ಮನೆಯೊಳಗಿನ ಮಾಲಿನ್ಯವೂ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ!

ಜಾಗತೀಕರಣದಿಂದಾಗಿ ವಾತಾವರಣದಲ್ಲಿ ಬದಲಾವಣೆ ಕಾಣುತ್ತಿದೆ. ಹಾಗೆ ವಾಯು ಮಾಲಿನ್ಯವು, ಬೆಳೆಯುತ್ತಿರುವ ನಗರೀಕರಣವೂ ಇದಕ್ಕೆ ಕಾರಣ ಎಂದರೆ ತಪ್ಪಾಗಲಾರದು. ಇತ್ತೀಚೆಗೆ ಒಂದು ಅಧ್ಯಯನ ನಡೆದಿದ್ದು ಇದರ ಪ್ರಕಾರ ಮನೆಯ ಒಳಗಿನ ವಾಯು ಮಾಲಿನ್ಯದಿಂದಾಗಿ ಅಕಾಲಿಕವಾಗಿ ಮರಣ ಹೊಂದುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಈ ಬಗ್ಗೆ ಇಲ್ಲಿದೆ ಮಾಹಿತಿ.

Household Air Pollution also leads Health Problem!

ಪ್ರತೀ ವರ್ಷ ಸುಮಾರು 4 ಮಿಲಿಯನ್ ಜನರು ಒಳಾಂಗಣ ವಾಯು ಮಾಲಿನ್ಯದಿಂದ ಅಕಾಲಿಕವಾಗಿ ಮರಣ ಹೊಂದುತ್ತಿದ್ದಾರೆ. ಸೀಮೆ ಎಣ್ಣೆ, ಮರ ಮತ್ತು ಇದ್ದಿಲು ಬೆಂಕಿಯಿAದಾಗುವ ಹೊಗೆಯು ವ್ಯಕ್ತಿಯ ಉಸಿರಾಟಕ್ಕೆ ಅನೇಕ  ಹಾನಿಯನ್ನುಂಟು ಮಾಡುತ್ತಿದೆ. ಜೊತೆಗೆ ಇದರಿಂದ ರೋಗಗಳು ಹೆಚ್ಚುತ್ತಿದ್ದು ಅಕಾಲಿಕವಾಗಿ ಬಲಿಯಾಗುತ್ತಿದ್ದಾರೆ. ಇದನ್ನು ಸಾಮಾನ್ಯವಾಗಿ ಅಭಿವೃದ್ಧಿಶೀಲ ರಾಷ್ಟçಗಳಲ್ಲಿ ಅಡುಗೆ ಮತ್ತು ಬಿಸಿ ಮಾಡಲು ಬಳಸುವ ಅನಿಲ, ಇಂಧನದಿAದಾಗಿ ಎಂದು ತಿಳಿದುಬಂದಿದೆ.

ಭಾರತದಲ್ಲಿ ಗಾಳಿಯಲ್ಲಿ ವಿಷಾನಿಲಗಳು ಹೆಚ್ಚಾಗುತ್ತಿದ್ದು, ಇದು ವಾಯು ಮಾಲಿನ್ಯಕ್ಕೆ ಕಾರಣವಾಗಿದೆ. ಅದರಲ್ಲಿಯೂ ಬೆಳೆಯುತ್ತಿರುವ ಜನಸಂಖ್ಯೆ, ಬೃಹತ್ ಕೈಗಾರಿಕಾ ವಿಸ್ತರಣೆ, ಹೆಚ್ಚಿದ ಆಟೋಮೊಬೈಲ್ ಬಳಕೆಯೂ ಇದಕ್ಕೆ ಕಾರಣ. ಒಂದು ಅಧ್ಯಯನದ ಪ್ರಕಾರ ಒಳಾಂಗಣ ಹಾಗೂ ಹೊರಾಂಗಣ ಎರಡೂ ಸಹ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿದ್ದು, ಇದರಿಂದ ಅಕಾಲಿಕ ಮರಣದ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದು ತಿಳಿದುಬಂದಿದೆ. 

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮನೆಯ ಒಳಗಿನ ವಾಯು ಮಾಲಿನ್ಯದಿಂದಾಗ ಪ್ರತೀ ವರ್ಷ 4 ಮಿಲಿಯನ್ ಜನರು ಅಕಾಲಿಕ ಮರಣ ಹೊಂದುತ್ತಿದ್ದಾರೆ ಎಂದು ತಿಳಿಸಿದೆ. ಅದರಲ್ಲೂ ವಿಶೇಷವಾಗಿ ಘನ ಇಂಧನಗಳ ಅಸಮರ್ಥ ದಹನದಿಂದಾಗಿ ಮೃತಪಡುತ್ತಿದ್ದಾರೆ. ಇದು ಆರೋಗ್ಯ ಇಕ್ವಿಟಿ ಮತ್ತು ಹವಾಮಾನ ಬದಲಾವಣೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಘನ ಇಂಧನದಿAದ ಉರಿದು ಬಿಡುಗಡೆಯಾದ ಕಾರ್ಬನೇಸಿಯಸ್ ಏರೋಸಾಲ್‌ಗಳು ನೇರ ಮತ್ತು ಪರೋಕ್ಷ ವಿಕಿರಣ ಪರಿಣಾಮವನ್ನು ಬೀರುವ ಮೂಲಕ ಜಾಗತಿಕ ಹವಾಮಾನದ ಪ್ರಭಾವಿಸುತ್ತಿವೆ. 

ಮನೆಯ ಒಳಾಂಗಣದಿAದ ಆರೋಗ್ಯದ ಮೇಲಾಗುತ್ತಿರುವ ಪರಿಣಾಮಗಳು
1. ಮನುಷ್ಯನ ಆರೋಗ್ಯದ ಮೇಲೆ ಅಡ್ಡ ಪರಿಣಾಮ

ಹತ್ತಾರು ಮಿಲಿಯನ್ ಜನರು ತಮ್ಮ ಮನೆಗಳಲ್ಲಿ ಇಂಧನವನ್ನು ಬಳಸುತ್ತಿದ್ದರು. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಅನಾರೋಗ್ಯ, ಗಾಯಗೊಳ್ಳುವುದು, ಸುಟ್ಟು ಹೋಗುವುದು ಸಾಮಾನ್ಯವಾಗಿದ್ದವು. ಆದರೀಗ ವವಾಯು ಮಾಲಿನ್ಯವು ಪಾರ್ಶ್ವವಾಯು, ಹೃದ್ರೋಗ, ಶ್ವಾಸಕೋಶದ ಕ್ಯಾನ್ಸರ್ ಮತ್ತಿ ಇತರೆ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತಿವೆ. 

ಕಲ್ಲಿದ್ದಲಿನಂತಹ ಅಶುದ್ಧ ಇಂಧನಗಳನ್ನು ಸುಡುವುದರಿಂದ ಇಂಗಾಲದ ಮೊನಾಕ್ಸೆöÊಡ್, ನೈಟ್ರೋಜನ್ ಆಕ್ಸೆöÊಡ್‌ಗಳು ಮತ್ತು ಸೂಕ್ಷö್ಮ ಕಣಗಳು ಸೇರಿದಂತೆ ದೊಡ್ಡ ಪ್ರಮಾಣದ ಅಪಾಯಕಾರಿ ಮಾಲಿನ್ಯಕಾರಕಗಳನ್ನು ಬಿಡುಗಡೆ ಮಾಡುತ್ತದೆ. ತೆರೆದ ದಹನ (ಸೌದೆ ಒಲೆ), ಅನ್ವೆನ್ಡ್ ಘನ ಇಂಧನ ಸ್ಟೌವ್‌ಗಳನ್ನು ಹೊಂದಿರುವ ಮನೆಗಳಲ್ಲಿ 2.5 ಮೈಕ್ರೊಮೀಟರ್‌ಗಳಿಗಿಂತ ಕಡಿಮೆ ವ್ಯಾಸದ ಕಣಗಳು 100 ಪಟ್ಟು ಮೀರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

2. ಕೆಟ್ಟ ಇಂಧನ ಪರಿಸರಕ್ಕೆ ಹಾನಿಕಾರಕ 
ಮನೆಯಲ್ಲಿ ಉರಿಸಲಾಗುವ ಇಂಧನದಿAದ ಜಾಗತಿಕವಾಗಿ ಕಪ್ಪು ಇಂಗಾಲವನ್ನು ಹೆಚ್ಚಿನಪಟ್ಟಿನಲ್ಲಿ ಹೊರಸೂಸುತ್ತದೆ. ಇದು ಸೂಕ್ಷö್ಮ ಕಣಗಳ ಪ್ರಮುಖ ಅಂಶವಾಗಿದೆ. ಕಾರ್ಬನ್ ಡೈಆಕ್ಸೆöÊಡ್‌ಗಿಂತ 1500 ಪಟ್ಟು ಹೆಚ್ಚಿನ ಪ್ರತಿ ಯೂನಿಟ್ ವಾರ್ಮಿಂಗ್ ಸಾಮರ್ಥ್ಯವನ್ನು ಕಪ್ಪು ಇಂಗಾಲ ಹೊಂದಿದೆ.
ಇದು ಹೊಒರಗಿನ ವಾಯು ಮಾಲಿನ್ಯಕಾರಕಗಳೊಂದಿಗೆ ಸೇರಿದಾಗ, ನೆಲದ ಮಟ್ಟದ ಓಝೋನ್ ರಚನೆಗೆ ಕೊಡುಗೆ ನೀಡುತ್ತದೆ. ಅಲ್ಪಾವಧಿಯ ಹವಾಮಾನ ಮಾಲಿನ್ಯಕಾರಕವು ಬೆಳೆ ಇಳುವರಿಯನ್ನು ಕಡಿಮೆ ಮಾಡುತ್ತದೆ ಮತ್ತು ಸ್ಥಳೀಯ ವಾತಾವರಣದ ಮೇಲೆ ಪರಿಣಾಮ ಬೀರುತ್ತದೆ.

3. ಕೈಗೆಟುಕುವ ವಿಶ್ವಾಸಾರ್ಹ ಶಕ್ತಿಯು ಒಳಾಂಗಣ ವಾಯು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ
ಕಡಿಮೆ ಹೊರಸೂಸುವ ಸ್ಟೌವ್‌ಗಳು, ತಾಪನ ಮತ್ತು ಬೆಳಕು ಸೇರಿದಂತೆ ಶುದ್ಧ ಮನೆಯ ಶಕ್ತಿಯ ಜಾಗತಿಕ ಅಳವಡಿಕೆಯು ಲಕ್ಷಾಂತರ ಜೀವಗಳನ್ನು ಉಳಿಸಬಹುದು. ಹಾಗಾಗಿ 2030ರ ವೇಳೆಗೆ ಸುಸ್ಥಿರ ಅಭಿವೃದ್ಧಿ ಗುರಿ ಯನ್ನು ಹಮ್ಮಿಕೊಳ್ಳಲಾಗಿದೆ. ಇಂಧನಕ್ಕಾಗಿ ಮರವನ್ನು ಬಳಸುವುದರಿಂದ ಉಂಟಾಗುವ ಜೀವವೈವಿಧ್ಯದ ನಷ್ಟವನ್ನು ಕಡಿಮೆ ಮಾಡಲು, ಅರಣ್ಯ ನಾಶವನ್ನು ನಿಧಾನಗೊಳಿಸಲು ಜೈವಿಕ ದ್ರವ್ಯರಾಶಿಯಿಂದ ಇಂಗಾಲದ ಡೈಆಕ್ಸೆöÊಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಕಪ್ಪು ಇಂಗಾಲ, ಮೀಥೇನ್ ಮತ್ತು ಕಾರ್ಬನ್ ಮೊನಾಕ್ಸೆöÊಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
ವಾಸ್ತವವಾಗಿ ಕಪ್ಪು ಇಂಗಾಲದ ಕಣಗಳು ಗಾಳಿಯಲ್ಲಿ ಒಂದು ವಾರ ಅಥವಾ ಅದಕ್ಕಿಂತ ಕಡಿಮೆ ಕಾಲ ಉಳಿಯುವುದರಿಂದ ಅವುಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು ಹವಾಮಾನ ಬದಲಾವಣೆಯನ್ನು ಸಮೀಪದಲ್ಲ ನಿಧಾನಗೊಳಿಸುವ ಪ್ರಮುಖ ಮಾರ್ಗವಾಗಿದೆ.

ಇದನ್ನೂ ಓದಿ: High Blood Pressure ಬೇಡವೆಂದರೆ ಈ ಆಹಾರ ಮುಟ್ಟಬೇಡಿ

4.ಮಹಿಳೆಯರು ಮತ್ತು ಹುಡುಗಿಯರಿಗೆ ಆಪತ್ತು ಹೆಚ್ಚು
ಮಹಿಳೆಯರು ಮತ್ತು ಮಕ್ಕಳು ಸೇರಿದಂಯೆ ಮನೆಯೊಳಗೆ ಹೆಚ್ಚು ಸಮಯ ಕಳೆಯುವವರು ಮನೆಯ ವಾಯು ಮಾಲಿನ್ಯಕ್ಕೆ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಮಹಿಳೆಯರು ಮತ್ತು ಹುಡುಗಿಯರು ವಿಶೇ಼ವಾಗಿ ಸೀಮೆಎಣ್ಣೆ ಅಡುಗೆ ಮತ್ತು ಬೆಳಕಿನ ಸ್ಟೋಟಗಳಿಗೆ ಗುರಿಯಾಗುತ್ತಾರೆ. ಐದು ವರ್ಷದೊಳಗಿನ ಮಕ್ಕಳಲ್ಲಿ ಅರ್ಧದಷ್ಟು ನ್ಯುಮೋನಿಯಾದಿಂದ ಮರಣ ಹೊಂದುತ್ತಿದ್ದಾರೆ. ಇದಕ್ಕೆ ಕಾರಣ ಮನೆಯಲ್ಲಿ ಉಸಿರಾಡುವ ಕಪ್ಪು ಇಂಗಾಲದಿAದಾಗಿ ಎಂದು ತಿಳಿದುಬಂದಿದೆ.
ಅಶುದ್ಧ ಇಂಧನಗಳ ಸೇವನನೆಯಿಂದ ಸಾಂಕ್ರಾಮಿಕವಲ್ಲದದ ಕಾಯಿಲೆಗಳಿಗೆ ಹೆಚ್ಚು ಗುರಿಯಾಗುತ್ತಾರೆ ಮತ್ತು ಅನಾರೋಗ್ಯದ ವೆಚ್ಚಗಳು, ಸಂಬAಧಿತ ಆರೋಗ್ಯ ವೆಚ್ಚಗಳು ಮತ್ತು ಕಳೆದುಹೋದ ಕೆಲಸದ ಸಮಯವನ್ನು ಸರಿದೂಗಿಸಲು ಕಡಿಮೆ ಸಮರ್ಥರಾಗಿದ್ದಾರೆ. ಮಾಲಿನ್ಯಕ್ಕೆ ಮೈಯ್ಯೊಡ್ಡಿದರೆ ಮೆದುಳು, ನಿಧಾನಗತಿಯ ಬೆಳವಣಿಗೆ, ನಡವಳಿಕೆಯಲ್ಲಿ ಸಮಸ್ಯೆ, ಮಕ್ಕಳ ಐಕ್ಯೂ ಕಡಿಮೆ ಆಗುವುದು ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ: ಈ ಎಲೆಯ ವಾಸನೆಯಿಂದ ಕಿಡ್ನಿ ಸ್ಟೋನ್, ಮೈಗ್ರೇನ್ ಸೇರಿ ಎಲ್ಲಾ ರೋಗ ಮಾಯ!

ಒಳಾಂಗಣ ಮಾಲಿನ್ಯ ತಡೆಯುವುದು ಹೇಗೆ?
1. ತಾಜಾ ಗಾಳಿಯು ಅತ್ಯಂತ ಮಹತ್ವದ್ದಾಗಿದೆ ಏಕೆಂದರೆ ಇದು CO2 ನಂತಹ ಮಾಲಿನ್ಯಕಾರಕಗಳನ್ನು ಪರಿಗಣಿಸುತ್ತದೆ ಮತ್ತು ಗಾಳಿಯ ಬದಲಾವಣೆಗಳನ್ನು ಹೆಚ್ಚಿಸುವ ಮೂಲಕ ಹಳೆಯ ಗಾಳಿಯನ್ನು ಬದಲಾಯಿಸುತ್ತದೆ. ಮನೆಗಳಲ್ಲಿ ತಾಜಾ ಗಾಳಿಯ ಶೋಧನೆ ವ್ಯವಸ್ಥೆಯನ್ನು ಸ್ಥಾಪಿಸುವ ಮೂಲಕ ಇದನ್ನು ಮಾಡಬಹುದು.
2. ಶುಷ್ಕ ಚಳಿಗಾಲದಲ್ಲಿ ಹೆಚ್ಚುತ್ತಿರುವ ಆರ್ದ್ರತೆಯ ಮಟ್ಟವು ಸೂಕ್ಷಾö್ಮಣುಗಳ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಕೆಂದರೆ ಅವುಗಳು ಭಾರೀ ಪ್ರಮಾಣದಲ್ಲಿರುತ್ತವೆ ಮತ್ತು ಮೇಲ್ಮೆöÊಗಳಲ್ಲಿ ನೆಲೆಗೊಳ್ಳುತ್ತವೆ.
3. H13, HEPA ಫಿಲ್ಟರ್‌ಗಳೊಂದಿಗೆ ಪರಿನಾಮಕಾರಿ ನಿಷ್ಕಿçಯ ಗಾಳಿ ಶುದ್ಧೀಕರಣವು PM10,2.5 ಮತ್ತು 1ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತೀ ಕಣವು 0.3 ಮೈಕ್ರಾನ್‌ಗಳಿಗಿಂತ ಚಿಕ್ಕದಾಗಿದೆ.

Latest Videos
Follow Us:
Download App:
  • android
  • ios