ಶಿಶುಗಳ ಮಾನಸಿಕ ಯೋಗಕ್ಷೇಮ ಮತ್ತು ಬೆಳವಣಿಗೆಗಾಗಿ ಹೈಡ್ರೋಥೆರಪಿ

ಬೆಳವಣಿಗೆಯಲ್ಲಿನ ಸಮಸ್ಯೆಗಳನ್ನು ಎದುರಿಸುತ್ತಿರುವ ಎಳೆಯ ಮಕ್ಕಳ ಮಾನಸಿಕ ಯೋಗಕ್ಷೇಮಕ್ಕೆ ಹೈಡ್ರೋಥೆರಪಿ ನೆರವಾಗುತ್ತದೆ. ಅದು ಯಾವ ರೀತಿ ಎಂಬುದರ ವಿವರ ಇಲ್ಲಿದೆ. ಡಿವೈಯು ಹೆಲ್ತ್‌ಕೇರ್‌ನ ನಿರ್ದೇಶಕ ಡಾ.ಪ್ರಶಾಂತ್ ಗೌಡ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Hydrotherapy for infant mental well being and development Vin

ಬೆಳವಣಿಗೆ ಕುಂಠಿತವಾಗಿರುವ ಮಕ್ಕಳಲ್ಲದೆ, ಸಾಮಾನ್ಯ ಶಿಶುಗಳ ಮಾನಸಿಕ ಆರೋಗ್ಯಕ್ಕೆ ಹಲವಾರು ಲಾಭಗಳನ್ನು ನೀಡುವ ಹಾಗೂ ನೀರಿನಲ್ಲಿ ಮಕ್ಕಳಿಗೆ ಆಟವಾಡಲು ಬಿಡುವ ಚಿಕಿತ್ಸಾತ್ಮಕ ತಂತ್ರ ಒಳಗೊಂಡಿರುವ ಕ್ರಮ ಹೈಡ್ರೋಥೆರಪಿ. ಇಂದ್ರಿಯಗಳ ಕಾರ್ಯಕ್ಕೆ ಚಾಲನೆ ನೀಡುವುದು, ಅರಿವಿನ ಬೆಳವಣಿಗೆ, ಭಾವನೆಗಳ ನಿಯಂತ್ರಣ ಮತ್ತು ಸಾಮಾಜಿಕ ಸಂವಹನಗಳನ್ನು ಪ್ರೋತ್ಸಾಹಿಸುವ ಪೋಷಣಾತ್ಮಕ ಮತ್ತು ಪ್ರಚೋದನಾತ್ಮಕ ವಾತಾವರಣವನ್ನು ಹೈಡ್ರೋಥೆರಪಿ ಪ್ರಕ್ರಿಯೆ ಸೃಷ್ಟಿಸುತ್ತದೆ. ಶಿಶುಗಳ ಅದರಲ್ಲಿಯೂ ವಿಶೇಷವಾಗಿ ಬೆಳವಣಿಗೆಯಲ್ಲಿನ ಸಮಸ್ಯೆಗಳನ್ನು ಎದುರಿಸುತ್ತಿರುವ ಎಳೆಯ ಮಕ್ಕಳ ಮಾನಸಿಕ ಯೋಗಕ್ಷೇಮಕ್ಕೆ ಹೈಡ್ರೋಥೆರಪಿ ಯಾವ ರೀತಿಯಲ್ಲಿ ನೆರವಾಗುತ್ತದೆ ಎಂಬುದರ ವಿವರ ಇಲ್ಲಿದೆ. ಡಿವೈಯು ಹೆಲ್ತ್‌ಕೇರ್‌ನ ನಿರ್ದೇಶಕ ಡಾ.ಪ್ರಶಾಂತ್ ಗೌಡ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಇಂದ್ರಿಯಗಳಿಗೆ ಚಾಲನೆ ಮತ್ತು ನಿಯಂತ್ರಣ: ಶಿಶುವಿನ (Infant) ಇಂದ್ರಿಯ ವ್ಯವಸ್ಥೆಯ ನಿಯಂತ್ರಣ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುವ ಸಮೃದ್ಧವಾದ ಅನುಭವಗಳನ್ನು ಹೈಡ್ರೋಥೆರಪಿ ನೀಡುತ್ತದೆ. ಬೆಚ್ಚಗಿನ ನೀರು, ಮೃದುವಾದ ಚಲನೆಗಳು ಮತ್ತು ನೀರಿನ ಒತ್ತಡಗಳು (Pressure), ಉಪಶಮನ ನೀಡುವಂತಹ ಪರಿಣಾಮ ಸೃಷ್ಟಿಸುವುದಲ್ಲದೆ, ವಿಶ್ರಾಂತಿ (Rest) ಲಭಿಸುವಂತೆ ಮಾಡಿ ಸಮಗ್ರ ಇಂದ್ರಿಯ ಕಾರ್ಯ ಸುಧಾರಣೆಗೆ ನೆರವಾಗುತ್ತದೆ. ವಸ್ತುಗಳನ್ನು ಮುಟ್ಟಿ ಅವುಗಳ ಬಗ್ಗೆ ತಿಳಿದುಕೊಳ್ಳುವುದು, ದೇಹ ಕುರಿತು ಜಾಗೃತಿ ಮತ್ತು ಸ್ವಯಂ ನಿಯಂತ್ರಣ ಕೌಶಲ್ಯಗಳ ಬೆಳವಣಿಗೆಯಲ್ಲಿ ಈ ಉತ್ತೇಜನ ಕ್ರಮ ನೆರವಾಗುತ್ತದೆ. ಬೆಳವಣಿಗೆಯ ವಿಳಂಬ ಹೊಂದಿರುವ ಶಿಶುಗಳಿಗೆ ಇದು ಬಹಳ ಮುಖ್ಯವಾಗಿರುವುದಲ್ಲದೆ, ಅವರಲ್ಲಿ ಪ್ರಶಾಂತತೆಯ ಭಾವನೆಯನ್ನು (Feelings) ಈ ಕ್ರಮ ತಂದುಕೊಡುತ್ತದೆ.

ವಿಪರೀತ ಮೊಬೈಲ್‌ ಬಳಸೋ ಮಕ್ಕಳನ್ನು ಕಾಡುತ್ತೆ ಮಾನಸಿಕ ಸಮಸ್ಯೆ, ಪೋಷಕರು ಏನ್ಮಾಡ್ಬೇಕು?

ಅರಿವಿನ ಬೆಳವಣಿಗೆ : ಹೈಡ್ರೋಥೆರಪಿಯಲ್ಲಿನ ನೀರಿನ ವಾತಾವರಣ ಶಿಶುಗಳ ಅರಿವಿನ ಸಾಮರ್ಥ್ಯ ಬೆಳೆಯುವುದಕ್ಕೆ ಉತ್ತೇಜನ ನೀಡುವಂತಹ ಅನನ್ಯ ಗ್ರಹಿಕೆಯ ಸವಾಲುಗಳನ್ನು ಸಾದರಪಡಿಸುತ್ತದೆ. ನೀರಿನಲ್ಲಿನ ಅನುಭವಗಳು ಕುತೂಹಲವನ್ನು ಹೆಚ್ಚಿಸುವುದಲ್ಲದೆ, ಆವಿಷ್ಕಾರಕ್ಕೆ ಪ್ರೋತ್ಸಾಹ ನೀಡುತ್ತವೆ. ಸಮಸ್ಯೆಗಳನ್ನು ಪರಿಹರಿಸುವ ಚಟುವಟಿಕೆಗಳಲ್ಲಿ (Activities) ಶಿಶುಗಳು ತೊಡಗುವುದಕ್ಕೆ ನೀರಿನಲ್ಲಿನ ತೇಲುವಂತಹ ವಾತಾವರಣ ಮತ್ತು ಚಲನೆಯ ಸ್ವಾತಂತ್ರ್ಯಗಳು ಅವಕಾಶ ಮಾಡಿಕೊಡುತ್ತವೆ.  ಇವು ಅರಿವಿನ ಕೌಶಲ್ಯಗಳು ಮತ್ತು ಮೆದುಳಿನ ಬೆಳವಣಿಗೆಗೆ ಚಾಲನೆ ನೀಡುತ್ತದೆ.

ಭಾವನೆಗಳ ನಿಯಂತ್ರಣ ಮತ್ತು ವಿಶ್ರಾಂತಿ ನೀಡುವುದು: ಶಿಶುಗಳಲ್ಲಿ ಹೈಡ್ರೋಥೆರಪಿ ಚಿಕಿತ್ಸೆಯು ವಿಶ್ರಾಂತಿಯ ಮನಃಸ್ಥಿತಿಯನ್ನು ಪೂರೈಸುವುದಲ್ಲದೆ, ಭಾವನೆಗಳ ನಿಯಂತ್ರಣಕ್ಕೆ ಬೆಂಬಲ ನೀಡುತ್ತವೆ. ಗರ್ಭದಲ್ಲಿನ ಸಮಾಧಾನಪೂರ್ವಕ ಭಾವನೆಗಳನ್ನೇ ಈ ಬೆಚ್ಚಗಿನ ನೀರು ಮೂಡಿಸುತ್ತದೆ. ಇದು ಒತ್ತಡ, ಆತಂಕ, ಅಲ್ಲದೆ, ಮನಸ್ಸಿನ ಕಿರಿಕಿರಿ ಅಥವಾ ತಳಮಳವನ್ನು ಕಡಿಮೆ ಮಾಡುತ್ತದೆ. ಬೆಳವಣಿಗೆಯ ವಿಳಂಬಗಳನ್ನು ಹೊಂದಿರುವ ಶಿಶುಗಳಿಗೆ ಈ ವಾತಾವರಣ ನಿರ್ದಿಷ್ಟವಾಗಿ ಲಾಭದಾಯಕವಾಗಿರುತ್ತದೆ. ನಿಗದಿತವಾಗಿ ಹೈಡ್ರೋಥೆರಪಿ ಚಿಕಿತ್ಸಾ ಕ್ರಮಗಳು ಭಾವನಾತ್ಮಕ ನಿಯಂತ್ರಣಕ್ಕೆ ಕೊಡುಗೆ ನೀಡುತ್ತವೆ. ಜೊತೆಗೆ ಪ್ರಶಾಂತತೆಯ ಭಾವನೆಯನ್ನು ತುಂಬುವುದಲ್ಲದೆ, ಒಟ್ಟಾರೆ ಭಾವನಾತ್ಮಕ ಯೋಗಕ್ಷೇಮವನ್ನು ಹೆಚ್ಚಿಸುತ್ತವೆ.

Health Tips: ಯುವಜನರಲ್ಲಿ ಕಾಡುವ ಮಾನಸಿಕ ರೋಗಕ್ಕೆ ಕುಟುಂಬವೇ ಕಾರಣ!

ಸಾಮಾಜಿಕ ಸಂಪರ್ಕ ಮತ್ತು ಬಾಂಧವ್ಯ: ಶಿಶುಗಳು ಮತ್ತು ಅವರಿಗೆ ಆರೈಕೆ ನೀಡುವವರ ನಡುವೆ ಸಾಮಾಜಿಕ ಸಂಪರ್ಕ ಮತ್ತು ಪರಸ್ಪರ ಬಾಂಧವ್ಯ ಹೆಚ್ಚಿಸಿಕೊಳ್ಳುವುದಕ್ಕೆ ಹೈಡ್ರೋಥೆರಪಿ ಚಿಕಿತ್ಸಾ ಕ್ರಮಗಳು ಅವಕಾಶ ಮಾಡಿಕೊಡುತ್ತವೆ. ತರಬೇತಿ ಹೊಂದಿರುವ ಚಿಕಿತ್ಸಕರು ಮತ್ತು ಆರೈಕೆ (Care) ನೀಡುವವರು ಶಿಶುಗಳೊಂದಿಗೆ ನೀರಿನಲ್ಲಿರುತ್ತಾರೆ.  ಈ ಕ್ರಮಗಳು ಪರಸ್ಪರ ಬಾಂಧವ್ಯ, ನಂಬಿಕೆಗಳನ್ನು ಪೋಷಿಸುವುದಲ್ಲದೆ, ಶಿಶುಗಳಲ್ಲಿ ಭಾವನೆಗಳ ನಿಯಂತ್ರಣವನ್ನು ಬೆಳೆಸುತ್ತವೆ. ಶಿಶುಗಳ ಮಾನಸಿಕ ಆರೋಗ್ಯ ಮತ್ತು ಒಟ್ಟಾರೆ ಬೆಳವಣಿಗೆಯನ್ನು ಬೆಂಬಲಿಸುವಲ್ಲಿ ಹೈಡ್ರೋಥೆರಪಿ ಪ್ರಮುಖ ಪಾತ್ರ ವಹಿಸುತ್ತವೆ.

ಪೋಷಕರ ತೊಡಗಿಸಿಕೊಳ್ಳುವಿಕೆ ಮತ್ತು ಬೆಂಬಲ: ಪೋಷಕರು (Parents) ಸಕ್ರಿಯರಾಗಿ ಸ್ವತಃ ತೊಡಗಿಸಿಕೊಳ್ಳುವುದನ್ನು ಹೈಡ್ರೋಥೆರಪಿ ಚಿಕಿತ್ಸಾಕ್ರಮಗಳು ಪ್ರೋತ್ಸಾಹಿಸುತ್ತವೆ. ಇದರಿಂದ ಶಿಶುಗಳು ಮತ್ತು ಅವರ ಪೋಷಕರ ನಡುವಿನ ಬಾಂಧವ್ಯ ದೃಢಗೊಳ್ಳಲು ಸಹಾಯವಾಗುತ್ತದೆ. ನೀರಿನಲ್ಲಿ ಹಂಚಿಕೊಳ್ಳುವ ಅನುಭವಗಳು, ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಪ್ರಗತಿಯ ವೀಕ್ಷಣೆಗಳು ಸಕಾರಾತ್ಮಕ ಮತ್ತು ಬೆಂಬಲಪೂರ್ವಕ ವಾತಾವರಣ ಸೃಷ್ಟಿಸುತ್ತವೆ. 

ಪ್ರತಿ ಶಿಶುವಿನ ಅನನ್ಯ ಅಗತ್ಯಗಳನ್ನು ಗಮನಿಸುವಂತೆ ರೂಪಿಸಲಾಗಿರುವ ಮತ್ತು ಸುರಕ್ಷತೆಯ ಖಾತ್ರಿ ಮಾಡಿಕೊಳ್ಳಲು ತರಬೇತಿ ಹೊಂದಿರುವ ಅನುಭವಿ ವೃತ್ತಿಪರರನ್ನು ಸಂಪರ್ಕಿಸುವುದು ಅತ್ಯಗತ್ಯವಾಗಿರುತ್ತದೆ. ಹೈಡ್ರೋಥೆರಪಿ ಮೂಲಕ ತಮ್ಮ ಶಿಶುವಿನ ಯೋಗಕ್ಷೇಮ ಮತ್ತು ಸೌಖ್ಯತೆಗೆ ಪೋಷಕರು ಮತ್ತು ಆರೈಕೆ ನೀಡುವವರು ಸಕ್ರಿಯವಾಗಿ ಕೊಡುಗೆ ನೀಡಬಹುದು. ಇದರೊಂದಿಗೆ ಶಿಶು ತನ್ನ ಗರಿಷ್ಠ ಮಾನಸಿಕ ಆರೋಗ್ಯದ ಕಡೆಗೆ ಸಕಾರಾತ್ಮಕ ಬೆಳವಣಿಗೆಯ ಪ್ರಯಾಣ ಕೈಗೊಳ್ಳಲು ಅವಕಾಶ ಮಾಡಿಕೊಡಬಹುದು ಎಂದು ಡಿವೈಯು ಹೆಲ್ತ್‌ಕೇರ್‌ನ ನಿರ್ದೇಶಕ ಡಾ.ಪ್ರಶಾಂತ್ ಗೌಡ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios