ಬೆಳಗ್ಗೆ ಎದ್ದು ಕನ್ನಡಿ ಮುಂದೆ ನಿಂತಾಗ, ಆ ಕಪ್ಪು ಕೂದಲಿನ ನಡುವೆ ಒಂದೇ ಒಂದು 'ಬಿಳಿ ಕೂದಲು' ಇಣುಕಿ ನೋಡಿದರೆ ಸಾಕು, ಆಗುವ ಸಂಕಟ ಅಷ್ಟಿಷ್ಟಲ್ಲ. "ಅಯ್ಯೋ, ಆಗಲೇ ವಯಸ್ಸಾಯಿತೇ?" ಎಂಬ ಪ್ರಶ್ನೆ ಕಾಡಲು ಶುರುವಾಗುತ್ತದೆ. ತಕ್ಷಣ ನಾವು ಮಾಡೋದು ಏನು? ಮಾರುಕಟ್ಟೆಗೆ ಓಡಿಹೋಗಿ ಯಾವುದೋ ಒಂದು ಕೆಮಿಕಲ್ ಹೇರ್ ಡೈ ತಂದು ತಲೆಗೆ ಹಚ್ಚಿಕೊಳ್ಳುತ್ತೇವೆ. ಆದರೆ ಅದೇನ್ ಬೇಡ, ಈ ಸ್ಟೋರಿ ನೋಡಿ..

ಈ ಹಣ್ಣಿನ ಸಿಪ್ಪೆ ಕಸದ ಬುಟ್ಟಿಗೆ ಎಸೆಯುವ ಮುನ್ನ ಯೋಚಿಸಿ!

Add Asianetnews Kannada as a Preferred SourcegooglePreferred

ಬೆಳಗ್ಗೆ ಎದ್ದು ಕನ್ನಡಿ ಮುಂದೆ ನಿಂತಾಗ, ಆ ಕಪ್ಪು ಕೂದಲಿನ ನಡುವೆ ಒಂದೇ ಒಂದು 'ಬಿಳಿ ಕೂದಲು' ಇಣುಕಿ ನೋಡಿದರೆ ಸಾಕು... ದೇವರೆ! ನಮಗೆ ಆಗುವ ಸಂಕಟ ಅಷ್ಟಿಷ್ಟಲ್ಲ. "ಅಯ್ಯೋ, ಆಗಲೇ ವಯಸ್ಸಾಯಿತೇ?" ಎಂಬ ಪ್ರಶ್ನೆ ಕಾಡಲು ಶುರುವಾಗುತ್ತದೆ. ತಕ್ಷಣ ನಾವು ಮಾಡೋದು ಏನು? ಮಾರುಕಟ್ಟೆಗೆ ಓಡಿಹೋಗಿ ಯಾವುದೋ ಒಂದು ಕೆಮಿಕಲ್ ಹೇರ್ ಡೈ ತಂದು ತಲೆಗೆ ಹಚ್ಚಿಕೊಳ್ಳುತ್ತೇವೆ. ಆದರೆ ಗೆಳೆಯರೇ, ಸ್ವಲ್ಪ ನಿಲ್ಲಿ! ಹಣವನ್ನೂ ಖರ್ಚು ಮಾಡಿ, ತಲೆಗೂ ಹಾನಿ ಮಾಡಿಕೊಳ್ಳುವ ಬದಲು, ನಿಮ್ಮ ಅಡುಗೆಮನೆಯಲ್ಲಿಯೇ ಇರುವ ಒಂದು ಅದ್ಭುತ 'ಜಾದೂ' ಬಗ್ಗೆ ನಿಮಗೆ ಗೊತ್ತಾ?

"ಕಸದಿಂದ ರಸ" ಎಂಬ ಮಾತನ್ನು ನೀವು ಕೇಳಿರಬಹುದು. ಇಂದು ನಾವು ಹೇಳಹೊರಟಿರುವುದು ಅದೇ! ನೀವು ಹಣ್ಣು ತಿಂದು ಕಸದ ಬುಟ್ಟಿಗೆ ಎಸೆಯುವ ದಾಳಿಂಬೆ ಹಣ್ಣಿನ ಸಿಪ್ಪೆ (Pomegranate Peel) ನಿಮ್ಮ ಪಾಲಿಗೆ ಈಗ 'ಲಕ್ಕಿ ಚಾರ್ಮ್'. ಹೌದು, ಸಾವಿರಾರು ರೂಪಾಯಿ ಖರ್ಚು ಮಾಡದೆ, ಕೇವಲ ಎರಡೇ ನಿಮಿಷದಲ್ಲಿ ನ್ಯಾಚುರಲ್ ಆಗಿ ಕೂದಲನ್ನು ಕಪ್ಪಾಗಿಸುವ ಈ ಟ್ರಿಕ್ ನಿಮಗಾಗಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

ದಾಳಿಂಬೆ ಹಣ್ಣಿನ ಸಿಪ್ಪೆ (ನಿಮ್ಮ ಮನೆ ಮುಂದಿನ ಕಸದ ಬುಟ್ಟಿಗೆ ಹೋಗಬೇಕಾಗಿದ್ದ ವಸ್ತು!)

ಶುದ್ಧವಾದ ತೆಂಗಿನ ಎಣ್ಣೆ.

ತಯಾರಿಸುವ 'ಖತರ್ನಾಕ್' ವಿಧಾನ:

ಮೊದಲಿಗೆ, ನೀವು ತಿಂದ ದಾಳಿಂಬೆ ಹಣ್ಣಿನ ಸಿಪ್ಪೆಗಳನ್ನು ಎಸೆಯಬೇಡಿ. ಅವುಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಅವು ಎಷ್ಟು ಒಣಗಿರಬೇಕೆಂದರೆ, ಮುಟ್ಟಿದರೆ 'ಕಟಕ್' ಅನ್ನಬೇಕು. ಈಗ ಅಸಲಿ ಆಟ ಶುರು! ಗ್ಯಾಸ್ ಮೇಲೆ ಒಂದು ಕಬ್ಬಿಣದ ಬಾಣಲೆ ಇಡಿ (ಕಬ್ಬಿಣದ ಬಾಣಲೆ ಬಳಸಿದರೆ ರಿಸಲ್ಟ್ ಇನ್ನೂ ಅದ್ಭುತ). ಈ ಒಣಗಿದ ಸಿಪ್ಪೆಗಳನ್ನು ಅದಕ್ಕೆ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಅದು ಸಂಪೂರ್ಣವಾಗಿ ಕಪ್ಪಾಗುವವರೆಗೆ ಬಿಡಬೇಡಿ. ನಂತರ ಅದನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿ.

ಈಗ ಮತ್ತೊಂದು ಪಾತ್ರೆಯಲ್ಲಿ ನಿಮ್ಮ ಕೂದಲಿಗೆ ಬೇಕಾದಷ್ಟು ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ. ಆ ಎಣ್ಣೆಗೆ ನೀವು ತಯಾರಿಸಿದ ಈ 'ಬ್ಲ್ಯಾಕ್ ಮ್ಯಾಜಿಕ್' ಪುಡಿಯನ್ನು ಬೆರೆಸಿ ಚೆನ್ನಾಗಿ ಕುದಿಸಿ. ನೋಡಿ, ಈಗ ನಿಮ್ಮ ಕಣ್ಣೆದುರೇ ತಯಾರಾಗಿದೆ ಮನೆಯಲ್ಲೇ ಮಾಡಿದ ನೈಸರ್ಗಿಕ ಹೇರ್ ಕಲರ್!

ಬಳಸುವುದು ಹೇಗೆ?

ಈ ಮಿಶ್ರಣ ತಣ್ಣಗಾದ ಮೇಲೆ, ಕೂದಲಿನ ಬುಡಕ್ಕೆ ನಿಧಾನವಾಗಿ ಹಚ್ಚಿ ಮಸಾಜ್ ಮಾಡಿ. ಎರಡೇ ನಿಮಿಷದಲ್ಲಿ ಬಿಳಿ ಕೂದಲು ಮಾಯವಾಗಿ ಕಪ್ಪು ಹೊಳಪು ನಿಮ್ಮದಾಗುತ್ತದೆ. ಇದು ಸಂಪೂರ್ಣ ನೈಸರ್ಗಿಕವಾಗಿರುವುದರಿಂದ ಯಾವುದೇ ಅಡ್ಡಪರಿಣಾಮಗಳ ಭಯವಿಲ್ಲ.

ಇನ್ನೇಕೆ ತಡ? ಇಂದೇ ದಾಳಿಂಬೆ ತಿಂದ ಮೇಲೆ ಅದರ ಸಿಪ್ಪೆಯನ್ನು ಜತನವಾಗಿ ಎತ್ತಿಡಿ. ಬಿಳಿ ಕೂದಲಿನ ಟೆನ್ಷನ್ ಬಿಡಿ, ಸ್ಟೈಲ್ ಆಗಿ ಮಿಂಚಿ!