ಏನು, ಸಮಂತಾ ವಯಸ್ಸಿನ್ನೂ 23 ಆಹ್? ಏನಿದು ಮೆಟಾಬಾಲಿಕ್ ಏಜ್ ಅಂದ್ರೆ?
ನಟಿ ಸಮಂತಾ ತಮ್ಮ ಮೆಟಾಬಾಲಿಕ್ ಏಜ್ 23 ಎಂದು ತೋರಿಸುವ ಪೋಸ್ಟ್ ಹಂಚಿಕೊಂಡಿದ್ದಾರೆ. ಇಷ್ಟಕ್ಕೂ ಮೆಟಾಬಾಲಿಕ್ ಏಜ್ ಎಂದರೇನು?
ನಟಿ ಸಮಂತಾ ಸುಂದರ ತಾಣವೊಂದರಲ್ಲಿ ಕಸರತ್ತು ಮಾಡುತ್ತಿರುವ ಫೋಟೋ ಜೊತೆಗೆ ತಮ್ಮ ಮೆಟಾಬಾಲಿಕ್ ಏಜ್ 23 ಎಂಬ ರಿಪೋರ್ಟನ್ನು ಹಂಚಿಕೊಂಡಿದ್ದಾರೆ. ಈ ಪೋಟೋಗೆ 'ಅತ್ಯುತ್ತಮ ಬೆಳಗು' ಎಂದು ಕ್ಯಾಪ್ಶನ್ ನೀಡಿದ್ದಾರೆ.
ಸಮಂತಾ ಫೋಟೋಗೆ ಕಾಮೆಂಟ್‌ಗಳ ಸುರಿಮಳೆಯೇ ಹರಿದುಬರುತ್ತಿದ್ದು, 'ನೀವು ನಮಗೆ ತುಂಬಾ ಹೆಚ್ಚಿನ ಫಿಟ್ನೆಸ್ ಗುರಿ ನೀಡುತ್ತಿದ್ದೀರಿ' ಎಂದು ಒಬ್ಬರು ಹೇಳಿದ್ದರೆ, ಮತ್ತೊಬ್ಬರು, 'ಸುತ್ತಲಿನ ಎಲ್ಲ ನೆಗೆಟಿವಿಟಿಗಳಿಗೆ ಫಿಟ್ನೆಸ್ ಹಾಗೂ ತನ್ನ ಕಾರ್ಯದ ಮೂಲಕವೇ ಉತ್ತರ ಕೊಟ್ಟ ನಿಮ್ಮ ರೀತಿ ನನಗೆ ಇಷ್ಟವಾಯಿತು' ಎಂದಿದ್ದಾರೆ.
ಆದರೆ, 36 ವರ್ಷದ ನಟಿ ಇನ್ನೂ ತನಗೆ ಮೆಟಾಬಲಿಕ್ ವಯಸ್ಸು 23 ಎಂದು ಹೇಳಿಕೊಂಡಿರುವುದು ಹಲವು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ. ಇಷ್ಟಕ್ಕೂ ಮೆಟಾಬಾಲಿಕ್ ಏಜ್(ಚಯಾಪಚಯ ವಯಸ್ಸು) ಎಂದರೇನು? ಇದು ನಮ್ಮ ನಿಜವಾದ ವಯಸ್ಸಿಗಿಂತಾ ಹೇಗೆ ಭಿನ್ನ?
ಕರ್ನಾಟಕದಲ್ಲಿಯೂ ಬಾಂಬೆ ಮಿಠಾಯಿ ನಿಷೇಧ; ಕಾಟನ್ ಕ್ಯಾಂಡಿ ಪರೀಕ್ಷೆಗೆ ಮುಂದಾದ ಸರ್ಕಾರ
ಮೆಟಾಬಾಲಿಕ್ ಏಜ್
ಕ್ರೊನಾಲಾಜಿಕಲ್ ಏಜ್ ಎಂಬುದು ನಿಮ್ಮ ನಿಜವಾದ ವಯಸ್ಸಾದರೆ ಮೆಟಾಬಾಲಿಕ್ ಏಜ್ ಎಂಬುದು ನಿಮ್ಮ ಫಿಟ್ನೆಸ್ ಮಟ್ಟವನ್ನು ಸೂಚಿಸುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಸಮಂತಾ ಫಿಟ್ನೆಸ್ ಈಗ ಆಕೆಯನ್ನು 23 ವರ್ಷದ ಹುಡುಗಿಯ ಮಟ್ಟಕ್ಕೆ ಇಟ್ಟಿದೆ ಎಂದು ಅರಿಯಬಹುದು.
ನಿಮ್ಮ ದೇಹದ ಮೆಟಾಬಾಲಿಕ್ ಮಟ್ಟ, ನಿಮ್ಮ ದೇಹವು ವಿಶ್ರಾಂತಿ ಸಮಯದಲ್ಲಿ ಎಷ್ಟು ಕ್ಯಾಲೊರಿಗಳನ್ನು ಇಳಿಸುತ್ತದೆ, ಸಾಮಾನ್ಯ ಜನಸಂಖ್ಯೆಯಲ್ಲಿ ನಿಮ್ಮ ಕಾಲಾನುಕ್ರಮದ ವಯಸ್ಸಿನ ಜನರ ಬಿಎಂಆರ್(ಬಾಡಿ ಮೆಟಾಬಾಲಿಕ್ ರೇಟ್) ಏನು ಎಂಬುದನ್ನೆಲ್ಲ ಪರಿಗಣಿಸಿ ಮೆಟಾಬಾಲಿಕ್ ಏಜ್ ಕಂಡುಹಿಡಿಯಲಾಗುತ್ತದೆ.
ನಿಮ್ಮ ಮೆಟಬಾಲಿಕ್ ವಯಸ್ಸು ನಿಮ್ಮ ಆರೋಗ್ಯದ ಬಗ್ಗೆ ಏನು ಹೇಳುತ್ತದೆ?
ಮೆಟಬಾಲಿಕ್ ವಯಸ್ಸು ಎಂಬುದು ಫಿಟ್ನೆಸ್ ಉದ್ಯಮವು ಇತ್ತೀಚಿನ ವರ್ಷಗಳಲ್ಲಿ ಬಳಸುತ್ತಿರುವ ಪದವಾಗಿದೆ. ಇದು ವ್ಯಕ್ತಿಯ ಒಟ್ಟಾರೆ ಆರೋಗ್ಯ ಮತ್ತು ಫಿಟ್‌ನೆಸ್‌ನ ಒಂದು ಮಾಪನವಾಗಿದೆ. ಇದು ವೈದ್ಯಕೀಯ ಪದವಲ್ಲ. ಬದಲಿಗೆ ನಮ್ಮ ಸುತ್ತಲಿರುವವರು, ನಮ್ಮದೇ ವಯಸ್ಸಿನವರಿಗೆ ಹೋಲಿಸಿದಾಗ ನಮ್ಮ ದೇಹವು ಅವರಿಗಿಂತ ಎಷ್ಟು ಯಂಗ್ ಆಗಿದೆ ಅಥವಾ ಹೆಚ್ಚು ವಯಸ್ಸಾಗಿದೆಯೇ ಎಂಬ ಮಾಪನವಷ್ಟೇ.
ಈ ಬೃಹತ್ ಕಂಪನಿಯ 700 ಉದ್ಯೋಗಿಗಳು ಒಂದೇ ಬಾರಿ ಮಾಲೀಕರಾದರು!
ನಿಮ್ಮದೇ ವಯೋಮಾನದ ಇತರರಿಗೆ ಹೋಲಿಸಿದರೆ ಸಿಗುವುದೇ ನಿಮ್ಮ ಚಯಾಪಚಯ ವಯಸ್ಸು. ಅದೇ ನಿಮ್ಮ BMR ಆಗಿದೆ. ಅದರಂತೆ ನಿಮ್ಮ ಚಯಾಪಚಯ ವಯಸ್ಸು ನಿಮ್ಮ ಕಾಲಾನುಕ್ರಮದ ವಯಸ್ಸಿಗೆ ಸರಿ ಹೊಂದಿದರೆ ನೀವು ನಿಮ್ಮ ವಯಸ್ಸಿನ ಜನರ ಉಳಿದ ಜನಸಂಖ್ಯೆಯಂತೇ ಫಿಟ್ನೆಸ್ ಹೊಂದಿದ್ದೀರಿ. ಆದರೆ, ನಿಮ್ಮ ಚಯಾಪಚಯ ವಯಸ್ಸು ನಿಮ್ಮ ಕಾಲಾನುಕ್ರಮಕ್ಕಿಂತ ಕಡಿಮೆಯಿದ್ದರೆ, ಅದು ಬಹುಶಃ ಒಳ್ಳೆಯ ಸಂಕೇತವಾಗಿದೆ. ನೀವು ನಿಮ್ಮ ವಯಸ್ಸಿನವರೆಲ್ಲರಿಗಿಂತ ಹೆಚ್ಚು ಫಿಟ್ ಆಗಿದ್ದೀರಿ ಎಂಬುದನ್ನು ಸೂಚಿಸುತ್ತದೆ. ಒಂದು ವೇಳೆ ಬಿಎಂಆರ್ ಹೆಚ್ಚು ಬಂದರೆ ನೀವು ಖಂಡಿತವಾಗಿ ನಿಮ್ಮ ಜೀವನಶೈಲಿ ಬದಲಿಸಿಕೊಳ್ಳಬೇಕು ಮತ್ತು ಫಿಟ್ನೆಸ್ ಕಡೆ ಗಮನ ಹರಿಸಬೇಕು.