Asianet Suvarna News Asianet Suvarna News

PCOS Problems: ಹೆಂಡ್ತಿ ವಿನಾಕಾರಣ ಕಿರುಚಾಡೋದಕ್ಕೆ ಇದೇ ಕಾರಣವಿರಬಹುದು..!

ಮನೆಯಲ್ಲಿ ಅಮ್ಮ(Mother) ಅಥವಾ ಹೆಂಡತಿ(Wife) ವಿನಾಕಾರಣ ಸಿಡುಕುತ್ತಿರುತ್ತಾರೆ, ವಿಚಿತ್ರವಾಗಿ ವರ್ತಿಸುತ್ತಾರೆ. ಸುಮ್ ಸುಮ್ನೆ ರೇಗಾಡುತ್ತಾರೆ ಅಂತ ಅನಿಸಿದ್ಯಾ..ಹಾಗಿದ್ರೆ ದಿಢೀರ್(Sudden) ಆ ರೀತಿ ವರ್ತಿಸುತ್ತಿರೋದಕ್ಕೆ ಇದು ಕೂಡಾ ಕಾರಣ(Reason) ಆಗಿರಬಹುದು.  


 

Polycystic Ovary Syndrome Symptoms Causes and Treatment
Author
Bengaluru, First Published Dec 12, 2021, 2:28 PM IST

ಪಿಸಿಒಎಸ್(PCOS) ಅಥವಾ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್, ಜಾಗತಿಕವಾಗಿ ಹೆಚ್ಚಿನ ಮಹಿಳೆಯರು ಅನುಭವಿಸುವ ಹಾರ್ಮೋನ್(Harmon) ಅಸಮತೋಲನವಾಗಿದೆ. ಮಹಿಳೆಯರ ಹಾರ್ಮೋನಿನ ಮಟ್ಟಗಳಿಗೆ ಪರಿಣಾಮ ಬೀರಿ ಆಕೆಯ ಅಂಡಾಶಯಗಳ ಕಾರ್ಯ ಚಟುವಟಿಕೆಗಳ ಮೇಲೆ ಸಹ ಪರಿಣಾಮ ಬೀರುತ್ತದೆ. ಪಿಸಿಒಎಸ್ ಸಮಸ್ಯೆ ಮಹಿಳೆಯರ ದೇಹದಲ್ಲಿ ಪುರುಷರಿಗೆ ಸಂಬಂಧಪಟ್ಟ ಹಾರ್ಮೋನುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುವಂತೆ ಮಾಡುತ್ತದೆ. ಅಷ್ಟೇ ಅಲ್ಲದೆ, ಇದು ಕೆಲವೊಮ್ಮೆ ಮಹಿಳೆಯರ ಆರೋಗ್ಯ(Health)ದ ಮೇಲೆ ದೀರ್ಘಾವದಿ ಪರಿಣಾಮ ಸಹ ಬೀರುತ್ತದೆ. ಅಧ್ಯಯನವೊಂದರ ಪ್ರಕಾರ ಪ್ರತಿ 100 ಮಹಿಳೆಯರಲ್ಲಿ  26 ಮಹಿಳೆಯರು ಪಿಸಿಒಎಸ್ ನಿಂದ ನರಳುತ್ತಾರೆ ಎಂದು ಅಂದಾಜು ಮಾಡಲಾಗಿದೆ. 

ಪಿಸಿಒಎಸ್ ಎಂದರೇನು..?

ಋತುಚಕ್ರದಲ್ಲಿ 11-14ನೇ ದಿನಗಳ ಮಧ್ಯೆ ಗರ್ಭಾಶಯದ ಅಕ್ಕಪಕ್ಕ ಇರುವ ಎರಡು ಅಂಡಾಶಯಗಳಲ್ಲಿ ಯಾವುದಾದರೂ ಒಂದು ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುತ್ತದೆ. ಈ ಅಂಡಾಣು ಸಂತಾನೋತ್ಪತ್ತಿಗೆ ಸಿದ್ಧಗೊಳ್ಳುತ್ತದೆ. ಆದರೆ ಪಿಸಿಒಎಸ್ ಸಮಸ್ಯೆ ಇರುವವರಿಗೆ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುವುದಿಲ್ಲ. ಈ ಕಾರಣದಿಂದಾಗಿ ಗರ್ಭದಾರಣೆಯಾಗುವುದಿಲ್ಲ. 

PCOS ಹೊಂದಿರುವ ಮಹಿಳೆಯರಿಗೆ ತೂಕ ಇಳಿಸುವುದು ಏಕೆ ಕಷ್ಟ???

ಪಿಸಿಒಎಸ್ ಲಕ್ಷಣಗಳೇನು..?

ಪಿಸಿಒಎಸ್ ಸಮಸ್ಯೆ ಇರುವವರಿಗೆ ಅಸಮರ್ಪಕ ಋತುಸ್ರಾವ(Menstruation) ಅಥವಾ ಋತುಚಕ್ರ ಇಲ್ಲದಿರುವಿಕೆ ಉಂಟಾಗುತ್ತದೆ. ಅಂದರೆ ವರ್ಷದಲ್ಲಿ ೮ ಬಾರಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಮುಟ್ಟಾಗುವುದು. ಕೆಲವರಿಗೆ 4 ತಿಂಗಳು ಅಥವಾ ಹೆಚ್ಚಿನ ಸಮಯ ಮುಟ್ಟಾಗುವುದಿಲ್ಲ. 

ಮುಖ ಅಥವಾ ದೇಹದ ಇತರ ಭಾಗಗಳಲ್ಲಿ ಕೂದಲು ಹೆಚ್ಚಾಗಿರುವಿಕೆ, ತಲೆಯ ಕೂದಲು ಉದುರುವಿಕೆ, ಮುಖದಲ್ಲಿ ಮೊಡವೆ, ಸ್ಥೂಲಕಾಯ ಅಥವಾ ಬೊಜ್ಜು, ಗರ್ಭಧಾರಣೆ ಧರಿಸಲು ಕಷ್ಟವಾಗುವಿಕೆ, ಖಿನ್ನತೆ ಮತ್ತು ಮಾನಸಿಕ ಸಮಸ್ಯೆ(ಗಳು ಕಾಣಿಸಿಕೊಳ್ಳುತ್ತದೆ. 

ಪಿಸಿಒಎಸ್‍ಗೆ ಕಾರಣವೇನು..?

ಪಿಸಿಒಎಸ್ ಹೆಚ್ಚಾಗಿ ಅನುವಂಶೀಯತೆ ಕಾರಣ ಎಂದು ಹೇಳಲಾಗುತ್ತದೆ. ಪುರುಷ ಹಾರ್ಮೋನುಗಳು ಅಧಿಕ ಮಟ್ಟದಲ್ಲಿ ಅಂಡಾಶಯಗಳು ಹಾರ್ಮೋನುಗಳನ್ನು ಉತ್ಪಾದಿಸುವುದಕ್ಕೆ ಅಡ್ಡಿಪಡಿಸುತ್ತವೆ, ವಂಶವಾಹಿಗಳು, ಇನ್ಸುಲಿನ್ ಪ್ರತಿರೋಧಕತೆ ಹಾಗೂ ಉರಿಯೂತ ಇವೆಲ್ಲಾ ಕಾರಣಗಳಿಂದ ಅಧಿಕ ಆಂಡ್ರೋಜೆನ್ ಉತ್ಪಾದನೆಯಾಗುತ್ತದೆ. ಈ ಕಾರಣಕ್ಕೆ ಮಾತ್ರವಲ್ಲದೆ, ಆಧುನಿಕ ಜೀವನಶೈಲಿ, ಅನಾರೋಗ್ಯಕರ ಆಹಾರಶೈಲಿ, ದೈಹಿಕ ವ್ಯಾಯಾಮ ಇಲ್ಲದಿರುವುದು, ಮಾನಸಿಕ ಒತ್ತಡ ಇವೆಲ್ಲಾ ಪಿಸಿಒಎಸ್ ಸಮಸ್ಯೆ ಹೆಚ್ಚಲು ಕಾರಣವಾಗಿದೆ. 

ನಿಮ್ಮ ಅಡುಗೆಮನೆಯಲ್ಲಿಯೇ ಇದೆ PCOS‌ಗೆ ಪರಿಹಾರ..!

ಪಿಸಿಒಎಸ್‍ಗೆ ಚಿಕಿತ್ಸೆ ಹೇಗೆ..?

ಪಿಸಿಒಎಸ್ ಸಮಸ್ಯೆಯನ್ನು ನಿವಾರಿಸಲು ಹಲವಾರು ವಿಧಾನಗಳಿವೆ. ದೈಹಿಕ ವ್ಯಾಯಾಮ ಮಾಡುವುದು, ಆರೋಗ್ಯಕರ ಆಹಾರಕ್ರಮ ಪಾಲಿಸುವ ಮೂಲಕ ನೈಸರ್ಗಿಕವಾಗಿ ಪಿಸಿಒಎಸ್ ಸಮಸ್ಯೆಯನ್ನು ನಿವಾರಿಸಬಹುದು. ಒಂದು ದಿನದಲ್ಲಿ ಅರ್ಧ ಗಂಟೆ ಕಡ್ಡಾಯವಾಗಿ ದೈಹಿಕ ವ್ಯಾಯಾಮ(Exercise) ಮಾಡಬೇಕು. ಇದರಿಂದ ತೂಕ ಹೆಚ್ಚಳದ ಸಮಸ್ಯೆ ಸಹ ಕಡಿಮೆಯಾಗುತ್ತದೆ. ಅಲ್ಲದೆ ಆಹಾರಕ್ರಮದಲ್ಲಿ ಬದಲಾವಣೆ ಮಾಡುವುದು ಸಹ ಉತ್ತಮ. ಪಿಜ್ಜಾ, ಬರ್ಗರ್, ಕರಿದ ಪದಾರ್ಥಗಳು, ತಿಂಡಿಗಳನ್ನು ತಿನ್ನಬಾರದು. ಬದಲಾಗಿ ಕೆಂಪಕ್ಕಿ, ಹಣ್ಣು(Fruit), ಸೊಪ್ಪು, ತರಕಾರಿಗಳನ್ನು ಹೆಚ್ಚೆಚ್ಚು ಸೇವಿಸಬೇಕು. 

ಔಷಧಗಳ ಮೂಲಕ ಟೆಸ್ಟೋಸ್ಟಿರೋನ್ ಉತ್ಪತ್ತಿಯನ್ನು ಕಡಿಮೆ ಮಾಡಿದರೆ ಗರ್ಭಧಾರಣೆ(Pregnancy)ಯ ಸಾಧ್ಯತೆ ಹೆಚ್ಚುತ್ತದೆ. ವೈದ್ಯರು ಸೂಚಿಸಿದಂತೆ ಹೇಳಿದಷ್ಟು ತಿಂಗಳು ನಿಯಮಿತವಾಗಿ ಔಷಧಿ ತೆಗೆದುಕೊಂಡರೆ ಸಮಸ್ಯೆ(Problem) ಕಡಿಮೆಯಾಗುತ್ತದೆ. ಓವರಿಯನ್ ಡ್ರಿಲ್ಲಿಂಗ್ ಎಂದರೆ ಅಂಡಾಶಯ ಕೊರೆಯುವಿಕೆ ಚಿಕಿತ್ಸೆ(Treatment)ಯನ್ನು ಸಹ ಮಾಡಿಕೊಳ್ಳಬಹುದು. ಇದರಲ್ಲಿ ಸಣ್ಣ ಎಲೆಕ್ಟ್ರಾನಿಕ್ ಸೂಜಿ ಬಳಸಿ ಅಂಡಾಶಯದಲ್ಲಿ ಚಿಕ್ಕ ರಂಧ್ರ ಮಾಡಿ ಕೊರೆಯಲಾಗುತ್ತದೆ. ಈ ಮೂಲಕ ಟೆಸ್ಟೋಸ್ಟಿರೋನ್ ಉತ್ಪತ್ತಿಯನ್ನು ತಗ್ಗಿಸಿ ಅಂಡೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲಾಗುತ್ತದೆ.

ಪಿಸಿಒಎಸ್‌ ಬಂದದ್ದೇ ಹೆಲ್ದೀ ಹುಡ್ಗಿಯಾದೆ; ಸೆಪ್ಟೆಂಬರ್‌ ಪಾಲಿಸಿಸ್ಟಿಕ್‌ ಒವೇರಿಯನ್‌ ಸಿಂಡ್ರೋಮ್‌ ತಿಂಗಳು!

ಪದ್ಮಾಸನ, ಶವಾಸನ, ಬಟರ್ ಫ್ಲೈ ಫೋಸ್, ಸುಪ್ತ ಬದ್ಧಾಕೋನಾಸನ, ಭಾರಧ್ವಜಾಸನ ಈ ಯೋಗ ಆಸನಗಳು ಪಿಸಿಒಎಸ್ ಸಮಸ್ಯೆ ನಿವಾರಿಸುವಲ್ಲಿ ಸಹಕಾರಿಯಾಗಿದೆ. ಅಲ್ಲದೆ, ಈ ಆಸನಗಳ ಜತೆಗೆ ದಿನದಲ್ಲಿ 6-12 ಬಾರಿ ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದ ಕೊಬ್ಬು ಕರಗುವುದು ಹಾಗೂ ಆರೋಗ್ಯ ವೃದ್ಧಿಯಾಗುವುದು.

Follow Us:
Download App:
  • android
  • ios