾಹುಲ್ ಯಾದವ್ ಎಂಬ ಯುವಕನಿಂದ ಮಿಮಿಕ್ರಿ
ರಾಹುಲ್ ಯಾದವ್ ಎಂಬುವವರು ಈ ಮಿಮಿಕ್ರಿ ಮಾಡಿದ್ದು, ಈ ಯುವಕ ತಮ್ಮ ಮಿಮಿಕ್ರಿ ಪ್ರತಿಭೆಯನ್ನು ಚೆನ್ನಾಗಿ ಬಳಸಿಕೊಂಡಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ಯುವಕ ಒಳ್ಳೆಯ ಕಾರ್ಯಕ್ಕೆ ತಮ್ಮ ಮಿಮಿಕ್ರಿ ಮಾಡಿದ್ದಾರೆ. ಆಧುನಿಕ ಕಾಲದಲ್ಲಿ ಹೀಗೆಯೇ ಸಮಾಜ ಸೇವೆ ಮಾಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಈ ಸ್ಟೋರಿ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

