Asianet Suvarna News Asianet Suvarna News

ಈ 10 ಪ್ರಶ್ನೆಗೆ ಆನ್ಸರ್ ಮಾಡೋಕೆ ಆಗಿಲ್ಲಾಂದ್ರೆ ನೀವು ನಿಜವಾಗ್ಲೂ ಖುಷಿಯಾಗಿಲ್ಲಾಂತ ಅರ್ಥ

ಜೀವನದಲ್ಲಿ ಸುಲಭವಾಗಿ ಸಿಗದ್ದು ಏನಾದರೂ ಇದ್ದರೆ ಅದು ಖುಷಿ. ಹಣ, ಸಂಪತ್ತು, ಉದ್ಯೋಗ, ಬಂಗಲೆ, ಕುಟುಂಬ ಹೀಗೆ ಎಲ್ಲವೂ ಇದ್ದರೂ ಕೆಲವೊಮ್ಮೆ ಖುಷಿ ಅನ್ನೋದು ಮರೀಚಿಕೆಯಾಗಿ ಬಿಡುತ್ತದೆ. ಈ 10 ಪ್ರಶ್ನೆಗೆ ಆನ್ಸರ್ ಮಾಡೋಕೆ ಆಗಿಲ್ಲಾಂದ್ರೆ ನೀವು ಸಹ ನಿಜವಾಗ್ಲೂ ಖುಷಿಯಾಗಿಲ್ಲಾಂತ ಅರ್ಥ

If you cant answer these 10 questions, youre not truly happy Vin
Author
First Published Sep 22, 2023, 12:23 PM IST

ಜೀವನದಲ್ಲಿ ಖುಷಿಯಾಗಿರುವುದು ತುಂಬಾ ಮುಖ್ಯ. ಕಷ್ಟ-ಸುಖ, ಏಳು-ಬೀಳು, ನೋವು-ನಲಿವು ಎಲ್ಲರ ಜೀವನದಲ್ಲಿಯೂ ಇರುತ್ತದೆ. ಆದರೆ ಇದೆಲ್ಲದರ ಮಧ್ಯೆ ನಾವೆಷ್ಟು ಖುಷಿಯಾಗಿದ್ದೇವೆ ಅನ್ನೋದು ನಮ್ಮ ಬದುಕನ್ನು ನಿರ್ಧರಿಸುತ್ತದೆ. ಣ, ಸಂಪತ್ತು, ಉದ್ಯೋಗ, ಬಂಗಲೆ, ಕುಟುಂಬ ಹೀಗೆ ಎಲ್ಲವೂ ಇದ್ದರೂ ಕೆಲವೊಮ್ಮೆ ಖುಷಿ ಅನ್ನೋದು ಮರೀಚಿಕೆಯಾಗಿ ಬಿಡುತ್ತದೆ. ಖುಷಿ ಅನ್ನೋದು ಸಂತೋಷವಾಗಿರುವುದು. ಸಂತೋಷವಾಗಿರುವುದು ಅಂದರೆ ಸಾಕಷ್ಟು ಹಣ, ಅಥವಾ ಕಾರು ಅಥವಾ ಟನ್ಗಟ್ಟಲೆ ಸ್ನೇಹಿತರನ್ನು ಹೊಂದಿರುವುದು ಅಲ್ಲ. ಅಥವಾ ಆನ್‌ಲೈನ್‌ನಲ್ಲಿ ಹೆಚ್ಚು ಲೈಕ್ಸ್‌, ಕಾಮೆಂಟ್ ಪಡೆಯುವುದು ಸಹ ಅಲ್ಲ. ಇದು ಎಲ್ಲವೂ ಉತ್ತಮವಾಗಿದೆ ಎಂಬ ಭಾವನೆಯನ್ನು ಆರಂಭಿಸುವುದು. ಹಾಗಿದ್ರೆ ನೀವು ನಿಜವಾಗಿಯೂ ಖುಷಿಯಾಗಿದ್ದೀರಾ? ಈ 10 ಪ್ರಶ್ನೆಗೆ ಆನ್ಸರ್ ನೀಡುವ ಮೂಲಕ ನಿಮ್ಮ ಖುಷಿಯನ್ನು ಕಂಡುಕೊಳ್ಳಿ. 

1. ನಿಮ್ಮ ಬಗ್ಗೆ ನಿಮಗೆ ಒಳ್ಳೆಯ ಭಾವನೆ ಇದೆಯೇ?
ನಿಮ್ಮ ಬಗ್ಗೆ ನಿಮಗೆ ಒಳ್ಳೆಯ ಭಾವನೆ ಇದೆಯೇ. ನಿಜವಾದ ಸಂತೋಷವು ನಿಮ್ಮನ್ನು ಒಪ್ಪಿಕೊಳ್ಳುವುದು ಮತ್ತು ಪ್ರೀತಿಸುವುದರೊಂದಿಗೆ ಪ್ರಾರಂಭವಾಗುತ್ತದೆ, ನೆನಪಿಡಿ, ಯಾರೂ ಪರಿಪೂರ್ಣರಲ್ಲ. ನಾವೆಲ್ಲರೂ ನ್ಯೂನತೆಗಳನ್ನು ಹೊಂದಿದ್ದೇವೆ ಮತ್ತು ತಪ್ಪುಗಳನ್ನು ಮಾಡುತ್ತೇವೆ. ಆದರೆ ಈ ಅಪೂರ್ಣತೆಗಳನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎಂಬುದು ನಮ್ಮ ಸಂತೋಷವನ್ನು ವ್ಯಾಖ್ಯಾನಿಸುತ್ತದೆ. ನೀವು ನಿರಂತರವಾಗಿ ನಿಮ್ಮನ್ನು ನೀವೇ ಏನನ್ನೂ ಸಾಧಿಸಲಾಗದ ವ್ಯಕ್ತಿ ಎಂಬಂತೆ ನೋಡುತ್ತಿದ್ದರೆ ನೀವು ಸಂತೋಷವಾಗಿಲ್ಲವೆಂದೇ ಅರ್ಥ.

Self Love: ನಿಮ್ಮನ್ನು ನೀವು ಪ್ರೀತಿಸುತ್ತಿದ್ರೆ ಈ ಕೆಲಸಗಳಿಂದ ದೂರವಿರಿ!

2. ನೀವು ಇಷ್ಟಪಡುವುದನ್ನು ಮಾಡುತ್ತಿದ್ದೀರಾ?
ಸ್ವಲ್ಪ ಸಮಯ (Time) ತೆಗೆದುಕೊಳ್ಳಿ ಮತ್ತು ಇದರ ಬಗ್ಗೆ ಯೋಚಿಸಿ. ನೀವು ಮನಸ್ಸಿಗೆ ಇಷ್ಟ ನೀಡುವ ಕೆಲಸ ಮಾಡುತ್ತಿದ್ದೀರಾ ಅಥವಾ ಮನಸ್ಸಿಗೆ ಖುಷಿ ನೀಡದ ಕೆಲಸದಲ್ಲಿ ದಿನವಿಡೀ ತೊಡಗಿಕೊಳ್ಳುತ್ತೀರಾ. ನಿಜವಾದ ಸಂತೋಷವು ಹೆಚ್ಚಾಗಿ ಭಾವನೆಗೆ ಸಂಬಂಧಿಸಿದೆ. ನಾವು ಇಷ್ಟಪಡುವುದನ್ನು ನಾವು ಮಾಡುವಾಗ, ಅದು ಕೆಲಸವಾಗಲಿ, ಹವ್ಯಾಸವಾಗಲಿ ಅಥವಾ ಪ್ರೀತಿಪಾತ್ರರ ಜೊತೆಗೆ ಸಮಯ ಕಳೆಯುವಾಗಲೂ, ನಾವು ಉತ್ಸಾಹಭರಿತರಾಗಿರುತ್ತೇವೆ.

3. ಒಳ್ಳೆಯ ಭಾವನೆ ಮೂಡಿಸುವ ಜನರಿಂದ ಸುತ್ತುವರೆದಿದ್ದೀರಾ?
ಸಂತೋಷದ ಮೇಲೆ ಸುತ್ತಮುತ್ತಲಿರುವ ಜನರು ತುಂಬಾ ಪ್ರಭಾವ (Influene) ಬೀರುತ್ತಾರೆ. ಸುತ್ತಲಿದ್ದವರು ನಕಾರಾತ್ಮಕಾವಗಿ ಮಾತನಾಡಲು ಆರಂಭಿಸಿದಾಗ ಮನಸ್ಸು ಸಹ ನೆಗೆಟಿವ್‌ ಆಗಿ ಯೋಚಿಸಲು ಆರಂಭಿಸುತ್ತದೆ. ಇದು ಸಹಜವಾಗಿಯೇ ನಮ್ಮನ್ನು ಖುಷಿಯಿಂದ ದೂರವಿಡುತ್ತದೆ. ಹೀಗಾಗಿ ಪಾಸಿಟಿವ್ ಆಗಿ ಮಾತನಾಡುವ ಉತ್ತಮ ಗುಣ ನಡತೆಯುಳ್ಳ ಜನರಿಂದ ಸುತ್ತುವರೆದಿರುವುದು ತುಂಬಾ ಮುಖ್ಯ. 

4. ಚಿಕ್ಕ ವಿಷಯಗಳನ್ನು ಆನಂದಿಸಲು ಸಮಯ ತೆಗೆದುಕೊಳ್ಳುತ್ತೀರಾ?
ಬಿಡುವಿಲ್ಲದ ಜೀವನದಲ್ಲಿ, ನಮ್ಮ ಸುತ್ತಲಿನ ಸಣ್ಣ ಸಂತೋಷ (Happiness)ಗಳನ್ನು ಅನುಭವಿಸಲು ಮತ್ತು ಪ್ರಶಂಸಿಸಲು ನಾವು ಆಗಾಗ ಮರೆತುಬಿಡುತ್ತೇವೆ. ಜೀವನದ ಸರಳ ದೈನಂದಿನ ಕ್ಷಣಗಳಲ್ಲಿ ಆನಂದವನ್ನು ಪಡೆಯುವುದು ಸಂತೋಷವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?

ಖುಷ್ ಖುಷಿಯಾಗಿರ್ಬೇಕಾ? ಈ ಫುಡ್‌ನ್ನೆಲ್ಲ ತಿಂದ್ರೆ ಸಾಕು ಬಿಡಿ

5. ಹಿಂದಿನ ನೋವುಗಳನ್ನು ಮರೆತಿದ್ದೀರಾ?
ಜೀವನವು ಏರಿಳಿತಗಳಿಂದ ತುಂಬಿದ ಪ್ರಯಾಣವಾಗಿದೆ. ಹೀಗಾಗಿ ಹಿಂದಿನ ನೋವುಗಳು (Pain), ನಿರಾಶೆಗಳು ಮತ್ತು ವಿಷಾದಗಳನ್ನು ಹಿಂದೆಯೇ ಬಿಟ್ಟು ಮುಂದೆ ಸಾಗಬೇಕು. ಜೀವನದ ಹಿಂದಿನ ನೋವುಗಳನ್ನು ನಾವು ಹೇಗೆ ಎದುರಿಸುತ್ತೇವೆ ಎಂಬುದು ನಮ್ಮ ಪ್ರಸ್ತುತ ಸಂತೋಷದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಹಿಂದಿನ ನೋವುಗಳನ್ನು ಹಿಡಿದಿಟ್ಟುಕೊಳ್ಳುವುದು ಭಾರವಾದ ಚೀಲವನ್ನು ಹೊತ್ತಂತೆ. ಇದು ನಿಮ್ಮನ್ನು ಭಾರವಾಗಿಸುತ್ತದೆ ಮತ್ತು ಮುಂದೆ ಸಾಗದಂತೆ ತಡೆಯುತ್ತದೆ.

6. ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತೀರಾ?
ನಾವು ಸಾಮಾನ್ಯವಾಗಿ ಸಂತೋಷವನ್ನು ಮಾನಸಿಕ ಆರೋಗ್ಯದೊಂದಿಗೆ ಸಂಯೋಜಿಸುತ್ತೇವೆ. ಆದರೆ ದೈಹಿಕ ಆರೋಗ್ಯವು ಖುಷಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅನಾರೋಗ್ಯ ಅಥವಾ ದಣಿದಿರುವಾಗ ಸಂತೋಷವನ್ನು ಅನುಭವಿಸುವುದು ಸವಾಲಿನ ಸಂಗತಿಯಾಗಿದೆ. ಹೀಗಾಗಿ ಆರೋಗ್ಯದ ಬಗ್ಗೆ ನಿಗದಿತವಾಗಿ ಗಮನ ಹರಿಸುವುದು ಮುಖ್ಯವಾಗಿದೆ. 

7. ನೀವು ನಿಮ್ಮೊಂದಿಗೆ ಪ್ರಾಮಾಣಿಕರಾಗಿದ್ದೀರಾ?
ಎಲ್ಲರೂ ಒಂದಲ್ಲಾ ಒಂದು ಹಂತದಲ್ಲಿ ತಮ್ಮನ್ನು ತಾವು ವಂಚಿಸಿಕೊಳ್ಳುತ್ತಾರೆ. ಆದರೆ ಸಮಸ್ಯೆಗಳು ಅಸ್ತಿತ್ವದಲ್ಲಿಲ್ಲ ಎಂದು ನಟಿಸುವುದರಿಂದ ಅವುಗಳನ್ನು ಕಣ್ಮರೆಯಾಗುವುದಿಲ್ಲ. ನಿಮ್ಮೊಂದಿಗೆ ನೀವು ನಿಜವಾಗಿಯೂ ಪ್ರಾಮಾಣಿಕರಾಗಿದ್ದೀರಾ? ಅಥವಾ ನೀವು ಮುಖವಾಡ ಧರಿಸಿ, ಎಲ್ಲವೂ ಚೆನ್ನಾಗಿದೆ ಎಂದು ನಟಿಸುತ್ತಿದ್ದೀರಾ ಗಮನಿಸಿ. ಸಂತೋಷದ ಮುಖವಾಡ ಹಾಕಿಕೊಳ್ಳುವುದು ನಿಜವಾದ ಸಂತೋಷವಲ್ಲ ಎಂಬುದನ್ನು ತಿಳಿಯಿರಿ.

8. ನೀವು ಕೃತಜ್ಞತೆಯನ್ನು ಅಭ್ಯಾಸ ಮಾಡುತ್ತೀರಾ?
ಕೃತಜ್ಞತೆಯುಸಂತೋಷವನ್ನು ಗಮನಾರ್ಹವಾಗಿ ಹೆಚ್ಚಿಸುವ ಪ್ರಬಲ ಅಭ್ಯಾಸವಾಗಿದೆ. ಪ್ರತಿ ದಿನ ತಮಗೆ ಸಿಕ್ಕಿರುವ ಜೀವನದ ಬಗ್ಗೆ ಖುಷಿಯಾಗಿರುವವರು  ಹೆಚ್ಚು ಆಶಾವಾದಿಗಳಾಗಿರುತ್ತಾರೆ ಮತ್ತು ಅವರ ಜೀವನದ ಬಗ್ಗೆ ಉತ್ತಮ ಭಾವನೆ ಹೊಂದಿದ್ದಾರೆ ಎಂದು ಅಧ್ಯಯನವು ಕಂಡುಹಿಡಿದಿದೆ. ಕೃತಜ್ಞತೆಯನ್ನು ಅಭ್ಯಾಸ ಮಾಡುವುದು ಜೀವನದ ಮೇಲೆ ಪಾಸಿಟಿವ್ ಆಗಿ ಪರಿಣಾಮ ಬೀರುತ್ತದೆ.

9. ನೀವು ನಿಮ್ಮನ್ನು ಕ್ಷಮಿಸುತ್ತೀರಾ?
ನಾವೆಲ್ಲರೂ ಮನುಷ್ಯರು ಮತ್ತು ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ. ಇದು ಜೀವನದ ಒಂದು ಭಾಗವಾಗಿದೆ. ಆದರೆ ಈ ತಪ್ಪುಗಳಿಗಾಗಿ ನಾವು ನಮ್ಮನ್ನು ಕ್ಷಮಿಸುವುದು ಮುಖ್ಯ. ನಾವು ಮಾಡಿದ ತಪ್ಪಿನ ಬಗ್ಗೆಯೇ ನಾವು ಮತ್ತೆ ಮತ್ತೆ ಯೋಚಿಸುತ್ತಿದ್ದರೆ ಅದು ಪ್ರಸ್ತುತ ಇರುವ ಸಂತೋಷವನ್ನು ಸಹ ಕಳೆದುಕೊಳ್ಳಲು ಕಾರಣವಾಗುತ್ತದೆ. 

10. ನೀವು ನಿಮಗಾಗಿ ಅಥವಾ ಇತರರಿಗಾಗಿ ಜೀವಿಸುತ್ತಿದ್ದೀರಾ?
ಇತರರು ನಿಮ್ಮಿಂದ ಏನನ್ನು ನಿರೀಕ್ಷಿಸುತ್ತಾರೆಯೋ ನೀವು ಅದರ ಪ್ರಕಾರ ಜೀವನ ನಡೆಸುತ್ತಿದ್ದೀರಾ? ಅಥವಾ ನಿಮ್ಮ ಸ್ವಂತ ಇಷ್ಟಗಳಿಗೆ ಅನುಗುಣವಾಗಿ ಜೀವನ ನಡೆಸುತ್ತಿದ್ದೀರಾ.ಇತರರಿಗಾಗಿ ಬದುಕುವುದು ಅಸಮಾಧಾನ, ಹತಾಶೆ ಮತ್ತು ಅಂತಿಮವಾಗಿ ಸಂತೋಷ ಇಲ್ಲದಿರೋದಕ್ಕೆ ಕಾರಣವಾಗಬಹುದು. ಹೀಗಾಗಿ ನಿಮ್ಮ ಆಸೆ, ಅಭಿರುಚಿ, ಆಯ್ಕೆಗೆ ತಕ್ಕಂತೆ ಬದುಕುವುದು ಖುಷಿಯನ್ನು ತರುತ್ತದೆ.

Follow Us:
Download App:
  • android
  • ios