Asianet Suvarna News Asianet Suvarna News

ವಿಪರೀತ ಮೊಬೈಲ್‌ ಬಳಸೋ ಮಕ್ಕಳನ್ನು ಕಾಡುತ್ತೆ ಮಾನಸಿಕ ಸಮಸ್ಯೆ, ಪೋಷಕರು ಏನ್ಮಾಡ್ಬೇಕು?

ಇತ್ತೀಚಿನ ವರ್ಷಗಳಲ್ಲಿ ಮಕ್ಕಳು ಮೊಬೈಲ್‌ ಇಲ್ಲದೆ ದಿನ ಕಳೆಯೋದೆ ಇಲ್ಲ. ಗೇಮ್‌, ರೀಲ್ಸ್, ಸೋಷಿಯಲ್‌ ಮೀಡಿಯಾ ಅಂತ ಫುಲ್‌ ಡೇ ಮೊಬೈಲ್‌ನಲ್ಲಿ ಮುಳುಗಿರ್ತಾರೆ. ಆದ್ರೆ ಈ ಅತಿಯಾದ ಸ್ಕ್ರೀನ್ ಟೈಮ್ ಚಿಕ್ಕಂದಿನಲ್ಲಿ ಮಾತ್ರವಲ್ಲ, ದೊಡ್ಡವರಾದ ಮೇಲೂ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಅನ್ನೋ ವಿಷ್ಯ ನಿಮಗೆ ಗೊತ್ತಿದ್ಯಾ?
 

How too much screen time damages Childhood, and what parents should do Vin
Author
First Published May 19, 2023, 5:37 PM IST

ಮೊಬೈಲ್‌ ಇಲ್ಲದೆ ಜೀವಾನಾನೇ ಇಲ್ಲ ಎಂಬಂತಿದೆ ಇವತ್ತಿನ ದಿನಗಳು. ಕಾಲ್,‌ ಮೆಸೇಜ್‌, ಲೈಟ್‌ ಬಿಲ್, ಕೇಬಲ್ ಬಿಲ್, ಎಂಟರ್‌ಟೈನ್‌ ಮೆಂಟ್, ಮನಿ ಟ್ರಾನ್ಸ್‌ಫರ್ ಎಲ್ಲದಕ್ಕೂ ಮೊಬೈಲೇ ಬೇಕು. ಕೆಲವರಂತೂ ಮೂರೂ ಹೊತ್ತು ಮೊಬೈಲ್‌ನಲ್ಲಿ ಮಾತನಾಡುತ್ತಾ, ಮೆಸೇಜ್ ಮಾಡುತ್ತಾ ಇರುತ್ತಾರೆ. ಆದ್ರೆ ಇದು ಆರೋಗ್ಯಕ್ಕೆ ಹಾನಿಕರವಾಗಿದೆ. ಹೃದಯ ಸಂಬಂಧಿತ ಕಾಯಿಲೆಗಳಾದ ಅಧಿಕ ರಕ್ತದೊತ್ತಡ ಸಮಸ್ಯೆ ಹೆಚ್ಚಾಗುತ್ತಿದೆ. ಬಹುತೇಕರು ಏಕಾಏಕಿ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಇದಕ್ಕೆಲ್ಲಾ ಮೊಬೈಲ್ ಬಳಕೆ ಕಾರಣವಾಗುತ್ತಿದೆ. ಕೇವಲ ದೊಡ್ಡವರು ಮಾತ್ರವಲ್ಲ ಮಕ್ಕಳು ಸಹ ವಿಪರೀತ ಮೊಬೈಲ್ ಬಳಸುತ್ತಿದ್ದಾರೆ.

ಗೇಮ್‌, ರೀಲ್ಸ್, ಸೋಷಿಯಲ್‌ ಮೀಡಿಯಾ ಅಂತ ಫುಲ್‌ ಡೇ ಮೊಬೈಲ್‌ನಲ್ಲಿ ಮುಳುಗಿರ್ತಾರೆ. ಆದ್ರೆ ಈ ಅತಿಯಾದ ಸ್ಕ್ರೀನ್ ಟೈಮ್ ಚಿಕ್ಕಂದಿನಲ್ಲಿ ಮಾತ್ರವಲ್ಲ, ದೊಡ್ಡವರಾದ ಮೇಲೂ ಮಕ್ಕಳ ಆರೋಗ್ಯದ (Childrens health) ಮೇಲೆ ಪರಿಣಾಮ ಬೀರುತ್ತೆ. ಆದಿತ್ಯ ಹಾಗೂ ಮೊಹಾಂತಿ ದಂಪತಿಯ (Couple) ಮಕ್ಕಳು ತೀವ್ರ ಒತ್ತಡದಿಂದ ಬಳಲುತ್ತಿದ್ದಾರೆ ಎಂಬುದಾಗಿ ವೈದ್ಯರು ಹೇಳಿದರು. ದಂಪತಿ  12 ವರ್ಷದ ಅವಳಿ ಗಂಡುಮಕ್ಕಳಿಗೆ ಯಾವ ಕಾರಣಕ್ಕೆ ಹೀಗಾಗುತ್ತಿದೆ ಎಂಬುದು ತಿಳಿಯದೆ ಗೊಂದಲಕ್ಕೊಳಗಾದರು. 

ಮೊಬೈಲ್‌ ಪ್ರಿಯರೇ ಎಚ್ಚರ: ವಾರಕ್ಕೆ ಅರ್ಧಗಂಟೆ ಫೋನ್‌ನಲ್ಲಿ ಮಾತಾಡಿದ್ರೂ ಬಿ.ಪಿ. ಹೆಚ್ಚಳ, ಅಕಾಲಿಕ ಮರಣ ಸಾಧ್ಯತೆ

ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಮಾನಸಿಕ ಸಮಸ್ಯೆ
ದಂಪತಿಗೆ ಮಕ್ಕಳಲ್ಲಿ ಕಾಣಿಸಿಕೊಂಡ ಈ ತೀವ್ರವಾದ ಮಾನಸಿಕ ಸಮಸ್ಯೆಗೆ ((Mental problem) ಕಾರಣವೇನೆಂದು ಗೊತ್ತಾಗಲ್ಲಿಲ್ಲ. ಅವರ ಕುಟುಂಬದಲ್ಲಿ ಪಾರಂಪರಿಕವಾಗಿ ಯಾರಿಗೂ ಯಾವುದೇ ರೀತಿಯ ಮಾನಸಿಕ ಕಾಯಿಲೆಗಳಿರಲ್ಲಿಲ್ಲ. ಮಕ್ಕಳ ಜೊತೆ ಇಬ್ಬರೂ ಹಿಂಸಾತ್ಮಕವಾಗಿ ನಡೆದುಕೊಂಡಿರಲ್ಲಿಲ್ಲ. ಇಬ್ಬರು ತಮ್ಮ ಮಕ್ಕಳ ಜೊತೆ ತುಂಬಾ ಉತ್ತಮವಾದ ಸಂಬಂಧ ಹೊಂದಿದ್ದರು. ಹೀಗಾಗಿ ಸಹಜವಾಗಿಯೇ ಪೋಷಕರಿಗೆ ಗಾಬರಿಯಾಯಿತು. ಮಕ್ಕಳ ಆರೋಗ್ಯದ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿದ ವೈದ್ಯರು 'ಮಕ್ಕಳು ಚಿಕ್ಕಂದಿನಲ್ಲೇ ಮೊಬೈಲ್ ಬಳಸುತ್ತಿರುವುದರಿಂದ ಹೀಗಾಗುತ್ತಿದೆ' ಎಂದು ತಿಳಿಸಿದರು.

ಅತಿಯಾದ ಸ್ಕ್ರೀನ್ ಟೈಮ್ ಮಕ್ಕಳಲ್ಲಿ ಮಾನಸಿಕ ಒತ್ತಡಕ್ಕೆ ಕಾರಣವಾಯಿತು ಎಂಬುದನ್ನು ಬಹಿರಂಗಪಡಿಸಿದರು. ತಮ್ಮ ಮಕ್ಕಳಿಗೆ ಎಂಟು ವರ್ಷ ತುಂಬಿದ ನಂತರವೇ ಫೋನ್‌ಗಳನ್ನು ನೀಡಿದ್ದೇವೆ ಎಂದು ತಿಳಿಸಿದ ಪೋಷಕರಿಗೆ (Parents) ಇದು ಗೊಂದಲ ಮೂಡಿಸಿದೆ. ಬಾಲ್ಯದಲ್ಲಿ ಮೊಬೈಲ್ ಕೊಡದೆ ಮಕ್ಕಳು ದೊಡ್ಡವರಾದ ಮೇಲೆ ಮೊಬೈಲ್ ಕೊಟ್ಟರೂ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂಬುದು ಸ್ಪಷ್ಟವಾಗಿದೆ.

Parenting Tips : ಮಕ್ಕಳಿಗೆ ಮೊಬೈಲ್ ಫೋನ್ ನೀಡಲು ಇದು ಬೆಸ್ಟ್

ಹೆಚ್ಚು ಸಮಯ ಮೊಬೈಲ್ ಬಳಸುವುದರಿಂದ ಹಲವು ಆರೋಗ್ಯ ಸಮಸ್ಯೆ
ಹೊಸ ಸಂಶೋಧನೆಯು ವರದಿಯು, ಮೊಬೈಲ್‌ ಬಳಕೆಯ ಪರಿಣಾಮ ಕೇವಲ ಬಾಲ್ಯಕ್ಕಷ್ಟೇ ಸೀಮಿತವಾಗಿಲ್ಲ. ಬದಲಿಗೆ ನಂತರದ ವಯಸ್ಸಿನಲ್ಲಿಯೂ ಸಹ ಹಾನಿಯನ್ನು ಉಂಟುಮಾಡಬಹುದು ಎಂದು ತೋರಿಸುತ್ತದೆ. ಸ್ಯಾಪಿಯನ್ ಲ್ಯಾಬ್ಸ್‌ನ ಇತ್ತೀಚಿನ ಅಧ್ಯಯನವು ಪ್ರಸ್ತುತ 18ರಿಂದ 24 ವರ್ಷ ವಯಸ್ಸಿನವರು ಸ್ಮಾರ್ಟ್‌ಫೋನ್ ಬಳಸುತ್ತಿರುವುದು ಹೆಚ್ಚು ಕಳಪೆ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದೆ ಎಂದು ತೋರಿಸುತ್ತದೆ. 'ಹೆಚ್ಚು ಸಮಯ ಮೊಬೈಲ್ ಬಳಸುವ ಅಭ್ಯಾಸ ಆತ್ಮವಿಶ್ವಾಸ (Confidence), ಸಂವಹನ ಕೌಶಲ್ಯ, ನಿದ್ರೆಯ ಗುಣಮಟ್ಟ, ಭಾವನಾತ್ಮಕ ಸ್ಥಿತಿಸ್ಥಾಪಕತ್ವ ಮತ್ತು ಸ್ವಯಂ-ವ್ಯಕ್ತಿತ್ವಕ್ಕೆ ಹಾನಿಯುಂಟು ಮಾಡುತ್ತದೆ' ಎಂದು ನವದೆಹಲಿಯ ಮ್ಯಾಕ್ಸ್ ಹಾಸ್ಪಿಟಲ್ ಸಾಕೇತ್‌ನ ಮಾನಸಿಕ ಆರೋಗ್ಯ ಮತ್ತು ನಡವಳಿಕೆ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಸಮೀರ್ ಮಲ್ಹೋತ್ರಾ ಹೇಳುತ್ತಾರೆ.

ಫೋನ್‌ಗಳು ಮತ್ತು ಕಂಪ್ಯೂಟರ್‌ಗಳು ಜೀವನದ ಅನಿವಾರ್ಯ ಭಾಗವಾಗಿದೆ . ವಿದ್ಯಾಭ್ಯಾಸ, ವೃತ್ತಿಗೆ ಅತ್ಯಗತ್ಯ ಎಂದು ತಜ್ಞರು ಗುರುತಿಸಿದ್ದಾರೆ. ಹೀಗಾಗಿ ಮಕ್ಕಳಿಗೆ ಸೀಮಿತವಾಗಿ ಮೊಬೈಲ್ ಬಳಸಲು ಕಲಿಸಬೇಕು. ಸಾಮಾಜಿಕ ಮಾಧ್ಯಮದಲ್ಲಿ ಗಂಟೆಗಳನ್ನು ಕಳೆಯುವ ಬದಲು, ಹೊಸ ಕೌಶಲ್ಯಗಳನ್ನು ಕಲಿಯಲು ಅಥವಾ ಹೊಸ ಜ್ಞಾನವನ್ನು ಪಡೆಯಲು ಪರದೆಗಳನ್ನು ಬಳಸುವುದು ಶಿಫಾರಸು ಮಾಡಬೇಕು ಎಂದು ತಜ್ಞರು ತಿಳಿಸುತ್ತಾರೆ.

Follow Us:
Download App:
  • android
  • ios