ಐವಿಎಫ್ ಮತ್ತು ಸರೋಗಸಿ ..ಈ ಎರಡರಲ್ಲಿ ಮಗು ಪಡೆಯಲು ಯಾವ ವಿಧಾನ ಬೆಸ್ಟ್ ಎಂಬುದರ ಬಗ್ಗೆ ಖ್ಯಾತ ನಿರ್ದೇಶಕಿ, ನಿರ್ಮಾಪಕಿ, ನಟಿ ರೂಪ ಅಯ್ಯರ್ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಎಳೆಎಳೆಯಾಗಿ ಮಾಹಿತಿ ನೀಡಿದ್ದಾರೆ.  

ಚಂದನವನದ ಸುಂದರ ನಟಿ ಹಾಗೂ ರಾಜಕಾರಣಿ ಭಾವನಾ ರಾಮಣ್ಣ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ. ಅದೂ ಅವಳಿ ಮಕ್ಕಳಿಗೆ. ಮದುವೆಯಾಗದೆ ಸಿಂಗಲ್ ಮದರ್ ಅನಿಸಿಕೊಳ್ಳುತ್ತಿರುವ ಭಾವನಾ ಐವಿಎಫ್ ಚಿಕಿತ್ಸೆ ಮೂಲಕ ಅವಳಿ ಮಕ್ಕಳನ್ನು ತಮ್ಮ ಜೀವನಕ್ಕೆ ಬರಮಾಡಿಕೊಳ್ಳುತ್ತಿದ್ದಾರೆ. ಆರು ತಿಂಗಳ ಗರ್ಭಿಣಿಯಾಗಿರುವ ಭಾವನಾ, ಈ ನಿರ್ಧಾರಕ್ಕೆ ಬರಲು ಇದ್ದ ಕಾರಣ, ಐವಿಎಫ್ ಮತ್ತು ಸರೋಗಸಿ ಚಿಕಿತ್ಸಾ ಪ್ರಕ್ರಿಯೆಗಳು ಹಾಗೂ ಈ ಎರಡರಲ್ಲಿ ಮಗು ಪಡೆಯಲು ಯಾವುದು ಬೆಸ್ಟ್ ಎಂಬುದರ ಬಗ್ಗೆ ಖ್ಯಾತ ನಿರ್ದೇಶಕಿ, ನಿರ್ಮಾಪಕಿ, ನಟಿ ರೂಪ ಅಯ್ಯರ್ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಎಳೆಎಳೆಯಾಗಿ ಮಾಹಿತಿ ನೀಡಿದ್ದಾರೆ.

ತ್ರೇತಾ, ದ್ವಾಪರ ಯುಗದಲ್ಲೂ ಇತ್ತು ಈ ವಿಧಾನ
"ಐವಿಎಫ್ ಮತ್ತು ಸರೋಗಸಿ ಮೂಲಕ ಮಗು ಪಡೆಯುವ ವಿಧಾನ ತ್ರೇತಾಯುಗ, ದ್ವಾಪರ ಯುಗ ಹೀಗೆ ಎಲ್ಲ ಯುಗದಲ್ಲೂ ನಡೆದಿದೆ. ತನಗೊಂದು ಮಗು ಬೇಕೆಂಬ ಒಂದೇ ಒಂದು ಕಾರಣಕ್ಕೆ ಅಷ್ಟೆಲ್ಲಾ ಪ್ರಯತ್ನವಾಗಿರುತ್ತೆ. ಹಾಗೆಯೇ ಇನ್ನೊಂದು ವ್ಯಕ್ತಿ ಜೀವನಕ್ಕೆ ಬಂದು ಮಗು ತಂದುಕೊಡಬೇಕು ಅನ್ನೋದೇನಿಲ್ಲ. ಐವಿಎಫ್ ಆಗಿರಬಹುದು, ಸರೋಗಸಿ ಆಗಿರಬಹುದು ಇದೊಂದು ಆಪ್ಷನ್ ಇದೆ ಅಂತ ಕಿರಿಯರು, ಮುಂದಿನ ಪೀಳಿಗೆ ಸಹ ಇದನ್ನ ರೂಢಿ ಮಾಡಿಕೊಳ್ಳಬಾರದು. ಅವರಿಗೆ ಬುದ್ದಿ ಮಾತು ಹೇಳಬೇಕು. ಹಾಗೆಂದ ಮಾತ್ರಕ್ಕೆ ಈಗಾಗಲೇ ಮಾಡಿಕೊಂಡಿರುವವರನ್ನು ತೆಗಳಬಾರದು.

ಐವಿಎಫ್‌ ನಾವಂದುಕೊಂಡಷ್ಟು ಸುಲಭವಲ್ಲ
ಒಂದೊಂದು ಐವಿಎಫ್‌ಗೂ ಹದಿನೈದರಿಂದ ಇಪ್ಪತ್ತು ಇಂಜೆಕ್ಷನ್ ಬರುತ್ತೆ. ಇಂಜೆಕ್ಷನ್ ತಗೊಂಡೂ ವರ್ಕ್‌ಔಟ್ ಆಗಲಿಲ್ಲ ಅಂದಾಗ ಸರೋಗಸಿ ವಿಧಾನವನ್ನು ಅಳವಡಿಸಿಕೊಂಡರೆ ತಪ್ಪೇನಿಲ್ಲ. ಆದರೆ ಹೆಣ್ಣು ಮಕ್ಕಳಿಗೆ ಆ ತರಹ ಇಂಜೆಕ್ಷನ್ ತಗೊಂಡ್ರೆ ಸಂಧಿವಾತ, ಮಾನಸಿಕ ಖಿನ್ನತೆ ಶುರುವಾಗುತ್ತೆ. ಅವಳ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಎಗ್ ಪ್ರೊಡಕ್ಷನ್ ಕೂಡ ನಿಂತು ಹೋಗುತ್ತೆ. ಮೆನೊಪಾಸ್ ಬೇಗ ಆಗುತ್ತೆ. ಎಲ್ಲಾ ಆರೋಗ್ಯ ಸಮಸ್ಯೆ ನೋಡಿಕೊಂಡು ಕುಟುಂಬದವರು ಒಂದು ನಿರ್ಧಾರಕ್ಕೆ ಬರುತ್ತಾರೆ. ಇಷ್ಟು ಕಷ್ಡಪಡುವ ಬದಲು ಸರೋಗಸಿಗೆ ಹೋಗೋಣವೆಂದು ಅಥವಾ ದತ್ತು ತೆಗೆದುಕೊಳ್ಳವ ಯೋಚನೆ ಮಾಡುತ್ತಾರೆ. ಒಟ್ಟಿನಲ್ಲಿ ಮಕ್ಕಳು ಬೇಕು ಅನ್ನೋ ಕಾರಣಕ್ಕೆ ಜನ ಆ ನಿರ್ಧಾರ ತೆಗೆದುಕೊಳ್ಳುತ್ತಾರೆ ತಪ್ಪೇನಿಲ್ಲ.

ಮೊಟ್ಟೆಯನ್ನ ಯಾವ ಏಜ್‌ನಲ್ಲಿ ಪ್ರಿಸರ್ವ್ ಮಾಡಬೇಕಾಗುತ್ತೆ?
ಮಹಿಳೆ 55 ವರ್ಷದ ತನಕ ಮಗು ಮಾಡಿಕೊಳ್ಳಬಹುದು. ಆದ್ರೆ ಮೆನೊಪಾಸ್ ಮುಂಚೆನೇ ಇವರು ಮೊಟ್ಟೆಯನ್ನು ಎತ್ತಿಟ್ಟರಬೇಕಾಗುತ್ತದೆ. ವಯಸ್ಸಾದ ಮೇಲೆ ಮದುವೆಯಾಗೋರು ಮೊಟ್ಟೆಯನ್ನು ಎತ್ತಿಟ್ಟರದಿದ್ರೆ ಅದಕ್ಕೂ ಆಪ್ಷನ್ ಇದೆ. ಯಾವ ವಯಸ್ಸಿನಲ್ಲಿಯಾದರೂ ಮೊಟ್ಟೆ ಪ್ರಿಸರ್ವ್ ಮಾಡಬಹುದು. ಇಪ್ಪತ್ತರಲ್ಲಿ ಮಾಡಿದರೆ ಒಳ್ಳೆಯದು. 35ರವರೆಗೂ ಮಾಡಬಹುದು. ಆಗೆಲ್ಲಾ ಚೆನ್ನಾಗಿ ಉತ್ಪತ್ತಿಯಾಗ್ತಾ ಇರುತ್ತೆ. ಆ ಫಲವತ್ತತ್ತೆಯನ್ನ ದೇಹದಲ್ಲಿ ನೋಡ್ತಾರೆ. ಮಣ್ಣಲ್ಲಿ ಫಲವತ್ತತೆ ಹೇಗೆ ನೋಡ್ತಾರೋ, ದೇಹದಲ್ಲೂ ನೋಡ್ತಾರೆ. ಹೆಣ್ಣು ಮಕ್ಕಳು ಯೋಗ, ವ್ಯಾಯಾಮ ಮಾಡಿಕೊಂಡು ಆರೋಗ್ಯವಾಗಿದ್ದಾಗ ಹೆಚ್ಚು ಸಮಸ್ಯೆಯಾಗಲ್ಲ.

ಯಾಕೀ ವಿಧಾನ ಇಷ್ಟವಾಗುತ್ತಂದ್ರೆ…
ಮೊಟ್ಟೆಯ ಸಮಸ್ಯೆ ವಯಸ್ಸಿನಿಂದ ಬರುವ ಪ್ಲಾಬ್ಲಂ ಅಲ್ಲ, ಚಿಕ್ಕ ಮಕ್ಕಳಿಗೂ ಕೂಡ ಪಿಸಿಒಡಿ ಬರುತ್ತೆ. ವಯಸ್ಸಿನಿಂದ ಮೊಟ್ಟೆ ಗುಣಮಟ್ಟ ಹೋಯ್ತು ಅನ್ನೋಕೆ ಆಗಲ್ಲ. ನಲವತ್ತೈದಕ್ಕೆ ಮಕ್ಕಳು ಮಾಡಿಕೊಂಡರನ್ನ ನೋಡಿರಬಹುದು. ಆ ಮಕ್ಕಳು ತುಂಬಾ ಚೆನ್ನಾಗಿ ಬೆಳೆದಿರುವ ಉದಾಹರಣೆಗಳಿವೆ. ಮೇಲೆ ತಿಳಿಸಿದ ವಿಧಾನಗಳೆಲ್ಲವೂ 60ರ ದಶಕದಲ್ಲಿ ಬಂದಿತ್ತು. ಈಗ ಇದನ್ನ ಎಲ್ಲಾ ಕಡೆ ಧೈರ್ಯವಾಗಿ ಮಾಡಿಕೊಳ್ಳೋಕೆ ಮುಂದೆ ಬರ್ತಾ ಇದ್ದಾರೆ. ಯಾವುದೋ ಮಗುನಾ ದತ್ತು ತೆಗೆದುಕೊಳ್ಳಲು ಹೋದಾಗ ತುಂಬಾ ಕಾಯಿಸ್ತಾರೆ. ಆದ್ರೆ ಇಂತಹ ವಿಧಾನದಲ್ಲಿ ಮಗುನಾ ಮಾಡಿಕೊಳ್ಳಲು ಹೋದಾಗ ಅದು ಡೇ ಒನ್‌ನಿಂದ ನಮ್ಮ ಮಡಿಲಲ್ಲಿ ಇರುತ್ತೆ. ಹಾಗಾಗಿ ಜನ ಇಂತಹ ವಿಧಾನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

ಪಾಸಿಟಿವ್, ನೆಗೆಟಿವ್ ಎರಡೂ ಇದೆ
ಸರೋಗಸಿ ಕೂಡ ಸುಲಭವಲ್ಲ. ಇದ್ರಲ್ಲಿ ಪಾಸಿಟಿವ್-ನೆಗೆಟಿವ್ ಎರಡೂ ಇದೆ. ಇದಕ್ಕೂ ಕಾನೂನು ಇರುತ್ತದೆ. ಅಗ್ರಿಮೆಂಟ್ ಕೂಡ ಇರುತ್ತದೆ. ಯಾವುದೇ ಹುಡುಗಿ ಸರೋಗಸಿ ಪ್ಲ್ಯಾನ್ ಮಾಡಿದಾಗ ಗಂಡನ ಒಪ್ಪಿಗೆ ಕೂಡ ಬೇಕಾಗುತ್ತೆ. ಅವರಿಗೆ ಊಟ, ತಿಂಡಿ ಕೊಟ್ಟು ಚೆನ್ನಾಗಿ ನೋಡಿಕೊಳ್ಳುವ ವ್ಯವಸ್ಥೆ ಇರುತ್ತೆ. ಮದುವೆಯಾಗಿರೊ ಹೆಣ್ಣುಮಕ್ಕಳನ್ನೇ ಆಯ್ಕೆ ಮಾಡೋದು. ಮೊದಲಿಗೆ, ಮಧ್ಯದಲ್ಲಿ ಹೀಗೆ ದುಡ್ಡು ಕೊಡಬೇಕು ಅನ್ನೋದು ಇರುತ್ತೆ. ನನಗೆ ಗೊತ್ತಿರುವ ಹಾಗೆ ಸರೋಗಸಿಯಲ್ಲಿ ಕೆಲವು ಹೆಣ್ಣು ಮಕ್ಕಳು ಗರ್ಭಿಣಿ ಆದ ಮೇಲೆ ದುಡ್ಡು ಕೊಡುತ್ತಿದ್ದ ಹಾಗೆ ಫೋನ್ ಆಫ್ ಮಾಡಿಕೊಂಡು ಹೊರಟು ಹೋಗಿದ್ದೂ ಇದೆ. ಈ ತರಹ ನೆಗೆಟಿವ್ ಆಗಿಯೂ ಇರುತ್ತದೆ. ಆದರೆ ಕೆಲವರು ಪ್ರೀತಿಯಿಂದ ಮಗುವನ್ನು ನೋಡಿಕೊಂಡು ಅವರ ಮಡಿಲಿಗೆ ಹಾಕಿರುವುದು ಇದೆ. ಒಮ್ಮೆ ಸರ್ಕಾರ ಈ ಪದ್ಧತಿನಾ ನಿಲ್ಲಿಸಿ. ನಿಮ್ಮ ರಿಲೆಟಿವ್‌ನಲ್ಲಿ ಇದನ್ನ ಮಾಡಿಕೊಳ್ಳಬಹುದು, ಅದಕ್ಕೆ ಹೊರಗಿನವರಿಗೆ ಬೇಡ ಅಂತ ನಿಯಮ ರೂಪಿಸಿತ್ತು.

YouTube video player