ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟ್ರೆಚರೇ ಇಲ್ಲ, ಕಾಲು ಮುರಿದ ವೃದ್ಧನನ್ನು ಬೆಡ್ ಶೀಟ್‌ಲ್ಲಿ ಕುಳ್ಳಿರಿಸಿ ಎಳೆದೊಯ್ದ ಮಹಿಳೆ!
ಸರ್ಕಾರಿ ಆಸ್ಪತ್ರೆಗಳ ಕರ್ಮಕಾಂಡ ಒಂದೆರಡಲ್ಲ. ಹೆಸರಿಗಷ್ಟೇ ಆಸ್ಪತ್ರೆಯಿರುತ್ತದೆ. ಆದರೆ ಯಾವ ಸೌಲಭ್ಯವೂ ಇರುವುದಿಲ್ಲ. ಚಿಕಿತ್ಸೆಗೆಂದು ಹೋದವರು ಸರಿಯಾಗಿ ಟ್ರೀಟ್‌ಮೆಂಟ್ ಸಿಗದೆ ಒದ್ದಾಡಬೇಕಾಗುತ್ತದೆ. ಸದ್ಯ ಮಧ್ಯಪ್ರದೇಶದಲ್ಲೊಂದು ಅಂಥದ್ದೇ ಘಟನೆ ನಡೆದಿದೆ.
ಭೋಪಾಲ್: ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಹಣ ನೀಡಿ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಬಡವರಿಗೆಂದೇ ದೇಶದ ಎಲ್ಲಾ ರಾಜ್ಯಗಳಲ್ಲಿ, ಜಿಲ್ಲೆಗಳಲ್ಲಿ, ಗ್ರಾಮಗಳಲ್ಲಿ ಸರ್ಕಾರಿ ಆಸ್ಪತ್ರೆಗಳಿವೆ. ಆದರೆ ಅಲ್ಲಿನ ಪರಿಸ್ಥಿತಿ ಮಾತ್ರ ಅಧೋಗತಿ. ಸರ್ಕಾರಿ ಆಸ್ಪತ್ರೆಗಳ ಕರ್ಮಕಾಂಡ ಒಂದೆರಡಲ್ಲ. ಹೆಸರಿಗಷ್ಟೇ ಆಸ್ಪತ್ರೆಯಿರುತ್ತದೆ. ಆದರೆ ಯಾವ ಸೌಲಭ್ಯವೂ ಇರುವುದಿಲ್ಲ. ಚಿಕಿತ್ಸೆಗೆಂದು ಹೋದವರು ಸರಿಯಾಗಿ ಟ್ರೀಟ್‌ಮೆಂಟ್ ಸಿಗದೆ ಒದ್ದಾಡಬೇಕಾಗುತ್ತದೆ. ಕೆಲವೊಂದು ಸರ್ಕಾರಿ ಆಸ್ಪತ್ರೆಗಳ ಹದಗೆಟ್ಟಿರೋ ಪರಿಸ್ಥಿತಿ ನೋಡ್ತಿದ್ರೆ, ಚಿಕಿತ್ಸೆಗೆಂದು ಹೋದವರು ಜೀವಂತವಾಗಿ ಮರಳಿ ಬರ್ತಾರೆ ಅಂತ ಹೇಳೋದು ಸಹ ಕಷ್ಟ. ಸದ್ಯ ಮಧ್ಯಪ್ರದೇಶದ ಗ್ವಾಲಿಯರ್ ಸರ್ಕಾರಿ ಆಸ್ಪತ್ರೆಯಲ್ಲಿ ಸಹ ಇಂಥಹದ್ದೇ ಘಟನೆಯೊಂದು ನಡ್ದಿದೆ.
ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಗೆ ರೋಗಿಗಳು ಕಂಗಾಲು
ಜಿಲ್ಲೆಯಲ್ಲೇ ಅತಿ ದೊಡ್ಡದಾದ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ 1,000 ಹಾಸಿಗೆಗಳ ಆಸ್ಪತ್ರೆಗೆ ಬಂದ ವೃದ್ಧರೊಬ್ಬರನ್ನು ಸ್ಟ್ರೆಚರ್ ಸಿಗದ ಹಿನ್ನೆಲೆಯಲ್ಲಿ ಮಹಿಳೆ (Women) ಬಟ್ಟೆಯ ತುಂಡಿನ ಮೇಲೆ ಕುಳಿತು ನೆಲದ ಮೇಲೆ ಎಳೆದುಕೊಂಡು ಹೋಗಬೇಕಾಯಿತು. ಸರ್ಕಾರಿ ಆಸ್ಪತ್ರೆಯಲ್ಲಿ ವೃದ್ಧರೊಬ್ಬರನ್ನು ಅವರ ಸಂಬಂಧಿಕರೊಬ್ಬರು (Relatives) ಬಿಳಿ ಬೆಡ್‌ಶೀಟ್‌ನಲ್ಲಿ ಎಳೆದುಕೊಂಡು ಹೋಗುತ್ತಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. 400 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಆಸ್ಪತ್ರೆಯಲ್ಲಿ (Hospital) ಸಾಕಷ್ಟು ಸ್ಟ್ರೆಚರ್‌ಗಳಿಲ್ಲ ಎಂದು ರೋಗಿಗಳು ದೂರಿದ್ದಾರೆ.
ಆಸ್ಪತ್ರೆ ಬಿಲ್ ನೋಡಿ ಕುಸಿದು ಹೋದ ಯುವಕ : ಹೊಟೇಲ್‌ಗೆ ತೆರಳಿ ಆತ್ಮಹತ್ಯೆ
ಆಸ್ಪತ್ರೆಯ ಕ್ಯಾಮರಾದಲ್ಲಿ ಮಹಿಳೆ ಸ್ಟ್ರೆಚರ್‌ಗೆ ಪರದಾಡ್ತಿರೋ ದೃಶ್ಯ ಸೆರೆ
ಗ್ವಾಲಿಯರ್‌ನಲ್ಲಿರುವ ಜಿಆರ್‌ಎಂಸಿ ಗ್ರೂಪ್ ನ ಜಯ ಆರೋಗ್ಯ ಆಸ್ಪತ್ರೆಯ ಕ್ಯಾಮರಾ ಒಂದರಲ್ಲಿ ರೆಕಾರ್ಡ್ ಆದ ದೃಶ್ಯ, ಸರ್ಕಾರಿ ಆಸ್ಪತ್ರೆಯ ವ್ಯವಸ್ಥೆ ಹೇಗಿದೆ ಅನ್ನೋದನ್ನು ತೋರಿಸುತ್ತದೆ. ಇಲ್ಲಿ ಮಹಿಳೆಯೊಬ್ಬರು ತಮ್ಮ ಮಾವನನ್ನ ಚಿಕಿತ್ಸೆಗೆಂದು (Treatment) ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ರೋಗಿ (Patient) ಕಾಲು ಮುರಿದುಕೊಂಡಿದ್ದರಿಂದನಡೆಯಲು ಅಸಮರ್ಥನಾಗಿದ್ದು, ಆದ್ದರಿಂದ ಆ ಮಹಿಳೆ ಅಲ್ಲಿ ಸ್ಟ್ರೆಚರ್ ಹುಡುಕುತ್ತಾಳೆ.
ಮೂಳೆಚಿಕಿತ್ಸಾ ವಿಭಾಗದ ವೈದ್ಯರು ಶ್ರೀಕಿಶನ್ ಓಜಾ ರೋಗಿಯನ್ನು ಟ್ರಾಮಾ ವಿಭಾಗಕ್ಕೆ ಸ್ಥಳಾಂತರಿಸಲು ಸೂಚಿಸಿದರು. ಅವರ ಸೊಸೆ ಸ್ಟ್ರೆಚರ್ ಹುಡುಕಲು ಹೋದರೆ ಯಾವುದೇ ಸ್ಟ್ರೆಚರ್ ಸಿಗಲಿಲ್ಲ. ಇರುವ ಎರಡು ಸ್ಟ್ರೆಚರ್‌ಗಳಲ್ಲಿ ಚಕ್ರವಿರಲ್ಲಿಲ್ಲ. ಸ್ಟ್ರೆಚರ್ ಸಿಗದೇ ಹೋದಾಗ ಮಹಿಳೆ ಹಾಸಿಗೆ ಮೇಲಿದ್ದ ಬೆಡ್‌ಶೀಟ್ ಒಂದನ್ನ ತೆಗೆದುಕೊಂಡು ಅದರ ಮೇಲೆ, ತನ್ನ ಮಾವನನ್ನ ಕುಳಿತುಕೊಳ್ಳಲು ಹೇಳಿ, ಹಾಗೆಯೇ ಎಳೆದುಕೊಂಡು ಹೋಗುತ್ತಾಳೆ.
16 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ, ಕಳೆದುಕೊಂಡ ಕೈಗಳನ್ನು ಮರಳಿ ಪಡೆದ ರಾಜಸ್ಥಾನದ ಯುವಕ!
ವ್ಯಕ್ತಿ ಸೈಕಲ್‌ನಿಂದ ಬಿದ್ದಿರುವುದಾಗಿ ಸಂಬಂಧಿಕರು ಪ್ಲಾಸ್ಟರ್ ಮಾಡಿದ ಪಾದವನ್ನು ತೋರಿಸುತ್ತಾ ಹೇಳಿದರು. ಇಬ್ಬರೂ ಗ್ವಾಲಿಯರ್‌ನಿಂದ ಸುಮಾರು 70 ಕಿಮೀ ದೂರದಲ್ಲಿರುವ ಭಿಂಡ್ ಜಿಲ್ಲೆಯಿಂದ ಬಂದಿರುವುದಾಗಿ ತಿಳಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಗಜರಾಜ್ ವೈದ್ಯಕೀಯ ಕಾಲೇಜಿನ (GRMC) ವ್ಯವಸ್ಥಾಪಕರಾದ ಅಕ್ಷಯ್‌ನಿಗಮ್ ಅವರ ಗಮನಕ್ಕೆ ಬಂದಿದೆ. ಅವರು ಈಗ ಈ ಅವ್ಯವಸ್ಥೆಗೆ ಕಾರಣ ಆದವರ ಮೇಲೆ ಕಠಿಣ ಕ್ರಮವನ್ನ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಈ ಆಸ್ಪತ್ರೆಯಲ್ಲಿ ವಿವಿಧ ವೈದ್ಯಕೀಯ ವಿಭಾಗಗಳಿವೆ. ಪ್ರತಿ ವಿಭಾಗದಲ್ಲೂ ರೋಗಿಗಳಿಗೆ ಯಾವುದೇ ಸಮಸ್ಯೆ ಕಾಡದಂತೆ ನೋಡಿಕೊಳ್ಳಲಾಗಿದೆ. ಈ ಹೊಸ ಆಸ್ಪತ್ರೆಯಲ್ಲಿ ಏನಿಲ್ಲ ಅಂದರೂ ಸದ್ಯಕ್ಕೆ 60-70 ಸ್ಟ್ರೆಚರ್ ವ್ಯವಸ್ಥೆಗಳನ್ನ ಮಾಡಲಾಗಿದೆ. ಅಷ್ಟೆ ಅಲ್ಲ ಹೆಚ್ಚುವರಿಯಾಗಿ ಎಮರ್ಜನ್ಸಿ ಗೇಟ್ ಬಳಿ ಸದಾ 10 ಸ್ಟ್ರೆಚರ್ ಇರಿಸಲಾಗಿದೆ. ಆದರೂ ರೋಗಿಗಳು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ ಅನ್ನೋದು ವಿಪರ್ಯಾಸ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡಾ. ನಿಗಮ್ ಮಾಧ್ಯಮಕ್ಕೆ ಹೇಳಿದ್ದಾರೆ.