iPhone 17 : ಐಫೋನ್ ಪ್ರೇಮಿಗಳ ಬಹುನಿರೀಕ್ಷಿತ ಆಪಲ್ ಐಫೋನ್ 17 ಬಿಡುಗಡೆಯಾಗಿದೆ. ಭಾರತೀಯರು ಇದನ್ನು ಖರೀದಿ ಮಾಡ್ಬೇಕು ಅಂದ್ರೆ ಎಷ್ಟು ದಿನ ಕಾಯ್ಬೇಕು? ಎಷ್ಟು ಹಣ ಬೇಕು ಎನ್ನುವ ಡಿಟೇಲ್ ಇಲ್ಲಿದೆ. 

ಪ್ರತಿ ವರ್ಷ ಸೆಪ್ಟೆಂಬರ್ ಬಂತೆಂದ್ರೆ ಐಫೋನ್ (iPhone) ಪ್ರೇಮಿಗಳಿಗೆ ಹಬ್ಬ. ಯಾಕೆಂದ್ರೆ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಆಪಲ್ ಐಫೋನ್ (Apple iPhone) ತನ್ನ ಹೊಸ ಸಿರೀಸ್ ಬಿಡುಗಡೆ ಮಾಡುತ್ತೆ. ಈ ಬಾರಿ ಕಂಪನಿ ಸೆಪ್ಟೆಂಬರ್ 9 ರಂದು ಐಫೋನ್ 17 ಸಿರೀಸ್ ಬಿಡುಗಡೆ ಮಾಡಿದೆ. ಐಫೋನ್ 17 ಸೀರೀಸ್ ಜೊತೆ ಕಂಪನಿ, ಮಾರ್ಕೆಟ್ ಗೆ ಕೆಲ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.

ಆಪಲ್ ಐಫೋನ್ 17 ಸೀರೀಸ್ ನ ನಾಲ್ಕು ಮಾಡೆಲ್ ಬಿಡುಗಡೆ : ಆಪಲ್ ಐಫೋನ್ 17 ಸೀರೀಸ್ ನಲ್ಲಿ ನಾಲ್ಕು ಮಾಡೆಲ್ ಬಿಡುಗಡೆ ಮಾಡಿದೆ. ಐಫೋನ್ 17 (iPhone 17), ಐಫೋನ್ 17 ಪ್ರೊ (iPhone 17 Pro), ಐಫೋನ್ 17 ಪ್ರೊ ಮ್ಯಾಕ್ಸ್ (iPhone 17 Pro Max) ಮತ್ತು ಐಫೋನ್ ಏರ್ (iPhone Air.) ಈ ಎಲ್ಲಾ ಬೇಸ್ ಮಾಡೆಲ್ 128 ಜಿಬಿ ಬದಲು 256 ಜಿಬಿ ಜೊತೆ ನಿಮಗೆ ಲಭ್ಯವಿದೆ. ಐಫೋನ್ ಕಪ್ಪು, ಲ್ಯಾವೆಂಡರ್, ಮಿಸ್ಟ್ ಬ್ಲೂ, ಸೇಜ್ ಮತ್ತು ಬಿಳಿ ಬಣ್ಣದಲ್ಲಿ ಬಿಡುಗಡೆಯಾಗಿದೆ.

Foldable iPhone V68: ಪುಸ್ತಕದಂತೆ ತೆರೆಯುವ ಮಡಚುವ ಈ ಐಫೋನ್‌ಗೆ ಎಲ್ಲೆಲ್ಲಿ, ಎಷ್ಟು ಕ್ಯಾಮೆರಾಗಳಿವೆ ಗೊತ್ತಾ?

ಭಾರತದಲ್ಲಿ ಐಫೋನ್ 17 ಸೀರೀಸ್ ಬೆಲೆ :

ಐಫೋನ್ ಏರ್ ಬೆಲೆ : ಐಫೋನ್ ಏರ್ ಮೂರು ವೇರಿಯಂಟ್ ನಲ್ಲಿ ಲಭ್ಯವಿದೆ. 256GB ಸ್ಟೋರೇಜ್ ಬೆಲೆ 1,19,900 ರೂಪಾಯಿ. 512GB ಸ್ಟೋರೇಜ್ ಬೆಲೆ 1,39,900 ರೂಪಾಯಿ. 1TB ಮೊಬೈಲ್ ಬೆಲೆ 1,59,900 ರೂಪಾಯಿ.

ಐಫೋನ್ 17 : ಭಾರತದಲ್ಲಿ ಐಫೋನ್ 17, 256 GB ಸ್ಟೋರೇಜ್ ಬೆಲೆ 82,900 ರೂಪಾಯಿ. ಇನ್ನು512 GB ಸ್ಟೋರೇಜ್ ಮೊಬೈಲ್ ಬೆಲೆ 1,02,900 ರೂಪಾಯಿಗೆ ಸಿಗಲಿದೆ.

ಐಫೋನ್ 17 ಪ್ರೊ : ಭಾರತದಲ್ಲಿ ಐಫೋನ್ 17 ಪ್ರೋ 256 GB ಬೆಲೆ 1,34,900 ರೂಪಾಯಿ ಹಾಗೂ 512 GB ಬೆಲೆ 1,54,900 ರೂಪಾಯಿ.

ಐಫೋನ್ 17 ಪ್ರೊ ಮ್ಯಾಕ್ಸ್ : ಭಾರತದಲ್ಲಿ256 GB ಐಫೋನ್ 17 ಪ್ರೊ ಮ್ಯಾಕ್ಸ್ ಬೆಲೆ 1,49,900 ರೂಪಾಯಿ. 512 GB ಸ್ಟೋರೇಜ್ ಮೊಬೈಲ್ ಬೆಲೆ 1,69,900 ರೂಪಾಯಿ ಹಾಗೂ 1 TB ಬೆಲೆ 1,89,900 ರೂಪಾಯಿ. ಇಷ್ಟಲ್ದೆ 2 TB ಬೆಲೆ 2,29,900 ರೂಪಾಯಿ.

ಒಬ್ಬರೇ ವಾಕ್ ಹೋಗುವುದು ಬೋರ್ ಅನಿಸುತ್ತಿದೆಯೇ? ವಾಕಿಂಗ್ ಪಾಲ್ ಆ್ಯಪ್‌ ಇದೆ!

ಭಾರತೀಯರಿಗೆ ಯಾವಾಗ ಸಿಗಲಿದೆ ಐಫೋನ್ 17 ? : ವಿಶ್ವದ ಅನೇಕ ದೇಶಗಳಲ್ಲಿ ಐಫೋನ್ 17 ಬುಕ್ಕಿಂಗ್ ಶುರುವಾಗಿದೆ. ಭಾರತದಲ್ಲಿ ಸೆಪ್ಟೆಂಬರ್ 12, ಶುಕ್ರವಾರದಿಂದ ಪ್ರೀ ಆರ್ಡರ್ ಶುರುವಾಗಲಿದೆ. ಸೆಪ್ಟೆಂಬರ್ 19 ರಿಂದ ಫೋನ್ ಗ್ರಾಹಕರಿಗೆ ಸಿಗಲಿದೆ.

ಐಎಂಐ- ಕ್ಯಾಶ್ಬ್ಯಾಕ್ : ಗ್ರಾಹಕರು ಇಎಂಐ ಮೂಲಕ ಐಫೋನ್ 17 ಖರೀದಿ ಮಾಡ್ಬಹುದು. ಗ್ರಾಹಕರಿಗೆ ಕೆಲ ಕಂಪನಿ ಕ್ಯಾಶ್ಬ್ಯಾಕ್ ಆಫರ್ ಕೂಡ ನೀಡ್ತಿದೆ. ಅಮೇರಿಕನ್ ಎಕ್ಸ್ಪ್ರೆಸ್, ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್ ಬಳಸಿ ಮೊಬೈಲ್ ಖರೀದಿ ಮಾಡಿದ ಗ್ರಾಹಕರಿಗೆ ಕ್ಯಾಶ್ ಬ್ಯಾಕ್ ಸಿಗಲಿದೆ. ಐಸಿಐಸಿಐ, 5,000 ಕ್ಯಾಶ್ಬ್ಯಾಕ್ ನೀಡ್ತಿದೆ. ಇನ್ನು ನೋ-ಕಾಸ್ಟ್ ಇಎಂಐ ಆಯ್ಕೆ ಕೂಡ ಗ್ರಾಹಕರಿಗೆ ಲಭ್ಯವಿದೆ. ಗ್ರಾಹಕರು 6 ತಿಂಗಳವರೆಗೆ ಇಎಂಐ ಮೇಲೆ ಯಾವುದೇ ಬಡ್ಡಿ ಪಾವತಿಸಬೇಕಾಗಿಲ್ಲ. ಇದರ ನಂತರ, 9-18 ತಿಂಗಳ ಇಎಂಐ ಮೇಲೆ ಶೇಕಡಾ 15.99 ರಷ್ಟು ಬಡ್ಡಿ ವಿಧಿಸಲಾಗುತ್ತದೆ.