ತುಳುವಿನಲ್ಲಿ ತಿಮರೆ, ಕೆಲವೆಡೆ ಒಂದೆಲಗ ಅಥವಾ ಬ್ರಾಹ್ಮಿ ಎಂಬ ಹೆಸರಿದೆ
ಇದು ಆರೋಗ್ಯಕರ ಮಾತ್ರವಲ್ಲದೆ ಅತ್ಯಂತ ರುಚಿಕರವೂ ಹೌದು. ವಿಶೇಷವಾಗಿ ಮೆದುಳಿನ ಆರೋಗ್ಯ (memory booster),ನೆನಪಿನ ಶಕ್ತಿಯನ್ನು ಹೆಚ್ಚಿಸಲು ಬ್ರಾಹ್ಮಿ ಸೊಪ್ಪು ಬಹಳ ಉಪಯುಕ್ತವೆಂದು ಆಯುರ್ವೇದದಲ್ಲಿಯೇ ಹೇಳಲಾಗಿದೆ.
food Feb 27 2026
Author: Gowthami K Image Credits:Asianet News
Kannada
ದೇಹಕ್ಕೆ ತಂಪು
ದಕ್ಷಿಣ ಭಾರತದ, ವಿಶೇಷವಾಗಿ ತುಳುನಾಡು ಮತ್ತು ಮಲೆನಾಡು ಭಾಗಗಳಲ್ಲಿ ಈ ಚಟ್ನಿಯನ್ನು ಅಕ್ಕಿ ಗಂಜಿ, ಬಿಸಿ ಅನ್ನ ಅಥವಾ ದೋಸೆಯೊಂದಿಗೆ ಹೆಚ್ಚಾಗಿ ಸೇವಿಸಲಾಗುತ್ತದೆ.
Image credits: Asianet News
Kannada
ಏನೆಲ್ಲಾ ಬೇಕು?
ತಾಜಾ ತಿಮರೆ ಎಲೆ, ತೆಂಗಿನಕಾಯಿ, ಹುಳಿ ಮಜ್ಜಿಗೆ ಅಥವಾ ಹುಣಸೆಹಣ್ಣು, ಹಸಿ ಮೆಣಸು/ಕೆಂಪು ಮೆಣಸು ಬೆಳ್ಳುಳ್ಳಿ ಜತೆ ರುಬ್ಬಿ, ಸಾಸಿವೆ ಒಗ್ಗರಣೆ ನೀಡಿ ತಯಾರಿಸುವ ಈ ಚಟ್ನಿ ಆರೋಗ್ಯ ಹಾಗೂ ರುಚಿಯ ಅಪೂರ್ವ ಸಂಗಮವಾಗಿದೆ.
Image credits: Asianet News
Kannada
ಬೇಕಾಗುವ ಪದಾರ್ಥ
ಚೆನ್ನಾಗಿ ತೊಳೆದ ತಿಮರೆ ಎಲೆ – 2 ಕಪ್
ತುರಿದ ತೆಂಗಿನಕಾಯಿ – 1 ಕಪ್
ಖಾರದ ಮಟ್ಟಕ್ಕೆ ಅನುಗುಣವಾಗಿ ಒಣಮೆಣಸಿನಕಾಯಿ
ಹುಣಸೆಹಣ್ಣು ಸಣ್ಣ ನಿಂಬೆ ಗಾತ್ರ
ಬೆಳ್ಳುಳ್ಳಿ – 4–5 ಎಸಳು
ಉಪ್ಪು – ರುಚಿಗೆ ತಕ್ಕಷ್ಟು
Image credits: Asianet News
Kannada
ತುಳುವಿನ ಶೈಲಿಯ ಬ್ರಾಹ್ಮಿ ಸೊಪ್ಪಿನ ಚಟ್ನಿ
ಕರಾವಳಿಯಲ್ಲಿ ಚಟ್ನಿಯನ್ನು ವಿಭಿನ್ನ ರೀತಿ ತಯಾರಿಸಲಾಗುತ್ತದೆ. ಇದರಲ್ಲಿ ಕೆಲವೊಮ್ಮೆ ಕಡಲೆಬೇಳೆಯನ್ನೂ ಬಳಸಲಾಗುತ್ತದೆ. ನೀರಿನ ಬದಲು ಮಜ್ಜಿಗೆಯಲ್ಲೇ ರುಬ್ಬಲಾಗುತ್ತದೆ . ಇದು ಅಕ್ಕಿ ಗಂಜಿಯೊಂದಿಗೆ ಅತ್ಯಂತ ರುಚಿ.
Image credits: Asianet News
Kannada
ಬ್ರಾಹ್ಮಿ ಸೊಪ್ಪಿನ ಚಟ್ನಿಯ ಪ್ರಮುಖ ಪ್ರಯೋಜನಗಳು
ನೆನಪಿನ ಶಕ್ತಿ ಹೆಚ್ಚಿಸಲು ಸಹಕಾರಿ
ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ
ಜೀರ್ಣಕ್ರಿಯೆ ಸುಧಾರಿಸಲು ಸಹಾಯ
ದೇಹಕ್ಕೆ ತಂಪು ನೀಡುವ ಗುಣ
Image credits: Asianet News
Kannada
ಸೇವಿಸುವ ವಿಧಾನ ಮತ್ತು ಗಮನಿಸಬೇಕಾದ ಅಂಶಗಳು
ಈ ಚಟ್ನಿಯನ್ನು ಬಿಸಿ ಅನ್ನ, ಅಕ್ಕಿ ಗಂಜಿ, ದೋಸೆ ಅಥವಾ ಇಡ್ಲಿಯೊಂದಿಗೆ ಸೇವಿಸಬಹುದು. ಬ್ರಾಹ್ಮಿ ಸೊಪ್ಪು ದೇಹವನ್ನು ತಂಪಾಗಿಸುವುದರಿಂದ, ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ಸೇವಿಸುವುದನ್ನು ತಪ್ಪಿಸುವುದು ಒಳಿತು.
Image credits: Asianet News
Kannada
100 ವರ್ಷ ಆಯಸ್ಸು ನೀಡುವ ಶಕ್ಕಿ ಒಂದೆಲಗಕ್ಕೆ ಇದೆ
ನಿಯಮಿತವಾಗಿ, ಆದರೆ ಮಿತವಾಗಿ ಸೇವಿಸಿದರೆ ಉತ್ತಮ ಆರೋಗ್ಯ ಲಾಭ ದೊರೆಯುತ್ತದೆ. ಹಿಂದಿನ ಕಾಲದಲ್ಲೆಲ್ಲ ಗದ್ದೆಬದಿಯಲ್ಲಿ ಆರಾಮವಾಗಿ ದೊರೆಯುತ್ತಿತ್ತು. ಎಲೆಯ ಜೊತೆಗೆ ಕಾಂಡವನ್ನೂ ಸೇರಿಸಿದರೆ ರುಚಿ ಹೆಚ್ಚು.