Asianet Suvarna News Asianet Suvarna News

ಆಸ್ಪತ್ರೆ ಬಿಲ್ ನೋಡಿ ಕುಸಿದು ಹೋದ ಯುವಕ : ಹೊಟೇಲ್‌ಗೆ ತೆರಳಿ ಆತ್ಮಹತ್ಯೆ

ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಆಸ್ಪತ್ರೆ ಬಿಲ್‌ನಿಂದ ಹೆದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.   24 ವರ್ಷದ ಯುವಕನ ಶವ ಹೊಟೇಲೊಂದರಲ್ಲಿ ಪತ್ತೆಯಾಗಿತ್ತು.  

A young man collapsed after seeing the hospital bill He went to a hotel and killed self akb
Author
First Published Mar 22, 2023, 1:17 PM IST

ದೆಹಲಿ:  ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಆಸ್ಪತ್ರೆ ಬಿಲ್‌ನಿಂದ ಹೆದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.   24 ವರ್ಷದ ಯುವಕನ ಶವ ಹೊಟೇಲೊಂದರಲ್ಲಿ ಪತ್ತೆಯಾಗಿತ್ತು.  ಈತ ಆಕ್ಸಿಜನ್ ಸಿಲಿಂಡರ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಸಿಲಿಂಡರ್‌ನಿಂದ ಅಧಿಕ ಪ್ರಮಾಣದ ಆಕ್ಸಿಜನ್ ಎಳೆದುಕೊಂಡು ಆತ ಸಾವಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.   ಪ್ಲಾಸ್ಟಿಕ್ ಚೀಲದಿಂದ ಮುಖ ಮುಚ್ಚಿಕೊಂಡ ರೀತಿಯಲ್ಲಿ ಈತನ ಶವ ಪತ್ತೆಯಾಗಿದ್ದು, ಈತನ ಮುಖಕ್ಕೆ ಮುಚ್ಚಿಕೊಂಡಿದ್ದ ಪ್ಲಾಸ್ಟಿಕ್ ಬ್ಯಾಗ್ ಸಣ್ಣ ಆಮ್ಲಜನಕ ಸಿಲಿಂಡರ್‌ಗೆ ಸಂಪರ್ಕ ಕಲ್ಪಿಸಿಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 

24 ವರ್ಷದ ನಿತೇಶ್ ಮೃತ ಯುವಕ.  ಈತ ತನಗಿದ್ದ ಕಾಯಿಲೆಗೆ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದು,  ಇದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಮನನೊಂದು ಆತ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉತ್ತರ ದೆಹಲಿಯ (North delhi) ಆದರ್ಶ ನಗರದಲ್ಲಿ (Adarsha Nagara) ಹೊಟೇಲ್ ಬುಕ್ ಮಾಡಿದ ಈತ, ಹೊಟೇಲ್‌ಗೆ ಸಣ್ಣ ಬ್ಯಾಗ್ ತೆಗೆದುಕೊಂಡು ಬಂದಿದ್ದ, ಆದರೆ ನಂತರ ಈತನ ಶವ ಮುಖಕ್ಕೆ ಪ್ಲಾಸ್ಟಿಕ್ ಬ್ಯಾಗ್ ಮುಚ್ಚಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.  ಅಗತ್ಯಕ್ಕಿಂತ ಹೆಚ್ಚು ಆಕ್ಸಿಜನ್ ಅನ್ನು ನಮ್ಮ ದೇಹ ಎಳೆದುಕೊಂಡರೆ ಹೃದಯದ ಬಡಿತ ನಿಧಾನಗೊಳಿಸುತ್ತದೆ. ಇದು ಆಮ್ಲಜನಕ ವಿಷವಾಗುವುದಕ್ಕೆ ಕಾರಣವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. 

ಆಸ್ಪತ್ರೆಲಿ ಬಿಲ್ ಕಟ್ಟೋಕೆ ಆಗಲ್ಲ, ಸತ್ತೋದ್ರೆ ಚಟ್ಟ ಕಟ್ಟೋಕೂ ದುಡ್ಡಿಲ್ಲ, ಅಸಹಾಯಕ ಪರಿಸ್ಥಿತಿ!

ಪೊಲೀಸರು ಸ್ಥಳದಿಂದ ಡೆತ್‌ನೋಟ್‌ ವಶಪಡಿಸಿಕೊಂಡಿದ್ದು, ಅದರಲ್ಲಿ ನಿತೇಶ್ (nitesh) ಧೀರ್ಘಕಾಲದ ಅನಾರೋಗ್ಯದಿಂದ ನೊಂದಿದ್ದರು. ಅವರು ಚಿಕಿತ್ಸೆಗಾಗಿ ಈಗಾಗಲೇ ಲಕ್ಷಾಂತರ ರೂಗಳನ್ನು ವೆಚ್ಚ ಮಾಡಿದ್ದು, ಇನ್ನು ಮುಂದೆ ತನ್ನ ಪೋಷಕರು ನನಗಾಗಿ ಅಷ್ಟೊಂದು ಹಣ ವೆಚ್ಚ ಮಾಡುವುದನ್ನು ನಾನು ಬಯಸುವುದಿಲ್ಲ. ಈ ಕಾರಣಕ್ಕೆ ತಾನು ಜೀವನವನ್ನು ಅಂತ್ಯಗೊಳಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.  ನೋವಿಲ್ಲದೇ ಸಾಯುವುದಕ್ಕಾಗಿ ಅವರು ಸಾವಿಗೂ ಮುನ್ನ ಅವರು ಗೂಗಲ್‌ನಲ್ಲಿ ಸಾಯುವ ವಿಧಾನಗಳ ಬಗ್ಗೆ ಹುಡುಕಾಡಿದ್ದು, ವಿಡಿಯೋಗಳನ್ನು ನೋಡಿದ್ದಾರೆ.  ನಂತರ ಈ ರೀತಿ ಹೆಚ್ಚಿನ ಆಕ್ಸಿಜನ್ (oxygen) ಎಳೆದು ಸಾಯುವ ನಿರ್ಧಾರಕ್ಕೆ ಮುಂದಾದರು ಎಂದು ಪೊಲೀಸರು ತಿಳಿಸಿದ್ದಾರೆ. 

Fact Check: ಅಬ್ಬಬ್ಬಾ...! ಎಸ್‌ಪಿಬಿ ಆಸ್ಪತ್ರೆ ಬಿಲ್‌ 3 ಕೋಟಿ ಆಯ್ತಾ?

Follow Us:
Download App:
  • android
  • ios