ಕ್ಯಾನ್ಸರ್‌ಗೆ ಕೆಮಿಕಲ್‌ಯುಕ್ತ ಹೇರ್‌ಡೈಗಳು ಪ್ರಮುಖ ಕಾರಣ. ಚರ್ಮ, ರಕ್ತ, ಸ್ತನ ಕ್ಯಾನ್ಸರ್‌ಗಳಿಗೆ ಹೇರ್‌ಡೈ ಕಾರಣವಾಗಬಲ್ಲದು. ವಯಸ್ಸಾದಂತೆ ಕಾಣದಿರಲು ಹೇರ್‌ಡೈ ಬಳಕೆ ಹೆಚ್ಚುತ್ತಿದೆ. ಆದರೆ ಮೆಹಂದಿ ಮತ್ತು ನೀಲಿ ಪುಡಿ ಬಳಸಿ ನೈಸರ್ಗಿಕವಾಗಿ ಕೂದಲು ಕಪ್ಪಾಗಿಸಬಹುದು. ಇದು ಕೂದಲು ಬೆಳವಣಿಗೆಗೂ ಸಹಕಾರಿ.

ಕ್ಯಾನ್ಸರ್​ ಎನ್ನುವ ಹೆಸರು ಕೇಳಿದರೇನೇ ಮೈಯೆಲ್ಲಾ ಝುಂ ಎನ್ನುತ್ತದೆ ಅಲ್ಲವೆ? ಈಗ ಕ್ಯಾನ್ಸರ್​ ಎನ್ನುವ ಮಹಾಮಾರಿ ಅದೆಷ್ಟರಮಟ್ಟಿಗೆ ಆವರಿಸಿಕೊಂಡಿದೆ ಎಂದರೆ, ಕ್ಯಾನ್ಸರ್​ ಆಸ್ಪತ್ರೆಗಳ ಸಂಖ್ಯೆ ಹೆಚ್ಚುತ್ತಿರುವುದೇ ಸಾಕ್ಷಿಯಾಗಿದೆ. ಎಲ್ಲಿ ನೋಡಿದರೂ ಕ್ಯಾನ್ಸರ್​ ಕ್ಯಾನ್ಸರ್​. ಇಂದಿನ ಆಹಾರ ಕ್ರಮಗಳಿಂದಲೂ ಕ್ಯಾನ್ಸರ್​ ಬರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೆ ಇದಕ್ಕೆ ಇನ್ನೊಂದು ಮುಖ್ಯ ಕಾರಣ ಏನು ಗೊತ್ತೆ? ನಾವು ಬಳಸುತ್ತಿರುವ ಕೆಮಿಕಲ್​ಯುಕ್ತ ಹೇರ್​ಡೈಗಳು! ಅದರಲ್ಲಿಯೂ ಮಹಿಳೆಯರಿಗೆ ಬ್ರೆಸ್ಟ್​ ಕ್ಯಾನ್ಸರ್​ ಹೆಚ್ಚಾಗಲು ಕಾರಣವೇ ಮಾರುಕಟ್ಟೆಯಲ್ಲಿ ಸಿಗುವ, ಸಿನಿಮಾ ತಾರೆಯರು ಲಕ್ಷ ಲಕ್ಷ ದುಡ್ಡು ಪಡೆದು ಜಾಹೀರಾತು ನೀಡುವ ಹೇರ್​ಡೈಗಳು ಎನ್ನುವುದು ಇದಾಗಲೇ ಸಾಬೀತಾಗಿ ಬಿಟ್ಟಿದೆ. 

ಹೇರ್​ ಕಲರ್​ನಿಂದಲೂ ಕ್ಯಾನ್ಸರ್​ ಹೆಚ್ಚಾಗುತ್ತಿದೆ. ಅದರಲ್ಲಿಯೂ ಬ್ಲಡ್​ ಕ್ಯಾನ್ಸರ್ ಇದರಿಂದಲೇ ಅಧಿಕ ಎನ್ನಲಾಗಿದೆ. ಚರ್ಮದ ಕ್ಯಾನ್ಸರ್​, ಗರ್ಭಾಶಯದ ಕ್ಯಾನ್ಸರ್​, ಸ್ತನ ಕ್ಯಾನ್ಸರ್​ಗಳಿಗೂ ಇದು ಕಾರಣವಾಗಬಲ್ಲುದು ಎಂದು ತಜ್ಞರು ಇದಾಗಲೇ ಹೇಳಿದ್ದಾರೆ. ಚರ್ಮದ ಸಮಸ್ಯೆ ಮಾತ್ರವಲ್ಲದೇ ಹೇರ್​ ಡೈಯಲ್ಲಿ ಇರುವ ರಾಸಾಯನಿಕಗಳಿಂದ ಮಾನಸಿಕ ರೋಗಗಳೂ ಬರುತ್ತಿವೆ ಎನ್ನಲಾಗಿದೆ. ಇವೆಲ್ಲಾ ಕೆಲವರಿಗೆ ಗೊತ್ತಿದ್ದರೂ ವಯಸ್ಸಾಗದಂತೆ ಕಾಣಬೇಕು ಎನ್ನುವ ಕಾರಣಕ್ಕೆ ಹೇರ್​ಡೈ ಮೊರೆ ಹೋಗುವ ಅನಿವಾರ್ಯತೆಯೂ ಇದೆ. ಇದಕ್ಕಾಗಿಯೇ, ಸುಲಭದಲ್ಲಿ ತಲೆಗೂದಲನ್ನು ಕಪ್ಪಗಾಗಿಸಿ ಎಂದು ಹಲವಾರು ಯೂಟ್ಯೂಬರ್​ಗಳು ಟಿಪ್ಸ್​ ಕೊಡುತ್ತಿರುವುದು ಹೆಚ್ಚುತ್ತಿದೆ. ಅದನ್ನು ನಂಬಿ ಪ್ರಯೋಗ ಮಾಡಿದರೆ ಅದರಲ್ಲಿ ಹೆಚ್ಚಿನವು ಫೇಕ್​ ಆಗಿರುತ್ತದೆ. ಒಂದಿಷ್ಟು ಲೈಕ್ಸ್​, ವ್ಯೂಸ್​​ಗೋಸ್ಕರ್​ ಇಷ್ಟಬಂದ ರೀತಿಯಲ್ಲಿ ವಿಡಿಯೋ ಮಾಡಲಾಗುತ್ತದೆ. ಅದಕ್ಕೆ ಬರುವ ಕಮೆಂಟ್ಸ್​ಗಳನ್ನು ನೋಡಿದರೆ, ಎಷ್ಟು ಮಂದಿ ಮೋಸ ಹೋಗಿದ್ದಾರೆ ಎನ್ನುವುದು ತಿಳಿಯುತ್ತದೆ.

ಈ ತಿಂಗಳಲ್ಲಿ ಜನಿಸಿದ್ರೆ ಆರೋಗ್ಯದ ವಿಷ್ಯದಲ್ಲಿ ಅದೃಷ್ಟವಂತರು! ಹುಟ್ಟಿದ ಮಾಸದಲ್ಲಿದೆ ಗುಟ್ಟು- ಇಲ್ಲಿದೆ ಡಿಟೇಲ್ಸ್​

ಮುಂಚೆಲ್ಲಾ ಒಂದು ವಯಸ್ಸು ದಾಟಿದ ಮೇಲೆ ಕೂದಲು ಬೆಳ್ಳಗಾಗುತ್ತಿತ್ತು. ಅದು ವಯಸ್ಸಾಗಿರುವ ಲಕ್ಷಣವಾಗಿತ್ತು. ಆದರೆ ಇಂದು ಚಿಕ್ಕಮಕ್ಕಳ ಕೂದಲೂ ಬೆಳ್ಳಗಾಗುತ್ತಿವೆ. ಇವತ್ತಿನ ಜೀವನ ಕ್ರಮ, ಆಹಾರ ಪದ್ಧತಿ, ಪ್ರದೂಷಣೆ, ಮೇಲಾಗಿ ಒತ್ತಡ... ಇನ್ನು ಏನೇನೋ ಕಾರಣಗಳು ಇವುಗಳಿಗೆ ಇವೆ. 25-30 ದಾಟುತ್ತಿದ್ದಂತೆಯೇ ಕೂದಲು ಬೆಳ್ಳಗಾಗುವುದು ಮಾಮೂಲಾಗಿಬಿಟ್ಟಿದೆ. ಇದೇ ಕಾರಣಕ್ಕೆ ಹಲವರಿಗೆ ಮದುವೆ ಕೂಡ ಆಗುತ್ತಿಲ್ಲವಾದರೆ, ಮತ್ತೆ ಕೆಲವರು ಖಿನ್ನತೆಗೆ ಜಾರುವುದು ಇದೆ. ಇದೇ ಕಾರಣಕ್ಕೆ ಹೇರ್​ಡೈ ಮೊರೆ ಹೋಗುವುದು ಸರ್ವೇ ಸಾಮಾನ್ಯ. ಪ್ರತಿ ಮನೆಯಲ್ಲಿ ಒಬ್ಬರಾದರೂ ವ್ಯಕ್ತಿ ಹೇರ್​ಡೈ ಬಳಸಿಯೇ ಬಳಸುತ್ತಾರೆ ಎನ್ನುತ್ತದೆ ಅಧ್ಯಯನ. ಆದರೆ ನೈಸರ್ಗಿಕವಾಗಿಯೂ ತಲೆಗೂದಲನ್ನು ಕಪ್ಪು ಮಾಡಿಕೊಳ್ಳಬಹುದು. ಅದಕ್ಕೆ ಸೂಪರ್​ ಟಿಪ್ಸ್​ ಕೊಟ್ಟಿದ್ದಾರೆ ಶಿರಸಿಯ ಪ್ರಖ್ಯಾತ ಆಯುರ್ವೇದ ವೈದ್ಯರಾಗಿರುವ ಡಾ.ವಿನಾಯಕ ಹೆಬ್ಬಾರ್​.

ಅವರು ಹೇಳಿರುವಂತೆ ಎರಡೇ ಪುಡಿಗಳು ಸಾಕು. ಒಂದು ಮೆಹಂದಿ ಪುಡಿ, ಇನ್ನೊಂದು ನೀಲಿ ಪುಡಿ ಅರ್ಥಾತ್​ ಇಂಡಿಗೋ ಪೌಡರ್​. ಹಾಗೆಂದು ಮಾರುಕಟ್ಟೆಯಲ್ಲಿ ಬೇಕಾಬಿಟ್ಟೆ ಸಿಗುವ ಮೆಹಂದಿ ಪುಡಿಯಲ್ಲಿಯೂ ಕೆಮಿಕಲ್​ ಮಿಕ್ಸ್​ ಆಗಗಿರುತ್ತದೆ ಎನ್ನುವುದು ನೆನಪಿರಲಿ. ಆದ್ದರಿಂದ ಗ್ರಂಥಿಗೆ ಅಂಗಡಿಯಲ್ಲಿ ಸಿಗುವ ನೈಸರ್ಗಿಕ ಮೆಹಂದಿ ಪುಡಿಯ ಪ್ಯಾಕೆಟ್​ ತನ್ನಿ. ನೀಲಿ ಪುಡಿ ಅಥವಾ ಇಂಡಿಗೋ ಪುಡಿ ಕೂಡ ಗ್ರಂಥಿಗೆ ಅಂಗಡಿಯಲ್ಲಿ ಸಿಗುತ್ತದೆ. ಇದನ್ನು ಹೇಗೆ ಬಳಕೆ ಮಾಡಬೇಕು ಎನ್ನುವುದನ್ನು ಡಾ.ವಿನಾಯಕ ಅವರು ಹೇಳಿದ್ದಾರೆ. ಮೊದಲಿಗೆ ಮೆಹಂದಿ ಪೌಡರ್​ಗೆ ನೀರನ್ನು ಹಾಕಿ ಕಲಿಸಿ ಪೇಸ್ಟ್​ ಮಾಡಿ ಅದನ್ನು ಸಂಪೂರ್ಣ ಕೂದಲಿಗೆ ಬುಡದಿಂದಲೂ ಹಚ್ಚಿ head pack ಮಾಡಿ ಎರಡು ಗಂಟೆಯಾದರೂ ತಲೆಯಲ್ಲಿ ಇಟ್ಟುಕೊಳ್ಳಬೇಕು. ನಂತರ ತೊಳೆಯಬೇಕು. ಆಗ ಕೂದಲು ಕೆಂಪಗಾಗುತ್ತದೆ. ಮರುದಿನ ಇಂಡಿಗೋ ಪುಡಿಯನ್ನು ನೀರು ಹಾಕಿ ಪೇಸ್ಟ್​ ಮಾಡಿಕೊಂಡು ಹೆಡ್​ ಪ್ಯಾಕ್​ ಮಾಡಿಕೊಳ್ಳಬೇಕು. 2-3 ಗಂಟೆ ಬಿಟ್ಟು ತೊಳೆದುಕೊಂಡರೆ ನೈಸರ್ಗಿಕ ಹೇರ್​ ಡೈ ನಿಮ್ಮದಾಗುತ್ತದೆ. ಕೂದಲು ಕಪ್ಪಾಗುವುದು ಮಾತ್ರವಲ್ಲದೇ ಇದು ಕೂದಲು ಬೆಳವಣಿಗೆಗೂ ಸಹಾಯಕಾರಿ. ವೈದ್ಯರು ಹೇಳಿರುವಂತೆ ವಾರಕ್ಕೊಮ್ಮೆ ಇಲ್ಲವೇ 10 ದಿನಗಳಿಗೆ ಒಮ್ಮೆ ಹೀಗೆ ಮಾಡುತ್ತಾ ಬಂದರೆ ಕೂದಲು ಕೂಡ ಬೆಳೆಯುತ್ತದೆ. 

ಹೆಚ್ಚುತ್ತಿರುವ ಕ್ಯಾನ್ಸರ್​ಗೆ ಲಿಪ್​ಸ್ಟಿಕ್ಕೂ ಕಾರಣ! 17.49 ಬಿಲಿಯನ್ ಡಾಲರ್​ ಉದ್ಯಮದ ಶಾಕಿಂಗ್​ ಡಿಟೇಲ್ಸ್​ ಇಲ್ಲಿದೆ...

YouTube video player