ಮಧುಮೇಹದಿಂದ ಬಳಲುತ್ತಿದ್ದ ಅಮಿತ್ ಶಾ, ಜೀವನಶೈಲಿ ಬದಲಿಸಿ ಔಷಧಿಗಳಿಲ್ಲದೆ ಗುಣಮುಖರಾಗಿದ್ದಾರೆ. ನಿಯಮಿತ ವ್ಯಾಯಾಮ, ಸರಿಯಾದ ನಿದ್ರೆ, ಸಮತೋಲಿತ ಆಹಾರ ಸೇವನೆಯಿಂದ ೨೦ ಕೆಜಿ ತೂಕ ಇಳಿಸಿಕೊಂಡು, ಇನ್ಸುಲಿನ್ ಮುಕ್ತರಾಗಿದ್ದಾರೆ. ಯುವಜನರು ಆರೋಗ್ಯದತ್ತ ಗಮನ ಹರಿಸಿ, ದೀರ್ಘಾಯುಷ್ಯ ಪಡೆಯಬೇಕೆಂದು ಕರೆ ನೀಡಿದ್ದಾರೆ.
ಈಗ ಶುಗರ್ ಎನ್ನುವುದು ಮಾಮೂಲಾಗಿಬಿಟ್ಟಿದೆ. ಪ್ರತಿಯೊಬ್ಬರ ಮನೆಯಲ್ಲಿಯೂ ಒಬ್ಬರಾದರೂ ಶುಗರ್ ಪೇಷೆಂಟ್ ಇರುವ ಸ್ಥಿತಿ ನಿರ್ಮಾಣವಾಗಿದೆ. ಒಂದಷ್ಟು ವಯಸ್ಸಾದ ಮೇಲೆ ಬರುತ್ತಿರುವ ಈ ಸಮಸ್ಯೆ ಇದೀಗ ಹದಿಹರೆಯದವರು ಅಷ್ಟೇ ಏಕೆ ಚಿಕ್ಕಮಕ್ಕಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಅದಕ್ಕೆ ತಕ್ಕಂತೆ ಮಧುಮೇಹಕ್ಕೆಂದೇ ಆಸ್ಪತ್ರೆಗಳು ತಲೆ ಎತ್ತಿ ನಿಂತಿವೆ. ಇದಕ್ಕಾಗಿ ಇರುವ ಔಷಧಗಳಿಗಂತೂ ಲೆಕ್ಕವೇ ಇಲ್ಲ. ಭಾರತ ಕೂಡ ಮಧುಮೇಹಿಗಳ ರಾಜಧಾನಿಯಾಗುತ್ತಿದೆ ಎನ್ನುವ ಹೊತ್ತಿನಲ್ಲಿಯೇ ಮಧುಮೇಹದ ಹೆಸರಿನಲ್ಲಿ ವೈದ್ಯಕೀಯ ಲೋಕ ಸಹಸ್ರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಸುತ್ತಿದೆ. ಸದ್ಯದ ಲೆಕ್ಕಾಚಾರದ ಪ್ರಕಾರ 170 ಬಿಲಿಯನ್ ರೂಪಾಯಿಗಳ ಔಷಧಗಳು ಮಧುಮೇಹದಿಂದ ನಡೆಯುತ್ತಿದೆ. ಒಮ್ಮೆ ಶುಗರ್ ಬಂದರೆ ಅದನ್ನು ಗುಣಪಡಿಸಲು ಸಾಧ್ಯವೇ ಇಲ್ಲ ಎನ್ನುತ್ತಲೇ ಈ ಔಷಧಗಳು ತಮ್ಮ ವ್ಯಾಪ್ತಿಯನ್ನು ಹೆಚ್ಚಿಸುತ್ತಲೇ ಸಾಗಿದೆ. ಈ ಮಾತ್ರೆಗಳನ್ನು ಹೆಚ್ಚೆಚ್ಚು ತೆಗೆದುಕೊಂಡರೆ ಕಿಡ್ನಿ, ಲಿವರ್ ಸಮಸ್ಯೆ ಹೆಚ್ಚಾಗುತ್ತದೆ ಎನ್ನುವ ಮಾತುಗಳು ಇದ್ದರೂ, ಆ ಬಗ್ಗೆ ಜನರು ಹೆಚ್ಚು ಗಮನ ಕೊಡುತ್ತಲೂ ಇಲ್ಲ.
ಇದರ ಬಗ್ಗೆನೇ ಈಗ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಳೆದ ಐದು ವರ್ಷಗಳಿಂದ ತಾವು ಹೇಗೆ ಮಧುಮೇಹವನ್ನು ಇಲ್ಲವಾಗಿಸಿಕೊಂಡಿರುವ ಬಗ್ಗೆ ಮಾತನಾಡಿದ್ದಾರೆ. 2020ರಿಂದ ತಮ್ಮ ಜೀವನದಲ್ಲಿ ಮಾಡಿಕೊಂಡಿರುವ ಬದಲಾವಣೆಗಳಿಂದ ಹೇಗೆ ಇನ್ಸುಲಿನ್ನೂ ಇಲ್ಲದೇ, ಮಾತ್ರೆಗಳನ್ನೂ ತೆಗೆದುಕೊಳ್ಳದೇ ಜೊತೆಗೆ 20 ಕೆ.ಜಿ. ತೂಕವನ್ನೂ ಇಳಿಸಿಕೊಂಡಿರುವ ಬಗ್ಗೆ ಅಮಿತ್ ಶಾ ಹೇಳಿದ್ದಾರೆ. ವಿಶ್ವ ಯಕೃತ್ತಿನ ದಿನದಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್ ಶಾ ಅವರು, "ನಾನೂ ಮಧುಮೇಹಿಯಾಗಿದ್ದೆ. ಆದರೆ ಮೇ 2020 ರಿಂದ ನಾನು ದೊಡ್ಡ ಬದಲಾವಣೆಗಳನ್ನು ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಈಗ ಇನ್ಸುಲಿನ್ ಕೂಡ ಇಲ್ಲದೆಯೇ, ಅಲೋಪಥಿ ಮಾತ್ರೆಗಳನ್ನೂ ತೆಗೆದುಕೊಳ್ಳದೇ ಮಧುಮೇಹ ಮುಕ್ತನಾಗಿದ್ದೇನೆ" ಎಂದು ಹೇಳಿದರು.
ಎರಡೇ ಎರಡೇ ಪುಡಿ- ಬಿಳಿಗೂದಲು ಫುಲ್ ಮಾಯ: ಪ್ರಖ್ಯಾತ ಆಯುರ್ವೇದ ವೈದ್ಯರ ಸಲಹೆ ಕೇಳಿ
ಇದಕ್ಕೆ ಬೇಕಿರುವುದು ಆರೋಗ್ಯಕರ ಜೀವನಶೈಲಿ ಎಂದು ಅವರು ಹೇಳಿದ್ದಾರೆ. ದೇಶದ ಯುವಕರು ತಮ್ಮ ಆರೋಗ್ಯದ ಮೇಲೆ ಸಕ್ರಿಯವಾಗಿ ಗಮನಹರಿಸಬೇಕೆಂದು ಅವರು ಒತ್ತಾಯಿಸಿದ ಸಚಿವರು, ಹೀಗೆ ಮಾಡಿದರೆ ಬದುಕುವುದಕ್ಕಿಂತ 40-50 ವರ್ಷ ಹೆಚ್ಚಿಗೇನೇ ಬದುಕಬಹುದು ಮತ್ತು ದೇಶದ ಪ್ರಗತಿಗೆ ಕೊಡುಗೆ ನೀಡಬಹುದು ಎಂದು ಹೇಳಿದ್ದಾರೆ. ಅದಕ್ಕೆ ಅವರು ಕೊಟ್ಟಿರುವ ಟಿಪ್ಸ್ ಎಂದರೆ, ಅಗತ್ಯ ಪ್ರಮಾಣದ ನಿದ್ರೆ, ದೇಹಕ್ಕೆ ಬೇಕಾಗುವಷ್ಟು ನೀರು ಮತ್ತು ದೇಹಕ್ಕೆ ಅಗತ್ಯ ಇರುವಷ್ಟು ಆಹಾರ ಇವು ಅತ್ಯಗತ್ಯ ಎಂದಿರುವ ಸಚಿವ ಅಮಿತ್ ಶಾ, ಪ್ರತಿನಿತ್ಯ 2 ಗಂಟೆಗಳಷ್ಟು ತಾವು ವ್ಯಾಯಾಮ ಮಾಡುತ್ತಿರುವ ಕಾರಣ, ಹೇಗೆ ತಮ್ಮ ಆರೋಗ್ಯ ಸ್ಥಿತಿ ಸುಧಾರಿಸಿತು ಎಂದು ಹೇಳಿದ್ದಾರೆ. ಈ ಪದ್ಧತಿ ಮತ್ತು ದಿನನಿತ್ಯದ ವ್ಯಾಯಾಮವು ನನಗೆ ಬಹಳಷ್ಟು ನೀಡಿದೆ. ಇಂದು, ನಾನು ಯಾವುದೇ ರೀತಿಯ ಅಲೋಪಥಿ ಔಷಧ ಮತ್ತು ಇನ್ಸುಲಿನ್‌ನಿಂದ ಮುಕ್ತನಾಗಿದ್ದೇನೆ. ನಾನು ಮುಕ್ತನಾಗಿರುವ ಕಾರಣದಿಂದಲೇ ಇಂದು ನಿಮ್ಮ ಮುಂದೆ ಬಂದು ಈ ಸಲಹೆ ನೀಡಲು ಶಕ್ಯನಾಗಿದ್ದೇನೆ ಎಂದಿದ್ದಾರೆ.
ಈ ಸರಳ ಬದಲಾವಣೆಗಳು 20 ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡಿದೆ ಎಂದು ಅಮಿತ್ ಶಾ ಹೇಳಿದರು. ಆರೋಗ್ಯಕರ ಯಕೃತ್ತು ಆರೋಗ್ಯಕರ ದೇಹಕ್ಕೆ ಹೆಬ್ಬಾಗಿಲು ಎಂದ ಅವರು, "ವಿಶ್ವ ಯಕೃತ್ತಿನ ದಿನದ ಸಂದರ್ಭದಲ್ಲಿ, ಪ್ರತಿಯೊಬ್ಬರೂ ತಮ್ಮ ಯಕೃತ್ತಿನ ಆರೋಗ್ಯವನ್ನು ಸಂಪೂರ್ಣ ಅರಿವು ಮತ್ತು ಶ್ರದ್ಧೆಯಿಂದ ಕಾಪಾಡಿಕೊಳ್ಳಲು ಪ್ರತಿಜ್ಞೆ ಮಾಡಬೇಕು ಎಂದು ಹೇಳಿದರು. ದೇಶದಲ್ಲಿ ಹೆಚ್ಚುತ್ತಿರುವ ಯಕೃತ್ತಿನ ಕಾಯಿಲೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಆರೋಗ್ಯಕರ ಜೀವನ ಶೈಲಿಯ ಬಗ್ಗೆ ಮಾತನಾಡಿದರು.
ಹೆಚ್ಚುತ್ತಿರುವ ಕ್ಯಾನ್ಸರ್ಗೆ ಲಿಪ್ಸ್ಟಿಕ್ಕೂ ಕಾರಣ! 17.49 ಬಿಲಿಯನ್ ಡಾಲರ್ ಉದ್ಯಮದ ಶಾಕಿಂಗ್ ಡಿಟೇಲ್ಸ್ ಇಲ್ಲಿದೆ...
2014 ರಲ್ಲಿ 37 ಸಾವಿರ ಕೋಟಿ ರೂಪಾಯಿ ಆರೋಗ್ಯ ಕ್ಷೇತ್ರಕ್ಕೆ ಮೀಸಲು ಇರಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಆರೋಗ್ಯ ಬಜೆಟ್ ಅನ್ನು 1.27 ಲಕ್ಷ ಕೋಟಿಗೆ ಏರಿಸಲಾಗಿದೆ. ಉಜ್ವಲ ಯೋಜನೆ, ಖೇಲೋ ಇಂಡಿಯಾ, ಫಿಟ್ ಇಂಡಿಯಾ ಮತ್ತು ಕುಡಿಯುವ ನೀರು ಮತ್ತು ಶೌಚಾಲಯಗಳ ಮೇಲಿನ ಇತರ ಉಪಕ್ರಮಗಳಂತಹ ಮೋದಿ ಸರ್ಕಾರದ ಯೋಜನೆಗಳು ಸಾರ್ವಜನಿಕ ಆರೋಗ್ಯದೊಂದಿಗೆ ನೇರವಾಗಿ ಸಂಬಂಧಿಸಿವೆ ಎಂದು ಅವರು ಹೇಳಿದರು. ದೇಶದಲ್ಲಿ ಆರೋಗ್ಯ ಮೂಲಸೌಕರ್ಯಕ್ಕಾಗಿ ಮೋದಿ ಸರ್ಕಾರ 65 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದೆ ಮತ್ತು ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರ (PHC) ಮತ್ತು ಸಮುದಾಯ ಆರೋಗ್ಯ ಕೇಂದ್ರ (CHC) ಗಳನ್ನು ಸಂಪೂರ್ಣ ಘಟಕವನ್ನಾಗಿ ಮಾಡಲು ವ್ಯವಸ್ಥೆ ಮಾಡಿದೆ ಎಂದು ಸಚಿವರು ಹೇಳಿದರು.
