ಈ ಬೃಹತ್ ಕಂಪನಿಯ 700 ಉದ್ಯೋಗಿಗಳು ಒಂದೇ ಬಾರಿ ಮಾಲೀಕರಾದರು!

700 ಉದ್ಯೋಗಿಗಳು ಇದ್ದಕ್ಕಿದ್ದಂತೆ ಅವರು ಕೆಲಸ ಮಾಡಿದ ಕಂಪನಿಯ ಮಾಲೀಕರಾದರು. ಮಿಲಿಯನೇರ್ ಬಾಸ್‌ನ ಒಂದು ನಿರ್ಧಾರದಿಂದ ಎಲ್ಲರ ಭವಿಷ್ಯ ಬದಲಾಯಿತು. 

Millionaire Transfers Full Ownership Of His Business To 700 Employees skr

ಅಮೆರಿಕದ ಪ್ರಸಿದ್ಧ ಬಾಬ್ ರೆಡ್ ಮಿಲ್ ಸಂಸ್ಥಾಪಕ ಬಾಬ್ ಮೂರ್ ಅವರು ಫೆಬ್ರವರಿ 10, 2024 ರಂದು ತಮ್ಮ 94ನೇ ವಯಸ್ಸಿನಲ್ಲಿ ನಿಧನರಾದರು. ಅಂದಿನಿಂದಲೂ ಅವರ ಔದಾರ್ಯದ ಕಥೆ ಪ್ರಪಂಚದಾದ್ಯಂತ ಹರಡುತ್ತಿದೆ.

ಮಿಲಿಯನೇರ್ ಉದ್ಯಮಿ ಬಾಬ್ ತನ್ನ ಕಂಪನಿಯನ್ನು ಎಂದಿಗೂ ಮಾರಾಟ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡುವ ಮೂಲಕ, ತನ್ನ 700 ಉದ್ಯೋಗಿಗಳ ಅದೃಷ್ಟವನ್ನು ಒಂದೇ ಬಾರಿಗೆ ಬದಲಾಯಿಸಿದರು. ಹೌದು, ಬಾಬ್ ಕಂಪನಿಯನ್ನು ಮಾರಾಟ ಮಾಡುವ ಬದಲು 700 ಉದ್ಯೋಗಿಗಳಿಗೆ ಮಾಲೀಕತ್ವದ ಹಕ್ಕುಗಳನ್ನು ವಿತರಿಸಿದರು. ಈ ಮೂಲಕ ಮೂರ್ ತನ್ನ ಸಾವಯವ ಆಹಾರ ಸಂಸ್ಥೆಗೆ ನವೀನ ಮಾಲೀಕತ್ವದ ವ್ಯವಸ್ಥೆಯನ್ನು ಪ್ರಯತ್ನಿಸಿದರು. ಅಂದ ಹಾಗೆ ಕಂಪನಿಯ ಗಳಿಕೆಯು 2018ರಲ್ಲಿ 100 ಮಿಲಿಯನ್ ಡಾಲರ್‌ಗಳನ್ನು ದಾಟಿದೆ. ಬಾಬ್ಸ್ ರೆಡ್ ಮಿಲ್ 70 ಕ್ಕೂ ಹೆಚ್ಚು ದೇಶಗಳಲ್ಲಿ 200 ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. 

ಎಂಥಾ ವಿಪರ್ಯಾಸ! ಪೇರೆಂಟಿಂಗ್ ಸಲಹೆ ನೀಡುತ್ತಿದ್ದ ಯೂಟ್ಯೂಬರ್‌ಗೆ ಸ್ವಂತ ಮಕ್ಕಳ ಮೇಲಿನ ದೌರ್ಜನ್ಯಕ್ಕೆ 60 ವರ್ಷ ಜೈಲು!
 

ಫಾರ್ಚೂನ್‌ನಲ್ಲಿನ ವರದಿಯ ಪ್ರಕಾರ, ತನ್ನ ಕಂಪನಿಯನ್ನು ಆಹಾರ ವ್ಯವಹಾರಕ್ಕೆ ಸಂಬಂಧಿಸಿದವರಿಗೆ ಮಾರಾಟ ಮಾಡುವ ಬದಲು, ಬಾಬ್ ಮೂರ್ ತನ್ನ 700 ಉದ್ಯೋಗಿಗಳಿಗೆ ಕಂಪನಿಯ ಸಂಪೂರ್ಣ ಮಾಲೀಕತ್ವವನ್ನು ನೀಡಿದರು. ಬಾಬ್ ಮೂರ್ ಅವರ ಕಂಪನಿಯು ಧಾನ್ಯಗಳಂತಹ ಉತ್ಪನ್ನಗಳ ಜೊತೆಗೆ ಉದ್ಯೋಗಿಗಳನ್ನು ಉತ್ತಮವಾಗಿ ನಡೆಸಿಕೊಳ್ಳಲು ಹೆಸರುವಾಸಿಯಾಗಿದೆ. 49ನೇ ವಯಸ್ಸಿನಲ್ಲಿ ಕಂಪನಿಯನ್ನು ಸ್ಥಾಪಿಸುವ ಮೊದಲು, ಬಾಬ್ ಮೂರ್ ಜೆ.ಸಿ. ಪೆನ್ನಿ ಗ್ಯಾಸ್ ಸ್ಟೇಷನ್ ಮಾಲೀಕ ಮತ್ತು ಅಂಗಡಿ ವ್ಯವಸ್ಥಾಪಕರಾಗಿದ್ದರು.

ಬಾಬ್ ಮೂರ್  2010ರಲ್ಲೇ ತನ್ನ 81ನೇ ಹುಟ್ಟುಹಬ್ಬದಂದು ಉದ್ಯೋಗಿಗಳನ್ನು ಮುಖ್ಯಸ್ಥರನ್ನಾಗಿ ಮಾಡಿದರು. ಮೂರ್ ತಮ್ಮ 209 ಉದ್ಯೋಗಿಗಳಿಗೆ ಉದ್ಯೋಗಿ ಸ್ಟಾಕ್ ಮಾಲೀಕತ್ವದ ಯೋಜನೆಯನ್ನು ಪ್ರಾರಂಭಿಸಿದರು ಮತ್ತು ಅವರ ಸ್ವಂತ ಮಾಲೀಕತ್ವದ ಹಕ್ಕುಗಳನ್ನು ಬಿಟ್ಟುಕೊಟ್ಟರು. ಏಪ್ರಿಲ್ 2020ರ ಹೊತ್ತಿಗೆ, ಕಂಪನಿಯು 700 ಉದ್ಯೋಗಿಗಳಿಗೆ ಬೆಳೆದಿತ್ತು. ಅಂದರೆ, ಸಾಯುವ ಮೂರು ನಾಲ್ಕು ವರ್ಷಗಳ ಮೊದಲು, 700 ಉದ್ಯೋಗಿಗಳು ಕಂಪನಿಯ ಸಂಪೂರ್ಣ ಮಾಲೀಕರಾಗಿದ್ದರು.

ಮಾಲೀಕರು ಮತ್ತು ನಿರ್ವಹಣೆಗೆ ಆದ್ಯತೆ ನೀಡುವ ಸಾಂಪ್ರದಾಯಿಕ ವ್ಯವಹಾರ ಮಾದರಿಯನ್ನು ತಪ್ಪಿಸುವುದು ನನ್ನ ಉದ್ದೇಶವಾಗಿದೆ ಎಂದು ಬಾಬ್ ಮೂರ್ ತಮ್ಮ ಈ ಕ್ರಮದ ಬಗ್ಗೆ ಹೇಳಿಕೊಂಡಿದ್ದರು.

ಇಂಗ್ಲಿಷ್ ಬಾರದೆ ಸಹಪಾಠಿಗಳ ಗೇಲಿಗೆ ಗುರಿಯಾದ ಐಎಎಸ್ ಆಫೀಸರ್ ಸುರಭಿ ಇಂಗ್ಲಿಷ್ ಕಲಿತದ್ದು ಹೇಗೆ?
 

ಬೈಬಲ್‌ನಿಂದ ಸ್ಫೂರ್ತಿ
ಮೂರ್ 2020ರಲ್ಲಿ ಹೇಳಿದಂತೆ, 'ಕಷ್ಟಪಟ್ಟು ಕೆಲಸ ಮಾಡುವುದು ಮತ್ತು ಯಶಸ್ವಿಯಾಗಲು ದಯೆ ತೋರುವುದು ಎಷ್ಟು ಮುಖ್ಯ ಎಂದು ನಾನು ಸುಮಾರು 70 ವರ್ಷಗಳ ಹಿಂದೆ ಕಲಿತಿದ್ದೇನೆ.
ನಮ್ಮ ಸಣ್ಣ ವ್ಯಾಪಾರವು ಬೆಳೆದಂತೆ, ದೊಡ್ಡ ಹೃದಯವನ್ನು ತೋರಿಸಲು ನನಗೆ ಉತ್ತಮ ಅವಕಾಶವಿದೆ ಎಂದು ನಾನು ಅರಿತುಕೊಂಡೆ. ನನ್ನ ನೆಚ್ಚಿನ ಬೈಬಲ್ ಉಲ್ಲೇಖವು ಇತರರು ನಿಮಗೇನು ಮಾಡಬೇಕೆಂದು ಬಯಸುತ್ತೀರೋ ಅದನ್ನೇ ನೀವು ಇತರರಿಗೆ ಮಾಡಬೇಕೆಂದು ಹೇಳುತ್ತದೆ. ಇದು ನಾವೆಲ್ಲರೂ ಬದುಕಬೇಕಾದ ವಿಧಾನ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ. 

ಬಾಬ್ ಮೂರ್ ತಮ್ಮ ಕಂಪನಿಯು ತಮ್ಮ ದೊಡ್ಡ ಕನಸಿನ ಕೂಸು ಎಂದು ಈ ಹಿಂದೆ ಹೇಳಿದ್ದರಲ್ಲದೆ, ಅದನ್ನು ಖರೀದಿಸಲು ಬಂದ ಅನೇಕ ಪ್ರಸ್ತಾಪಗಳನ್ನು ತಿರಸ್ಕರಿಸಿದ್ದರು. ಮೂರ್ 2018ರಲ್ಲಿ ಕಂಪನಿಯಿಂದ ನಿವೃತ್ತರಾದರು. ಆದಾಗ್ಯೂ, ಅವರು ತಮ್ಮ ಕೊನೆಯ ಉಸಿರು ಇರುವವರೆಗೂ ಕಂಪನಿಯ ಆಡಳಿತ ಮಂಡಳಿಯಲ್ಲಿದ್ದರು. 

Latest Videos
Follow Us:
Download App:
  • android
  • ios