Deep kissing side effects : ಪ್ರೀತಿ ಡಬಲ್ ಮಾಡುವ ಈ ಕಿಸ್ ನಿಂದಲೂ ಸಮಸ್ಯೆ ತಪ್ಪಿದ್ದಲ್ಲ. ಮಿತಿಗಿಂತ ಹೆಚ್ಚು ಟೈಂ ಸಂಗಾತಿಗೆ ಮುತ್ತಿಟ್ರೆ ತುಟಿ ಒಡೆಯೋದ್ರಲ್ಲಿ ಡೌಟಿಲ್ಲ.
ಮುತ್ತು (kiss) ಪ್ರೀತಿಯನ್ನು ತೋರಿಸುವ ಒಂದು ವಿಧಾನ. ಸಿನಿಮಾಗಳಲ್ಲಿ ರೋಮ್ಯಾನ್ಸ್ ಡಬಲ್ ಮಾಡಲು ಡೀಪ್ ಕಿಸ್ಸಿಂಗ್ ಸೀನ್ ಶೂಟ್ ಮಾಡ್ತಾರೆ. ಆದ್ರೆ ವಾಸ್ತವದಲ್ಲಿ ಡೀಪ್ ಕಿಸ್ (deep kiss) ಸಮಸ್ಯೆ ತರುವ ಸಾಧ್ಯತೆ ಇದೆ. ಸಂಗಾತಿಯ ಮೌಖಿಕ ನೈರ್ಮಲ್ಯ ಸರಿಯಾಗಿಲ್ದೆ ಹೋದ್ರೆ ನಿಮ್ಮ ತುಟಿ ಸೌಂದರ್ಯ ಕಳೆದುಕೊಳ್ಬಹುದು. ಅನೇಕ ಹುಡುಗಿಯರು ಹನಿಮೂನ್ ಟೈಂನಲ್ಲಿ ತುಟಿಯ ಸಮಸ್ಯೆಗೆ ಒಳಗಾಗ್ತಾರೆ. ತುಟಿ ಒಡೆಯೋದು, ಊದಿಕೊಳ್ಳೋದು ಇದ್ರಲ್ಲಿ ಸೇರಿದೆ. ತುಟಿ ಬಣ್ಣ ಬದಲಾಗ್ತಿದ್ದಂತೆ, ಗಾಯ, ನೋವು ಹೆಚ್ಚಾಗ್ತಿದ್ದಂತೆ ಇಂಟರ್ ನೆಟ್ ನಲ್ಲಿ ಅದ್ರ ಬಗ್ಗೆ ಸರ್ಚ್ ಮಾಡಿ ಪರಿಹಾರಕ್ಕೆ ಪ್ರಯತ್ನ ಮಾಡ್ತಾರೆ.
ಡೀಪ್ ಕಿಸ್ಸಿಂಗ್ ಸೈಡ್ ಎಫೆಕ್ಟ್ :
ಡ್ರೈ ಲಿಪ್ಸ್ : ದೀರ್ಘಕಾಲದವರೆಗೆ ಮುತ್ತಿಡೋದ್ರಿಂದ ತುಟಿಗಳ ತೇವಾಂಶ ಕಡಿಮೆಯಾಗುತ್ತೆ. ಇದ್ರಿಂದ ತುಟಿಗಳು ಒಣಗಿ, ನಿರ್ಜೀವವಾದಂತೆ ಕಾಣುತ್ವೆ.
ಬಿರುಕು ಬಿಡುವ ತುಟಿ : ದೇಹದ ಉಳಿದ ಭಾಗಗಳಿಗೆ ಹೋಲಿಸಿದ್ರೆ ತುಟಿ ಚರ್ಮ ತುಂಬಾ ತೆಳ್ಳಗಿರುತ್ತೆ. ಬೆವರು ಗ್ರಂಥಿಯನ್ನು ಇದು ಹೊಂದಿರೋದಿಲ್ಲ. ಹಾಗಾಗಿ ಬೇಗ ಒಣಗುತ್ತೆ. ಬಿರುಕುಬಿಡುತ್ತೆ. ಬಾಹ್ಯ ಒತ್ತಡ ಅಥವಾ ದೀರ್ಘಾವಧಿ ಮುತ್ತು ತುಟಿಗೆ ಹಾನಿ ಮಾಡುತ್ತೆ.
ಊತ ಮತ್ತು ಕೆಂಪು : ಆಳವಾದ ಕಿಸ್ಸಿಂಗ್ ನಂತ್ರ ಹಲವು ಬಾರಿ, ತುಟಿಗಳ ಮೇಲೆ ಊತ ಕಾಣಿಸಿಕೊಳ್ಳುತ್ತದೆ. ತುಟಿ ಕೆಂಪಾಗುತ್ತದೆ.
ಉರಿ ಮತ್ತು ತುರಿಕೆ : ಡೀಪ್ ಕಿಸ್ ನಿಂದ ತುಟಿ ಉರಿಯಬಹುದು. ತುಟಿಯಲ್ಲಿ ತುರಿಕೆ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ. ಬಾಯಿಯ ಸ್ವಚ್ಛತೆ ಇಲ್ಲಿ ಮುಖ್ಯ. ನೈರ್ಮಲ್ಯ ಹೊಂದಿರದ ಅಥವಾ ಧೂಮಪಾನ ಮಾಡುವ ಅಥವಾ ತಂಬಾಕು ತಿನ್ನುವ ಸಂಗಾತಿಗೆ ಮುತ್ತಿಡೋದ್ರಿಂದ ತುಟಿಗಳಲ್ಲಿ ಉರಿ ಮತ್ತು ತುರಿಕೆ ಕಾಣಿಸಿಕೊಳ್ಳುತ್ತದೆ.
ಹಾಳಾಗುವ ಮೂಡ್ : ಅಲ್ಪಾವಧಿಯ ಮುತ್ತು ಮೈಂಡ್ ಫ್ರೆಶ್ ಮಾಡಿದ್ರೆ ದೀರ್ಘಾವಧಿ ಕಿಸ್ ಮೂಡ್ ಹಾಳು ಮಾಡುತ್ತೆ. ತುಟಿಗಳ ನರಗಳನ್ನು ಆಯಾಸಗೊಳಿಸುತ್ತೆ. ಇದು ನಿಮ್ಮ ಮನಸ್ಥಿತಿಯ ಮೇಲೆ ಪ್ರಭಾವ ಬೀರುತ್ತೆ.
ಉಸಿರಾಟದ ತೊಂದರೆ : 2 ನಿಮಿಷಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಮುತ್ತಿಡೋದ್ರಿಂದ ಉಸಿರಾಟದ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚು. ಅಸ್ತಮಾ ಹೊಂದಿರುವವರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.
ಸೋಂಕು ಕಾಡಬಹುದು : ಸಂಗಾತಿಯ ಮೌಖಿಕ ನೈರ್ಮಲ್ಯ ಆರೋಗ್ಯಕರವಾಗಿಲ್ಲವೆಂದ್ರೆ ಹರ್ಪಿಸ್ ಮತ್ತು ಬ್ಯಾಕ್ಟೀರಿಯಾದ ಸೋಂಕಿನ ಅಪಾಯ ಹೆಚ್ಚಾಗುತ್ತದೆ.
ಪುರುಷರಲ್ಲಿ ಕಂಡುಬರುವ 4 ಲಕ್ಷಣಗಳು ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ
ಊದಿಕೊಳ್ಳುವ ತುಟಿಗೆ ಮನೆ ಮದ್ದು :
• ದೀರ್ಘ ಚುಂಬನದ ನಂತ್ರ ನಿಮ್ಮ ತುಟಿ ಊದಿಕೊಂಡಿದ್ದರೆ ಅಥವಾ ಕೆಂಪಾಗಿದ್ದರೆ ನೀವು ತಣ್ಣನೆಯ ಕಾಟನ್ ಪ್ಯಾಡನ್ನು ತುಟಿ ಮೇಲೆ ಇಡಿ. ಇದ್ರಿಂದ ತಕ್ಷಣ ಪರಿಹಾರ ಸಿಗುತ್ತದೆ.
• ತುಟಿಗಳು ಡ್ರೈ ಆಗಿದ್ರೆ ತುಟಿಗೆ ಕ್ರೀಮ್ ಅಥವಾ ಮಾಯಿಶ್ಚರೈಸಿಂಗ್ ಲಿಪ್ ಬಾಮ್ ಹಚ್ಚಬೇಕು.
• ಹೆಚ್ಚು ನೀರು ಕುಡಿಯುವುದು ಹಾಗೂ ಹೈಡ್ರೇಟ್ ಆಗಿರೋದು ಇದಕ್ಕೆ ಉತ್ತಮ ಮದ್ದು. ಆಗಾಗ ನೀರು ಕುಡಿಯೋದನ್ನು ಮರೆಯಬೇಡಿ.
• ಊತ ಹೆಚ್ಚಾಗಿದ್ದು, ವಿಪರೀತ ನೋವು ಕಾಡ್ತಿದೆ ಎನ್ನುವವರು ವೈದ್ಯರ ಸಲಹೆ ಪಡೆಯಬೇಕು. ವೈದ್ಯರನ್ನು ಭೇಟಿಯಾಗಿ ಅವರು ಸೂಚಿಸಿದ ಔಷಧಿ ಬಳಸಿ.
• ಯಾವುದೇ ಅಸಹಜತೆ ಅನುಭವಿಸುತ್ತಿದ್ದರೆ, ಊತವಿದ್ದರೆ, ನೋವು, ತುರಿಕೆ ಕಾಣಿಸಿಕೊಳ್ತಿದ್ದರೆ ಸ್ವಲ್ಪ ಸಮಯದವರೆಗೆ ಮುತ್ತಿನಿಂದ ದೂರ ಇರಿ.
• ತುಟಿಯ ನೋವು 24 ಗಂಟೆಗಿಂತಲೂ ಹೆಚ್ಚು ಸಮಯದಿಂದ ಕಾಡ್ತಿದೆ, ಊಟ, ಆಹಾರ ಸೇವನೆ ಕಷ್ಟವಾಗ್ತಿದೆ ಎಂದಾದ್ರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಸೂಕ್ತ.
