ಮಹಾರಾಷ್ಟ್ರದಲ್ಲಿ ತರಕಾರಿ ವ್ಯಾಪಾರಿಯೊಬ್ಬ ಚರಂಡಿ ನೀರಿನಲ್ಲಿ ತರಕಾರಿ ತೊಳೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

ಮಹಾರಾಷ್ಟ್ರದ ತರಕಾರಿ ವ್ಯಾಪಾರಿಯೊಬ್ಬ ಹಸಿರು ತರಕಾರಿಯನ್ನು ಚರಂಡಿ ನೀರಿನಲ್ಲಿ ಸ್ವಚ್ಛಗೊಳಿಸುತ್ತಿರುವ ಆಘಾತಕಾರಿ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ತರಕಾರಿ ವ್ಯಾಫಾರಿಯೊಬ್ಬ ಸೊಪ್ಪು ತರಕಾರಿಯನ್ನು ಮಾರುಕಟ್ಟೆಯಲ್ಲಿ ಮಾರುವುದಕ್ಕೂ ಮೊದಲು ಕೊಳಕಾದ ತೆರೆದ ಚರಂಡಿ ನೀರಿನಲ್ಲಿ ಮುಳುಗಿಸಿ ತೊಳೆಯುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಕೆಲವು ಮಾರಾಟಗಾರರು ಅದೇ ಕೊಳಕು ನೀರನ್ನು ಬಕೆಟ್‌ಗಳಲ್ಲಿ ತುಂಬಿಸಿ ತಮ್ಮ ಉತ್ಪನ್ನಗಳ ಮೇಲೆ ಸಿಂಪಡಿಸಿ ಮಾರಾಟಕ್ಕೆ ಇಡುತ್ತಿರುವುದು ಕೂಡ ವೀಡಿಯೋದಲ್ಲಿ ಕಂಡುಬಂದಿದೆ.

ವಿಡಿಯೋದಲ್ಲೇನಿದೆ?

ವೈರಲ್ ವೀಡಿಯೊದಲ್ಲಿ, ವ್ಯಕ್ತಿ ಹಿಂದಿ ಭಾಷೆಯಲ್ಲಿ ('ಯೇ ದೇಖಿಯೇ ದೋಸ್ತೋನ್, ಯೇ ಆದ್ಮಿ ಮೇಥಿ ಬೇಚ್ ರಹಾ ಹೈ. 'ಕ್ಯಾ ಬೆಚ್ ರಹೇ ಹೋ ಭಾಯಿ? ಯೇ ಕಿಸ್ ಪಾನಿ ಸೇ ಧೋ ರಹೇ ಹೋ?' ಯೇ ದೇಖಿಯೇ ಯೇ ಆದ್ಮಿ ಗಟ್ಟರ್ ಕೆ ಪಾನಿ ಸೇ ಮೇಥಿ ಧೋ ರಹಾ ಹೈ ) ಇಲ್ಲಿ ನೋಡಿ ಸ್ನೇಹಿತರೇ ಈ ಮನುಷ್ಯ ಮೆಂತೆ ಸೊಪ್ಪು ಮಾರಾಟ ಮಾಡುತ್ತಿದ್ದಾನೆ, ನೀವು ಏನು ಮಾಡುತ್ತಿದ್ದೀರಿ ಸಹೋದರ ? ಯಾವ ನೀರಿನಲ್ಲಿ ತೊಳೆಯುತ್ತಿದ್ದೀರಿ? ಇಲ್ಲಿ ನೋಡಿ, ಈ ವ್ಯಕ್ತಿ ತೆರೆದ ಡ್ರೈನ್ ನೀರಿನಿಂದ ತೊಳೆದ ನಂತರ ಮೆಂತ್ಯೆ ಸೊಪ್ಪು ಮಾರಾಟ ಮಾಡುತ್ತಿದ್ದಾನೆ) ಎಂದು ಹೇಳುತ್ತಿರುವುದನ್ನು ಕೇಳಬಹುದಾಗಿದೆ. 

(ಕಿತ್ನೆ ಕಾ ಬೆಚ್ ರಹೇ ಹೋ ಯೇ ಮೇಥಿ? ಯೇ ದೇಖಿಯೇ, ಯೇ ಆದ್ಮಿ ಗಟರ್ ಕೆ ಪಾನಿ ಸೆ ಮೇಥಿ ಧೋ ಕೆ ಯಹೀ ಮಾರ್ಕೆಟ್ ಮೇ ಬೆಚ್ ರಹಾ ಹೈ) ಎಷ್ಟು ರೂಗೆ ಈ ಮೆಂತ್ಯೆ ಸೊಪ್ಪನ್ನು ಮಾರುತ್ತಿದ್ದೀರಿ, ಇಲ್ಲಿ ನೋಡಿ, ಈ ಮನುಷ್ಯ ಚರಂಡಿ ನೀರಿನಲ್ಲಿ ಮೆಂತ್ಯೆ ಸೊಪ್ಪನ್ನು ತೊಳೆದು ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ ಎಂದು ವೀಡಿಯೋ ಮಾಡಿದ ವ್ಯಕ್ತಿ ಹೇಳಿದ್ದಾರೆ. 

ಜನರಿಂದ ತೀವ್ರ ಆಕ್ರೋಶ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ತಿನ್ನುವ ಆಹಾರಕ್ಕೆ ಈ ರೀತಿ ಕೊಳಕು ಸಿಂಪಡಿಸುತ್ತಿರುವ ಕೆಟ್ಟ ಅಭ್ಯಾಸಗಳಲ್ಲಿ ತೊಡಗಿರುವ ಮಾರಾಟಗಾರರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದರು. ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್‌ಎಸ್) ಸ್ಥಳೀಯ ಅಧಿಕಾರಿಗಳನ್ನು ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಎಂಎನ್‌ಎಸ್ ಉಲ್ಹಾಸ್‌ನಗರ ಜಿಲ್ಲಾಧ್ಯಕ್ಷ ಬಂಧು ದೇಶಮುಖ್ ಮಾತನಾಡಿ ಇಂತಹ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ವಿಜಯಪುರ: ಚರಂಡಿ ನೀರಿನಲ್ಲಿ ಈಜಾಡಿದ ಯುವಕ, ವಿಡಿಯೋ ವೈರಲ್

ಇದು ಸಾರ್ವಜನಿಕ ಆರೋಗ್ಯದ ಮೇಲೆ ನಡೆಯುತ್ತಿರುವ ನೇರ ದಾಳಿಯಾಗಿದೆ. ಉತ್ತಮ ಜೀವನಶೈಲಿಗಾಗಿ ನಾವು ಜನರು ಹಸಿರು ತರಕಾರಿಗಳನ್ನು ತಿನ್ನಲು ಪ್ರೋತ್ಸಾಹಿಸುತ್ತೇವೆ, ಆದರೆ ಕೆಲವರು ಮಾಡುವ ಇಂತಹ ಅವಾಂತರಗಳು ಜನರನ್ನು ರೋಗಿಗಳನ್ನಾಗಿ ಮಾಡುತ್ತಿವೆ. ಆರೋಗ್ಯ ಇಲಾಖೆ ಏನು ಮಾಡುತ್ತಿದೆ? ತಕ್ಷಣದ ಮತ್ತು ಕಠಿಣ ಕ್ರಮ ಅಗತ್ಯ ಎಂದು ದೇಶಮುಖ್ ಹೇಳಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

Scroll to load tweet…

ಚರಂಡಿ ಬ್ಲಾಕ್ ಮಾಡಿದ ಕಾಂಡೋಮ್‌ಗಳು; ಸ್ಥಳೀಯರಿಂದ ಆಕ್ರೋಶ