ಭಾರತದ 7 ಪ್ರಮುಖ ನಗರಗಳಲ್ಲಿ ಮನೆ ಖರೀದಿ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಸರಾಸರಿ ಮನೆ ಖರೀದಿ ಬೆಲೆ ₹1.23 ಕೋಟಿಗೆ ಏರಿದೆ, ಇದು ಕಳೆದ ವರ್ಷಕ್ಕೆ ಹೋಲಿಸಿದರೆ 23% ಹೆಚ್ಚಳವಾಗಿದೆ.


ಮುಂಬೈ (ನ.20): ಭಾರತದ ಪ್ರಮುಖ 7 ನಗರಗಳಲ್ಲಿ ಇನ್ನು ಬಡವರು ಮನೆ ಖರೀದಿ ಮಾಡುವುದೇ ದುಸ್ತರ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗೋದು ಖಚಿತವಾಗಿದೆ. ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಅಂದರೆ 2024ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಈ 7 ನಗರಗಳಲ್ಲಿ ಸರಾಸರಿ ಮನೆ ಖರೀದಿ ಮಾಡುವ ಬೆಲೆ ಅಂದರೆ ಟಿಕೆಟ್‌ ಸೈಜ್‌ ಆಫ್‌ ಹೋಮ್ಸ್‌ ಬೆಲೆ 1.23 ಕೋಟಿ ರೂಪಾಯಿಗೆ ಏರಿದೆ. ಇದು 2024ರ ಹಣಕಾಸಿ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಶೇ. 23ರಷ್ಟು ಏರಿಕೆಯಾಗಿದೆ. 2024ರ ಹಣಕಾಸು ವರ್ಷ ಇದೇ ಅವಧಿಯಲ್ಲಿ ಸರಾಸರಿ ಮನೆ ಖರೀದಿ ಮಾಡುವ ಬೆಲೆ 1 ಕೋಟಿ ರೂಪಾಯಿ ಆಗಿತ್ತು ಎಂದು ರಿಯಲ್‌ ಎಸ್ಟೇಟ್‌ ಕನ್ಸಲ್ಟೆನ್ಸಿ ಸಂಸ್ಥೆ ಅನರಾಕ್‌ ವರದಿ ಮಾಡಿದೆ. ಕೊರೋನಾ ಸಾಂಕ್ರಾಮಿಕ ಬಳಿಕ ಐಷಾರಾಮಿ ಮನೆಗಳಿಗೆ ಬೇಡಿಕೆ ಏರುತ್ತಿದೆ. ಇದರ ನಡುವೆ ಈ ಏಳು ನಗರಗಳಲ್ಲಿ ದುಬಾರಿ ಮನೆಗಳು ಹಾಗೂ ಹೊಸ ಪ್ರಾಜೆಕ್ಟ್‌ಗಳು ಆರಂಭವಾಗಿದೆ. 2025ರ ಹಣಕಾಸು ವರ್ಷದಲ್ಲಿ ಈ ಏಳು ನಗರಗಳಲ್ಲಿ ಈವರೆಗೂ ಮನೆ ಖರೀದಿಸುವ ಸರಾಸರಿ ಬೆಲೆ 1.23 ಕೋಟಿ ರೂಪಾಯಿ ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 1 ಕೋಟಿ ರೂಪಾಯಿ ಇತ್ತು' ಎಂದು ವರದಿಯಲ್ಲಿ ತಿಳಿಸಿದೆ.

ಈ ಏಳು ನಗರಗಳೆಂದರೆ ಮುಂಬೈ ಮಹಾನಗರ ಪಾಲಿಕೆ (ಎಂಎಆರ್‌), ರಾಷ್ಟ್ರ ರಾಜಧಾನಿ ವಲಯ (ದೆಹಲಿ-ಎನ್‌ಸಿಆರ್‌), ಬೆಂಗಳೂರು, ಹೈದರಾಬಾದ್‌, ಪುಣೆ, ಚೆನ್ನೈ ಹಾಗೂ ಕೋಲ್ಕತ್ತಾ ಆಗಿದೆ.

ಎನ್‌ಸಿಆರ್‌ ವಲಯದಲ್ಲಿ ಮನೆ ಖರೀದಿ ಮಾಡುವ ಸರಾಸರಿ ಬೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ಬರೋಬ್ಬರಿ ಶೇ. 56ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 93 ಲಕ್ಷ ರೂಪಾಯಿ ಇದ್ದರೆ, ಈಗ 1.45 ಕೋಟಿ ರೂಪಾಯಿ ಆಗಿದೆ. ಹಾಲಿ ಹಣಕಾಸು ವರ್ಷದಲ್ಲಿ 46,611 ಕೋಟಿ ರೂಪಾಯಿ ಮೌಲ್ಯದ 32,120 ಯುನಿಟ್‌ಗಳು ಮಾರಾಟವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 30,154 ಕೋಟಿ ರೂಪಾಯಿ ಮೌಲ್ಯದ 32,315 ಯುನಿಟ್‌ ಮಾರಾಟವಾಗಿದ್ದವು. ಈ ಅವಧಿಯಲ್ಲಿ ಮಾರಾಟವಾದ ಮನೆಗಳ ಮೌಲ್ಯವು ಶೇಕಡಾ 55 ರಷ್ಟು ಹೆಚ್ಚಿದ್ದರೆ, ಮಾರಾಟವಾದ ಒಟ್ಟು ಘಟಕಗಳ ಸಂಖ್ಯೆಯು ಶೇಕಡಾ 1 ರಷ್ಟು ಕಡಿಮೆಯಾಗಿದೆ.

ಎಂಎಂಆರ್‌ ವಯದಲ್ಲಿ ಸರಾಸರಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಲ್ಲಿನ ಮನೆಗಳು ಸರಾಸರಿ 1.47 ಕೋಟಿ ರೂಪಾಯಿಗೆ ಕಳೆದ ವರ್ಷವೂ ಮಾರಾಟವಾಗುತ್ತಿದ್ದವು. ಕಳೆದ ವರ್ಷ 1 ಲಕ್ಷದ 12,356 ಕೋಟಿ ರೂಪಾಯಿಯ 76,410 ಯುನಿಟ್‌ಗಳು ಮಾರಾಟವಾಗಿದ್ದರೆ, ಹಾಲಿ ವರ್ಷ 1 ಲಕ್ಷದ 14, 529 ಕೋಟಿ ರೂಪಾಯಿ ಮೌಲ್ಯ 77, 735 ಯುನಿಟ್‌ಗಳು ಮಾರಾಟವಾಗಿದೆ. ಬೆಂಗಳೂರಿನಲ್ಲಿ ಕಳೆದ ವರ್ಷ 26,274 ಕೋಟಿ ರೂಪಾಯಿ ಮೌಲ್ಯದ 31,440 ಮನೆಗಳು ಮಾರಾಟವಾಗಿದ್ದರೆ, ಹಾಲಿ ವರ್ಷದಲ್ಲಿ ಇಲ್ಲಿಯವರೆಗೂ 37,863 ಕೋಟಿ ರೂಪಾಯಿ ಮೌಲ್ಯದ 31,380 ಯುನಿಟ್‌ಗಳು ಮಾರಾಟವಾಗಿದೆ.

ಅನರಾಕ್ ಗ್ರೂಪ್‌ನ ಅಧ್ಯಕ್ಷರಾದ ಅನುಜ್ ಪುರಿ, “2024 ರ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ ಟಾಪ್-7 ನಗರಗಳಲ್ಲಿ ಸುಮಾರು 2,79,309 ಕೋಟಿ ಮೌಲ್ಯದ 2,27,400 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಇದಕ್ಕೆ ವಿರುದ್ಧವಾಗಿ, FY2024 ರ ಅನುಗುಣವಾದ ಅವಧಿಯಲ್ಲಿ ಸುಮಾರು 2,35,200 ಯುನಿಟ್‌ಗಳನ್ನು ಕಂಡಿದೆ. ಮೌಲ್ಯದ ಲೆಕ್ಕಾಚಾರದಲ್ಲಿ ಹೇಳುವುದಾದರೆ, 2,35,800 ಕೋಟಿ ಹೊಂದಿದೆ. ಒಟ್ಟಾರೆ ಯೂನಿಟ್ ಮಾರಾಟದಲ್ಲಿ ಶೇಕಡಾ 3 ರಷ್ಟು ಕುಸಿತದ ಹೊರತಾಗಿಯೂ, ಒಟ್ಟು ಮಾರಾಟದ ಮೌಲ್ಯವು ಒಂದು ವರ್ಷದ ಹಿಂದೆ ಶೇಕಡಾ 18 ರಷ್ಟು ಮೀರಿದೆ . ಇದು ಐಷಾರಾಮಿ ಮನೆಗಳಿಗೆ ನಿರಂತರ ಬೇಡಿಕೆಯನ್ನು ಸ್ಪಷ್ಟವಾಗಿ ಒತ್ತಿಹೇಳುತ್ತದೆ' ಎಂದಿದ್ದಾರೆ.

ಬಿಜೆಪಿ MLA ಸಿಕೆ ರಾಮಮೂರ್ತಿ ನನ್ನ ಟೀಕಿಸಿದ್ರು, ಅದಕ್ಕೆ ಜಯನಗರಕ್ಕೆ ಅನುದಾನ ನಿಲ್ಲಿಸಿದ್ದೆ: ಡಿಕೆ ಶಿವಕುಮಾರ್‌

ಏಪ್ರಿಲ್-ಸೆಪ್ಟೆಂಬರ್ 2024 ರ ಅವಧಿಯಲ್ಲಿ ವಸತಿ ಮಾರಾಟ: ವಸತಿ ಮಾರಾಟಕ್ಕೆ ಸಂಬಂಧಿಸಿದಂತೆ, MMR ನಲ್ಲಿ ಹೆಚ್ಚಿನ ಸಂಖ್ಯೆಯ ಘಟಕಗಳು 77,735 ನಲ್ಲಿ ಮಾರಾಟವಾಗಿವೆ, ನಂತರ ಪುಣೆ (40,190), NCR (32,125), ಬೆಂಗಳೂರು (31,380), ಮತ್ತು ಹೈದರಾಬಾದ್ (27,820). ಮೌಲ್ಯದ ಪ್ರಕಾರ, ಎಂಎಂಆರ್ 1,14,529 ಕೋಟಿ ರೂಪಾಯಿ ಮೌಲ್ಯದ ವಸತಿ ಮಾರಾಟದೊಂದಿಗೆ ಅಗ್ರಸ್ಥಾನದಲ್ಲಿದೆ, ಎನ್‌ಸಿಆರ್ (ರೂ. 46,611 ಕೋಟಿ), ಬೆಂಗಳೂರು (ರೂ. 37,863 ಕೋಟಿ), ಪುಣೆ (ರೂ. 34,033 ಕೋಟಿ), ಮತ್ತು ಹೈದರಾಬಾದ್ (ರೂ. 31,993 ಕೋಟಿ) ನಂತರದ ಸ್ಥಾನದಲ್ಲಿವೆ.

ಇದು ಬೆಂಗಳೂರಿನ 'ಬಿಲಿಯನೇರ್‌ ಸ್ಟ್ರೀಟ್‌', 67.5 ಕೋಟಿಗೆ ಸೇಲ್‌ ಆಗಿದೆ ಇಲ್ಲಿನ ಒಂದು ಸೈಟ್‌!