Health
ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾದಾಗ ಕೀಲುಗಳಲ್ಲಿ ಸಂಗ್ರಹವಾಗಿ ಗೌಟ್ ಕಾಯಿಲೆಗೆ ಕಾರಣವಾಗುತ್ತದೆ. ಕೀಲು ನೋವು ಇದರ ಪ್ರಮುಖ ಲಕ್ಷಣ. ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗಲು ಸಹ ಯೂರಿಕ್ ಆಸಿಡ್ ಕಾರಣವಾಗಬಹುದು.
ಒಮೆಗಾ 3 ಕೊಬ್ಬಿನಾಮ್ಲಗಳಿರುವ ವಾಲ್ನಟ್ಸ್ ಯೂರಿಕ್ ಆಸಿಡ್ ನಿಯಂತ್ರಿಸಲು, ಗೌಟ್ ತಡೆಯಲು ಮತ್ತು ಮೂತ್ರಪಿಂಡ ರಕ್ಷಿಸಲು ಸಹಾಯ ಮಾಡುತ್ತದೆ.
ಬಾದಾಮಿಯಲ್ಲಿ ಪ್ಯೂರಿನ್ ಕಡಿಮೆ, ಆರೋಗ್ಯಕರ ಕೊಬ್ಬು, ಮೆಗ್ನೀಸಿಯಮ್ ಮತ್ತು ನಾರು ಹೆಚ್ಚು. ಇದು ಯೂರಿಕ್ ಆಸಿಡ್ ಸಂಗ್ರಹವನ್ನು ತಡೆಯುತ್ತದೆ.
ಮೆಗ್ನೀಸಿಯಮ್ ಮತ್ತು ಆರೋಗ್ಯಕರ ಕೊಬ್ಬಿನಿಂದ ಸಮೃದ್ಧವಾಗಿರುವ ಮತ್ತು ಪ್ಯೂರಿನ್ ಕಡಿಮೆ ಇರುವ ಗೋಡಂಬಿ ಯೂರಿಕ್ ಆಸಿಡ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನಾರು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಪಿಸ್ತಾ ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ನಾರು, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಇರುವ ಖರ್ಜೂರ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪ್ಯೂರಿನ್ ಕಡಿಮೆ ಮತ್ತು ಪೊಟ್ಯಾಸಿಯಮ್, ನಾರು ಹೆಚ್ಚಿರುವ ಒಣದ್ರಾಕ್ಷಿ ಯೂರಿಕ್ ಆಸಿಡ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಒಣ ಚೆರ್ರಿ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಆರೋಗ್ಯ ತಜ್ಞರು ಅಥವಾ ಪೌಷ್ಟಿಕತಜ್ಞರ ಸಲಹೆ ಪಡೆದ ನಂತರ ಮಾತ್ರ ಆಹಾರದಲ್ಲಿ ಬದಲಾವಣೆಗಳನ್ನು ಮಾಡಿ.