ವಾಕಿಂಗ್​ , ರನ್ನಿಂಗ್, ಜಾಗಿಂಗ್​​ ಏನ್​ ಮಾಡಿದ್ರೂ ಹೊಟ್ಟೆ ಕರಗೋದೇ ಇಲ್ಲ ಎನ್ನುವುದು ಹಲವರ ದೂರು. ಅಷ್ಟಕ್ಕೂ ಇದು ಯಾಕೆ ಗೊತ್ತಾ? ವೈದ್ಯರು ಹೇಳಿದ್ದೇನು ಕೇಳಿ... 

ತೂಕ ಕಡಿಮೆ ಮಾಡಿಕೊಳ್ಳಲು ದಿನವೂ ವಾಕಿಂಗ್​ ಮಾಡಿ, ರನ್ನಿಂಗ್ ಮಾಡಿ ಎಂದೆಲ್ಲಾ ಎಲ್ಲರೂ ಹೇಳುವುದು ಮಾಮೂಲು. ಆದರೆ ಇದನ್ನು ಸರಿಯಾಗಿ ಅನುಸರಿಸಿದರೆ, ತೂಕ ಕಡಿಮೆ ಆಗುವುದು ನಿಜವಾದರೂ ಹೊಟ್ಟೆಯ ಬೊಜ್ಜು ಮಾತ್ರ ಕರಗಲ್ಲ ಎನ್ನುವುದನ್ನು ನೀವು ಗಮನಿಸಿರಬಹುದು. ಬರಿಯ ವಾಕಿಂಗ್​, ರನ್ನಿಂಗ್​, ಜಾಗಿಂಗ್​ ಮಾಡಿದರೆ ಹೊಟ್ಟೆಯ ಬೊಜ್ಜು ಕರಗುವುದು ಇಲ್ಲ ಎನ್ನುತ್ತಾರೆ ಹಲವು ವೈದ್ಯರು. ಇವೆಲ್ಲಾ ಮಾಡುವುದರಿಂದ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭಗಳಿವೆ ಅನ್ನುವುಉ ದಿಟವೇ. ಅಧಿಕ ತೂಕ, ಮಧುಮೇಹ, ರಕ್ತದೊತ್ತಡ, ಹೃದಯದ ಕಾಯಿಲೆ ಹೊಂದಿರುವವರು ಪ್ರತಿದಿನ ವಾಕ್ ಮಾಡಲೇ ಬೇಕು ಎಂದು ವೈದ್ಯರು ಕೂಡ ಸಲಹೆ ನೀಡುತ್ತಾರೆ. ಆರೋಗ್ಯವಂತರಾಗಿ ಇದ್ದವರು ಕೂಡ ಇಂಥ ಸಮಸ್ಯೆ ಬರಬಾರದು ಎಂದರೆ ನಿಯಮಿತವಾಗಿ ವಾಕಿಂಗ್​ ಮಾಡುವುದು ಒಳ್ಳೆಯದೇ.

ಆದರೆ ಹೊಟ್ಟೆಯ ಬೊಜ್ಜಿನ ವಿಷಯಕ್ಕೆ ಬಂದರೆ, ಇವಿಷ್ಟೇ ಸಾಕಾಗುವುದಿಲ್ಲ. ಏಕೆಂದ್ರೆ ವಾಕಿಂಗ್​, ರನ್ನಿಂಗ್​ ಜಾಗಿಂಗ್​ ಏನೇ ಮಾಡಿದರೂ ಅದು ಕಾಲಿನಿಂದ ಮಾಡುವಂಥದ್ದು, ಆದ್ದರಿಂದ ಕಾಲಿಗೆ ಬಲ ಬರುವ ಜೊತೆಗೆ ದೇಹದಲ್ಲಿ ಒಂದಿಷ್ಟು ಬದಲಾವಣೆ ಆಗುತ್ತದೆ. ಆದರೆ ಹೊಟ್ಟೆಯ ಬೊಜ್ಜು ಕರಗಲು ಹೊಟ್ಟೆಯ ಜೊತೆಯೇ ಕಸರತ್ತು ಮಾಡಬೇಕು ಎನ್ನುತ್ತಾರೆ ಡಾ.ತ್ರಿಮೂರ್ತಿ.

ಹೂವು ಮಾರುವವನೊಬ್ಬನ ಉದಾಹರಣೆ ಕೊಟ್ಟ ಅವರು ಪ್ರತಿನಿತ್ಯ ಹತ್ತಾರು ಕಿಲೋಮೀಟರ್​ ನಡೆದರೂ ಹೊಟ್ಟೆಯ ಬೊಜ್ಜು ಕರಗುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ. ಅದಕ್ಕೆ ನಾನು ವಾಕಿಂಗ್​ ಮಾಡುವುದು ಕಾಲಿನಿಂದ ಹೊಟ್ಟೆಯಿಂದ ಅಲ್ಲವಲ್ಲ ಎಂದು ಹೇಳಿದೆ ಎನ್ನುತ್ತಲೇ ಹೊಟ್ಟೆಯ ಬೊಜ್ಜು ಕರಗಿಸಲು ಹೊಟ್ಟೆಗೆ ಭಾರ ಬೀಳುವ ಕಸರತ್ತು ಮಾಡಲೇಬೇಕು. ಇದು ಅನಿವಾರ್ಯ ಎನ್ನುತ್ತಾರೆ ಅವರು.

ಇನ್ನು ತೂಕ ಇಳಿಸಿಕೊಳ್ಳುವ ವಿಚಾರಕ್ಕೆ ಬಂದರೆ ಪ್ರತಿದಿನ 30 ನಿಮಿಷವಾದರೂ ನಡೆಯಬೇಕು. ವಯಸ್ಸು ಹೆಚ್ಚಾಗಿದ್ದಲ್ಲಿ ವೇಗವನ್ನು ಸಾಮಾನ್ಯ ಸ್ಥಿತಿಯಲ್ಲಿಟ್ಟುಕೊಂಡು ನಡೆಯಬಹುದು. ಊಟ ಮಾಡಿದ ನಂತರ ಅಥವಾ ಬೆಳಿಗ್ಗೆ ಎದ್ದ ತಕ್ಷಣ ಯಾವಾಗಲೂ ವಾಕಿಂಗ್ ಮಾಡಿದರೆ ಉತ್ತಮ. ಬೆಳಿಗ್ಗೆ ಎದ್ದಾಕ್ಷಣ ನಡೆದರೆ ದೇಹದಲ್ಲಿನ ಜಡತ್ವ ಹೋಗಿ ದೇಹಕ್ಕೆ ಚೈತನ್ಯ ತುಂಬುತ್ತದೆ. ಇದಲ್ಲದೆ, ನೀವು ಊಟ ಮಾಡಿದ ನಂತರ ವಾಕಿಂಗ್ ಮಾಡಿದರೆ ನಿಮ್ಮ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಊಟದ ಬಳಿಕ ಅಥವಾ ಬೆಳಿಗ್ಗೆ ಎದ್ದ ತಕ್ಷಣ ಯಾವಾಗಲೂ ವಾಕಿಂಗ್ ಮಾಡಿದರೆ ಬೆಳಿಗ್ಗೆ ಎದ್ದ ತಕ್ಷಣ ನಡೆಯುವುದರಿಂದ ನಿಮ್ಮ ಜಡ ದೇಹಕ್ಕೆ ಚೈತನ್ಯ ತುಂಬುತ್ತದೆ. ಇದಲ್ಲದೆ, ನೀವು ಊಟ ಮಾಡಿದ ನಂತರ ವಾಕಿಂಗ್ ಮಾಡಿದರೆ ನಿಮ್ಮ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಇದು ತೂಕ ಕಡಿಮೆಗೆ ಸಹಕಾರಿಯಾಗಬಹುದೇ ವಿನಾ ಹೊಟ್ಟೆಯ ಬೊಜ್ಜು ಕಡಿಮೆಗೆ ಅಲ್ಲ.