ದಕ್ಷಿಣಭಾರತದ ಬೋಲ್ಡ್ ಆ್ಯಂಡ್ ಬ್ಯೂಟಿಪುಲ್ (Beautiful)ನಟಿಯರಲ್ಲೊಬ್ಬರು ಸಮಂತಾ ರುತುಪ್ರಭು (Samantha Ruth Prabhu). ಕ್ಯೂಟ್ ಆಂಡ್ ಹಾಟ್ ಆಗಿರುವ ಸ್ಯಾಮ್ ಲೈಫ್‌ಸ್ಟೈಲ್ (Lifestyle) ಹೇಗಿದೆ. ಜೀವನದಲ್ಲಿ ಖುಷಿ (Happy)ಯಾಗಿರಲು ನಟಿ ಏನ್ ಮಾಡ್ತಾರೆ ಅನ್ನೋದನ್ನು ತಿಳಿದುಕೊಳ್ಳೋಣ.

ದಕ್ಷಿಣಭಾರತದ ಬೋಲ್ಡ್ ಆ್ಯಂಡ್ ಬ್ಯೂಟಿಪುಲ್ (Beautiful)ನಟಿಯರಲ್ಲೊಬ್ಬರು ಸಮಂತಾ (Samantha) ರುತು ಪ್ರಭು. ಪಕ್ಕಾ ಹಳ್ಳಿ ಸೊಗಡಿನ ಪಾತ್ರಕ್ಕೂ ಸೈ, ಸಿಕ್ಕಾಪಟ್ಟೆ ಬೋಲ್ಡ್ ಪಾತ್ರಕ್ಕೂ ಜೈ ಎಂದು ಸಾಬೀತು ಪಡಿಸಿದವರು. ತಮಿಳು, ತೆಲುಗು ಸೇರಿ ಹಲವಾರು ಚಿತ್ರಗಳಲ್ಲಿ ನಟಿಸಿರುವ ಸಮಂತಾ ಹಿಂದಿಯಲ್ಲಿ ಫ್ಯಾಮಿಲಿ ಮ್ಯಾನ್‌ 2 ವೆಬ್‌ ಸಿರೀಸ್‌ನಲ್ಲಿ ನಟಿಸಿದ ಬಳಿಕ ಬಾಲಿವುಡ್‌ನಲ್ಲೂ ಪಾಪ್ಯುಲರ್ ಆಗಿದ್ದಾರೆ. ಮಾತ್ರವಲ್ಲ ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಮೂವಿ ಪುಷ್ಪಾ ಚಿತ್ರದಲ್ಲಿ ಊಂ ಅಂಟಾ ವಾ ಮಾಮ ಎಂದ ಸ್ಯಾಮ್ ಡ್ಯಾನ್ಸ್ ಪಡ್ಡೆ ಹುಡುಗರ ಹಾರ್ಟ್‌ಬೀರ್ಟ್‌ ಏರುಪೇರು ಮಾಡಿದೆ. 

ಸಮಂತಾ (Samantha) ಹಾಗೂ ನಟ ನಾಗ ಚೈತನ್ಯ(Naga chaitanya) ನಡುವಿನ ವಿಚ್ಚೇದನೆ ಸುದ್ದಿ ಅವರ ಅಭಿಮಾನಿಗಳಿಗೆ ಶಾಕ್ ಆಗಿತ್ತು. ಅವರ ವಿಚ್ಚೇದನೆಯಾಗಿ ತಿಂಗಳುಗಳು ಕಳೆದರೂ ಈ ಕುರಿತು ಚರ್ಚೆಯಾಗುತ್ತಲೇ ಇದೆ. ಸಮಂತಾ ಫೇಮ್ ಫ್ಯಾಮಿಲಿ ಮ್ಯಾನ್ 2 ವೆಬ್‌ ಸಿರೀಸ್ ರಾಜಿ ಪಾತ್ರದ ಮೂಲಕ ಬಾಲಿವುಡ್‌ಗೂ ಕಾಲಿಟ್ಟಿದೆ. ಅಲ್ಲು ಅರ್ಜುನ್ ಅಭಿನಯದ ಪುಷ್ಪಾ 2 ಸಿನಿಮಾದಲ್ಲೂ ಸ್ಯಾಮ್ ಇನ್ನೊಂದು ಸಾಂಗ್‌ಗೆ ಭರ್ಜರಿ ಸ್ಟೆಪ್ಸ್ ಹಾಕಲಿದ್ದಾರೆ ಅನ್ನೋ ಗಾಳಿ ಸುದ್ದಿ ಹರಿದಾಡ್ತಿದೆ.

ವಿಚ್ಛೇದನದ ಬಳಿಕ ಮೊದಲ ಬಾರಿಗೆ ಮಾಜಿ ಪತಿಯ ಫೋಟೋ ಶೇರ್ ಮಾಡಿದ ಸಮಂತಾ

ಸಮಂತಾ ಅಭಿನಯದ ಶಾಕುಂತಳಂ ಚಿತ್ರದ ಸ್ಟಿಲ್‌ ಈಗಾಗ್ಲೇ ರಿಲೀಸ್ ಆಗಿದ್ದ, ಅಭಿಮಾನಗಳಲ್ಲಿ ಕುತೂಹಲ ಹೆಚ್ಚಿಸಿದೆ. ಒಟ್ನಲ್ಲಿ ಸಮಂತಾ ಅಂತೂ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು, ಜಾಲಿ ಟ್ರಿಪ್ ಹೋಗುತ್ತಾ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಕ್ಯೂಟ್ ಆಂಡ್ ಹಾಟ್ ಆಗಿರುವ ಸಮಂತಾ ರುತುಪ್ರಭು ಜೀವನದಲ್ಲಿ ಖುಷಿಯಾಗಿರಲು ಯಾವ ರೀತಿಯಿರ್ತಾರೆ ಅನ್ನೋದನ್ನು ತಿಳಿದುಕೊಳ್ಳೋಣ.

ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ: ಸಮಂತಾ ಫಿಟ್ನೆಸ್ (Fitness) ಉತ್ಸಾಹಿ. ಭಾರತದ ಫಿಟ್‌ನೆಸ್ ಸ್ಟಾರ್‌ಗಳಲ್ಲಿ ಒಬ್ಬರು. ನಿರಂತರವಾಗಿ ವರ್ಕೌಟ್‌ ಮಾಡುತ್ತಲೇ ಇರರುತ್ತಾರೆ. ಜಿಮ್‌ನಲ್ಲಿ ವ್ಯಾಯಾಮ, ಯೋಗ (Yoga) ಮಾಡುವ, ಸೈಕ್ಲಿಂಗ್‌ನಲ್ಲಿ ತೊಡಗಿರುವ ವೀಡಿಯೋಗಳನ್ನು ಆಗಾಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ. 

ಸರಿಯಾದ ಆಹಾರ ಕ್ರಮ: ಸುಂದರವಾಗಿ ಮತ್ತು ಆರೋಗ್ಯಕರವಾಗಿರಲು ಸರಿಯಾದ ಕ್ರಮದಲ್ಲಿ ಆಹಾರ (Food) ಸೇವಿಸುವುದು ಮುಖ್ಯ ಎಂದು ಸಮಂತಾ ರುತು ಪ್ರಭು ತಿಳಿಸಿದ್ದಾರೆ. ದೇಹಕ್ಕೆ ಸೂಕ್ತವಾಗುವ ಆಹಾರವನ್ನು ಆಯ್ಕೆ ಮಾಡುವುದು ಮುಖ್ಯವೆಂದು ಅವರು ಹೇಳುತ್ತಾರೆ. ಹೀಗಾಗಿ ಇಡೀ ದಿನ ಹೈಡ್ರೇಟ್‌ ಆಗಿರುವಂತೆ, ಪ್ರೊಟೀನ್‌ಯುಕ್ತ ಆಹಾರ ಹೆಚ್ಚು ಸೇವಿಸುವಂತೆ ಸಲಹೆ ನೀಡುತ್ತಾರೆ.

ಮುಂಬೈನಲ್ಲಿ ಸೆಟ್ಲ್‌ ಆಗುತ್ತಿದ್ದಾರೆ ಸೌತ್‌ ಬ್ಯೂಟಿ ಸಮಂತಾ, ಮನೆ ಬೆಲೆ ಎಷ್ಟು ಗೊತ್ತಾ.?

ನಿಮ್ಮನ್ನು ನೀವು ಪ್ರೀತಿಸಿ: ಏನನ್ನಾದರೂ ಸಾಧಿಸುವ ಮೊದಲು ನಿಮ್ಮನ್ನು ನೀವು ಮೊದಲು ಪ್ರೀತಿಸಿ. ನಿಮ್ಮ ಪ್ರತಿಭೆ, ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿಡಿ. ಜೀವನದ ಬಗ್ಗೆ ಪಾಸಿಟಿವ್ ದೃಷ್ಟಿಕೋನವನ್ನು ಇಟ್ಟುಕೊಳ್ಳಿ ಆಗ ಬದುಕು ಸುಂದರವಾಗಿ ಕಾಣಿಸುತ್ತದೆ ಎಂದು ಸಮಂತಾ ಹೇಳಿದ್ದಾರೆ. 

ಪ್ರಾಣಿಗಳನ್ನು ಪ್ರೀತಿಸಿ: ತಮ್ಮ ಪ್ರೀತಿಯ ಪೆಟ್‌ಗಳೊಂದಿಗೆ ಸಮಯ ಕಳೆಯುವ ಫೋಟೋವನ್ನು ಸಮಂತಾ ಆಗಾಗ ಶೇರ್ ಮಾಡುತ್ತಿರುತ್ತಾರೆ. ಶೂಟಿಂಗ್‌, ಟ್ರಾವೆಲ್ ಮಧ್ಯೆಯೂ ನೆಚ್ಚಿನ ಪೆಟ್‌ಗಳನ್ನು ಮುದ್ದಿಸುತ್ತಾರೆ. ಅವುಗಳನ್ನು ಕೇರ್ ಮಾಡುತ್ತಾ ಸಮಯ ಕಳೆದು ರಿಲ್ಯಾಕ್ಸ್ ಆಗುತ್ತಾರೆ.

ಟ್ರಾವೆಲ್ ಮಾಡಿ: ಸಮಂತಾ ತಮ್ಮ ಬಿಝಿ ಶೆಡ್ಯೂಲ್‌ ನಡುವೆಯೂ ಟ್ರಾವೆಲ್ ಮಾಡಲು ಸಮಯ ಹೊಂದಿಸುತ್ತಾರೆ. ಔಟ್‌ಡೋರ್‌ಗೆ ತೆರಳಿ ಖುಷಿಯಿಂದ ಸಮಯ ಕಳೆಯುತ್ತಾರೆ. ಸಮಂತಾ ಉತ್ತರಭಾರತದ ದೇವಸ್ಥಾನಗಳಿಗೆ, ಹಿಮ ಬೀಳುವ ಪ್ರದೇಶಗಳಿಗೆ ತೆರಳಿ ಎಂಜಾಯ್ ಮಾಡುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.