ವಿಪರೀತವಾಗ್ತಿದೆ ಹೃದಯಾಘಾತ ಕೇಸ್, ಹಾರ್ಟ್ ಅಟ್ಯಾಕ್ ಲಕ್ಷಣ ಗೊತ್ತಾಗ್ತಿದ್ದ ಹಾಗೆ ಹೀಗೆ ಮಾಡಿ..

 ಹವಾಮಾನ ವೈಪರೀತ್ಯ ಹೆಚ್ಚಾಗುತ್ತಿದೆ. ಏಕಾಏಕಿ ಹೃದಯಾಘಾತ ಕೇಸ್‌ಗಳಲ್ಲಿ ಸಿಕ್ಕಾಪಟ್ಟೆ ಏರಿಕೆ ಆಗುತ್ತಿವೆ. ಹೃದಯಾಘಾತವಾದ ತಕ್ಷಣ ಏನು ಮಾಡಬೇಕು ಅನ್ನುವ ಸಲಹೆ ಇಲ್ಲಿದೆ.

heart attack precautions

ಹೃದಯಾಘಾತ ಅನ್ನೋದು ಇತ್ತೀಚೆಗೆ ವಯಸ್ಸಿನ ಹಂಗಿಲ್ಲದೇ ಹಲವರ ಜೀವ ಬಲಿ ತೆಗೆದುಕೊಂಡಿದೆ. ನಮ್ಮ ಲೈಫ್‌ಸ್ಟೈಲ್, ವಂಶವಾಹಿ ಹೀಗೆ ಅನೇಕ ಕಾರಣಕ್ಕೆ ಹೃದಯಾಘಾತ ಸಂಭವಿಸಬಹುದು. ನಂಗೇನೂ ಆಗಲ್ಲಪ್ಪ, ಇದೆಲ್ಲ ಬೇರೆಯವ್ರಿಗೆ ಆಗೋದು ಅಂತ ಬಹಳ ಜನ ಅಂದುಕೊಂಡಿರ್ತಾರೆ. ಯಾವಾಗ ನಮ್ಮ ಬುಡಕ್ಕೇ ಬರುತ್ತೋ ಆಗ ಎಚ್ಚರಗೊಳ್ತಾರೆ. ಆದರೆ ಅಷ್ಟೊತ್ತಿಗಾಗಲೇ ಸಮಯ ಮೀರಿರುತ್ತದೆ. ಹೀಗಾಗಿ ಹೃದಯಾಘಾತದ ವೇಳೆ ಪ್ರಥಮ ಚಿಕಿತ್ಸೆಯ ಬಗ್ಗೆ ಪತಿಯೊಬ್ಬರೂ ಅರಿತುಕೊಂಡಿರುವು ಅಗತ್ಯ ಹಾಗೂ ಅನಿವಾರ್ಯ. ಹೃದಯಾಘಾತ, ಆಸ್ತಮಾಘಾತ ಮೊದಲಾದ ಸಂದರ್ಭಗಳಲ್ಲಿ ಪ್ರತಿ ಕ್ಷಣವೂ ಅಮೂಲ್ಯವಾಗಿದ್ದು ಈ ಕ್ಷಣದಲ್ಲಿ ನೀಡಬಹುದಾದ ಪ್ರಥಮ ಚಿಕಿತ್ಸೆ ರೋಗಿಯ ಜೀವವನ್ನು ಕಾಪಾಡಬಲ್ಲುದು. ನಮ್ಮ ದೇಹಕ್ಕೆ ಸದಾ ವಿಶ್ರಾಂತ ಸ್ಥಿತಿ ಸಿಕ್ಕರೆ ಅದೇ ಸಮಸ್ಯೆ. ಇಡಿಯ ದಿನ ಚಟುವಟಿಕೆಯಿಂದ ಕೂಡಿದ್ದರಷ್ಟೇ ಆರೋಗ್ಯ ಚೆನ್ನಾಗಿರುತ್ತದೆ. ಆದರೆ ನಮ್ಮ ಗ್ರಹಚಾರಕ್ಕೆ ಇಂದು ನಮ್ಮ ಉದ್ಯೋಗದಲ್ಲಿ ಕೂತುಕೊಂಡು ಕೆಲಸ ಮಾಡಲು ಪ್ರಾಧಾನ್ಯತೆ.

ಕೆಲಸದ ಜಾಗದಲ್ಲಿ ನಮಗೆ ಸಿಗುವ ಸವಲತ್ತು ಕಡಿಮೆಯದಲ್ಲ. ಕೂತಲ್ಲೇ ನೀರು, ಆಹಾರ ಬರುತ್ತದೆ. ಅಲ್ಲಿಂದ ಎದ್ದು ಓಡಾಡುವ ಅವಶ್ಯಕತೆ ಹೆಚ್ಚೇನೂ ಇರಲ್ಲ. ಸೋ ಕೂತಲ್ಲೇ ಕೂತಿರ್ತೀವಿ. ದೇಹ ಕೂತಷ್ಟೂ ಹದಗೆಡುತ್ತ ಹೋಗುತ್ತದೆ. ಇದರಿಂದ ದೇಹದೊಳಗಿನ ಅನೇಕ ಚಟುವಟಿಕೆಗಳೂ ಬೇಕೋ ಬೇಡವೋ ಅನ್ನುವ ಹಾಗೆ ನಡೆಯುತ್ತವೆ. ಪರಿಣಾಮ ಚಿಕ್ಕ ವಯಸ್ಸಿನಲ್ಲಿಯೇ ಹೃದಯ ಸಂಬಂಧಿ ತೊಂದರೆಗಳು ಹಾಗೂ ಆಘಾತಗಳು ಎದುರಾಗುತ್ತಿವೆ. ಗಳಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಆರೋಗ್ಯ ಕಡೆಗಣಿಸಿರುವುದೇ ಇದಕ್ಕೆ ದೊಡ್ಡ ಕಾರಣ. ಆದರೆ ಯಾವಾಗ ಆರೋಗ್ಯದ ತೊಂದರೆ ಎದುರಾಗುತ್ತದೆಯೋ ಆಗ ಹೀಗೆ ಗಳಿಸಿದ ಹಣ ಎಲ್ಲ ನೀರಿನ ಹಾಗೆ ಖರ್ಚಾಗುತ್ತದೆ. ಸೋ ನಾವು ದೇಹದ ಚಟುವಟಿಕೆ ಹೆಚ್ಚಿಸೋದೆ ಜಾಣತನ.

ಚಳಿಗಾಲದಲ್ಲಿ ಬೆಚ್ಚಗಿರಲು ಸಾಕ್ಸ್ ಧರಿಸಿ ಮಲಗಿದ್ರೆ ಆರೋಗ್ಯಕ್ಕೆ ಅಪಾಯ! ಇದು ನಿಜಾನ?

ಇಷ್ಟಾದರೂ ಹೃದಯಾಘಾತದಂಥಾ ಸಮಸ್ಯೆ ಕಾಣಿಸಿಕೊಂಡಾಗ ತಕ್ಷಣ ವ್ಯಕ್ತಿಯ ಬಾಯಿಗೆ ಆಸ್ಪಿರಿನ್ ಗುಳಿಗೆಯನ್ನು ಕೊಟ್ಟು ಚೀಪುತ್ತಾ ಇದ್ದು ಆಮೇಲೆ ನುಂಗಲು ತಿಳಿಸಿ. ಆಸ್ಪಿರಿನ್ ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ. ಒಂದು ವೇಳೆ ರೋಗಿ ಪ್ರಜ್ಞಾಹೀನರಾದರೆ ಸಿಪಿಆರ್ (ಕಾರ್ಡಿಯೋ ಪಲ್ಮನರಿ ರಿಸಸೈಟೇಶನ್) ನೀಡುವ ಕ್ರಮವನ್ನು ಅನುಸರಿಸಿ. ಈ ಬಗ್ಗೆ ಕೊಂಚ ತರಬೇತಿ ಪಡೆದಿದ್ದರೆ ಉತ್ತಮ. ಒಂದು ವೇಳೆ ಗೊತ್ತಿಲ್ಲದಿದ್ದರೆ ಒಂದು ಹಸ್ತದ ಹಿಂಭಾಗದಲ್ಲಿ ಇನ್ನೊಂದು ಹಸ್ತವನ್ನು ಇರಿಸಿ ಕೆಳಗಿನ ಹಸ್ತದ ತಳಭಾದ ರೋಗಿಯ ಎದೆಯ ನಡುಭಾಗಕ್ಕೆ ಬರುವಂತೆ ಇರಿಸಿ ನಿಮ್ಮ ದೇಹದ ಭಾರ ಹಸ್ತದ ಮೇಲೆ ಬೀಳುವಂತೆ ಮಾಡಿ ಚಿಕ್ಕದಾಗಿ ಒತ್ತುತ್ತಾ ಇರಿ. ಹೀಗೇ ಐದರವರೆಗೆ ಒತ್ತಿ ಒಂದೆರಡು ಕ್ಷಣ ನಿಲ್ಲಿಸಿ ಮತ್ತೆ ಮುಂದುವರೆಸಿ. ರೋಗಿಗೆ ಕೃತಕ ಉಸಿರಾಟವನ್ನೂ ನೀಡಬೇಕಾಗಿ ಬರಬಹುದು.

ಹೃದಯಾಘಾತ ಹೃದಯದ ಸ್ನಾಯುಗಳಿಗೆ ಸಾಕಷ್ಟು ರಕ್ತ ದೊರಕದೇ ಇದ್ದಾಗ ಸಂಭವಿಸಿದರೆ ಪಾಶ್ವವಾಯು ಅಥವಾ ಮೆದುಳಿನ ಆಘಾತ ಅಥವಾ ಸ್ಟ್ರೋಕ್ ಆಗಬಹುದು. ಮೆದುಳಿಗೆ ಸೂಕ್ತ ಪ್ರಮಾಣದ ರಕ್ತ ದೊರಕದೇ ಇದ್ದಾಗ ಅಥವಾ ರಕ್ತ ಪ್ರವಾಹ ನಿಂತೇ ಹೋದಾಗ ಇದು ಸಂಭವಿಸುತ್ತದೆ. ನಮ್ಮ ಮೆದುಳಿಗೆ ಸತತವಾಗಿ ರಕ್ತಪೂರೈಕೆ ಆಗುತ್ತಲೇ ಇರಬೇಕು. ಈ ಮೂಲಕ ಆಮ್ಲಜನಕ ಹಾಗೂ ಪೋಷಕಾಂಶಗಳನ್ನು ಪಡೆದು ಮೆದುಳು ಆರೋಗ್ಯದಿಂದಿರುತ್ತದೆ. ಯಾವ ಭಾಗಕ್ಕೆ ಆಮ್ಲಜನಕದ ಕೊರತೆ ಅಥವಾ ಪೋಷಕಾಂಶಗಳ ಕೊರತೆ ಉಂಟಾಯಿತೋ ಆ ಭಾಗದ ಜೀವಕೋಶಗಳು ಕೆಲವೇ ಕ್ಷಣಗಳಲ್ಲಿ ಸಾಯುತ್ತವೆ ಹಾಗೂ ಈ ಭಾಗ ನಿಯಂತ್ರಿಸುವ ಅಂಗವೂ ನಿಶ್ಚೇಷ್ಟಿತವಾಗುತ್ತದೆ. ಇದನ್ನೇ ಪಾರ್ಶ್ವವಾಯು ಅಥವಾ ಲಕ್ವಾ ಎಂದು ಕರೆಯುತ್ತೇವೆ. ಹೀಗಾದ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ವ್ಯಕ್ತಿ ಸರಿಯಾಗಿ ಉಸಿರಾಡುತ್ತಿದ್ದಾರೆಯೇ ಎಂದು ಗಮನಿಸಿ. ಉಸಿರಾಟ ನಿಂತಿದೆ ಎಂದು ಅನ್ನಿಸಿದರೆ ತಕ್ಷಣ ಸಿಪಿಆರ್ ಮಾಡಿ. ರೋಗಿ ಧರಿಸಿರುವ ಬಟ್ಟೆಗಳನ್ನು ಸಡಿಲಿಸಿ.ಅವರ ದೇಹ ಬೆಚ್ಚಗಿರುವಂತೆ ಮಾಡಿ. ಯಾವುದೇ ಕಾರಣಕ್ಕೂ ಏನನ್ನೂ ತಿನ್ನಲು ಅಥವಾ ಕುಡಿಯಲು ನೀಡದಿರಿ.

ರಾತ್ರಿ ತಡವಾಗಿ ಮಲಗುವವರಿಗೆ ವೈದ್ಯರು ಕೊಟ್ಟ ಎಚ್ಚರಿಕೆ ಏನು? ಈ ಅಭ್ಯಾಸ ವೆರಿ ಡೇಂಜರ್!

Latest Videos
Follow Us:
Download App:
  • android
  • ios