ಖುಷ್ ಖುಷಿಯಾಗಿರ್ಬೇಕಾ? ಈ ಫುಡ್‌ನ್ನೆಲ್ಲ ತಿಂದ್ರೆ ಸಾಕು ಬಿಡಿ
ಒತ್ತಡವು ಒಂದು ಗಂಭೀರ ಸಮಸ್ಯೆಯಾಗಿದ್ದು, ಇದು ನಿಮ್ಮ ಆರೋಗ್ಯಕ್ಕೆ ದೊಡ್ಡ ಹಾನಿಯನ್ನುಂಟು ಮಾಡುತ್ತದೆ, ಅದನ್ನು ನಿಭಾಯಿಸಲು, ತಜ್ಞರು ಸೂಚಿಸಿದಂತೆ ನೀವು ಹೆಚ್ಚಿನ ಆಹಾರಗಳನ್ನು ಸೇವಿಸಬೇಕು. ಇದರಿಂದ ಮನಸ್ಸು ನಿರಾಳವಾಗುತ್ತೆ.
ಇತ್ತೀಚಿನ ದಿನಗಳಲ್ಲಿ, ವೇಗದ ಜೀವನ ಮತ್ತು ಕೆಲಸದ ಹೊರೆಯಿಂದಾಗಿ ಒತ್ತಡವು ಸಾಮಾನ್ಯ ಸಮಸ್ಯೆಯಾಗುತ್ತಿದೆ. ಒತ್ತಡವು (stress) ದೇಹ ಹಾಗೂ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ಆಯಾಸ (Tiredness), ಸ್ನಾಯು ನೋವು (Muscle Pain), ಎದೆ ನೋವು (Heart Pain), ಲೈಂಗಿಕ ಆರೋಗ್ಯದ (Sexual Health) ಮೇಲೆ ಕೆಟ್ಟ ಪರಿಣಾಮ, ಏಕಾಗ್ರತೆಯ ಕೊರತೆ, ಹಸಿವಾಗದಿರುವುದು, ಕೋಪ, ಕಿರಿಕಿರಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
ಒತ್ತಡವು ಮನುಷ್ಯವನ್ನು ಮಾನಸಿಕ ಅಸ್ವಸ್ಥರನ್ನಾಗಿ ಮಾಡುತ್ತದೆ. ಒತ್ತಡವನ್ನು ತಪ್ಪಿಸಲು ಮಾರ್ಗಗಳು ಯಾವುವು? ಎಂದು ನೀವು ಯೋಚನೆ ಮಾಡಿರಬಹುದು, ಒತ್ತಡವನ್ನು ಎದುರಿಸಲು, ನಿಮ್ಮ ಆಹಾರದ ಬಗ್ಗೆ ನೀವು ಗಮನ ಹರಿಸಬೇಕು. ಕೆಲವೊಂದು ಆಹಾರಗಳು ಒತ್ತಡವನ್ನು (food for stress) ಸುಲಭವಾಗಿ ನಿವಾರಿಸಲು ಸಹಾಯ ಮಾಡುತ್ತೆ. ಅವುಗಳ ಬಗ್ಗೆ ತಿಳಿಯೋಣ.
ವಿಟಮಿನ್ ಬಿ ಇರುವ ಆಹಾರಗಳು (Vitamin B food)
ವಿಟಮಿನ್ ಬಿ ಸಮೃದ್ಧ ಆಹಾರಗಳಾದ ಕಡಲೆ ಮತ್ತು ಸೊಪ್ಪು ಸೇವಿಸಿದರೆ ಒತ್ತಡ ನಿಭಾಯಿಸಲು ಸಹಾಯ ಮಾಡುತ್ತದೆ. ಒತ್ತಡಕ್ಕೊಳಗಾದಾಗ, ನಿಮ್ಮ ದೇಹದಲ್ಲಿ ಈಗಾಗಲೇ ಇರುವ ಬಿ ಜೀವಸತ್ವಗಳನ್ನು ಬಳಸಲು ಪ್ರಾರಂಭಿಸುತ್ತದೆ. ಇದರಿಂದ ಒತ್ತಡ ನಿವಾರಣೆಯಾಗುತ್ತೆ.
ಹಸಿ ತರಕಾರಿಗಳು (Row vegetables)
ಸೆಲೆರಿ ಅಥವಾ ಕ್ಯಾರೆಟ್ ಗಳಂತಹ ಕುರುಕಲು ಕಚ್ಚಾ ತರಕಾರಿಗಳನ್ನು ತಿನ್ನುವುದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಹ್ಯಾಪಿ ಹಾರ್ಮೋನ್ ಸಹ ಹೆಚ್ಚಾಗುತ್ತೆ.
ಹಸಿರು ಎಲೆಗಳ ತರಕಾರಿಗಳು (Green Vegetables)
ಹಸಿರು ಎಲೆ ತರಕಾರಿಗಳು ಮೆಗ್ನೀಸಿಯಮ್ ನ ಉತ್ತಮ ಮೂಲವಾಗಿದೆ ಮತ್ತು ಅವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಒತ್ತಡ ಮತ್ತು ಆತಂಕದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ವಿಟಮಿನ್ ಸಿ ಇರುವ ಆಹಾರಗಳು (VItamin C food)
ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಒತ್ತಡದ ಹಾರ್ಮೋನುಗಳ ಮಟ್ಟವನ್ನು ಕಡಿಮೆ ಮಾಡುತ್ತದೆ.
ಲಘು ಆಹಾರ (Light food)
ಧಾನ್ಯಗಳು ಮತ್ತು ಅಕ್ಕಿಯಂತಹ ಹಗುರವಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸುವುದರಿಂದ ಸಂತೋಷದ ಹಾರ್ಮೋನ್ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸಲು ಮತ್ತು ಕಾಮಾಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ವಿಟಮಿನ್ ಇ ಇರುವ ಆಹಾರಗಳು (Vitamin E)
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಟಮಿನ್ ಇ ಸಮೃದ್ಧವಾಗಿರುವ ಬಾದಾಮಿ ಮತ್ತು ಒತ್ತಡಕ್ಕೆ ಬಿ ಜೀವಸತ್ವಗಳನ್ನು ಹೊಂದಿರುವ ಆಹಾರವನ್ನು ಸೇವಿಸಿ. ಇದಲ್ಲದೆ, ಸಂಕೀರ್ಣ ಕಾರ್ಬೋಹೈಡ್ರೇಟ್ಗಳನ್ನು ತಿನ್ನುವುದು ಮೆದುಳಿನ ಸಿರೊಟೋನಿನ್ ಅನ್ನು ಹೆಚ್ಚಿಸುತ್ತೆ.