ಕಾಂಡೋಮ್‌ಗಳಿಂದ ಚರಂಡಿಗಳು ಬ್ಲಾಕ್ ಆಗಿರುವ ಘಟನೆ ನಡೆದಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಜಿಗಳಲ್ಲಿ ವಾಸಿಸುವವರೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಚಂಡೀಗಢ: ಗರ್ಭ ನಿರೋಧಕ ಮತ್ತು ಸುರಕ್ಷಿತ ಲೈಂಗಿಕತೆಗಾಗಿ ಕಾಂಡೋಮ್‌ಗಳನ್ನು ಬಳಕೆ ಮಾಡಲಾಗುತ್ತದೆ. ಬಳಕೆಯಾದ ಕಾಂಡೋಮ್‌ಗಳನ್ನು ಹೇಗೆ ವಿಸರ್ಜಿಸಬೇಕು ಎಂಬುದರ ಬಗ್ಗೆಯೂ ಕೆಲವೊಂದು ನಿಯಮಗಳಿವೆ. ಕಾಂಡೋಮ್‌ಗಳಿಂದಾಗಿ ಚರಂಡಿಗಳು ಮುಚ್ಚಿರುವ ಘಟನೆ ಪಂಜಾಬ್ ರಾಜ್ಯದ ಲೂಧಿಯಾನದಲ್ಲಿ ನಡೆದಿದೆ. ಚರಂಡಿ ಬ್ಲಾಕ್ ಆಗಿದ್ದರಿಂದ ಪೌರ ಕಾರ್ಮಿಕರು ಒಳಚರಂಡಿ ಮುಚ್ಚಳ ತೆಗೆದಾದ ರಾಶಿ ರಾಶಿ ಕಾಂಡೋಮ್‌ಗಳು ಸಿಕ್ಕಿವೆ. ಕಾಂಡೋಮ್‌ನಿಂದ ಪದೇ ಪದೇ ಚರಂಡಿ ಬ್ಲಾಕ್ ಆಗುತ್ತಿರೋದರಿಂದ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಲೂಧಿಯಾನಾದ ಸಂಜಯ್ ಗಾಂಧೀ ನಗರ ವಾರ್ಡ ನಂಬರ್ 20, ತಾಜಾಪುರ ರಸ್ತೆಯ ಮೊಹಲ್ಲಾದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿಯ ಪಿಜಿಗಳಿಂದಲೇ ಕಾಂಡೋಮ್ ರಾಶಿಗಳಿಂದ ಚರಂಡಿಗಳು ಬ್ಲಾಕ್ ಆಗುತ್ತಿವೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಈ ಭಾಗದ ಪಿಜಿಗಳಲ್ಲಿ (ಪೇಯಿಂಗ್ ಗೆಸ್ಟ್) ವಾಸವಾಗಿರುವ ಯುವಕ ಮತ್ತು ಯುವತಿಯರು ಬಹಿರಂಗವಾಗಿ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.
ಪಿಜಿಗಳಲ್ಲಿ ವಾಸವಾಗಿರುವ ಯುವಕರು/ಯುವತಿಯರು ಎಲ್ಲೆರದುರೇ ಜನರು ಕರೆಯುತ್ತಾರೆ. ಇವರ ನಡವಳಿಕೆಯಿಂದಾಗಿ ಬೀದಿಯಲ್ಲಿ ಓಡಾಡೋದು ಕಷ್ಟಕರವಾಗಿದೆ. ಪಿಜಿಗಳಲ್ಲಿ ವಾಸ ಮಾಡೋರಿಂದಲೇ ಚರಂಡಿಗಳು ಪದೇ ಪದೇ ಬ್ಲಾಕ್ ಆಗುತ್ತವೆ. ಪೊಲೀಸರು ಆದಷ್ಟು ಬೇಗ ವೇಶ್ಯಾವಾಟಿಕೆ ಅಡ್ಡೆಗಳಾಗಿರುವ ಪಿಜಿಗಳನ್ನು ಖಾಲಿ ಮಾಡಿಸಬೇಕೆಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ.
ಪಿಜಿಗಳಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳ ಬಗ್ಗೆ ಸಾಕಷ್ಟು ಬಾರಿ ಪೊಲೀಸರಿಗೆ ದೂರ ನೀಡಲಾಗಿದೆ. ಮಧ್ಯರಾತ್ರಿಯವರೆಗೂ ಹುಡುಗರು ಗಲಾಟೆ ಮಾಡುತ್ತಿರುತ್ತಾರೆ. ಇದರಿಂದ ಈ ಭಾಗದ ನಿವಾಸಿಗಳ ಶಾಂತಿ ವ್ಯವಸ್ಥೆಗೆ ಧಕ್ಕೆಯುಂಟಾಗಿದೆ. ಮನೆಯ ಹೆಣ್ಣು ಮಕ್ಕಳು ಹೊರಗೆ ಹೋಗಲು ಹೆದರುವಂತಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಚರಂಡಿಗಳು ಮುಚ್ಚಿದ್ದರಿಂದ ಸ್ಥಳೀಯರು ಪೌರ ಕಾರ್ಮಿಕರನ್ನು ಕರೆಸಿಕೊಂಡಿದ್ದರು. ಒಳಚರಂಡಿ ತೆರೆದಾಗ ಅಲ್ಲಿಯ ದೃಶ್ಯ ಕಂಡು ಪೌರ ಕಾರ್ಮಿಕರು ಸಹ ಬೇಸರಗೊಂಡರು ಎಂದು ವರದಿಯಾಗಿದೆ. ಚರಂಡಿಯಲ್ಲಿ ಪತ್ತೆಯಾಗಿರುವ ಕಾಂಡೋಮ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ: ಕಾಂಡೋಮ್ ಬಳಕೆ ಬಗ್ಗೆ ಮಹತ್ವದ ಸರ್ವೇ ನಡೆಸಿದ ಎಚ್ಚರಿಕೆ ಸಂದೇಶ ಕೊಟ್ಟ ವಿಶ್ವ ಆರೋಗ್ಯ ಸಂಸ್ಥೆ!
ಕಾರವಾರದ ಕಡಲ ತೀರದಲ್ಲಿ ಕಾಂಡೋಮ್ ಪತ್ತೆ
ಕಳೆದ ವರ್ಷ ಕಾರವಾರದ ರವೀಂದ್ರನಾಥ್ ಟ್ಯಾಗೋರ್ ಕಡಲ ತೀರದಲ್ಲಿ ರಾಶಿ ರಾಶಿ ಕಾಂಡೋಮ್‌ಗಳು ಪತ್ತೆಯಾಗಿದ್ದವು. ಕಡಲತೀರದಲ್ಲೆ ಎಲ್ಲೆಂದರಲ್ಲಿ ಬಿದ್ದಿರುವ ಕಾಂಡೋಮ್ ಪ್ಯಾಕೇಟ್ ಕಂಡು ವಾಯುವಿಹಾರಕ್ಕೆ ಬರೋ ಜನರು ಮತ್ತು ಪ್ರವಾಸಿಗರು ಮುಜುಗರಕ್ಕೊಳಗಾಗಿದ್ದರು. ಕಡಲತೀರದಲ್ಲಿ ಬಿದ್ದಿರುವ ಕಾಂಡೋಮ್ ಪ್ಯಾಕೇಟ್ ಮೇಲೆ ಭಾರತ ಸರ್ಕಾರ ಎಂದು ಮುದ್ರಿಸಲಾಗಿತ್ತು. ಕಡಲತೀರ ಸಮೀಪದಲ್ಲಿ ಕಿಮ್ಸ್ ಆಸ್ಪತ್ರೆಯಿದ್ದು, ಇಲ್ಲಿಯ ವೈದ್ಯಕೀಯ ತ್ಯಾಜ್ಯ ಚರಂಡಿ ಮೂಲಕ ಸಮುದ್ರ ಸೇರುತ್ತೆ ಎಂಬ ಆರೋಪಗಳು ಸಹ ಕೇಳಿ ಬಂದಿದ್ದವು.
ಇದನ್ನೂ ಓದಿ: ಕಾಂಡೋಮ್‌ಗೆ ಹೇಳಿ ಬೈ ಬೈ; ಪುರುಷರಿಗಾಗಿ ಮಾರುಕಟ್ಟೆಗೆ ಬರ್ತಿದೆ ಹೊಸ ಪ್ರೊಡಕ್ಟ್!
