ಬಿಪಿಎಲ್ ಕಾರ್ಡ್ ರದ್ದು, ಬಡವರ ಶಾಪಕ್ಕೆ ಕಾಂಗ್ರೆಸ್ ಗುರಿ: ವೆಂಕನಗೌಡ ಗೋವಿಂದಗೌಡ್ರ
ಬಿಪಿಎಲ್ ಕಾರ್ಡು ದಾರರನ್ನು ಎಪಿಎಲ್‌ಗೆ ವರ್ಗಾಯಿಸುತ್ತಿ ರುವುದು, ಪ್ಯಾನ್ ಕಾರ್ಡ್ ಇದ್ದ ಮಾತ್ರಕ್ಕೆ ಬಿಪಿಎಲ್ ಕಾರ್ಡ್ ಫಲಾನುಭವಿ ಆಗುವುದಿಲ್ಲ ಎಂಬುವುದು ಸರ್ಕಾರದ ಹುಚ್ಚುತನವಾಗಿದೆ. ಸಂಬಂಧಪಟ್ಟ ಇಲಾಖೆಯವರು ಬಿಪಿಎಲ್ ಕಾರ್ಡ್‌ದಾರರ ಮನೆ ಮನೆಗೆ ಹೋಗಿ ಪರಿಶೀಲನೆ ಮಾಡಿ ಮುಂದೆ ಕ್ರಮ ಕೈಗೊಳ್ಳಬೇಕು. ಕಚೇರಿಯಲ್ಲಿ ಕುಳಿತುಕೊಂಡು ಬೇಕಾಬಿಟ್ಟಿ ಕಾರ್ಡ್‌ಗಳನ್ನು ರದ್ದು ಮಾಡಿದರೆ ಜೆಡಿಎಸ್ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ ವೆಂಕನಗೌಡ ಗೋವಿಂದಗೌಡ್ರ
ಗದಗ(ನ.20): ಬಿಪಿಎಲ್ ಕಾರ್ಡ್ ಫಲಾನುಭವಿಗಳ ಪರಿಷ್ಕರಣೆಯ ನೆಪದಲ್ಲಿ ರಾಜ್ಯ ಸರ್ಕಾರವು ಬೇಕಾಬಿಟ್ಟಿ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ವರ್ಗಾಯಿಸುತ್ತಿರುವುದು ಖಂಡನೀಯ, ಬಡವರ ಶಾಪಕ್ಕೆ ಕಾಂಗ್ರೆಸ್ ಗುರಿಯಾಗಿದೆ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಿಪಿಎಲ್ ಕಾರ್ಡು ದಾರರನ್ನು ಎಪಿಎಲ್‌ಗೆ ವರ್ಗಾಯಿಸುತ್ತಿ ರುವುದು, ಪ್ಯಾನ್ ಕಾರ್ಡ್ ಇದ್ದ ಮಾತ್ರಕ್ಕೆ ಬಿಪಿಎಲ್ ಕಾರ್ಡ್ ಫಲಾನುಭವಿ ಆಗುವುದಿಲ್ಲ ಎಂಬುವುದು ಸರ್ಕಾರದ ಹುಚ್ಚುತನವಾಗಿದೆ. ಸಂಬಂಧಪಟ್ಟ ಇಲಾಖೆಯವರು ಬಿಪಿಎಲ್ ಕಾರ್ಡ್‌ದಾರರ ಮನೆ ಮನೆಗೆ ಹೋಗಿ ಪರಿಶೀಲನೆ ಮಾಡಿ ಮುಂದೆ ಕ್ರಮ ಕೈಗೊಳ್ಳಬೇಕು. ಕಚೇರಿಯಲ್ಲಿ ಕುಳಿತುಕೊಂಡು ಬೇಕಾಬಿಟ್ಟಿ ಕಾರ್ಡ್‌ಗಳನ್ನು ರದ್ದು ಮಾಡಿದರೆ ಜೆಡಿಎಸ್ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ವಿರೋಧ ಪಕ್ಷದವರಿಂದ ಬಿಪಿಎಲ್ ಕಾರ್ಡ್ ಬಗ್ಗೆ ಗೊಂದಲ: ಪರಮೇಶ್ವರ್
ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ, ಹಾಗಾಗಿ ಒಂದಲ್ಲ ಒಂದು ನೆಪ ಮಾಡಿಕೊಂಡು ತಾವೇ ಘೋಷಿಸಿರುವ ಗ್ಯಾರಂಟಿಗಳಿಗೆ ಕೊಕ್ಕೆ ಹಾಕುತ್ತಿದೆ ಎಂದು ಜಿಲ್ಲಾ ಕಾರ್ಯಧ್ಯಕ್ಷ ಸಿ.ಎಸ್. ಪಾಟೀಲ, ಗಿರೀಶ್ ಶಂಶಿ, ಕೆ.ಎಫ್. ದೊಡ್ಡನಿ, ಜೋಸೆಫ್ ಉದೋಜಿ, ಜಿ.ಕೆ. ಕೊಳ್ಳಿಮಠ, ಮಂಜುಳಾ ಮೇಟಿ, ಡಾ.ಶಾಣಪ್ಪ ಹೂಗಾರ, ವೀರಭದ್ರಪ್ಪ ಅಕ್ಕಿ, ದೇವಪ್ಪ ಮಲಸಮುದ್ರ, ಬಸವರಾಜ ಅಪ್ಪಣ್ಣವರ, ಸಿದ್ದಲಿಂಗಯ್ಯ ಹೊಂಬಾಳಿಮಠ, ಪ್ರಫುಲ್ ಪುಣೆಕರ್, ಸಂತೋಷ್ ಪಾಟೀಲ, ರಮೇಶ ಹುಣಸಿಮರದ ಎಚ್ಚರಿಸಿದ್ದಾರೆ.